ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಏ.12: ಕಲಾ ಬಳಗದಿಂದ ಪಂ.ರಂಗಧೋಳ್ ಸಹೋದರರಿಗೆ ಅಭಿನಂದನಾ ಸಮಾರಂಭ…

Share Below Link

ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಏಪ್ರಿಲ್ ೧೨ರ ಭಾನುವಾರ ಸಂಜೆ ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಹೋದರರಾದ ಕಾಯಕ ಯೋಗಿ ಪಂ. ಆರ್. ಹನುಮಂತರಾವ್ ರಂಗಧೋಳ್ ಮತ್ತು ಪಂ. ಆರ್. ತುಕಾರಾಮ್‌ರಾವ್ ರಂಗಧೋಳ್ ಅವರಿಗೆ ಶಿವಮೊಗ್ಗದ ಕಲಾ ಬಳಗ ಹಾಗೂ ಶ್ರೀರಾಮಸೇವಾ ಕ್ಷತ್ರಿಯ ಸಹಕಾರ ಸಂಘದ ಸಹಕಾರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ನಾಡಿನ ಪ್ರಖ್ಯಾತ ಸುಗಮ ಸಂಗೀತ ಮಾಂತ್ರಿಕ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್ ಸಾರಥ್ಯದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದ್ದು, ಇವರ ಗಾಯನಕ್ಕೆ ನಗರ ನಾಗಭೂಷಣ್ ಉಡುಪ ಕೀಬೋರ್ಡ್ ನಲ್ಲಿ, ತಬಲಾದಲ್ಲಿ ಪಂ. ಆರ್. ತುಕಾರಾಂ ರಾವ್ ರಂಗಧೋಳ್ ಸಾಥ್ ನೀಡಲಿzರೆ.
ಸುಗಮ ಸಂಗೀತ ಕ್ಷೇತ್ರದಲ್ಲಿ ತಬಲ ಶೈಲಿಯನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದವರು ಪಂ. ಆರ್. ಹನುಮಂತರಾವ್ ರಂಗಧೋಳ್‌ರವರು.
ಶಿವಮೊಗ್ಗದಲ್ಲಿ ರಂಗಧೋಳ್ ಕುಟುಂಬಕ್ಕೆ ಬಹು ದೊಡ್ಡ ಹೆಸರಿದೆ. ಅಲ್ಲಿ ಆ ಕುಟುಂಬದ ಯಜಮಾನರ ಆಶೀರ್ವಾದವಿದೆ. ಮೂಲತಃ ಈ ಕುಟುಂಬದ ಮೂಲ ವೃತ್ತಿ ಟೈಲರಿಂಗ್. ಅದರ ಜೊತೆಜೊತೆಗೇ ಸಂಗೀತದ ಸರಸ್ವತಿ ಈ ಮನೆಯೊಳಗೆ ಸದಾ ನೆಲೆಸಿzಳೆ. ಆ ಮನೆಯನ್ನು ಹೊಕ್ಕರೆ ಒಂದು ದೊಡ್ಡ ವೀಣೆ ಸಹಿತ ಇರುವ ಸರಸ್ವತಿ ವಿಗ್ರಹ ಕಾಣಸಿಗುತ್ತದೆ. ಮನೆಯಲ್ಲಿ ತಬಲ, ಹಾರ್‍ಮೋನಿಯಂ, ಮೃದಂಗ, ರಿದಂ ಪ್ಯಾಡ್‌ಗಳು ರಾರಾಜಿಸುತ್ತಿವೆ.
