ಆರೋಗ್ಯತಾಜಾ ಸುದ್ದಿಲೇಖನಗಳು

ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಸಾವಿರಾರು ಕುಟುಂಬಗಳ ಕಣ್ಣೀರನ್ನು ಒರೆಸುವ ಆಶಾಕಿರಣ ಎಂ.ಐ.ಓ ಯಂತ್ರ…

Share Below Link

ಭೂಮಿಯ ಮೇಲೆ ದೇವರನ್ನು ಕಾಣಲು ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಮರಣದ ಅಂಚಿನಲ್ಲಿ ನಿಂತು ಮತ್ತೆ ಬದುಕಿನ ಬೆಳಕನ್ನು ಕಂಡವರು ಮಾತ್ರ ಒಂದು ಮಾತು ಹೇಳುತ್ತಾರೆ. ದೇವರು ಕೆಲವೊಮ್ಮೆ ವೈದ್ಯರ ರೂಪದಲ್ಲಿ ಬರುತ್ತಾನೆ ಎಂದು. ಕ್ಯಾನ್ಸರ್ ಎಂಬ ಒಂದು ಪದ ಕೇಳಿದರೆ ಸಾಕು, ಕ್ಷಣಾರ್ಧದಲ್ಲಿ ಮನೆಯ ನಗು ಮನವಾಗುತ್ತದೆ. ತಂದೆಯ ಕಣ್ಣಲ್ಲಿ ಆತಂಕ, ತಾಯಿಯ ಮನದಲ್ಲಿ ಕಣ್ಣೀರು, ಮಕ್ಕಳ ಮನದಲ್ಲಿ ಅಸಹಾಯಕತೆ, ಕುಟುಂಬದ ಭವಿಷ್ಯದ ಮೇಲೆ ಕರಾಳ ನೆರಳು. ಒಂದು ಕಾಲದಲ್ಲಿ ಕ್ಯಾನ್ಸರ್ ಎಂದರೆ ಬದುಕಿನ ಕೊನೆಯ ಪುಟ ತೆರೆದಂತಾಗುತ್ತಿತ್ತು.
ಆದರೆ ವಿeನ ಇಂದು ಆ ಕೊನೆಯ ಪುಟವನ್ನು ಮತ್ತೆ ಮೊದಲ ಅಧ್ಯಾಯವನ್ನಾಗಿ ಬರೆಯಲು ಆರಂಭಿಸಿದೆ. ಆ ಅದ್ಭುತ ಬದಲಾವಣೆಗೆ ಕಾರಣ ಕೇವಲ ಯಂತ್ರಗಳಲ್ಲ. ಯಂತ್ರಗಳನ್ನು ಮೀರಿದ ಮಾನವೀಯ ಮನಸ್ಸು. ಮಂಗಳೂರಿನ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಸುಮಾರು ರೂ ೨೫ ಕೋಟಿ ಮಲ್ಯದ ಟ್ರೂಬೀಮ್ (Sಛಿ ಆಛಿZಞ) ರೇಡಿಯೇಷನ್ ಚಿಕಿತ್ಸಾ ವ್ಯವಸ್ಥೆ ಕೇವಲ ವೈದ್ಯಕೀಯ ಸಾಧನವಲ್ಲ, ಅದು ಸಾವಿರಾರು ಕುಟುಂಬಗಳ ಕಣ್ಣೀರನ್ನು ಒರೆಸುವ ಆಶಾಕಿರಣ. ಬದುಕು ಕೈಚೆಲ್ಲುತ್ತಿದೆ ಎಂದು ಭಾವಿಸಿದ ರೋಗಿಯ ಮನದಲ್ಲಿ ಮತ್ತೆ ಬದುಕಬೇಕೆಂಬ ಇಚ್ಛೆಯನ್ನು ಹುಟ್ಟಿಸುವ ವಿಶ್ವಾಸದ ದೀಪ. ಅದರ ಈ ಸಾಧನೆಯ ಹಿಂದೆ ಕಾಣದಿರುವ ಒಂದು ಹೃದಯವಿದೆ. ಅದು ಡಾ| ಡಿ. ಸುರೇಶ್ ರಾವ್ ಅವರದು.
