ಫಾದರ್ ಫೆಲಿಕ್ಸ್ ನರೋನ್ಹ ಅಸ್ತಂಗತ; ಅಂತಿಮ ನಮನಕ್ಕೆ ಹರಿದುಬಂದ ಭಕ್ತಸಾಗರ…
ಶಿವಮೊಗ್ಗ : ಸುಮಾರು ಐದು ದಶಕಗಳ ಕಾಲ ಭಕ್ತಿ, ಸಂಗೀತ, ಸೇವೆ ಹಾಗೂ ಸಮರ್ಪಣೆಯ ದಾರಿಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದ ಹಾಗೂ ಕನ್ನಡ ಕ್ರೈಸ್ತ ಧಾರ್ಮಿಕ ಸಾಹಿತ್ಯಕ್ಕೆ ಅತ್ಯದ್ಭುತ ಕೊಡುಗೆ ನೀಡಿ, ಕನ್ನಡ ಕ್ರೈಸ್ತ ಸಾಹಿತ್ಯಕ್ಕೆ ತಮ್ಮ ಸಂಗೀತ ಮತ್ತು ಗಾಯನದ ಮೂಲಕ ಜೀವ ತುಂಬಿ ಅನೇಕ ದಶಕಗಳವರೆಗೂ ನಾಭೂತೋ ನಾ ಭವಿಷ್ಯತಿ ಎನ್ನುವಂತೆ ರಾರಾಜಿಸಿದ್ದ ಪೂಜ್ಯ ಕ್ರೈಸ್ತ ಧರ್ಮಗುರು ಮೋನ್ಸಿನ್ಯೋರ್ ಫಾದರ್ ಫೆಲಿಕ್ಸ್ ಜೋಸೆಫ್ ನರೋನ್ಹ (೭೬) ಅವರು ಏ.೫ರ ಭಾನುವಾರ ಬೆಳಿಗ್ಗೆ ೯:೪೭ಕ್ಕೆ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ರಿಸ್ತೈಕ್ಯರಾದರು.
ಭಕ್ತಿಗಾನಗಳ ಮೂಲಕ ದೇವರ ಸಂದೇಶವನ್ನು ಜನಮನಗಳಿಗೆ ತಲುಪಿಸಿದ ಫಾದರ್ ನರೋನ್ಹ ಅವರು, ಸಾವಿರಾರು ಭಕ್ತರ ಹೃದಯಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಪ್ರೀತಿಯ ಗುರುವಾಗಿ ದ್ದರು. ಅವರ ಸುಮಧುರ ಕಂಠದಿಂದ ಹರಿದ ಭಕ್ತಿಗೀತೆಗಳು ಅನೇಕ ಜನರ ಮನಸ್ಸಿಗೆ ಶಾಂತಿ, ಭರವಸೆ ಮತ್ತು ಆಧ್ಯಾತ್ಮಿಕ ಆನಂದವನ್ನು ತುಂಬಿದ್ದವು. ಅವರ ಗಾಯನವು ಕೇವಲ ಸಂಗೀತ ವಾಗಿರದೆ, ಆತ್ಮಸಾಕ್ಷಾತ್ಕಾರದ ದಾರಿಯಾಗಿ ಅನೇಕ ಮಂದಿಗೆ ಮಾರ್ಗದರ್ಶನ ನೀಡಿತ್ತು.
ಮಕ್ಕಳು, ಯುವಕರು ಹಾಗೂ ಭಕ್ತ ಸಮುದಾಯದ ಪಾಲಿಗೆ ಅವರು ಆದರ್ಶ ಗುರುವಾಗಿದ್ದು, ತಮ್ಮ ಸಂಪೂರ್ಣ ಜೀವನವನ್ನು ಕ್ರಿಸ್ತನ ಸೇವೆಗೆ ಅರ್ಪಿಸಿಕೊಂಡ ಮಹನೀಯ ರಾಗಿದ್ದರು. ಚರ್ಚಿನ ಗೋಡೆಗಳನ್ನು ಮೀರಿ ಸಮಾಜದ ಪ್ರತಿಯೊಂದು ವರ್ಗದ ಜನರ ಹೃದಯಗಳಿಗೆ ತಲುಪಿದ ಅವರ ಸೇವೆ ವಿಶಿಷ್ಟವಾಗಿತ್ತು. ಶಿಸ್ತಿನ ಜೀವನ, ಮೃದು ಮಾತು, ದಯಾಮಯ ನಡೆ ಮತ್ತು ಸೇವೆ ಯಲ್ಲಿ ನಿಷ್ಠೆ ಇವುಗಳ ಸಮನ್ವಯವೇ ಅವರ ವ್ಯಕ್ತಿತ್ವದ ವೈಶಿಷ್ಟ್ಯವಾಗಿತ್ತು.
