ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಪರಿಸರ ದಿನಾಚರಣೆ ಕೇವಲ ಪೋಟೋ ಶೂಟ್‌ಗೆ ಸೀಮಿತವಾಗದಿರಲಿ…

Share Below Link

ಅ. ರಾಕೇಶ್ ಡಿಸೋಜ 9448343211

ಪ್ರತಿ ವರ್ಷ ಜೂನ್ ೫ರಂದು ವಿಶ್ವದಾದ್ಯಂತ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು, ಪ್ರಕೃತಿಯ ಮಹತ್ವವನ್ನು ಮನ ದಟ್ಟು ಮಾಡಿಸುವುದು ಹಾಗೂ ಪರಿಸರ ಸಂಬಂಽತ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿ ನಲ್ಲಿ ಸಮೂಹಿಕ ಚಿಂತನೆ ಮತ್ತು ಕ್ರಿಯಾಶೀಲತೆಯನ್ನು ಉತ್ತೇಜಿ ಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಆದರೆ ಕೆಲ ಪ್ರಚಾರ ಪ್ರಿಯರಿಗೆ ಜೂನ್ ೫ ಬಂತೆಂದರೆ ಅದೇನೋ ಪರಿಸರ ಕಾಳಜಿ ಉಕ್ಕಿ ಬರುತ್ತದೆ. ತಮ್ಮ ತಮ್ಮ ಮನೆ- ಕಛೇರಿಯ ಸುತ್ತಮುತ್ತ ಸುಚಿತ್ವಕ್ಕೆ ಆದ್ಯತೆ ನೀಡದ ಈ ಮಹಾನ್ ವ್ಯಕ್ತಿಗಳು – ಸಂಘಟನೆಗಳು ಈ ದಿನದಂದು ಜಾಗೃತರಾಗಿ ಬೀದಿಗಿಳಿದು ಸ್ವಚ್ಚತೆ ಕುರಿತು -ಸ್ ಕೊಡುವುದು ಅಚ್ಚರಿಯ ಸಂಗತಿಯಾಗಿದೆ.


ಇಂದು ಮಾನವ ನಾಗರಿಕತೆ ವಿeನ, ತಂತ್ರeನ ಮತ್ತು ಆರ್ಥಿಕ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡುತ್ತಿದೆ. ಆದರೆ ಇದೇ ಅಭಿವೃದ್ಧಿಯ ಓಟದಲ್ಲಿ ಪ್ರಕೃತಿ ಮತ್ತು ಪರಿಸರದ ಮೇಲೆ ಭಾರೀ ಒತ್ತಡ ಉಂಟಾಗುತ್ತಿದೆ. ನಗರೀಕರಣ, ಕೈಗಾರಿಕೀಕರಣ, ಅರಣ್ಯ ನಾಶ, ಅಕ್ರಮ ಮರಳು- ಮಣ್ಣು -ಕಲ್ಲು ಗಣಿಗಾರಿಕೆ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ದುರುಪಯೋಗ, ಯುದ್ದಗಳು ಹಾಗೂ ಮಾಲಿನ್ಯದ ಪರಿಣಾಮವಾಗಿ ಪರಿಸರದ ಸಮತೋಲನ ಹದಗೆಡುತ್ತಿದೆ. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮನ್ವಯ ಸಾದಿಸದಿದ್ದರೆ ಮುಂದಿನ ಪೀಳಿಗೆಗೆ ನಾವು ಸುರಕ್ಷಿತವಾದ ಭೂಮಿಯನ್ನು ಬಿಟ್ಟುಹೋಗಲು ಸಾಧ್ಯವಾಗು ವುದಿಲ್ಲ ಎಂಬ ಎಚ್ಚರಿಕೆಯನ್ನು ಇಂದಿನ ಪರಿಸ್ಥಿತಿ ನೀಡುತ್ತಿದೆ.


ಜಾಗತಿಕ ಮಟ್ಟದಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ, ಮಣ್ಣಿನ ಸವಕಳಿ, ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಹಾಗೂ ಹವಾಮಾನ ಬದಲಾವಣೆಗಳು ಆತಂಕಕಾರಿ ಮಟ್ಟ ತಲುಪಿವೆ. ಕಾರ್ಖಾನೆಗಳು, ವಾಹನಗಳು ಮತ್ತು ಯುದ್ಧಗಳು ಸೇರಿದಂತೆ ವಿವಿಧ ಮಾನವ ಚಟುವಟಿಕೆ ಗಳಿಂದ ಹೊರಹೊಮ್ಮುವ ಹಾನಿ ಕಾರಕ ಅನಿಲಗಳು ಭೂಮಿಯ ಉಷ್ಣತೆಯನ್ನು ಹೆಚ್ಚಿಸುತ್ತಿವೆ. ಇದರ ಪರಿಣಾಮವಾಗಿ ಹಿಮನದಿ ಗಳು ಕರಗುತ್ತಿವೆ, ಸಮುದ್ರ ಮಟ್ಟ ಏರುತ್ತಿದೆ ಮತ್ತು ಹವಾಮಾನದಲ್ಲಿ ಅಸಹಜ ಬದಲಾವಣೆಗಳು ಕಂಡು ಬರುತ್ತಿವೆ. ಅತಿವೃಷ್ಟಿ, ಪ್ರವಾಹ, ಬರ, ಚಂಡಮಾರುತ, ಭೂಕುಸಿತ ಮತ್ತು ಕಾಡ್ಗಿಚ್ಚಿನಂತಹ ಪ್ರಕೃತಿ ವಿಕೋಪಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಈ ಸಂಕಟದ ಸೂಚನೆಯಾಗಿದೆ.