ಒಳ್ಳೆಯ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಶ್ರೇಷ್ಠ ವೈದ್ಯರು ಬದುಕಿನ ಮೇಲಿನ ನಂಬಿಕೆಯನ್ನು ಮರಳಿ ಕೊಡುತ್ತಾರೆ. ಡಾ| ಸುರೇಶ್ ರಾವ್ ಅವರು ಎರಡನೆಯ ವರ್ಗಕ್ಕೆ ಸೇರಿದವರು. ಸುಮಾರು ಹದಿನೈದು ವರ್ಷಗಳ ಹಿಂದೆಯೇ ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ರ್‍ಯಾಪಿಡ್‌ಆರ್ಕ್ ರೇಡಿಯೇಷನ್ ತಂತ್ರeನವನ್ನು ಪರಿಚಯಿಸಿ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ದಿಕ್ಕು ತೋರಿದವರು ಅವರೇ. ಪೆಟ್ ಸ್ಕ್ಯಾನ್ ಅನ್ನು ರೇಡಿಯೇಷನ್ ಚಿಕಿತ್ಸೆಯೊಂದಿಗೆ ಸಂಯೋಜಿಸಿ ನಿಖರ ಚಿಕಿತ್ಸೆಯ ಹೊಸ ಅಧ್ಯಾಯವನ್ನು ಆರಂಭಿಸಿದ್ದರು. ಇಂದು ಟ್ರೂಬೀಮ್ ತಂತ್ರeನ ವನ್ನು ಮಂಗಳೂರಿಗೆ ತರುವ ಮೂಲಕ ಮತ್ತೊಮ್ಮೆ ವೈದ್ಯಕೀಯ ಇತಿಹಾಸದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ದಾಖಲಿಸಿzರೆ.
ಟ್ರೂಬೀಮ್ ಎನ್ನುವುದು ಕೇವಲ ಯಂತ್ರವಲ್ಲ. ಅದು ವಿeನ ಮತ್ತು ಮಾನವೀಯತೆಯ ಸಂಗಮ. ಅಮೆರಿಕ, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳ ಅತ್ಯಾಧುನಿಕ ಸಂಶೋಧನೆಯ ಫಲವಾದ ಈ ತಂತ್ರeನ ಕ್ಯಾನ್ಸರ್ ಗಡ್ಡೆಯನ್ನು ಮಿಲಿಮೀಟರ್ ಮಟ್ಟದಲ್ಲಿ ಗುರುತಿಸಿ, ಆರೋಗ್ಯಕರ ಅಂಗಾಂಶಗಳಿಗೆ ಹಾನಿಯಾಗದಂತೆ ಚಿಕಿತ್ಸೆ ನೀಡುತ್ತದೆ. ರೋಗಿಯ ದೇಹವಷ್ಟೇ ಅಲ್ಲ, ಅವನ ಭವಿಷ್ಯವನ್ನೂ ಕಾಪಾಡುತ್ತದೆ.
ಪ್ರತಿದಿನ ನೂರಕ್ಕೂ ಹೆಚ್ಚು ರೋಗಿಗಳು ಈ ತಂತ್ರeನದ ನೆರವಿನಿಂದ ಚಿಕಿತ್ಸೆ ಪಡೆಯುತ್ತಿ zರೆ. ಈ ಯಂತ್ರ ಬಹುತೇಕ ಇಪ್ಪತ್ತನಾಲ್ಕು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಕಾರಣ ಒಂದೇ. ಯಾವೊಬ್ಬ ರೋಗಿಯೂ ಚಿಕಿತ್ಸೆ ಸಿಗದೆ ಹಿಂತಿರುಗಬಾರದು. ಈ ಮಾತಿನಲ್ಲಿ ಆಸ್ಪತ್ರೆಯ ಧ್ಯೇಯವಷ್ಟೇ ಅಲ್ಲ, ಒಬ್ಬ ವೈದ್ಯನ ಹೃದಯದ ಧ್ವನಿಯೂ ಕೇಳಿಸುತ್ತದೆ.
ಡಾ| ಸುರೇಶ್‌ರಾವ್ ಅವರ ಮತ್ತೊಂದು ಅಪರೂಪದ ಗುಣ ಎಂದರೆ, ಅವರು ಎಂದಿಗೂ ಇದು ನಮ್ಮ ಆಸ್ಪತ್ರೆಯ ಯಂತ್ರ ಎಂದು ಹೇಳುವುದಿಲ್ಲ. ಬದಲಾಗಿ, ಈ ತಂತ್ರeನ ಎಲ್ಲರಿಗೂ ಸೇರಿದ್ದು ಎಂದು ಹೇಳುತ್ತಾರೆ. ಮೆದುಳಿನ ಕ್ಯಾನ್ಸರ್ ಅಲ್ಲದ ಗಡ್ಡೆಗಳ ಚಿಕಿತ್ಸೆಗೆ ಮಂಗಳೂರಿನ ಯಾವುದೇ ನರಶಸ್ತ್ರ್ರ ಚಿಕಿತ್ಸಾ ತಜ್ಞರು ಈ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು ಎಂಬ ಅವರ ಆಹ್ವಾನ ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರದ ಹೊಸ ಸಂಸ್ಕೃತಿಗೆ ನಾಂದಿ ಹಾಡಿದೆ.