ಸಾಮಾಜಿಕ ಸೇವೆಯಲ್ಲಿಯೂ ಅವರು ಅಪಾರ ಕೊಡುಗೆ ನೀಡಿzರೆ. ಬಡವರು, ನಿರ್ಗತಿಕರು ಮತ್ತು ಸಂಕಷ್ಟದಲ್ಲಿದ್ದವರ ಬಳಿಗೆ ತಲುಪಿ ಅವರ ನೋವನ್ನು ಹಂಚಿಕೊಳ್ಳುವ ಅಪರೂಪದ ಗುಣವು ಅವರನ್ನು ಜನಮನಗಳಿಗೆ ಹತ್ತಿರಗೊಳಿಸಿತ್ತು. ಮಾನವೀಯ ಮಲ್ಯಗಳ ಜೀವಂತ ಪ್ರತಿಬಿಂಬವಾಗಿದ್ದ ಅವರ ಜೀವನ ಅನೇಕ ಮಂದಿಗೆ ಪ್ರೇರಣೆಯಾಗಿದೆ. ವಿಶೇಷವಾಗಿ ಯುವಜನತೆಗೆ ಅವರು ದೀಪಸ್ತಂಭವಾಗಿದ್ದರು. ಅವರ ಜೀವನ ಮತ್ತು ಸೇವೆಯಿಂದ ಪ್ರೇರಿತರಾಗಿ ಹಲವರು ಯಾಜಕ ದೀಕ್ಷೆ ಪಡೆದು ಧಾರ್ಮಿಕ ಸೇವೆಯಲ್ಲಿ ತೊಡಗಿಸಿ ಕೊಂಡಿರುವುದು ಅವರ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ.
ಪೂಜ್ಯ ಗುರುಗಳ ಅಗಲಿಕೆ ಕ್ರೈಸ್ತ ಸಮುದಾಯಕ್ಕೆ ಮಾತ್ರವಲ್ಲ, ಅವರನ್ನು ಪರಿಚಯಿಸಿಕೊಂಡ ಪ್ರತಿಯೊಬ್ಬರಿಗೂ ಅಪಾರ ದುಃಖ ವನ್ನುಂಟು ಮಾಡಿದೆ. ಆದರೆ ಅವರ ಸಂದೇಶ, ಸೇವಾ ಪರಂಪರೆ ಮತ್ತು ಆತ್ಮೀಯ ನೆನಪುಗಳು ಸದಾ ಜೀವಂತವಾಗಿರಲಿವೆ.