ಹಿನ್ನೆಲೆ : ಸಂಗೀತ ಕ್ಷೇತ್ರದಲ್ಲಿ ಹಾಗೂ ಸಾಂಸಾರಿಕ ಜೀವನದಲ್ಲಿಯೂ ಕೂಡ ನಿಜವಾದ ಸಂತನಂತೆ ಬದುಕನ್ನು ನಡೆಸುತ್ತಿ ರುವ ತಮ್ಮ ಜೀವನವನ್ನೇ ಕಲಾ ಸೇವೆಗೆ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿ ಕೊಂಡಿzರೆ. ಅಷ್ಟು ಮಾತ್ರ ವಲ್ಲದೇ, ತಮ್ಮ ಸಹೋದರರನ್ನೂ ಹಾಗೂ ಅವರ ಮಕ್ಕಳನ್ನೂ ಕೂಡ ಈ ಸಂಗೀತ ಸೇವೆಯಲ್ಲಿ ನಿರತರಾಗುವಂತೆ ಮಾಡಿzರೆ. ಇವರ ಕಲಾ ಸೇವೆಯ ಹಿನ್ನೆಲೆಯನ್ನು ಹುಡುಕುತ್ತಾ ಹೋದರೆ, ಅಲ್ಲಿ ಅವರ ತಂದೆ ಕಾಣಸಿಗುತ್ತಾರೆ. ಅವರೂ ಕೂಡ ಮೃದಂಗ ನುಡಿಸುವುದ ರಲ್ಲಿ ನಿಷ್ಣಾತರು. ನಾಡಿನ ಘಟಾನುಘಟಿ ಸುಗಮ ಸಂಗೀತ ಗಾಯಕರಿಗೆ ಮೃದಂಗ ಸಾಥ್ ನೀಡಿzರೆ. ಇವರ ಸಹೋದರರೂ ಕೂಡ ತಬಲದಲ್ಲಿ ವಿಶೇಷ ಅಧ್ಯಯನ ಮಾಡಿ ಸಾವಿರಾರು ವೇದಿಕೆ ಗಳಲ್ಲಿ ಹಲವಾರು ಗಾಯಕರಿಗೆ ತಬಲ ಸಾಥ್ ನೀಡುತ್ತಿzರೆ. ವೃತ್ತಿಯಲ್ಲಿ ಟೈಲರಿಂಗ್ ಕೆಲಸದ ಮಧ್ಯೆಯೂ ಈ ಸಂಗೀತದ ಆಳ-ಅಗಲಗಳನ್ನು ತಿಳಿದು ಕೊಂಡು ಈಗ ಶಿವಮೊಗ್ಗ ಮಾತ್ರವಲ್ಲದೇ ರಾಜ್ಯದೆಡೆ ಮನೆಮಾತಾಗಿzರೆ.
ಅವರೇ ಪಂ. ಆರ್. ಹನುಮಂತ ರಾವ್ ರಂಗಧೋಳ್ ರವರು. ಅವರು ಕೇವಲ ಮನೆಗೆ ಮಾತ್ರ ಯಜಮಾನ ರಾಗಿಲ್ಲ. ಶಿವಮೊಗ್ಗದ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಪ್ರಶ್ನಾತೀತ ನಾಯಕರೂ ಹೌದು. ಸಮಾಜದ ಎ ಕಾರ್ಯಕ್ರಮಗಳು ಪಂ. ಆರ್. ಹನುಮಂತರಾವ್‌ರವರ ಮಾರ್ಗದರ್ಶನ ದಲ್ಲಿಯೇ ಇಂದಿಗೂ ನಡೆಯುತ್ತಿವೆ. ಸಮಾಜದ ಪ್ರಮುಖರಿಗೆ ಹನುಮಂತ ರಾವ್‌ರವರ ಮಾತೇ ವೇದವಾಕ್ಯ. ಒಟ್ಟಾರೆ ಸಮಾಜದ ಯಜಮಾನನಂತೆ ಉತ್ತಮ ವಾಗಿ ಕಾರ್‍ಯನಿರ್ವಹಣೆ ಮಾಡುತ್ತಿzರೆ.
