ಜಿಲ್ಲಾ ಸುದ್ದಿತಾಜಾ ಸುದ್ದಿ

ಜ್ಯೋತಿಷ್ಯ ಶಾಸ್ತ್ರವು ಕರ್ಮ ಸಿದ್ಧಾಂತಕ್ಕೆ ಪೂರಕವಾಗಿರುವ ಒಂದು ಶಾಸ್ತ್ರ: ಜೋಯ್ಸ್

Share Below Link

ಸಾಗರ: ಪೂರ್ವ ಜನ್ಮದಲ್ಲಿ ಮಾಡಿದ ಕರ್ಮಗಳಿಗೆ ಅನುಗುಣ ವಾಗಿ ಇಹ ಜನ್ಮದಲ್ಲಿ ಸುಖ-ದುಃಖ ಗಳನ್ನು ಅನುಭವಿಸಿಯೇ ತೀರಬೇ ಕೆಂಬುದು ಕರ್ಮ ಸಿದ್ಧಾಂತದ ಪ್ರಮುಖ ತತ್ವ ಎಂದು ಇಲ್ಲಿನ ಪ್ರಸಿದ್ಧ ಜ್ಯೋತಿಷ್ಯ ತಜ್ಞ ಅರವಿಂದ ಜೋಯ್ಸ್ ಹೇಳಿದರು.
ಪಟ್ಟಣದ ಅಗ್ರಹಾರದಲ್ಲಿ ಸುಧೀಂದ್ರ ಉಡುಪ ಮತ್ತು ನೇತ್ರ ಉಡುಪ ದಂಪತಿ ಆರಂಭಿಸಿದ ಸ್ಮೃತಿ ಯೋಗಕೇಂದ್ರ ಮತ್ತು ಸ್ಮೃತಿ ಜ್ಯೋತಿಷ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನ ದಲ್ಲಿ ಉತ್ತಮ ಕಾರ್ಯಗಳನ್ನು ಮಾಡದೆ ಉತ್ತಮ ಫಲಗಳನ್ನು ಪಡೆಯಲು ಸಾಧ್ಯವಿಲ್ಲ. ಜ್ಯೋತಿಷ್ಯ ಶಾಸ್ತ್ರವು ಸಹ ಕರ್ಮ ಸಿದ್ಧಾಂತಕ್ಕೆ ಪೂರಕವಾಗಿರುವ ಒಂದು ಶಾಸ್ತ್ರವಾ ಗಿದೆ. ಇಂತಹ ಜ್ಯೋತಿಷ್ಯ ಕೇಂದ್ರ ವನ್ನು ತಮ್ಮ ಶಿಷ್ಯರಾದ ಸುಧೀಂದ್ರ ಉಡುಪ ಆರಂಭಿಸಿರುವುದು ಸಂತ ಸ ಉಂಟು ಮಾಡಿದೆ ಎಂದರು.
ಆಯುರ್ವೇದ ವೈದ್ಯ ಡಾ| ಶಶಿಭೂಷಣ್ ಅವರು ಮಾತನಾಡಿ, ಆಯುರ್ವೇದ, ಯೋಗ, ಜ್ಯೋತಿಷ್ಯ ಈ ಮೂರು ಶಾಸ್ತ್ರಗಳೂ ಸಹ ಒಂದಕ್ಕೊಂದು ಪೂರಕವಾದ ಶಾಸ್ತ್ರಗಳಾಗಿದ್ದು ಅವುಗಳ ಮೂಲ ಉದ್ದೇಶ ಸ್ವಸ್ಥಚಿತ್ತ, ಸ್ವಸ್ಥ ಆರೋಗ್ಯ ಹಾಗೂ ಸ್ವಸ್ಥ ಚಿಂತನೆಯತ್ತ ದೇಹ ಮತ್ತು ಮನಸ್ಸನ್ನು ತೊಡಗಿಸುವುದಾಗಿದೆ. ಇಂತಹ ಉದಾತ್ತ ಧ್ಯೇಯೋದ್ದೇಶದ ಸಾಧನೆಗಾಗಿ ಇರುವ ಯೋಗ ಮತ್ತು ಜ್ಯೋತಿಷ್ಯ ವಿದ್ಯೆಯನ್ನು ಹಾಗೂ ಛಾಯಾಗ್ರಹಣವನ್ನು ಸಾಮಾಜಿಕ ಕಳಕಳಿಯಿಂದ ಆರಂಭಿ ಸುತ್ತಿರುವ ಸ್ಮೃತಿ ಸಮೂಹ ಸಂಸ್ಥೆ ತ್ರಿವಳಿ ಸೇವೆಯ ಸಂಗಮವಾಗಿದೆ ಎಂದರು.
