ಜಿಲ್ಲಾ ಸುದ್ದಿತಾಜಾ ಸುದ್ದಿ

ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೆ ಬ್ಯಾಂಕ್‌ಗಳು ಸಹಕರಿಸಬೇಕು :ಸಂಸದ ಬಿವೈಆರ್

Share Below Link

ಶಿವಮೊಗ್ಗ : ಕೇಂದ್ರ ಪುರಸ್ಕೃತ ಯೋಜನೆಗಳು/ಕಾರ್ಯಕ್ರಮ ಗಳನ್ನು ಇನ್ನಷ್ಟು ಪರಿಣಾಮಕಾರಿ ಯಾಗಿ ಅನುಷ್ಟಾನಗೊಳಿಸಬೇಕು ಹಾಗೂ ಬ್ಯಾಂಕುಗಳು ಇದಕ್ಕೆ ಸಹಕರಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಜಿಪಂ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಬ್ಯಾಂಕರ್ಸ್ ಡಿಸಿಸಿ ಮತ್ತು ಡಿಎಲ್‌ಆರ್‍ಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಎಂ ಸ್ವನಿಧಿ ಯೋಜನೆ ಯನ್ನು ಇನ್ನಷ್ಟು ಪರಿಣಾಮಕಾರಿ ಯಾಗಿ ಜರಿಗೆ ತರಬೇಕು. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಿಸಿದ ಕಚೇರಿಗಳಿಂದ ಅರ್ಜಿಗಳನ್ನು ಬೇಗ ಕಳುಹಿಸಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಸೌಲಭ್ಯ ನೀಡಲು ಅವಕಾಶವಾಗುತ್ತದೆ. ಈ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳ ಕುರಿತು ಅರಿವು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಜಿಯಲ್ಲಿ ಬರುವ ತಿಂಗಳಲ್ಲಿ ಎಲ್ಲ ಯೋಜನೆಗಳನ್ನು ಕೇಂದ್ರೀಕೃತ ಗೊಳಿಸಿದ ಒಂದು ದೊಡ್ಡದಾದ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಆ ಕಾರ್ಯಕ್ರಮದಲ್ಲಿ ಪ್ರಸ್ತುತ ಅರ್ಹರಾದ ಎಲ್ಲ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗವುದು ಎಂದರು.
ಮೊದಲನೇ ತ್ರೈಮಾಸಕದಲ್ಲಿ ಆದ್ಯತಾರಹಿತ ವಲಯದಲ್ಲಿ ರೂ.೩ ಕೋಟಿ ಶಿಕ್ಷಣ ಸಾಲ ಮತ್ತು ರೂ.೯೦ ಕೋಟಿ ಹೌಸಿಂಗ್ ಸಾಲ ನೀಡಲಾ ಗಿದ್ದು ಕ್ರಮವಾಗಿ ಶೇ೧೩.೦೪ ಮತ್ತು ೧೬.೮೫ ಪ್ರಗತಿ ಸಾಧಿಸಲಾಗಿದೆ. ಬ್ಯಾಂಕ್‌ಗಳು ಶಿಕ್ಷಣ ಸಾಲ ಮತ್ತು ವಸತಿ ಸಾಲಗಳಿಗೆ ಹೆಚ್ಚಿನ ಗಮನ ಹರಿಸಬೇಕೆಂದರು.
ಕೆನರಾ ಬ್ಯಾಂಕ್ ಎಜಿಎಂ ವೆಂಕಟರಾಮುಲು ಬಿ ಮಾತನಾಡಿ, ಸರ್ಕಾರದ ಎಲ್ಲ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಟಾನಗೊಳಿ ಸುವಲ್ಲಿ ನಂ.೧ ಜಿಯಾಗಿ ಶಿವಮೊಗ್ಗ ಹೊರಹೊಮ್ಮಬೇಕು. ಮೊದಲನೇ ತ್ರೈಮಾಸಿಕ ಅಂತ್ಯ ದವರೆಗೆ ಜಿಯ ಬ್ಯಾಂಕುಗಳಲ್ಲಿ ರೂ.೨೧೩೮.೯ ಕೋಟಿ ಠೇವಣಿ ಇದ್ದು, ರೂ.೧೬೨೨೩ ಮುಂಗಡ ನೀಡಲಾಗಿದೆ. ಹಾಗೂ ತಲಾ ಶೇ.೧.೭೬ ಕೃಷಿ ಸಾಲ ಮತ್ತು ಎಂಎಸ್‌ಎಂಇ ಯಲ್ಲಿ ಪ್ರಗತಿ ಆಗಿದೆ. ಒಟ್ಟಾರೆ ಆದ್ಯತಾ ವಲಯ ದಲ್ಲಿ ಶೇ.೧.೬ ಪ್ರಗತಿಯಾಗಿದೆ ಎಂದು ವಿವರಿಸಿದರು.
ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.