ಪಂ. ಆರ್. ಹನುಮಂತರಾವ್ ರಂಗಧೋಳ್ :
೧೯೬೦-೬೧ ಸಾಲಿನಿಂದ ಪಂ. ದಸ್ತಗಿರ್‌ಸಾಬ್‌ರವರಿಂದ ತಬಲ ಕಲಿಕೆ ಆರಂಭಿಸಿದ ಪಂ. ಆರ್. ಹನುಮಂತರಾವ್ ರಂಗಧೋಳ್ ರವರು (ಲೈಟ್ ಮ್ಯೂಸಿಕ್) ವಿದ್ವಾನ್ ಬಂಗಾರಪ್ಪ ಸಿತಾರ್‌ರವರಿಂದ ಹಾಡು ಗಾರಿಕೆಯನ್ನು ಅಭ್ಯಾಸ ಮಾಡಿzರೆ. ೧೯೬೬ -೧೯೬೮ರ ಸಾಲಿನಲ್ಲಿ ಪಂ. ಸಂಗಮೇಶ್ ಗವಾಯಿಗಳಲ್ಲಿ ಹೆಚ್ಚಿನ ತಬಲ ಕಲಿಕೆಯನ್ನು ಪಡೆದಿzರೆ. ನಂತರ ಸೀನಿಯರ್ ತಬಲ ಕಲಿಕೆಯನ್ನು ಪಂ. ಸೋಮಶೇಖರ್ ಪಾಟೀಲ್ ಹಾಗೂ ಪಂ. ಶಿವಣ್ಣ ಗೌಡ ಪಾಟೀಲ್‌ರವರ ಬಳಿ ಅಭ್ಯಾಸ ಮಾಡಿzರೆ. ೧೯೭೧ನೇ ಇಸವಿಯಲ್ಲಿ ಪಂಡರಾಪುರದಲ್ಲಿ ಪಂ. ಗೋಢ್‌ಭೋಲೆ ಮಹಾರಾಜ್‌ರವರ ಬಳಿ ಹಿಂದೂಸ್ಥಾನಿ ಮೃದಂಗವನ್ನು ಹಾಗೂ ಪಂ. ಭಾನುದಾಸ್ ಭೂವಾ ಢವಳೀಕರ್ ರವರಲ್ಲಿ ಮೃದಂಗ ಮತ್ತು ತಬಲದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿzರೆ.
ನಂತರ ಪಂ. ಆರ್. ಹನುಮಂತ ರಾವ್ ರಂಗಧೋಳ್ ರವರು ಪ್ರಖ್ಯಾತ ಸುಗಮ ಸಂಗೀತ ಕಲಾವಿದರಾಗಿ ಹೊರಹೊಮ್ಮಿ zರೆ. ನಂತರದಲ್ಲಿ ಭದ್ರಾವತಿ ಆಕಾಶವಾಣಿ ಎ-ಗ್ರೇಡ್ ಕಲಾವಿದರಾಗಿ ಪ್ರಖ್ಯಾತರಾಗಿzರೆ. ಲೌಕಿಕ ವಿದ್ಯೆಯಲ್ಲಿ ಪಿ.ಯು.ಸಿ. ಹಾಗೂ ಜಿ.ಡಿ.ಸಿ. ಅಧ್ಯಯನ ಮಾಡಿzರೆ.
ತಂದೆ : ಆರ್.ಟಿ. ರಾಮಪ್ಪ, ತಾಯಿ : ಯಮುನಾಬಾಯಿ, ಮಕ್ಕಳು: ಆರ್. ಹನುಮಂತರಾವ್, ಆರ್. ತುಕಾರಾಮ್, ಆರ್. ರಂಗನಾಥ್. ಈ ಮೂರು ಜನ ಮಕ್ಕಳೂ ಸಂಗೀತ ಕ್ಷೇತ್ರದಲ್ಲಿ ಅವ್ಯಾಹುತ ವಾಗಿ ಸೇವೆ ಸಲ್ಲಿಸುತ್ತಿzರೆ. ಪತ್ನಿ : ಶಾರದಾ, ಮಕ್ಕಳು : ರಮ್ಯರಮೇಶ್, ರಾಘವೇಂದ್ರ, ರಾಮರಾವ್. ಇವರಲ್ಲಿ ರಾಘವೇಂದ್ರ ರಂಗಧೋಳ್ ಮತ್ತು ರಾಮರಾವ್ ರಂಗಧೋಳ್‌ರವರು ರಿದಂಪ್ಯಾಡ್ ಹಾಗೂ ತಬಲದಲ್ಲಿ ನಾಡಿನಾದ್ಯಂತ ಸಾವಿರಾರು ಕಾರ್ಯಕ್ರಮದಲ್ಲಿ ನುಡಿಸಿ ಪ್ರಖ್ಯಾತಿ ಪಡೆದಿzರೆ.
