ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿದ್ಯಾರ್ಥಿಗಳಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸಿದ ಶಿಬಿರ…

Share Below Link

ಶಿವಮೊಗ್ಗ : ಪರಿಸರ ಅಧ್ಯಯನ ಕೇಂದ್ರ ಹಾಗೂ ರೋಟರಿ ಕ್ಲಬ್ ಉತ್ತರ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಗಾಜನೂರಿನಲ್ಲಿ ಏ.೭ ಮತ್ತು ೮ ರಂದು ಪ್ರೌಢಶಾಲಾ ವಿದ್ಯಾರ್ಥಿ ಗಳಿಗೆ ಜೀವ ವೈವಿಧ್ಯತೆ ಮತ್ತು ಜಾಗತಿಕ ತಾಪಮಾನ ಕುರಿತ ಎರಡು ದಿನಗಳ ಶಿಬಿರ ಆಯೋಜಿಸ ಲಾಯಿತು.
ಶಿಬಿರದಲ್ಲಿ ಮಲೆನಾಡು ನಾಣ್ಯ, ನೋಟು ಮತ್ತು ಅಂಚೆ ಚೀಟಿ ಸಂಗ್ರಹಕ ಸಂಘದ ಕು. ಪ್ರಣವ್ ಡಿ.ಹೆಚ್ ಹಾಗೂ ಶ್ರೀಮತಿ ಮೇರಿ ಡಿಸೋಜ ಅವರು ಜೀವ ವೈವಿಧ್ಯತೆಯನ್ನು ಪ್ರತಿಬಿಂಬಿ ಸುವ ನಾಣ್ಯ, ನೋಟು ಮತ್ತು ಅಂಚೆ ಚೀಟಿಗಳ ಪ್ರದರ್ಶನ ನಡೆಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರೊ. ಎ.ಎಸ್. ಚಂದ್ರಶೇಖರ್ ಅವರು, ಮಾನವನ ಸ್ವಾರ್ಥ ಮನೋಭಾವ ಮತ್ತು ಆಧುನಿಕ ಜೀವನಶೈಲಿ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿ, ಸರಳ ಜೀವನ ಶೈಲಿಯ ಅಗತ್ಯವನ್ನು ಒತ್ತಿಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪರಿಸರ ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಎಲ್. ಜನಾರ್ಧನ್ ಅವರು, ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಂಡು ಭವಿಷ್ಯವನ್ನು ಸಂರಕ್ಷಿಸಬೇಕೆಂದು ಹೇಳಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪರಿಸರ ಜಾಗೃತಿ ಚಟುವಟಿಕೆಗಳು, ಶರಣ್ಯದ ಜೀವ ವೈವಿಧ್ಯತೆ ಪಾರ್ಕ್ ಹಾಗೂ ತುಂಗಾ ನದಿ ತೀರದಲ್ಲಿ ಸ್ವಚ್ಛತಾ ಅಭಿಯಾನ, ಸಕ್ರೆಬೈಲು ಆನೆ ಬಿಡಾರ ಭೇಟಿ ಸೇರಿದಂತೆ ಹಲವು ಕಾರ್ಯಕ್ರಮ ಗಳನ್ನು ಆಯೋಜಿಸಲಾಯಿತು.
ಸಂಯೋಜಕರಾಗಿ ದಿನೇಶ್ ಹೊಸನಗರ ಕಾರ್ಯ ನಿರ್ವಹಿ ಸಿದ್ದು, ರೇಡಿಯೋ ಶಿವಮೊಗ್ಗದ ಪವಿತ್ರ ಎ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಮಡಿಹಳ್ಳಿ, ಕಡೆಕಲ್ಲು, ಗಾಜನೂರು ಹಾಗೂ ಹೊಸನಗರದ ವಿವಿಧ ಸರ್ಕಾರಿ ಶಾಲೆಗಳ ೬೦ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಶಿಬಿರದಲ್ಲಿ ಭಾಗವಹಿಸಿದರು.