ಅಭಿವೃದ್ಧಿ ಹೆಸರಲ್ಲಿ ಶ್ರೀಮಂತರಿಗೆ ಆಶ್ರಯ ನೀಡುತ್ತಿರುವ ಬಿಜೆಪಿ …
ಭದ್ರಾವತಿ: ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಜಿಯಾದ್ಯಂತ ಗೀತಾ ಶಿವರಾಜ್ ಕುಮಾರ್ ಅವರಿಗೆ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಮತದಾರರು ಕಾಂಗ್ರೆಸ್ ಪಕ್ಷದ ಪರ ಒಲವು ತೋರಿಸುತ್ತಿzರೆ. ಗೀತಾ ಶಿವರಾಜ್ ಕುಮಾರ್ ಗೆಲ್ಲುವು ನಿಶ್ಚಿತ ಎಂದು ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದೃಢ ವಿಶ್ವಾಸದಿಂದ ನುಡಿದರು.
ಸುದ್ದಿಗೋಷ್ಟಿಯಲ್ಲಿ ಚುನಾವಣಾ ಪ್ರಚಾರದ ಬಗ್ಗೆ ಮಾಹಿತಿದ ಅವರು, ಕಳೆದ ಭಾರಿ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷವು ನೀಡಿದ ಗೃಹ ಲಕ್ಷ್ಮೀ, ಅನ್ನ ಭಾಗ್ಯ, ಗೃಹ ಜ್ಯೋತಿ, ಯುವ ನಿ, ಶಕ್ತಿ ಯೋಜನೆಗಳು ಜನರ ಮನಸ್ಸನ್ನು ಗೆದ್ದ ಕಾರಣ ರಾಜ್ಯದಲ್ಲಿ ನಮ್ಮ ಸರ್ಕಾರ ರಚಿಸಲು ಸಾಧ್ಯ ವಾಯಿತು. ಹೇಳಿದ್ದನ್ನು ಕೋಟ್ಟಾ ಗಿದೆ. ಮಾತಿನಂತೆ ನಡೆದಿದ್ದೇವೆ ಎಂದ ಅವರು, ಅದೇ ರೀತಿ ಈಗ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮಹಾಲಕ್ಷ್ಮೀ, ಯುವ ಬೆಳಕು, ಸಾಲಮನ್ನಾ, ಶ್ರಮಿಕ ನ್ಯಾಯದ ಗ್ಯಾರಂಟಿಗಳನ್ನು ನೀಡಿದೆ. ಇವುಗಳು ಸಹ ಪುನಃ ಮತದಾರರ ಮನ ಗೆಲ್ಲುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಇದರಲ್ಲಿ ಯಾವುದೆ ಅನುಮಾನ ಬೇಡ ಎಂದರು.
ಬಿಜೆಪಿ ಯವರು ೪೦೦ ಪ್ಲಸ್ ಎಂದು ಬಾಯಿ ಬಡಿದುಕೊಳ್ಳು ತ್ತಿzರೆ. ಆದರೆ ಅವರು ಏನೆ ತಿಪ್ಪರಲಾಗ ಹಾಕಿದರೂ ಗೆಲ್ಲುವುದು, ಪಡೆದುಕೊಳ್ಳುವು ದಿರಲಿ, ಕಳೆದುಕೊಳ್ಳುವುದೆ ಹೆಚ್ಚು, ಜಿಯಲ್ಲಿ ಪ್ರಥಮ ಗೆಲುವು ನಮ್ಮದೆ, ಇನ್ನು ರಾಜ್ಯದಲ್ಲಿ ಎರಡಂಕಿ ದಾಟುವುದಿಲ್ಲ. ದಕ್ಷಿಣ ಭಾರದಲ್ಲಿ ಅವರ ನೆಲೆ ಕಳೆದುಕೊಳ್ಳುತ್ತಾರೆ ಎಂದರು.
