ದೇಶದ ನಾಯಕತ್ವವನ್ನು ದೇಶದ್ರೋಹಿಗಳೆಂದು ಕರೆಯುವುದು ಬೇಜವಾಬ್ದಾರಿತನದ ಪರಮಾವಧಿ…
ಶಿವಮೊಗ್ಗ : ಸೂಮಾರು ೧೪೦ ಕೋಟಿ ಭಾರತೀಯರಿಂದ ಪ್ರಜಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ಹೆಮ್ಮೆಯ ನಾಯಕತ್ವವನ್ನು ದೇಶದ್ರೋಹಿಗಳು ಎಂದು ಆರೋಪಿಸುವುದು ರಾಜಕೀಯ ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿzರೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಪ್ರಭುತ್ವದ ಕತ್ತು ಹಿಸುಕಿದ ಕಾಂಗ್ರೆಸ್ ಪಕ್ಷದ ನಾಯಕರು ಇಂದು ಪ್ರಜಪ್ರಭುತ್ವದ ಬಗ್ಗೆ ಮಾತನಾಡುತ್ತಿರುವುದು ವಿಚಿತ್ರ ಸಂಗತಿ ಎಂದು ಅವರು ಟೀಕಿಸಿzರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಿರಂತರ ಚುನಾವಣಾ ಸೋಲುಗಳನ್ನು ಹಾಗೂ ಪ್ರಧಾನಿ ಮೋದಿ ಅವರ ಮೇಲಿನ ಜನರ ಅಚಲ ನಂಬಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ, ಮತ್ತೊಮ್ಮೆ ನಿಂದನೀಯ ಹಾಗೂ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿzರೆ ಎಂದು ಆರೋಪಿಸಿದರು.
ವಿದೇಶಿ ನೆಲದಲ್ಲಿ ಭಾರತವನ್ನು ಪದೇಪದೇ ಅವಮಾನಿಸುವ ರಾಹುಲ್ ಗಾಂಧಿ ಅವರಿಗೆ ದೇಶಭಕ್ತಿ ಅಥವಾ ಪ್ರಜಪ್ರಭುತ್ವದ ಬಗ್ಗೆ ಯಾರಿಗೂ ಉಪನ್ಯಾಸ ನೀಡುವ ನೈತಿಕ ಹಕ್ಕಿಲ್ಲ ಎಂದು ರಾಘವೇಂದ್ರ ಕಿಡಿಕಾರಿದರು.
ಪ್ರಸ್ತುತ ಇಡೀ ಜಗತ್ತು ಗಂಭೀರ ಜಾಗತಿಕ ಅಸ್ಥಿರತೆ ಹಾಗೂ ಸಂಘರ್ಷದ ಸವಾಲುಗಳನ್ನು ಎದುರಿಸುತ್ತಿರುವ ಸೂಕ್ಷ್ಮ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ರಾಷ್ಟ್ರೀಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲು ದೃಢ ನಾಯಕತ್ವ ನೀಡುತ್ತಿzರೆ ಎಂದು ಬಿವೈಆರ್ ಅವರು ಹೇಳಿದರು.
ಇಡೀ ದೇಶ ಪ್ರಧಾನಿ ಮೋದಿ ಅವರ ನಿರ್ಣಾಯಕ ನಾಯಕತ್ವದ ಹಿಂದೆ ಒಗ್ಗಟ್ಟಾಗಿ ನಿಂತಿರುವ ಸಂದರ್ಭದಲ್ಲಿ, ಕೆಲ ಸಂಕುಚಿತ ಮನೋಭಾವದ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸುವ ರೀತಿಯ ಬೇಜವಾಬ್ದಾರಿ ಹೇಳಿಕೆ ಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಅಭಿಪ್ರಾಯಪಟ್ಟರು.