ಸಂಗೀತ ದಿಗ್ಗಜರಿಗೆ ತಬಲ ಸಾಥ್ :
ಕೆ. ಯುವರಾಜ್, ಶಿವಮೊಗ್ಗ ವೇಣುಗೋಪಾಲ್, ಕೆ.ಆರ್. ಸುಬ್ರಹ್ಮಣ್ಯ, ಶಿವಮೊಗ್ಗ ಸುಬ್ಬಣ್ಣ, ಗರ್ತಿಕೆರೆ ರಾಘಣ್ಣ, ಗಾನ ಗಾರುಡಿಗ ಸಿ.ಅಶ್ವಥ್, ಬೆಂಗಳೂರಿನ ವಿದುಷಿ ಶ್ಯಾಮಲಾ ಜಿ. ಭಾವೆ, ಸುಗಮ ಸಂಗೀತ ಮಾಂತ್ರಿಕ ಗಾಯಕರಾದ ಪುತ್ತೂರು ನರಸಿಂಹ ನಾಯಕ್, ಶ್ರೀನಿವಾಸ ಉಡುಪ, ಅರ್ಚನಾ ಉಡುಪ ಸೇರಿದಂತೆ ನಾಡಿನ ಹೆಸರಾಂತ ಗಾಯಕರಿಗೆ ಪಂ. ಆರ್. ಹನುಮಂತರಾವ್ ರಂಗಧೋಳ್ ತಬಲ ಸಾಥ್ ನೀಡಿzರೆ. ಬೆಂಗಳೂರು ಸುಲೋಚನರವರು ಹಾಡಿದ ಸುಗಮ ಸಂಗೀತ ಮತ್ತು ಚಲನಚಿತ್ರಗೀತೆಗಳ ಗಾಯನಕ್ಕೆ ತಬಲ ಸಾಥ್ ನೀಡಿzರೆ.
ಸಹಕಾರ ಕ್ಷೇತ್ರದಲ್ಲೂ ದಿಟ್ಟ ಹೆಜ್ಜೆ : ೧೯೬೭ರಲ್ಲಿ ಶಿವಮೊಗ್ಗದ ಶ್ರೀರಾಮ ಸೇವಾ ಬಾಹುಸಾರ ಕ್ಷತ್ರಿಯ ಸಹಕಾರ ಸಂಘದಲ್ಲಿ ಸಿಬ್ಬಂದಿಯಾಗಿ ನೇಮಕ ಹೊಂದಿದ ಆರ್. ಹನುಮಂತರಾವ್ ರಂಗಧೋಳ್, ೧೯೭೦ರವರೆಗೆ ಉತ್ತಮ ಸೇವೆ ಸಲ್ಲಿಸಿzರೆ. ೧೯೭೧ ರಿಂದ ೧೯೯೯ರವರೆಗೆ ಸಂಘದ ಕಾರ್ಯದರ್ಶಿ ಯಾಗಿ ಉತ್ತಮವಾಗಿ ಸೇವೆ ಸಲ್ಲಿಸಿzರೆ. ಇವರು ಸಲ್ಲಿಸಿದ ಸೇವೆಗಾಗಿ ಬೆಂಳೂರಿನ ಸಹಕಾರ ಇಲಾಖೆ ಮತ್ತು ಶಿವಮೊಗ್ಗ ಯೂನಿಯನ್ ರವರು ೧೯೮೬ರಲ್ಲಿ ಉತ್ತಮ ಕಾರ್ಯದರ್ಶಿ ಸೇವಾ ಪ್ರಶಸ್ತಿ ಯನ್ನು ನೀಡಿ ಗೌರವಿಸಿzರೆ. ಶಿವಮೊಗ್ಗ ರೋಟರಿಯವರು ತಮ್ಮ ಸಂಸ್ಥೆಯ ೧೦೦ನೇ ವರ್ಷದ ಅಂಗವಾಗಿ ಆರ್. ಹನುಮಂತರಾವ್‌ರವರಿಗೆ ಉತ್ತಮ ಟೈಲರಿಂಗ್, ಉತ್ತಮ ಸಹಕಾರ ಸೇವೆ ಹಾಗೂ ಉತ್ತಮ ಕಲಾ ಸೇವೆಗಾಗಿ ಬಹುಮುಖ ಪ್ರತಿಭೆ ಪ್ರಶಸ್ತಿ ನೀಡಿ ಗೌರವಿಸಿzರೆ. ಇವರ ಕಲಾಸೇವೆಯನ್ನು ಗುರುತಿಸಿ ಜೆ.ಸಿ.ಐ., ಫ್ರೆಂಡ್ ಸೆಂಟರ್ ಸಂಸ್ಥೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಆರ್. ಹನುಮಂತರಾವ್ ರಂಗಧೋಳ್ ಸೇವೆ ಸಲ್ಲಿಸಿzರೆ.