ಇಂದು ದೇಶದಲ್ಲಿ ಜೀವ ಉಳಿಸುವ ವೈದ್ಯಕೀಯ ಉಪಕರಣ ಗಳ ಮೇಲೂ ಭಾರೀ ತೆರಿಗೆ ಇದೆ. ಈ ಯಂತ್ರವನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕು. ಕೋಟ್ಯಂತರ ರೂಪಾಯಿಗಳ ವೆಚ್ಚ, ವರ್ಷಕ್ಕೆ ಒಂದು ಕೋಟಿಗೂ ಅಧಿಕ ನಿರ್ವಹಣಾ ವೆಚ್ಚ, ನಿರಂತರ ವಿದ್ಯುತ್, ಅತ್ಯಾಧುನಿಕ ಮೂಲ ಸೌಕರ್ಯ, ಇವೆಲ್ಲವೂ ದೊಡ್ಡ ಸವಾಲುಗಳು. ಆದರೂ ಡಾ| ಸುರೇಶ್‌ರಾವ್ ಅವರ ಮಾತು ಒಂದೇ, ರೋಗಿಗೆ ಚಿಕಿತ್ಸೆ ಸಿಗಬೇಕು ಹಣದ ಕೊರತೆಯಿಂದ ಜೀವ ಕಳೆದುಹೋಗಬಾರದು.
ಅದಕ್ಕಾಗಿಯೇ ಅವರು ಸರ್ಕಾರಕ್ಕೆ ಜೀವ ಉಳಿಸುವ ವೈದ್ಯಕೀಯ ಉಪಕರಣಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡುತ್ತಿzರೆ. ದೇಶದಲ್ಲಿಯೇ ಇಂತಹ ತಂತ್ರeನ ಅಭಿವೃದ್ಧಿ ಯಾದರೆ ಅದನ್ನೇ ಮೊದಲು ಖರೀದಿಸುತ್ತೇವೆ ಎಂಬ ಅವರ ಮಾತಿನಲ್ಲಿ ದೇಶಭಕ್ತಿಯೂ ಇದೆ, ಮಾನವೀಯತೆಯೂ ಇದೆ.
ಕ್ಯಾನ್ಸರ್ ಮೊದಲ ಅಥವಾ ಎರಡನೇ ಹಂತದ ಪತ್ತೆಯಾದರೆ ಸುಮಾರು ಶೇ.೯೦ರಷ್ಟು ರೋಗಿಗಳನ್ನು ಗುಣಪಡಿಸಬಹುದು ಎಂದು ವೈದ್ಯಕೀಯ ವಿeನ ಹೇಳುತ್ತದೆ. ಅಂದರೆ ಕ್ಯಾನ್ಸರ್ ಎಂದರೆ ಅಂತ್ಯವಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರೆತರೆ ಅದು ಹೊಸ ಬದುಕಿನ ಆರಂಭ. ಇದನ್ನು ಸಾಧ್ಯವಾಗಿಸುತ್ತಿರುವ ತಂತ್ರeನ ಟ್ರೂಬೀಮ್. ಅದನ್ನು ಜನಸಾಮಾನ್ಯರಿಗೆ ತಲುಪಿಸುತ್ತಿ ರುವ ಮನಸ್ಸು ಡಾ| ಸುರೇಶ್ ರಾವ್ ಅವರದು.
ಗ್ರಾಮೀಣ ಭಾಗದ ಜನರೂ ಅತ್ಯಾಧುನಿಕ ಚಿಕಿತ್ಸೆ ಪಡೆಯಬೇಕು ಎಂಬ ಕನಸು ಕಂಡಿದ್ದ ಡಾ| ಸುರೇಶ್ ರಾವ್ ಅವರು ಇತ್ತೀಚಿಗೆ ತೀರ್ಥಹಳ್ಳಿ ತಾಲೂಕಿನ ಅರಗ ಸಮೀಪ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಿರುವುದು ಅವರ ದೂರದೃಷ್ಟಿಗೆ ಸಾಕ್ಷಿ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಅನೇಕ ಜಿಗಳ ಜನರಿಗೆ ಅದು ಬದುಕಿನ ಬೆಳಕಾಗಿದೆ.
