ಜಿಲ್ಲಾ ಸುದ್ದಿತಾಜಾ ಸುದ್ದಿ

ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ…

Share Below Link

ಶಿಕಾರಿಪುರ: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊ ಳ್ಳುವ ಮೂಲಕ ಉಜ್ವಲ ಭವಿಷ್ಯ, ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ಉಪ ನಿರ್ದೇಶಕ ಬಿ. ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಶಿಕಾರಿಪುರ, ಬನಸಿರಿ ಲಯನ್ಸ್ ವಿದ್ಯಾ ಸಂಸ್ಥೆಯಿಂದ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ೨೦೨೩ -೨೪ ಉದ್ಘಾಟಿಸಿ ಮಾತನಾಡಿದರು.
ಪಠ್ಯದ ಜತೆಗೆ ವಿದ್ಯಾರ್ಥಿಗಳು ಸರಿಸಮಾನವಾಗಿ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದ ಅವರು, ವ್ಯಕ್ತಿಯ eನಾರ್ಜನೆಗೆ ಪಠ್ಯ ಸಹಕಾರಿಯಾಗಿದ್ದು ದೈಹಿಕ ಹಾಗೂ ಮಾನಸಿಕ ಸದೃಡತೆಗೆ ಪ್ರತಿಯೊಬ್ಬರಿಗೂ ಕ್ರೀಡಾ ಚಟುವಟಿಕೆಗಳು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಕ್ರೀಡಾ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಸಾಮಾಜಿಕ ಸ್ಥಾನಮಾನ, ಆರ್ಥಿಕ ಲಾಭದ ಮೂಲಕ ರಾಷ್ಟ್ರಕ್ಕೆ ಉತ್ತಮ ಹೆಸರು ತರಬೇಕು ಎಂದ ಅವರು, ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಬನಶ್ರೀ ಲಯನ್ಸ್ ವಿದ್ಯಾ ಸಂಸ್ಥೆಯು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸುತ್ತಿರು ವುದು ಶ್ಲಾಘನೀಯ. ದೈಹಿಕ ಶಿಕ್ಷಣ ಶಿಕ್ಷಕರು ತಾರತಮ್ಯಕ್ಕೆ ಆಸ್ಪದ ವಿಲ್ಲದ ರೀತಿ ಯಲ್ಲಿ ಕ್ರೀಡಾಪಟು ಗಳಿಗೆ ನ್ಯಾಯ ಸಮ್ಮತ, ನಿಷ್ಪಕ್ಷಪಾತ ತೀರ್ಪು ನೀಡುವ ಮೂಲಕ ಜಿ ಮಟ್ಟ, ರಾಜ್ಯ ರಾಷ್ಟ್ರ ಮಟ್ಟಕ್ಕೆ ಸ್ಥಳೀಯ ಪ್ರತಿಭೆ ಗಳನ್ನು ಪರಿಚಯಿಸುವಂತೆ ತಿಳಿಸಿದರು.
ಕ್ರೀಡಾ ಜ್ಯೋತಿ ಸ್ವೀಕಾರ ಮಾಡಿದ ಪಟ್ಟಣ ಠಾಣೆ ಪಿಸ್ಸೈ ಪ್ರಶಾಂತ್ ಕುಮಾರ್ ಮಾತ ನಾಡಿ, ವಿದ್ಯಾರ್ಥಿಗಳು ಶಿಕ್ಷಣ ದೊಂದಿಗೆ ದೊರೆಯುವ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದ ಅವರು, ವ್ಯಕ್ತಿ ಹೇರಳ ಹಣ ಆಸ್ತಿ ಸಂಪತ್ತು ಗಳಿಸಿ ದೈಹಿಕವಾಗಿ ದುರ್ಬಲ ನಾಗಿದ್ದಲ್ಲಿ ಉಪಯೋಗವಿಲ್ಲ ಈ ದಿಸೆಯಲ್ಲಿ ದೈಹಿಕವಾಗಿ ಸದೃಡತೆಯನ್ನು ಗಳಿಸಲು ಕ್ರೀಡಾ ಚಟುವಟಿಕೆಯಿಂದ ಸಾಧ್ಯ. ಪ್ರತಿ ಅವಕಾಶದಲ್ಲೂ ಉತ್ತಮ ಸಾಧನೆಗೈವ ಮೂಲಕ ಸುಂದರ ಬದುಕನ್ನು ರೂಪಿಸಿಕೊಳ್ಳಿ. ದೈಹಿಕ ಶಿಕ್ಷಕರು ಸಾಮರಸ್ಯ, ಸಹ ಬಾಳ್ವೆಯೊಂದಿಗೆ, ಜತಿ, ಲಿಂಗ ಭೇದವಿಲ್ಲದೆ ಆಟವಾಡಿಸಿ, ನ್ಯಾಯಸಮ್ಮತ ತೀರ್ಪು ನೀಡುವ ಮೂಲಕ ಹೊಸ ಶ್ರೇಷ್ಟ ಕ್ರೀಡಾಪಟು ಗಳಿಗೆ ನ್ಯಾಯ ದೊರಕಿಸಿ ಕೊಡುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬನಸಿರಿ ಲಯನ್ಸ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಸ್. ಶಿವಾನಂದ ಶಾಸ್ತ್ರಿ ಧ್ವಜರೋಹಣ ನೆರವೇರಿಸಿದರು. ಪ್ರಾಚಾರ್ಯ ಲಕ್ಷ್ಮಿಕಾಂತ್ .ಎಂ.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ಮಮತಾ ಬಾಲಚಂದ್ರ, ಪದಾಧಿಕಾರಿ ಜಯಣ್ಣ ಹಂಚಿನಮನೆ, ಡಿ.ಕೆ ಮಲ್ಲಿಕಾ ರ್ಜುನ್, ಗದಿಗೆಪ್ಪ, ಶಿವಾನಂದ ಸಾನು, ಸಮನ್ವಯಾಧಿಕಾರಿ ಪರಮೇಶ್ವರ್ ನಾಯ್ಕ್ ಆಡಳಿತ ಅಧಿಕಾರಿ ಪ್ರಶಾಂತ್ ಕುಮಾರ್, ತಾ.ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಜಿ. ದೇವಕುಮಾರ್, ಕೆ.ಎಚ್ ಪುಟ್ಟಪ್ಪ, ಷಣ್ಮುಖಪ್ಪ ಮತ್ತಿತರರು ಉಪಸ್ಥಿತರಿದ್ದರು.
ಅಕ್ಕಮಹಾದೇವಿ ಪ್ರಾರ್ಥಿಸಿ, ಶುಭ.ಕೆ ಸ್ವಾಗತಿಸಿ, ಹರೀಶ್.ಡಿ ನಿರೂಪಿಸಿ, ಲಾವಣ್ಯ ವಂದಿಸಿದರು.