ಪರಿಸರವೆಂದರೆ ಕೇವಲ ಮರಗಳು, ನದಿಗಳು, ಬೆಟ್ಟಗಳು ಅಥವಾ ಕಾಡುಗಳು ಮಾತ್ರವಲ್ಲ. ಮನುಷ್ಯ, ಪ್ರಾಣಿ, ಪಕ್ಷಿ, ಸಸ್ಯ ಗಳು, ಜಲಮೂಲಗಳು, ಮಣ್ಣು, ಗಾಳಿ ಮತ್ತು ಪ್ರಕೃತಿಯ ಎಲ್ಲ ಅಂಶಗಳ ಸಮಗ್ರ ಸಂಯೋಜ ನೆಯೇ ಪರಿಸರವಾಗಿದೆ. ಈ ಎಲ್ಲ ಅಂಶಗಳು ಪರಸ್ಪರ ಅವಲಂಬಿತ ವಾಗಿದ್ದು, ಒಂದರ ಮೇಲೆ ಮತ್ತೊಂದು ಪ್ರಭಾವ ಬೀರುತ್ತವೆ. ಪರಿಸರದ ಸಮತೋಲನ ಹದ ಗೆಟ್ಟರೆ ಜೀವ ಜಗತ್ತಿನ ಅಸ್ತಿತ್ವವೇ ಅಪಾಯಕ್ಕೆ ಸಿಲುಕುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಸರ್ಕಾರ ಅಥವಾ ಪರಿಸರವಾದಿಗಳ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಬಳಕೆಯು ಪರಿಸರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಳಸಿ ಎಸೆಯುವ ಪ್ಲಾಸ್ಟಿಕ್ ವಸ್ತುಗಳು ನದಿಗಳು, ಕೆರೆಗಳು ಮತ್ತು ಸಮುದ್ರಗಳನ್ನು ಕಲುಷಿತ ಗೊಳಿಸುತ್ತಿವೆ. ಅನೇಕ ಜಲಚರಗಳು ಮತ್ತು ಪ್ರಾಣಿಗಳು ಪ್ಲಾಸ್ಟಿಕ್ ತ್ಯಾಜ್ಯದಿಂದ ಸಾವನ್ನಪ್ಪುತ್ತಿ ರುವ ಘಟನೆಗಳು ಮಾಧ್ಯಮ ಗಳಲ್ಲಿ ವರದಿಯಾಗುತ್ತಿವೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಪರಿಸರ ಸ್ನೇಹಿ ಪರ್ಯಾಯ ಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ.