ಇವರು ನೂರಾರು ಕನ್ನಡ ಭಕ್ತಿ ಗೀತೆಗಳು, ಅಭಂಗಗಳಿಗೆ ರಾಗ ಸಂಯೋಜನೆ ಮಾಡಿzರೆ. ಇವರು ರಾಗ ಸಂಯೋಜನೆ ಮಾಡಿದ ಅಭಂಗಗಳಿಗೆ ಖ್ಯಾತ ಗಾಯಕರಾದ ರವಿ ಮೂರೂರು, ಸುರೇಖಾ ಹೆಗಡೆ, ಸೀಮಾ ರಾಯ್ಕರ್, ಗಣಪತಿ ಹೆಗಡೆ, ಸುಧಾಮ ದಾಸಗೇರಿ ಸೇರಿದಂತೆ ಹಲವಾರು ಧ್ವನಿಯಾಗಿzರೆ. ಇವು ಯ್ಯೂಟ್ಯೂಬ್‌ಗಳಲ್ಲಿಯೂ ಆಲಿಸಬಹುದಾಗಿವೆ. ಹಲವು ಸಂಗೀತ ಕಲಿಕಾಸಕ್ತ ವಿದ್ಯಾರ್ಥಿಗಳಿಗೆ ತಬಲ ಮತ್ತು ಮೃದಂಗ ತರಬೇತಿಯನ್ನು ನೀಡಿzರೆ. ಇವರು ಹಲವಾರು ಧ್ವನಿಸುರಳಿಗಳಿಗೆ ಮೃದಂಗ ಹಾಗೂ ತಬಲ ಸಾಥ್ ನೀಡಿzರೆ. ನಾಡಿನ ಪ್ರಖ್ಯಾತ ಸುಗಮ ಸಂಗೀತ ಗಾಯಕರಾದ ಕೆ.ಎನ್. ಮಂಜುನಾಥ್, ಶಿವಮೊಗ್ಗ ಸುಬ್ಬಣ್ಣ, ಮಾಧವಗುಡಿ, ಕೆ. ಯುವರಾಜ್, ಶಿವಮೊಗ್ಗ ವೇಣು ಗೋಪಾಲ್‌ರವರು ಹಾಡಿದ ಧ್ವನಿಸುರುಳಿ ಗಳಿಗೆ ಆರ್. ಹನುಮಂತರಾವ್ ರಂಗಧೋಳ್ ತಬಲ ಮತ್ತು ಮೃದಂಗ ಸಾಥ್ ನೀಡಿzರೆ.
ಪಂ. ಆರ್. ತುಕಾರಾಂರಾವ್ ರಂಗಧೋಳ್ :
ಇವರು ತಮ್ಮ ಮೊದಲ ತಬಲ ಕಲಿಕೆಯನ್ನು ತಮ್ಮ ಅಣ್ಣನವರಾದ ಪಂ. ಆರ್. ಹನುಮಂತರಾವ್ ರಂಗಧೋಳ್ ರವರ ಬಳಿ ಪ್ರಾರಂಭಿಸಿದರು. ನಂತರ, ಪಂ. ಸಂಗಮೇಶ್ ಗವಾಯಿಗಳು, ಪಂ. ಸೋಮಶೇಖರ ಪಾಟೀಲ್, ಪಂ. ಶೇಷಾದ್ರಿ ಗವಾಯಿಗಳು, ಡಾ. ಪಂ. ಪುಟ್ಟರಾಜ ಗವಾಯಿಗಳ ಬಳಿ ಹೆಚ್ಚಿನ ತಬಲ ಕಲಿಕೆಯನ್ನು ಮಾಡಿzರೆ.
