ಜಿಲ್ಲಾ ಸುದ್ದಿತಾಜಾ ಸುದ್ದಿ

ಸೂಡಾ ಕಚೇರಿ ಪಕ್ಕದ ವಾಹನ ಶೆಡ್ ತೆರವಿಗೆ ಆಗ್ರಹ…

Share Below Link

ಶಿವಮೊಗ್ಗ : ವಿನೋಬನಗರದ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿಯ ಪಕ್ಕದ ಸಾರ್ವಜನಿಕರಿಗಾಗಿ ಬಿಟ್ಟಿರುವ ರಸ್ತೆಯಲ್ಲಿ ವಾಹನಗಳ ನಿಲುಗಡೆಗಾಗಿ ನಿರ್ಮಿಸಿರುವ ಶೆಡ್ ತಕ್ಷಣ ತೆರವು ಗೊಳಿಸಬೇಕು ಎಂದು ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಇಂದು ಪ್ರಾಧಿಕಾರದ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.


ಸೂಡಾ ಕಚೇರಿ ಪಕ್ಕದ ರಸ್ತೆಯಲ್ಲಿ ತಮ್ಮ ಇಲಾಖೆಯಿಂದ ನಿರ್ಮಿಸಿರುವ ಶೆಡ್ ಕಾನೂನು ಬಾಹಿರ ನಿರ್ಮಾಣದ ಬಗ್ಗೆ ಈಗಾಗಲೇ ಜಿಡಳಿತಕ್ಕೆ ದೂರು ನೀಡಿದ್ದರೂ ಇದುವರೆಗೂ ಈ ಶೆಡ್ ತೆರವುಗೊಳಿಸಿಲ್ಲ. ಶಿವಮೊಗ್ಗ ನಗರ ಮಹಾನಗರ ಯೋಜನೆ-೨೦೩೦ರ ನಕ್ಷೆಯ ಪ್ರಕಾರ ಈ ಶೆಡ್ ನಿರ್ಮಿಸಿರುವ ಜಗ ರಸ್ತೆಗಾಗಿ ಬಿಟ್ಟಿರುವ ಜಗವಾಗಿದೆ. ನಿಮ್ಮ ಇಲಾಖೆಯ ಮುಖ್ಯ ಕಟ್ಟಡ ನಿರ್ಮಾಣ ಆದ ದಿನದಿಂದ ಕಳೆದ ಸಾಲಿನವರೆಗೂ ಇದನ್ನು ರಸ್ತೆ ಆಗಿಯೇ ಬಳಸಲಾಗಿದೆ. ಈ ರಸ್ತೆ ಅಭಿವೃದ್ದಿಗೆ ನಮ್ಮ ತೆರಿಗೆ ಹಣದಿಂದ ಲಕ್ಷಾಂತರ ರೂ.ಗಳನ್ನು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಯಿಸಿದೆ ಎಂದರು.
ಇವೆಲ್ಲದರ ನಡುವೆ, ಏಕಾಏಕಿ ಈ ರೀತಿಯ ಶೆಡ್ ನಿರ್ಮಾಣದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಶಿವಮೊಗ್ಗ ನಗರದ ೨೦೩೦ರ ಮಹಾನಗರ ಯೋಜನೆಯ / ಸಿ.ಡಿ.ಪಿ ಪ್ರಕಾರ ರಸ್ತೆ ಬಿಟ್ಟ ಮೇಲೆ ಇಲ್ಲಿ ಶೆಡ್ ನಿರ್ಮಾಣ ಕಾನೊನಿನ ಪ್ರಕಾರ ತಪ್ಪು ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಇಂತಹ ನಿರ್ಮಾಣ ತಡೆಗಟ್ಟಬೇಕಾದ ಜವಾಬ್ದಾರಿ. ನಿಮ್ಮ ನಗರಾಬಿವೃದ್ದಿ ಪ್ರಾಧಿಕಾರz. ಈ ರೀತಿ ರಸ್ತೆಯಲ್ಲಿ ಶೆಡ್ ನಿರ್ಮಾಣ ಮಾಡಲು ಸಾರ್ವಜನಿಕರಿಂದ ಆಭಿಪ್ರಾಯ ಪಡೆದಿಲ್ಲ ಅಥವಾ ಸರಕಾರದ ಆನುಮತಿ ಪಡೆದಿಲ್ಲ. ಒಟ್ಟಾರೆ ಆಗಿ ಇದೊಂದು ‘ಆಕ್ರಮ ಶೆಡ್’. ಈ ಎ ಆಂಶಗಳನ್ನು, ಗಮನಿಸಿ ತಾವು ತಕ್ಷಣ ಸಾರ್ವಜನಿಕರಿಗೆ ಉಪಯೋಗಕ್ಕಾಗಿ ಇರುವ ರಸ್ತೆಯಲ್ಲಿ ನಿರ್ಮಿಸಿರುವ ಶೆಡ್’ ತೆರುವುಗೊಳಿಸಲು ಒಂದು ವಾರದೊಳಗೆ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು. ತಪ್ಪಿದಲ್ಲಿ ಇನ್ನಷ್ಟು ಕಾನೂನಾತ್ಮಕ ಹೋರಾಟಗಳು ಆನಿವಾರ್ಯ ಮತ್ತು ಅದರ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆ.ವಿ. ವಸಂತಕುಮಾರ್, ಡಾ. ಸತೀಶ್ ಕುಮಾರ್ ಶೆಟ್ಟಿ, ಉಮೇಶ್ ಜಧವ್, ಚನ್ನವೀರಪ್ಪ ಗಾಮನಗಟ್ಟಿ, ಸೇತುರಾಮ್, ಜನಮೇಜಿರಾವ್, ಚನ್ನಪ್ಪ, ಚಂದ್ರಶೇಖರಗೌಡ, ವೆಂಕರನಾರಾಯಣ್, ಕೇಶವಮೂರ್ತಿ, ಪ್ರಕಾಶ್, ಕೇಶವ, ದಿಗಂತ ಕುಮಾರ್ ಇತರರು ಇದ್ದರು.

This image has an empty alt attribute; its file name is Arya-coll.gif