ಅದೇ ರೀತಿ, ಅರಣ್ಯ ನಾಶವು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮರಗಳು ಕೇವಲ ಆಮ್ಲಜನಕ ನೀಡುವುದಷ್ಟೇ ಅಲ್ಲ, ಮಳೆಯ ಪ್ರಮಾಣವನ್ನು ನಿಯಂತ್ರಿಸುವುದು, ಮಣ್ಣಿನ ಸವಕಳಿಯನ್ನು ತಡೆಯುವುದು ಹಾಗೂ ಜೀವ ವೈವಿಧ್ಯವನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅರಣ್ಯಗಳ ನಾಶ ದಿಂದ ಅನೇಕ ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳು ಅಳಿವಿನಂಚಿಗೆ ತಲುಪುತ್ತಿವೆ. ಆದ್ದರಿಂದ ವೃಕ್ಷಾರೋಪಣೆಯ ಜೊತೆಗೆ ಈಗಿರುವ ಮರಗಳನ್ನು ಉಳಿಸುವ ಕಾರ್ಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು.
ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಅನೇಕ ಕಡೆಗಳಲ್ಲಿ ಮರ ನೆಡುವ ಕಾರ್ಯಕ್ರಮಗಳು, ಜಾಗೃತಿ ಜಾಥಾಗಳು, ವಿಚಾರ ಸಂಕಿರಣಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಪರಿಸರ ಸಂರಕ್ಷಣೆ ಕೇವಲ ಪ್ರಚಾರದ ಹಂಬಲಕ್ಕಾಗಿ ಒಂದು ದಿನದ ಕಾರ್ಯಕ್ರಮವಾಗಬಾರದು. ಕೇವಲ ಔಪಚಾರಿಕ ಆಚರಣೆ ಗಳಿಂದ ಪರಿಸರ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಪರಿಸರದ ಬಗ್ಗೆ ಕಾಳಜಿ ನಮ್ಮ ಜೀವನಶೈಲಿಯ ಭಾಗವಾಗಬೇಕು. ನೀರನ್ನು ಮಿತವಾಗಿ ಬಳಸುವುದು, ವಿದ್ಯುತ್ ಉಳಿತಾಯ ಮಾಡು ವುದು, ತ್ಯಾಜ್ಯವನ್ನು ವೈeನಿಕ ವಾಗಿ ವಿಲೇವಾರಿ ಮಾಡುವುದು, ಮಳೆನೀರು ಸಂಗ್ರಹಿಸುವುದು ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಉತ್ತೇಜನ ನೀಡುವುದು ಮುಂತಾದ ಸಣ್ಣ ಕ್ರಮಗಳೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.
ಶಾಲೆಗಳು, ಕಾಲೇಜುಗಳು, ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ಸಮುದಾಯಗಳು ಪರಿಸರ ಜಾಗೃತಿ ಕಾರ್ಯಕ್ರಮ ಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಪ್ರಕೃತಿ ಕುರಿತು ಪ್ರೀತಿ ಹಾಗೂ ಹೊಣೆಗಾರಿಕೆಯ ಮನೋಭಾವ ಬೆಳೆಸುವುದು ಅತ್ಯಗತ್ಯ. ಪರಿಸರ ಸಂರಕ್ಷಣೆಯ ನಿಜವಾದ ಫಲಿತಾಂಶವು ಮುಂದಿನ ಪೀಳಿಗೆಯ ಕೈಯಲ್ಲಿದೆ ಎಂಬುದನ್ನು ಅರಿಯಬೇಕು ಮತ್ತು ಪ್ರತಿ ಮನೆಯಿಂದಲೇ ಪರಿಸರ ಸಂರಕ್ಷಣೆ ಕುರಿತು ಮುನ್ನುಡಿ ಬರೆಯಬೇಕು.


ಇಂದು ಜಗತ್ತು ಎದುರಿಸುತ್ತಿ ರುವ ಬಹುತೇಕ ಸಮಸ್ಯೆಗಳ ಮೂಲದಲ್ಲಿ ಪರಿಸರದ ನಿರ್ಲಕ್ಷ್ಯ ಅಡಗಿದೆ. ಪರಿಸರವನ್ನು ರಕ್ಷಿಸು ವುದು ಎಂದರೆ ನಮ್ಮ ಆರೋಗ್ಯ ವನ್ನು, ಆರ್ಥಿಕತೆಯನ್ನು ಮತ್ತು ಭವಿಷ್ಯವನ್ನು ರಕ್ಷಿಸಿದಂತೆಯೇ. ನಾವು ಪ್ರಕೃತಿಯಿಂದ ಎಲ್ಲವನ್ನೂ ಪಡೆಯುತ್ತಿದ್ದೇವೆ. ಆದ್ದರಿಂದ ಅದನ್ನು ಉಳಿಸುವ ಜವಾಬ್ದಾರಿಯೂ ನಮ್ಮದೇ ಆಗಿದೆ.
ವಿಶ್ವ ಪರಿಸರ ದಿನಾಚರಣೆ ಕೇವಲ -ಟೋ ಶೂಟ್‌ಗೆ ಸೀಮಿತವಾಗದಿರಲಿ. ಇಂದು ಪರಿಸರವನ್ನು ಉಳಿಸುವ ಸಂಕಲ್ಪ ಕೈಗೊಂಡರೆ, ನಾಳೆಯ ಪೀಳಿಗೆಗೆ ಹಸಿರು, ಸ್ವಚ್ಛ ಮತ್ತು ಸುರಕ್ಷಿತ ಭೂಮಿಯನ್ನು ನೀಡಲು ಸಾಧ್ಯ ವಾಗುತ್ತದೆ. ಆದ್ದರಿಂದ ಇಂದು ಪರಿಸರ ಉಳಿಸೋಣ, ನಾಳೆಯ ಬದುಕು ಸುರಕ್ಷಿತಗೊಳಿಸೋಣ ಎಂಬ ದೃಢ ಸಂಕಲ್ಪದೊಂದಿಗೆ ನಾವೆಲ್ಲರೂ ಪರಿಸರ ಸಂರಕ್ಷಣೆಯ ಮಹಾಯಜ್ಞದಲ್ಲಿ ಕೈಜೋಡಿಸುವುದು ಇಂದಿನ ಅಗತ್ಯವಾಗಿದೆ.

Leave a Reply

Your email address will not be published. Required fields are marked *