ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಜಾತಿ ಕಾಲಂನಲ್ಲಿ ಬ್ರಾಹ್ಮಣ – ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ: ವಿಪ್ರರಿಗೆ ನಟರಾಜ್ ಭಾಗವತ್ ಮನವಿ

Share Below Link

ಶಿವಮೊಗ್ಗ : ಹಿಂದುಳಿದ ಆಯೋಗಗಳ ವತಿಯಿಂದ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಜತಿ ಗಣತಿ ಸಂದರ್ಭದಲ್ಲಿ ಜಿಯಲ್ಲಿರುವ ವಿಪ್ರ ಸಮಾಜದ ಎ ಉಪಪಂಗಡಗಳು ಜತಿ ಕಾಲಂ ನಲ್ಲಿ ಬ್ರಾಹ್ಮಣ ಎಂದು ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬೇಕು. ಉಪಜಾತಿ ಕಾಲಂನಲ್ಲಿ ಏನನ್ನೂ ಭರ್ತಿ ಮಾಡಬಾರದು ಎಂದು ಜಿ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್ ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.೧೮ ರಂದು ಶಿವಮೊಗ್ಗದ ಮಾತಾ ಮಾಂಗಲ್ಯ ಮಂದಿರದಲ್ಲಿ ಜಿಯ ಎ ತಾಲ್ಲೂಕಿನ ಬ್ರಾಹ್ಮಣ ಸಂಘದ ಅಧ್ಯಕ್ಷರು ಮತ್ತು ಉಪಪಂಗಡಗಳ ಅಧ್ಯಕ್ಷರುಗಳ ಸಭೆ ನಡೆದು, ಎಲ್ಲವನ್ನೂ ಚರ್ಚಿಸಿ ಈ ತೀರ್ಮಾನವನ್ನು ತೆಗೆದು ಕೊಳ್ಳಲಾಗಿದೆ. ಹಾಗಾಗಿ ವಿಪ್ರರು ಉಪಜತಿ ಕಾಲಂನಲ್ಲಿ ಯಾವ ಹೆಸರನ್ನೂ ಭರ್ತಿಮಾಡದೆ ಎಕ್ಸ್ ಗ್ರೂಪಿನಿಂದ ನಮೂದಿಸಬೇಕು. ಜತಿ ಕಾಲಂನಲ್ಲಿ ಮಾತ್ರ ಬ್ರಾಹ್ಮಣ ಎಂದೇ ನಮೂದಿಸಬೇಕು ಎಂದು ಹೇಳಿದರು.
ನಮ್ಮ ಸಮಾಜದ ಎಲ್ಲರೂ ಈ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು. ಇದು ಹಬ್ಬಗಳ ಸಮಯ ಮಾಹಿತಿ ಸಂಗ್ರಹಕಾರರು ಬರುತ್ತಾರೆ. ಹಾಗಾಗಿ ಯಾವ ಊರುಗಳಿಗೂ ಹೋಗದೆ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಮತ್ತು ಸಮೀಕ್ಷಾಕಾರರು ಸರಿ ಯಾಗಿ ಮಾಹಿತಿ ಭರ್ತಿಮಾಡಿ ಕೊಂಡಿzರೆಯೇ ಎಂದು ಖಚಿತಪಡಿಸಿ ಕೊಂಡೇ ಸಬ್‌ಮಿಟ್ ಮಾಡಲು ಒಪ್ಪಿಗೆ ಕೊಡಬೇಕು. ಆಧಾರ್‌ಕಾರ್ಡ್, ಪಾನ್‌ಕಾರ್ಡ್, ಓಟರ್ ಐಟಿ, ರೇಷನ್‌ಕಾರ್ಡ್ ಇತ್ಯಾದಿಗಳನ್ನು ಸಿದ್ಧವಾಗಿಟ್ಟು ಕೊಳ್ಳಬೇಕು ಎಂದರು.
ಈಗಾಗಲೇ ಈ ಬಗ್ಗೆ ಜಿಯ ವಿಪ್ರರಿಗೆ ಸಾಮಾಜಿಕ ಜಲತಾಣ ಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ. ತಾಲ್ಲೂಕಿನ ಅಧ್ಯಕ್ಷರುಗಳು ಈ ಬಗ್ಗೆ ಮತ್ತಷ್ಟು ಗಮನಹರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಯ ಬ್ರಾಹ್ಮಣ ಸಂಘದ ತಾಲ್ಲೂಕು ಅಧ್ಯಕ್ಷರು ಹಾಗೂ ಉಪಪಂಗಡಗಳ ಅಧ್ಯಕ್ಷರುಗಳಾದ ವೆಂಕಟೇಶಮೂರ್ತಿ, ಗುರುದತ್, ಆರ್. ಅಚ್ಚುತರಾವ್, ಸಿ.ಆರ್. ವಸಂತ್ ಕುಮಾರ್, ಶಂಕರನಾರಾಯಣ ಹೊಳ್ಳ, ಕಾರಕೋಡ್ಲು ಗುರುಮೂರ್ತಿ, ಸಂತೋಷ್ ಕುಮಾರ್ ಹೆಚ್. ಎಸ್., ಕುಮಾರಶಾಸ್ತ್ರೀ, ರವಿಕುಮಾರ್, ಎಸ್. ನಾಗೇಶ್, ಕೇಶವಮೂರ್ತಿ, ಸೂರ್ಯ ನಾರಾಯಣ, ಲಕ್ಷ್ಮೀಕಾಂತ್, ನಾಗರಾಜ್, ಸತೀಶ್ ಡಿ.ಎಸ್., ರಮೇಶ್ ಜಿ., ಉಷಾ, ಸರಳ ಹೆಗಡೆ ಸೇರಿದಂತೆ ಹಲವರಿದ್ದರು.