ದೇಶದ ಸಂಪತ್ತು ಕೇವಲ ೨೨ ಜನರ ಬಳಿ ಇದೆ. ಇನ್ನುಳಿದ ಸಂಪತ್ತು ಜನರದ್ದು. ಇವರನ್ನು ಬೀದಿಗೆ ತರುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಮಾಡುತ್ತಾರೆ. ರಾಹುಲ್ ಗಾಂಧಿ ಯವರು ದೇಶದ ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆ ನಡೆಸಿ ದೇಶದ ಸಂಪತ್ತನ್ನು ಮರು ಹಂಚಿಕೆ ಮಾಡುವ ಬಗ್ಗೆ ಗಂಭೀರ ಅಧ್ಯಯಯನ ನಡೆಸಲಾಗುವುದು ಎಂದು ಹೇಳಿzರೆ. ಬಿಜೆಪಿ ಯವರು ಕೇವಲ ಅಭಿವೃಧ್ಧಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಇಂದು ಅಭಿವೃಧ್ಧಿ ಎಂಬುದು ಮರಿಚಿಕೆ ಯಾಗಿದೆ. ಉದ್ದಿಮೆದಾರರ ಅಭಿವೃಧ್ಧಿಯೆ ದೇಶದ ಅಭಿವೃಧ್ಧಿ ಎಂದು ಕೊಂಡಿzರೆ ಎಂದು ಆರೋಪಿಸಿದರು.
ಈಶ್ವರಪ್ಪ ನವರು ನಮ್ಮ ಬಗ್ಗೆ ಟೀಕೆ ಮಾಡುತ್ತಾರೆ. ಕಲಾವಿದರು ಬಣ್ಣ ಹಚ್ಚಿದರೆ ಇವರು ನಾಲಿಗೆಗೆ ಬಣ್ಣ ಹಚ್ಚಿಕೊಂಡಿzರೆ. ಹಾಗಾಗಿ ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಾರೆ. ಅವರ ಟೀಕೆ ಟಿಪ್ಪಣಿಗಳಿಗೆ ಈಗ ಉತ್ತರಿಸುವ ಗೋಡವೆಗೆ ಹೋಗುವುದಿಲ್ಲ. ಚುನಾವಣೆಯಲ್ಲಿ ಮತದಾರರೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದರು.
ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಮಾತನಾಡಿ, ನಮ್ಮ ಚುನಾವಣಾ ಪ್ರಚಾರದ ಬಗ್ಗೆ ಟಿವಿ ಮಾದ್ಯಮಗಳು ನಮ್ಮ ಪರ ಇಲ್ಲ. ಆದರೆ ಪತ್ರಿಕೆಗಳು, ಸಾಮಾಜಿಕ ಜಲತಾಣಗಳು, ಯೂ ಟ್ಯೂಬ್ಗಳು, ವ್ಯಾಟ್ಸ್ಪ್ ನಮ್ಮ ಪರ ಇದೆ. ಅದರಲ್ಲಿ ಜನರು ಕಾಂಗ್ರೆಸ್ ಪಕ್ಷದ ಪರ ಅಭಿಪ್ರಾಯವನ್ನು ವ್ಯಕ್ತಪಡಿಸುವುದನ್ನು ನೋಡಿದರೆ ನಮ್ಮದೆ ಗೆಲುವು ಎಂಬುದು ಗೋತ್ತಾಗುತ್ತದೆ ಎಂದರು.
ಕಾಂಗ್ರೆಸ್ ಜಿಧ್ಯಕ್ಷ ಆರ್. ಪ್ರಸನ್ನಕುಮಾರ್, ಶಿರಸಿ ಶಾಸಕ ಭೀಮಣ್ಣ ನಾಯಕ್, ಎಸ್. ಕುಮಾರ್, ಹೆಚ್.ಎಲ್. ಷಡಾಕ್ಷರಿ, ಬಲ್ಕೀಶ್ ಭಾನು, ರೇಣುಕಮ್ಮ, ಮಣಿಶೇಖರ್ ಇನ್ನಿತರರಿದ್ದರು.