ನಮ್ಮ ಸಂಸ್ಕೃತಿ ಒಂದು ಅದ್ಭುತ ಸಂದೇಶವನ್ನು ನೀಡುತ್ತದೆ. ಪರೋಪಕಾರಾಯ ಪುಣ್ಯಾಯ, ಪಾಪಾಯ ಪರಪೀಡನಮ್. ಅಂದರೆ, ಇತರರಿಗೆ ಉಪಕಾರ ಮಾಡುವುದೇ ಪುಣ್ಯ; ಇತರರಿಗೆ ನೋವು ಕೊಡುವುದೇ ಪಾಪ. ಮಹಾಭಾರತ ಮತ್ತು ಶ್ರೀಮದ್ಭಾಗವತವೂ ಇದೇ ಸತ್ಯವನ್ನು ಸಾರುತ್ತವೆ. ಎಷ್ಟೇ ಪೂಜೆ, ಯಜ್ಞ, ತಪಸ್ಸು ಮಾಡಿದರೂ ಸಂಕಷ್ಟದಲ್ಲಿರುವ ಜೀವಿಗೆ ನೆರವಾಗುವ ನಿಸ್ವಾರ್ಥ ಸೇವೆಯೇ ಪರಮಧರ್ಮ. ಆ ಧರ್ಮವನ್ನು ತಮ್ಮ ಬದುಕಿನ ಮೂಲಕ ಆಚರಿಸುತ್ತಿರುವ ವೈದ್ಯರಲ್ಲಿ ಡಾ| ಡಿ. ಸುರೇಶ್‌ರಾವ್ ಅವರು ಪ್ರಮುಖರು. ಇಂತಹ ವ್ಯಕ್ತಿಗಳನ್ನು ಗೌರವಿಸುವುದು ಎಂದರೆ ಒಬ್ಬ ವ್ಯಕ್ತಿಯನ್ನು ಹೊಗಳಿದಂತೆ ಅಲ್ಲ, ಸಮಾಜದಲ್ಲಿ ಮಾನವೀಯತೆ ಯನ್ನು ಗೌರವಿಸುವುದಂತಾಗುತ್ತದೆ. ಯಂತ್ರಗಳು ಜೀವ ಉಳಿಸ ಬಹುದು. ಆದರೆ ಯಂತ್ರಗಳನ್ನು ಸಮಾಜದ ಒಳಿತಿಗಾಗಿ ಬಳಸುವ ಮನಸ್ಸು ಇzಗ ಮಾತ್ರ ಅವು ನಿಜವಾದ ಅರ್ಥದಲ್ಲಿ ದೇವರ ಕೈಯಾಗುತ್ತವೆ. ಆದ್ದರಿಂದಲೇ ಹೇಳಬೇಕು ಜೀವ ಉಳಿಸುವ ಯಂತ್ರಕ್ಕಿಂತ ದೊಡ್ಡದು, ಜೀವ ಉಳಿಸುವ ಮನಸ್ಸು. ಇದು ಅಕ್ಷರಶಃ ಡಾ| ಸುರೇಶ್ ರಾವ್ ಅವರಿಗೆ ಅನ್ವಯವಾಗುತ್ತದೆ. ಇವರ ಸೇವಾಕಾರ್ಯ, ರೋಗಿಗಳ ಉಪಚಾರದಲ್ಲಿ ಅವರಿಗಿರುವ ಕಾಳಜಿ ಮತ್ತು ಅವರ ಎ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ.
ಆಸ್ಪತ್ರೆಯ ಸಹಾಯವಾಣಿ ದೂರವಾಣಿ. ೮೦೫೦೬೩೬೭೭೭

ಲೇಖಕ: ಅ. ನಾ. ವಿಜಯೇಂದ್ರ ರಾವ್
ಕ್ಯಾನ್ಸರ್ ಜನಜಾಗೃತಿ ಅಭಿಯಾನದ ಮುಖ್ಯ ಸಂಯೋಜಕ,
ಶಿವಮೊಗ್ಗ. ವ: ೯೪೪೮೭೯೦೧೨೭.

Leave a Reply

Your email address will not be published. Required fields are marked *