ಜಿಲ್ಲಾ ಸುದ್ದಿತಾಜಾ ಸುದ್ದಿ

ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸಲು ಆಗ್ರಹ..

Share Below Link

ಶಿವಮೊಗ್ಗ : ಉಬ್ರಾಣಿ ಹಾಗೂ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗಳಡಿ ಹೊದಿಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕೆರೆಗಳಿಗೆ ನೀರು ಒದಗಿಸಬೇಕೆಂದು ಆಗ್ರಹಿಸಿ ರೈತರು ಇಂದು ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿ ಯರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಾಗೂ ಧರಣಿ ನಡೆಸಿದರು.
ಚನ್ನಗಿರಿ ತಾಲ್ಲೂಕಿನ ಹಲವು ಗ್ರಾಮಗಳಿಗೆ ಈ ಯೋಜನೆಗಳಿಂದ ನಿರೀಕ್ಷಿತ ಪ್ರಯೋಜನ ಸಿಗದೆ, ಕುಡಿಯುವ ನೀರು ಮತ್ತು ಕೃಷಿಗೆ ತೀವ್ರ ಸಂಕಷ್ಟ ಉಂಟಾಗಿದೆ ಎಂದು ರೈತರು ಆರೋಪಿಸಿದರು. ಕೊಳವೆ ಬಾವಿಗಳ ಮೇಲೆ ಅವಲಂಬನೆ ಯಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೆರೆಗಳನ್ನು ತುಂಬಿಸಿದರೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಅವರು ತಿಳಿಸಿದರು.
ಸಾಸ್ವೆಹಳ್ಳಿ ಯೋಜನೆಯಡಿ ಜಕ್ಕಲಿ ಬಳಿಯಿಂದ ಪೈಪ್‌ಲೈನ್ ಮೂಲಕ ತುರ್ತಾಗಿ ಕೆರೆಗಳಿಗೆ ನೀರು ಹರಿಸಲು ಹಾಗೂ ಎರಡನೇ ಹಂತದ ಕಾಮಗಾರಿಗಳನ್ನು ಶೀಘ್ರ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜೊತೆಗೆ ಚನ್ನಗಿರಿಯಲ್ಲಿ ಉಪವಿಭಾಗ ಕಚೇರಿ ಸ್ಥಾಪನೆಗೂ ಆಗ್ರಹ ವ್ಯಕ್ತವಾಯಿತು.
ಸಮಿತಿಯ ಪ್ರಮುಖರಾದ ರಮೇಶ್ ಹೊದಿಗೆರೆ, ಮಂಜಣ್ಣ ಹುಗ್ಗೆ, ಜಾನ್‌ಪ್ರಕಾಶ್, ಪಿ.ಜೆ. ರುದ್ರಪ್ಪ, ಶೇಖರಪ್ಪ ಮೇದಿಗೆರೆ, ಹರೀಶ್‌ಪೂಜಾರ್, ಉಮೇಶ್, ಕೆಂಚಪ್ಪ ಮಾಳೇಹಳ್ಳಿ, ಪವಿ, ಮಂಜು, ಸ್ವಾಮಿ, ಹೆಚ್.ಮಂಜು ಮತ್ತಿತರರಿದ್ದರು.