ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಿ.ವೈ. ರಾಘವೇಂದ್ರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ: ಈಶ್ವರಪ್ಪ ಆಗ್ರಹ

Share Below Link

ಶಿವಮೊಗ್ಗ : ಅನುಮತಿ ಇಲ್ಲದೆ ತಮ್ಮ ಪೋಟೋ ಮತ್ತು ವೀಡಿಯೋಗಳನ್ನು ತಿರುಚಿ ಸಾಮಾಜಿಕ ಜಲತಾಣದಲ್ಲಿ ಬರಹಗಳನ್ನು ಹರಿಬಿಟ್ಟವರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಅವರ ಷಡ್ಯಂತರವಿದೆ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಸ್.ಈಶ್ವರಪ್ಪ ಅವರು ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದು ಬಿವೈಆರ್ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.


ಜತಿಯ ಹೆಸರಿನಲ್ಲಿ ಮತ ಕೇಳುತ್ತ ಹಿಂದು ಧರ್ಮದ ಮಾತೇ ಆಡಲಿಲ್ಲ. ಶಿಕಾರಿಪುರದಲ್ಲಿ ನಾನು ಗೆಲ್ಲಬಾರದೆಂದು ವಾಮಾಚಾರ ಮಾಡಿದರೆಂದ ಶಂಕೆ ಇದೆ ಎಂದ ಅವರು, ಬಿವೈಆರ್ ಬೆಂಬಲಿಗರು ನನ್ನ ಪ್ರಚಾರಕ್ಕೆ ಅಡ್ಡಿಪಡಿಸಿದರು. ಕೊನೆಗೆ ನಾನು ಕಣದಿಂದ ಹಿಂದೆ ಸರಿದಿದ್ದೇನೆ ಎಂಬ ವೀಡಿಯೋ ವನ್ನು ಹರಿಬಿಟ್ಟರು. ಕಳೆದ ಚುನಾವಣೆಯಲ್ಲಿ ನಾನು ಬಿಜೆಪಿಯಿಂದ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದ ವೀಡಿಯೋವನ್ನೇ ಈ ಬಾರಿ ಎಂಬಂತೆ ಬಿಂಬಿಸಿದರು. ಪತ್ರಿಕೆಯಲ್ಲಿ ಪ್ರಕಟವಾದಂತೆ ನಾನು ಕಣದಿಂದೆ ಹಿಂದೆ ಸರಿದಿದ್ದೇನೆ. ರಾಘವೇಂದ್ರ ಅವರಿಗೆ ಮತ ನೀಡಿ ಎಂಬ ಬರಹವನ್ನು ಹಬ್ಬಿಸಿದರು. ಇದೆಲ್ಲ ರಾಘವೇಂದ್ರ ಅವರ ಕುತಂತ್ರವೇ ಆಗಿದೆ ಎಂದು ಹರಿಹಾಯ್ದರು.
ನನಗೆ ಈಗ ಬಹಳ ಅನ್ಯಾಯ ವಾಗಿದೆ. ನಾನು ಈಗಾಗಲೇ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಕೊಟ್ಟಿದ್ದೇನೆ. ಮೇ ೧೫ರವರೆಗೆ ಸಮಯ ನೀಡುತ್ತೇನೆ. ಜಿಲ್ಲಾ ರಕ್ಷಣಾಧಿಕಾರಿಗಳು ಕೂಡಲೇ ಬಿ.ವೈ.ರಾಘವೇಂದ್ರ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿಯಲ್ಲಿನ ಶುದ್ಧೀಕರಣ ಕ್ಕಾಗಿ, ಕುಟುಂಬ ರಾಜಕಾರಣವನ್ನು ವಿರೋಧಿಸಿ, ಹಿಂದುತ್ವದ ರಕ್ಷಣೆಗಾಗಿ ಚುನಾವಣೆಗೆ ನಿಂತಿದ್ದೆ, ಕ್ಷೇತ್ರದೆಲ್ಲೆಡೆ ನನಗೆ ಅಪಾರ ಬೆಂಬಲ ಸಿಕ್ಕಿದೆ ಎಂದ ಅವರು, ಹಿಂದುಳಿದವರು, ದಲಿತರು ಮುಂತಾದ ಅನೇಕರು ನನಗೆ ಮತಹಾಕಿದ್ದಾರೆ. ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ಕೂಡ ನನಗೆ ಮತಹಾಕುವುದಾಗಿ ಹೇಳಿದ್ದರು. ಆದರೆ ಬಿಜೆಪಿ ಹರಿಬಿಟ್ಟ ಈ ಫೇಕ್ ವೀಡಿಯೋ ನೋಡಿ ಅವರು ಮತ ಹಾಕಿಲ್ಲ, ಹೀಗೆ ಕಾಂಗ್ರೆಸ್ಸಿನವರ ಅನೇಕ ಮತಗಳು ನನಗೆ ಮಿಸ್ಸಾಗಿವೆ ಎಂದು ವ್ಯಂಗ್ಯವಾಡಿದ ಈಶ್ವರಪ್ಪನವರು, ಆದರೂ ಕೂಡ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖ ರಾದ ಕೆ.ಈ. ಕಾಂತೇಶ್, ಗನ್ನಿ ಶಂಕರ್, ಕಾಚಿನಕಟ್ಟೆ ಸತ್ಯನಾರಾ ಯಣ, ಶಿವಾಜಿ, ರಾಜಣ್ಣ, ಬಾಲು, ಮೋಹನ್, ಚನ್ನಬಸಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.