೧೯೮೪ರಲ್ಲಿ ಬೆಂಗಳೂರಿನ ಕರ್ನಾಟಕ ಫ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ವಿದ್ವತ್ ಪದವಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ರಾಗಿzರೆ. ೧೯೮೯ರಲ್ಲಿ ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯದವರು ನಡೆಸಿದ ವಿಶಾರದ ಪದವಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿzರೆ. ೨೦೨೦ ರಲ್ಲಿ ಚಂಢೀಗಢದ ಪ್ರಾಚೀನ ಕಲಾಕೇಂದ್ರ ವಿಶ್ವವಿದ್ಯಾಲಯದವರು ನಡೆಸಿದ ಸಂಗೀತ ಭಾಸ್ಕರ ಪದವಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿzರೆ.
೧೯೯೭ರಲ್ಲಿ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ತಬಲಾ ಶಾಸ್ತ್ರೀಯ ವಾದನದಲ್ಲಿ ಬಿ- ಹೈಗ್ರೇಡ್ ಹಾಗೂ ೨೦೧೨ರಲ್ಲಿ ಲಘು ಸಂಗೀತದಲ್ಲಿ ಬಿ-ಹೈಗ್ರೇಡ್ ಕಲಾವಿದರಾಗಿ ಮಾನ್ಯತೆ ಪಡೆದಿzರೆ.
ಸನ್ಮಾನಗಳು : ನಾದ ಸುರಭಿ, ಲಯಶ್ರೀ, ಲಯವಾದ್ಯ ಪ್ರವೀಣ, ಲಯಸಿರಿ, ನಾದ ಗಾರುಡಿಗ ಸಂಗೀತ ಸಭಾ ಸಂಸ್ಥೆಗಳು ಪಂ. ಆರ್. ತುಕಾರಾಂ ರಾಮ್ ರಂಗಧೋಳ್‌ರವರಿಗೆ ಸನ್ಮಾನ ಮಾಡಿ ಗೌರವಿಸಿವೆ.
ಪ್ರತಿಭಾ ಪ್ರಶಸ್ತಿ : ಶಿವಮೊಗ್ಗದ ಪ್ರತಿಭಾರಂಗದ ವತಿಯಿಂದ ಖ್ಯಾತ ಸಂಗೀತ ನಿರ್ದೇಶಕ ಶ್ರೀ ವಿಜಯಭಾಸ್ಕರ್ ಇವರಿಂದ ಪ್ರಶಸ್ತಿ ಪಡೆದಿzರೆ. ಶ್ರೀ ಮಾತಾ ಸಂಗೀತ ಸಭಾ ಸಂಸ್ಥೆಯಿಂದ ಖ್ಯಾತ ಗಾಯಕ ಶ್ರೀ ವಿದ್ಯಾಭೂಷಣ್‌ರವರು ಸನ್ಮಾನಿಸಿzರೆ. ಶ್ರೀ ಕ್ಷೇತ್ರ ಹೊರನಾಡಿನಲ್ಲಿ ನಡೆದ ತ್ಯಾಗರಾಜರ ಮತ್ತು ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಆಡಳಿತ ಮಂಡಳಿಯವರು ಸನ್ಮಾನಿಸಿzರೆ.
೧೯೬೯ರಿಂದ ಪ್ರಸಕ್ತದವರೆಗೂ ತಬಲಾ ವಾದನದಲ್ಲಿ ನಿರಂತರವಾಗಿ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಅಂತರರಾಜ್ಯ ಮಟ್ಟದ ಗಾಯಕರಿಗೆ ತಬಲ ಸಾಥ್ ನೀಡಿzರೆ. ಹಲವಾರು ಸಂಘ-ಸಂಸ್ಥೆಗಳಿಂದ ಅಭಿನಂದನಾ ಪತ್ರ, ಛಾಯಾ ಚೇತನ ಪ್ರಶಸ್ತಿ, ಪ್ರಮಾಣಪತ್ರ, ಕೃತಜ್ಞತಾ ಪತ್ರ, ಪ್ರಶಂಸಾ ಪತ್ರ, ಶ್ಲಾಘನಾ ಪತ್ರಗಳನ್ನು ಪಡೆದಿzರೆ.
