ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಉಚಿತ ಇಸಿಜಿ ..
ಶಿವಮೊಗ್ಗ : ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ಕುವೆಂಪು ರಸ್ತೆಯಲ್ಲಿರುವ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಸೆ.೧೭ರ ನಾಳೆ ಬೆಳಿಗ್ಗೆ ೮ ಗಂಟೆಯಿಂದ ಉಚಿತ ಇಸಿಜಿ ತಪಾಸಣೆಯನ್ನು ನಡೆಸಲಿದೆ.
ಭಾರತದ ಪ್ರಮುಖ ಆರೋಗ್ಯ ಸೇವಾ ಸಂಸ್ಥೆಯಾದ ನಾರಾಯಣ ಹೆಲ್ತ್, ಸರ್ಕಾರದ ಸ್ವಸ್ಥ ನಾರಿ, ಸಶಕ್ತ ಕುಟುಂಬ ಅಭಿಯಾನಕ್ಕೆ ಬೆಂಬಲ ವಾಗಿ ಮಹಿಳೆಯರಿಗಾಗಿ ಉಚಿತ ಇಸಿಜಿ ತಪಾಸಣಾ ಶಿಬಿರಗಳನ್ನು ಆಯೋಜಿಸಿದೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ-ಸ್ಪೆಷಾ ಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗಿಸ್.ಪಿ.ಜನ್ ಅವರು ಮಹಿಳೆಯರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ವಿನಂತಿಸಿzರೆ.
ಹೆಚ್ಚಿನ ಮಾಹಿತಿಗೆ: ೯೮೮೬೪ -೧೩೧೩೧ರಲ್ಲಿ ಸಂಪರ್ಕಿಸಲು ಕೋರಿದೆ.


