ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಚಿದಾನಂದಗೌಡ…

Share Below Link

ಸೊರಬ: ಬಲೂನು ಜೂಲ ಗಳ ಅಲಂಕೃತ ಎತ್ತುಗಳು, ಬಾಳೆಗಿಡ, ಹೂಗಳ ಸಿಂಗಾರಿಸಿದ ಎತ್ತಿನಗಾಡಿಯಲ್ಲಿ ಆಗಮಿಸಿದ ಪಕ್ಷೇತರ ಅಭ್ಯರ್ಥಿ ಹೋರಾಟ ಗಾರ ಜೆ.ಎಸ್. ಚಿದಾನಂದಗೌಡ ಅವರು ಪಟ್ಟಣದ ತಾಲೂಕು ಕಚೇರಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ರಾಗಿ ಹೋರಾಟಗಾರ ಎಂದೇ ಹೆಸರಾಗಿರುವ ಚಿದಾನಂದಗೌಡ ಅವರು ಎತ್ತಿನಗಾಡಿಯ ಮೂಲಕ ಆಗಮಿಸಿ ಪಕ್ಷೇತರ ಅಭ್ಯರ್ಥಿ ಯಾಗಿ ಚುನಾವಣಾಧಿಕಾರಿ ಪ್ರವೀ ಣ್ ಜೈನ್ ಅವರಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಪಟ್ಟಣದ ಪುರದೈವ ಶ್ರೀ ರಂಗ ನಾಥ ಸ್ವಾಮಿ ಸನ್ನಿಧಿಯಲ್ಲಿ ತಮ್ಮ ಬೆಂಬಲಿಗರು ಮತ್ತು ಆಪ್ತರೊಂ ದಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿ ವರೆಗೆ ಎತ್ತಿನಗಾಡಿಯಲ್ಲಿ ಮೆರವ ಣಿಗೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತ ನಾಡಿದ ಜೆ.ಎಸ್. ಚಿದಾನಂದ ಗೌಡ ಅವರು, ಜನತೆ ಎ ರಾಷ್ಟ್ರೀಯ ಪಕ್ಷಗಳ ಆಡಳಿತ ವೈಖರಿಯಿಂದ ಬೇಸತ್ತು ಹೋಗಿ zರೆ. ಕ್ಷೇತ್ರದಲ್ಲಿ ಈ ಬಾರಿ ಪಕ್ಷೇತರ ಅಭ್ಯರ್ಥಿಯಾದ ನನ್ನನ್ನು ಸ್ಥಳೀಯರಾಗಿರುವ ಕಾರಣಕ್ಕೆ ಬೆಂಬಲಿಸಲಿzರೆ ಎಂಬ ವಿಶ್ವಾಸ ವಿದೆ. ಜನತೆ ತಮ್ಮ ಜನಪರ ಹೋ ರಾಟಗಳನ್ನು ಗಮನಿಸಿzರೆ. ತಮ್ಮನ್ನು ಕ್ಷೇತ್ರದ ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದರೆ ರಾಜ್ಯ ರಾಜಧಾ ನಿಯಲ್ಲಿ ವಾಸ ಮಾಡದೇ, ಸೊರಬ ದಲ್ಲಿಯೇ ಇರು ತ್ತೇನೆ. ಜೊತೆಗೆ ರೈತರ ಪರವಾಗಿ ಧ್ವನಿ ಎತ್ತುವ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಪ್ರತಿ ಹೋಬಳಿ ಮಟ್ಟದಲ್ಲಿ ರೈತ ವೃತ್ತ ಸ್ಥಾಪನೆ ಮತ್ತು ರೈತ ದಿನಾ ಚರಣೆಗೆ ಹೆಚ್ಚಿನ ಆದ್ಯತೆ ನೀಡಲಾ ಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರೇಂದ್ರ ಗೌಡ ಜೇಡಗೇರಿ, ಸದಾನಂದ ಗೌಡ ಜೇಡಗೇರಿ, ನಾರಾಯಣಪ್ಪ ಜೇಡ ಗೇರಿ, ಎಂ. ವೀರಭದ್ರ ಕಿರುಗು ಣಸೆ, ಅಣ್ಣಾಜಿಗೌಡ ಜೇಡ ಗೇರಿ, ಧರ್ಮಪ್ಪ ಜೇಡಗೇರಿ, ಕಾಳಪ್ಪ ಜೇಡಗೇರಿ, ವೀರಭದ್ರ ಜಯಂತಿ ಗ್ರಾಮ, ಎಸ್.ಬಿ. ವಿನಯ್, ರಾಜು ಸಮನವಳ್ಳಿ, ಮಾಲತೇಶ್ ನಲ್ಲಿಕೊಪ್ಪ ಇತರರಿದ್ದರು.