ಕಳೆದ ೫೫ ವರ್ಷಗಳಿಂದ ತಬಲಾದಲ್ಲಿ ಸೋಲೋ ಮತ್ತು ಸಾಥ್‌ನಲ್ಲಿ ೫೦೦೦ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ದೇಶ-ವಿದೇಶದಾದ್ಯಂತ ನೀಡುತ್ತಾ ಬಂದಿರುತ್ತಾರೆ ಹಾಗೂ ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿರುತ್ತಾರೆ.
ತಬಲಾ ಸೋಲೋ : ಕಳೆದ ೫೫ ವರ್ಷಗಳಿಂದ ತಬಲಾದಲ್ಲಿ ಸೋಲೋ ವಾದನವನ್ನು ಪ್ರತಿಷ್ಟಿತ ವೇದಿಕೆಗಳಾದ ಶಿವಮೊಗ್ಗದಲ್ಲಿ ನಡೆದ ೭೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಸಹ್ಯಾದ್ರಿ ಉತ್ಸವ, ಶ್ರೋತೃ ಸಂಗೀತ ಸಭಾ, ಶ್ರೀ ವೀರೇಶ್ವರ ಪುಣ್ಯಾಶ್ರಮ, ಗಾಣಗಾಪುರದ ಶ್ರೀ ನರಸಿಂಹ ಸರಸ್ವತಿ ಸಂಗೀತ ಸಭಾ, ರಿಪ್ಪನ್‌ಪೇಟೆಯ ಗ್ರಾಮ ಸಂಗೀತ ಯಾತ್ರೆ, ಚಿಕ್ಕಮಗಳೂರಿನ ಶಿವರಂಜನಿ ಸಂಗೀತ ಶಾಲೆಯಲ್ಲಿ ಸೇರಿದಂತೆ ಹಲವಾರು ವೇದಿಕೆಗಳಲ್ಲಿ ಸೋಲೋ ವಾದನವನ್ನು ನೀಡಿzರೆ.
ತಬಲ ಸಾಥ್ : ನಾಡಿನ ಪ್ರಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಹಾಗೂ ವಾದ್ಯ ಸಂಗೀತ ಕಲಾವಿದರುಗಳಾದ ಪಂ. ಪುಟ್ಟರಾಜ ಗವಾಯಿಗಳು, ಪಂ. ರಾಮರಾವ್ ವಿ. ನಾಯಕ್, ಪಂ. ವಿನಾಯಕ ತರವಿ, ವಿದುಷಿ ಸಂಗೀತಾ ಕಟ್ಟಿ, ಪಂ. ಇಂಧೂಧರ್ ನಿರೋಡಿ, ಪಂ. ಮಾಧವಗುಡಿ, ಪಂ. ಸೋಮನಾಥ್ ಮರಡೂರು, ಪಂ. ಬಿ. ನಾರಾಯಣಪ್ಪ, ಪಂ. ಗಣಪತಿ ಭಟ್, ಪಂ. ವೆಂಕಟೇಶ್ ಕುಮಾರ್, ಪಂ. ಪರಮೇಶ್ವರ ಹೆಗಡೆ, ಪಂ. ಕುಮಾರದಾಸ್, ಪಂ. ಎಂಪಿ ಹೆಗಡೆ, ವಿದುಷಿ ಶ್ಯಾಮಲಾ ಜಿ. ಭಾವೆ, ಪಂ. ಜಯತೀರ್ಥ ಮೇವಂಡಿ, ಪಂ. ಎಸ್.ಎಲ್. ವೇಣುಗೋಪಾಲ್ ರವರಿಗೆ ತಬಲಾ ಸಾಥ್ ನೀಡಿzರೆ. ವಾದ್ಯ ಸಂಗೀತಗಾರರಾದ ಪಂ. ನರಸಿಂಹಲು ವಡವಾಟಿ, ಪಂ. ಆರ್‌ವಿ ಹೆಗಡೆ, ಪಂ. ಎಸ್‌ಕೆ ಕುಮಾರಸ್ವಾಮಿ ಸೇರಿದಂತೆ ಹಲವಾರು ಕಲಾವಿದರುಗಳಿಗೆ ತಬಲಾ ಸಾಥ್ ನೀಡಿzರೆ.
