ಕ್ಯಾನ್ಸರ್ ಅಂತ್ಯವಲ್ಲ, ಹೊಸ ಬದುಕಿನ ಆರಂಭ…
ಶಿವಮೊಗ್ಗ : ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ರಾಷ್ಟ್ರೀಯ ಕ್ಯಾನ್ಸರ್ ಸರ್ವೈವರ್ ಡೇ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಎಂಬುದು ಜೀವನದ ಕೊನೆಯ ಅಧ್ಯಾಯವಲ್ಲ. ಸೂಕ್ತ ಚಿಕಿತ್ಸೆ, ವೈದ್ಯರ ಮೇಲಿನ ನಂಬಿಕೆ, ಕುಟುಂಬದ ಬೆಂಬಲ ಮತ್ತು ದೃಢ ಮನೋಬಲದಿಂದ ಅದನ್ನು ಜಯಿಸಿ ಆರೋಗ್ಯಕರ ಜೀವನ ನಡೆಸಬಹುದು ಎಂಬ ಸಂದೇಶ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ನ್ನು ಯಶಸ್ವಿಯಾಗಿ ಎದುರಿಸಿ ಬದುಕು ಗೆದ್ದ ಸರ್ವೈವರ್‌ಗಳು ಅವರ ಅನುಭವಗಳನ್ನು ಹಂಚಿ ಕೊಳ್ಳುವ ಮೂಲಕ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ ಶರ್ಮಾ ಅವರು ಮಾತನಾಡಿ, ಕ್ಯಾನ್ಸರ್ ರೋಗನಿರ್ಣಯವಾದ ತಕ್ಷಣ ಬದುಕಿನ ಬಗ್ಗೆ ನಿರಾಶರಾಗುವ ಅಗತ್ಯವಿಲ್ಲ. ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ನಿಂದ ಗುಣ ಮುಖರಾಗಲು ಸಾಧ್ಯ ಎಂಬುದಕ್ಕೆ ಸಾವಿರಾರು ಸರ್ವೈವರ್‌ಗಳ ಬದುಕು ಸಾಕ್ಷಿಯಾಗಿದೆ ಎಂದರು.
ಕ್ಯಾನ್ಸರ್ ಚಿಕಿತ್ಸೆಯು ಸುದೀರ್ಘ ಪ್ರಕ್ರಿಯೆಯಾಗಿದ್ದು, ಈ ಅವಧಿಯಲ್ಲಿ ಕುಟುಂಬದವರ ಬೆಂಬಲ ಮತ್ತು ರೋಗಿಯ ಮನೋಬಲ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಲ್ಲಿ ೧೦ ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ಯಶಸ್ವಿ ಯಾಗಿ ಚಿಕಿತ್ಸೆ ಪಡೆದು ಸರ್ವೈವರ್ ಗಳಾಗಿzರೆಂದು ವಿವರಿಸಿದರು.
ವಿಕಿರಣ ಆಂಕೊಲಾಜಿಸ್ಟ್ ಡಾ. ರವಿ ನಡಹಳ್ಳಿ ಮಾತನಾಡಿ, ಕ್ಯಾನ್ಸರ್ ಸರ್ವೈವರ್‌ಗಳ ಬದುಕು ಸಮಾಜಕ್ಕೆ ಸೂರ್ತಿಯಾಗಿದೆ. ಚಿಕಿತ್ಸೆಯ ಸಮಯದಲ್ಲಿ ಎದುರಾ ಗುವ ದೈಹಿಕ ಮತ್ತು ಮಾನಸಿಕ ಸವಾಲು ಗಳನ್ನು ಧೈರ್ಯದಿಂದ ಎದುರಿಸು ವುದು ಅತ್ಯಗತ್ಯ ಎಂದರು.
ಕಳೆದ ಎರಡು ದಶಕಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ಐಎಂ ಆರ್ಟಿ, ಐಜಿಆರ್ಟಿ ಹಾಗೂ ಪ್ರೋಟಾನ್ ಥೆರಪಿಯಂತಹ ಅತ್ಯಾಧುನಿಕ ತಂತ್ರeನಗಳಿಂದ ಚಿಕಿತ್ಸೆಯ ನಿಖರತೆ ಹೆಚ್ಚಿದ್ದು, ಅಡ್ಡಪರಿಣಾಮಗಳು ಗಣನೀಯ ವಾಗಿ ಕಡಿಮೆಯಾಗಿವೆ ಎಂದರು.
ಮೆಡಿಕಲ್ ಆಂಕೊಲಾಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಮಾತನಾಡಿ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಚಿಕಿತ್ಸೆ ಮಾತ್ರವಲ್ಲ, ರೋಗಿಯ ಮನಸ್ಥಿತಿ ಮತ್ತು ವೈದ್ಯರ ಮೇಲಿನ ನಂಬಿಕೆಯೂ ಮಹತ್ವzಗಿದೆ ಎಂದು ಹೇಳಿದರು.

ಹೆಡ್ ಅಂಡ್ ನೆಕ್ ಆಂಕೊ ಸರ್ಜನ್ ಡಾ. ದೀಪಕ್ ಕಿತ್ತೂರು ಮಾತನಾಡಿ, ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಪುರುಷರಲ್ಲಿ ಬಾಯಿ ಕ್ಯಾನ್ಸರ್ ಪ್ರಮುಖ ಕ್ಯಾನ್ಸರ್‌ಗಳಲ್ಲಿ ಒಂದಾ ಗಿದ್ದು, ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ದೀರ್ಘಕಾಲೀನ ಬದುಕು ಸಾಧ್ಯ ವಾಗುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ೮ ರಿಂದ ೧೨ ವರ್ಷ ಗಳಿಗೂ ಹೆಚ್ಚು ಕಾಲ ಆರೋಗ್ಯ ವಂತರಾಗಿ ಬದುಕುತ್ತಿರುವ ಅನೇಕ ರೋಗಿಗಳು ಇzರೆ ಎಂದರು.
ಕ್ಯಾನ್ಸರ್ ಸರ್ವೈವರ್‌ಗಳು, ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಭಾಗವಹಿಸಿ, ಪರಸ್ಪರ ಅನುಭವಗಳನ್ನು ಹಂಚಿ ಕೊಂಡರು. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ರೋಗಿಗಳಲ್ಲಿ ಹೊಸ ಭರವಸೆ ಮತ್ತು ಆತ್ಮವಿಶ್ವಾಸ ತುಂಬುವಲ್ಲಿ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು.
ರೇಡಿಯೇಷನ್ ಆಂಕೋಲ ಜಿಸ್ಟ ಡಾ. ಸುದರ್ಶನ ಗುಪ್ತ, ಸರ್ಜಿಕಲ್ ಆಂಕೋಲಾಜಿಸ್ಟ್ ಡಾ. ವಿವೇಕ ಎಂ. ಎ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶೈಲೇಶ್ ಎಸ್ ಎನ್ ಉಪಸ್ಥಿತರಿದ್ದರು.