ಸರ್ಕಾರಿ ಕಾಲೇಜಿನ ಪ್ರಾಂಶು ಪಾಲರಾದ ಪ್ರೇಮಲತಾ ಅವರು ಮಾತನಾಡಿ, ಯೋಗಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಎರಡೂ ವೈe ನಿಕ ಹಿನ್ನೆಲೆಯನ್ನು ಹೊಂದಿರುವ ವಿದ್ಯೆಯೇ ಆಗಿದ್ದು ಅವುಗಳ ಪ್ರಯೋಜನವನ್ನು ನಾಗರೀಕರಿಗೆ ತಲುಪಿಸುವ ನಿಟ್ಟಿನಲ್ಲಿ ಆರಂಭ ಗೊಂಡಿರುವ ಸ್ಮೃತಿ ಸಮೂಹ ಸಂಸ್ಥೆ ಯಶಸ್ಸನ್ನು ಕಾಣಲಿ ಎಂದರು.
ಸಂಸ್ಥೆಯ ಸ್ಥಾಪಕರಾದ ನೇತ್ರ ಉಡುಪ ಅವರು ಮಾತನಾಡಿ, ನನ್ನ ಜೀವನವದಲ್ಲಿ ಕಾಡಿದ ಅನಾ ರೋಗ್ಯ ಸಮಸ್ಯೆ ಯೋಗಾಭ್ಯಾಸ ದಿಂದ ಹಾಗೂ ಆಯುರ್ವೇದ ವೈದ್ಯರ ಸಲಹೆ ಸೂಚನೆಯಿಂದ ಪರಿಹರ ವಾಯಿತು. ವಿಶೇಷವಗಿ ಮಹಿಳೆಯರು ಹೇಳಿಕೊಳ್ಳಲಾಗ ದಂತಹ ದೈಹಿಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನಾನು ಕಲಿತ ಯೋಗ ವಿದ್ಯೆ ಉಪಯೋಗವಾಗ ಬಹುದೆಂಬ ನಂಬಿಕೆ ಹಾಗೂ ವಿಶ್ವಾಸದಿಂದ ಮಹಿಳೆಯರಿಗಾಗಿ ಯೋಗಾಭ್ಯಾಸ ಕೆಂದ್ರವನ್ನು ಆರಂಭಿಸಿದ್ದೇನೆ. ಇದರ ಸದುಪ ಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದರು.
ನಾಟ್ಯತರಂಗ ನೃತ್ಯಸಂಸ್ಥೆಯ ಮುಖ್ಯಸ್ಥರು ಹಾಗೂ ನೃತ್ಯಗುರು ಗಳಾದ ವಿದ್ವಾನ್ ಜನಾರ್ದನ್, ಸುಧೀಂದ್ರ ಉಡುಪ ಮಾತನಾಡಿ ದರು.
ಜೈ ಗುರುದೇವ ಯೋಗ ಸಂಸ್ಥೆಯ ಮುಖ್ಯಸ್ಥ ಜಿ.ಕೆ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಯೋತಿಷ್ಯ ಮತ್ತು ಯೋಗ ವಿದ್ಯೆ ಎರಡನ್ನೂ ಈ ಸಂಸ್ಥೆಯಲ್ಲಿ ಆರಂಭಿಸಿರುವುದು ಶ್ಲಾಘನೀಯ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಡಾ| ಲಕ್ಷ್ಮೀ ಶಶಿಭೂಷಣ್, ಸ್ಪೂರ್ತಿ ಯೋಗಕೇಂದ್ರದ ಪ್ರಸನ್ನ, ಜೈ ಗುರುಕೇಂದ್ರದ ಪ್ರವೀಣ್ ರಾಯ್ಕರ್, ಪ್ರಭಾವತಿ, ಸದ್ಗುರು ಯೋಗ ಕೆಂದ್ರದ ಕುಮಾರ್ ಮತ್ತಿತರರು ಹಾಜರಿದ್ದರು.
ರಮಾ ಮತ್ತು ಇಂದುಮತಿ ಪ್ರಾರ್ಥಿಸಿದರು. ಅಂಜನ ಸ್ವಾಗತಿಸಿದರು, ಆಕಾಶ ಉಡುಪ ವಂದಿಸಿದರು.