ಫಾದರ್ ಫೆಲಿಕ್ಸ್ ಜೋಸೆಫ್ ನರೋನ್ಹ ಅವರ ಅಂತ್ಯಕ್ರಿಯೆ ಏ.೬ರ ಇಂದು ಮಧ್ಯಾಹ್ನ ೩:೩೦ಕ್ಕೆ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಭಕ್ತಿ ಗೌರವದಿಂದ ನೆರವೇರಿತು. ಶಿವಮೊಗ್ಗ ಧರ್ಮಕ್ಷೇತ್ರದ ಅಪೋಸ್ತೋಲಿಕ್ ಆಡಳಿತಾಽಕಾರಿಗಳೂ ಆದ ಕಾರವಾರ ಧರ್ಮಕ್ಷೇತ್ರದ ಪರಮಪೂಜ್ಯ ಬಿಷಪ್ ಡಾ. ಡುಮಿಂಗ್ ಡಯಾಸ್ ಹಾಗೂ ಮೈಸೂರು ಧರ್ಮಕ್ಷೇತ್ರದ ಪರಮಪೂಜ್ಯ ಬಿಷಪ್ ಡಾ. ಫ್ರಾನ್ಸಿಸ್ ಸೆರಾವೋ, ಭದ್ರಾವತಿ ಧರ್ಮಕ್ಷೇತ್ರದ ಪರಮಪೂಜ್ಯ ಬಿಷಪ್ ಡಾ. ಜೋಸೆ- ಅರುಮಚ್ಚಾಡತ್ ಅವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ವಿಽವಿಧಾನಗಳು ಭಕ್ತಿಪೂರ್ವಕವಾಗಿ ಜರುಗಿದವು. ಈ ವೇಳೆ ಶಿವಮೊಗ್ಗ ಧರ್ಮಕ್ಷೇತ್ರದ ಶ್ರೇಷ್ಠಗುರು ರೆ|-| ಸ್ಟ್ಯಾನಿ ಡಿಸೋಜ ಸೇರಿದಂತೆ ವಿವಿಧ ಧರ್ಮಕೇಂದ್ರಗಳ ನೂರಾರು ಗುರುಗಳು, ಸಿಸ್ಟರ್ಗಳು ಹಾಗೂ ಭಕ್ತರು ಭಾಗವಹಿಸಿದ್ದರು.
ಸಂತಾಪ : ಪೂಜ್ಯ ಗುರುಗಳ ನಿಧನಕ್ಕೆ ಬೆಂಗಳೂರು ಮಹಾ ಧರ್ಮಕ್ಷೇತ್ರದ ನಿಕಟಪೂರ್ವ ಮಹಾಧರ್ಮಾಧ್ಯಕ್ಷ ಬರ್ನಾರ್ಡ್ ಮೋರಸ್, ಅರ್ಚ್ಬಿಷಪ್ ಡಾ. ಪೀಟರ್ ಮಚಾದೋ, ಕಾರವಾರದ ಬಿಷಪ್ ಡಾ. ಡುಮಿಂಗ್ ಡಯಾಸ್, ಮೈಸೂರು ಬಿಷಪ್ ಡಾ. ಫ್ರಾನ್ಸಿಸ್ ಸೆರಾವೋ, ಭದ್ರಾವತಿ ಧರ್ಮಕ್ಷೇತ್ರದ ಬಿಷಪ್ ಡಾ. ಜೋಸೆಫ್ ಅರುಮಚ್ಚಾಡತ್ ಸೇರಿದಂತೆ ಅನೇಕ ಧಾರ್ಮಿಕ ಗಣ್ಯರು, ವಿವಿಧ ಮಠಾಽಶರು ಸಂತಾಪ ವ್ಯಕ್ತಪಡಿಸಿzರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಸದಾನಂದ ಗೌಡ, ಸ್ಪೀಕರ್ ಅಬ್ದುಲ್ ಖಾದರ್, ಸಚಿವರಾದ ಮಧು ಬಂಗಾರಪ್ಪ, ಕೆ.ಜೆ. ಜಾರ್ಜ್, ಶಾಸಕ ಬೇಳೂರು ಗೋಪಾಲಕೃಷ್ಣ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಜಿ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಬಿಜೆಪಿ ಜಿ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್, ಪ್ರಮುಖರಾದ ಕಿರಣ್ -ರ್ನಾಂಡಿಸ್, ಮರಿಯಪ್ಪ, ಚಿನ್ನಪ್ಪ, ಸ್ಟ್ಯಾನಿ ಮಾರ್ಟಿಸ್, ಪ್ಯಾಟ್ರಿಕ್ ಲೋಬೋ, ರೇಮಂಡ್ ಡಿಮೆಲ್ಲೋ, ಮಾರ್ಕ್ ಡಿಕಾಸ್ಟ, ದೇವಸಗಾಯಿ ನಾದನ್ ಸೇರಿದಂತೆ ವಿವಿಧ ಗಣ್ಯರು ದುಃಖ ಹಂಚಿಕೊಂಡಿzರೆ.