ತಬಲ ವಿಶೇಷ ಆವಿಷ್ಕಾರ : ತಬಲಾದ ಎರಡೂ ಬದಿಯಲ್ಲಿ ಮುಚ್ಚಿಗೆಗಳನ್ನು ವಾದಿಗಳೊಂದಿಗೆ ಅಳವಡಿಸಿ ಪ್ರತ್ಯೇಕ ಸ್ವರದಲ್ಲಿ ನುಡಿಸಲು ಅನುಕೂಲವಾಗು ವಂತೆ ಪ್ರಪ್ರಥಮವಾಗಿ ಆವಿಷ್ಕರಿಸಿ ಸಫಲರಾಗಿ ತಬಲಗಳನ್ನು ಬಳಸುತ್ತಿzರೆ.
ಸಂಗೀತ ಸಂಯೋಜನೆ : ಇವರು ಹಲವಾರು ಮರಾಠಿ ಅಭಂಗಗಳು, ದಾಸರಪದಗಳು, ಮತ್ತು ಕನ್ನಡ ಭಕ್ತಿಗೀತೆಗಳ ಧ್ವನಿಸುರಳಿಗಳಾದ ಶ್ರೀ ಕೋಟೆ ಹನುಮ, ನಾಟ್ಯಗಣಪ, ಶ್ರೀ ವಾಲ್ಮೀಕಿ ಭಕ್ತಿ ಕುಸುಮಾಂಜಲಿ, ಅಮೃತಧಾರೆ, ಶ್ರೀ ನಂಜುಂಡೇಶ್ವರ ಭಕ್ತಿ ಸಿಂಚನ, ಶ್ರೀ ಉದ್ಧಾಂಜನೇಯ ಭಕ್ತಿಗೀತೆ ಗಳು, ಗೀತಗಾನಾಮೃತ ಸೇರಿದಂತೆ ಹಲವಾರು ಧ್ವನಿಸುರಳಿಗಳಿಗೆ ರಾಗ ಸಂಯೋಜನೆ ಮತ್ತು ಸಂಗೀತ ಸಂಯೋಜನೆ ಮಾಡಿzರೆ.
ಸುಗಮ ಸಂಗೀತ ಕ್ಷೇತ್ರದಲ್ಲಿ :
ಸುಗಮ ಸಂಗೀತ ದಿಗ್ಗಜರಾದ ಮೈಸೂರು ಅನಂತಸ್ವಾಮಿ, ಗಾನ ಗಾರುಡಿಗ ಸಿ.ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಹೆಚ್.ಆರ್. ಲೀಲಾವತಿ, ಬಿ.ಕೆ. ಸುಮಿತ್ರ, ಗರ್ತಿಕೆರೆ ರಾಘಣ್ಣ, ಪುತ್ತೂರು ನರಸಿಂಹ ನಾಯಕ್, ಜಿ.ವಿ. ಅತ್ರಿ, ಕೆ. ಯುವರಾಜ್, ಸುರೇಖಾ ಹೆಗಡೆ, ಯಶವಂತ ಹಳಿಬಂಡಿ, ಶಂಕರ್‌ಶಾನ್ ಭಾಗ್, ಕೆ.ಎಸ್. ಸುರೇಖಾ, ರತ್ನಮಾಲಾಪ್ರಕಾಶ್, ಸಂಗೀತಾಕಟ್ಟಿ, ವೈ.ಕೆ. ಮುದ್ದುಕೃಷ್ಣ, ಹೆಚ್.ಕೆ. ನಾರಾಯಣ್, ವಿನಯ್ ನಾಡಿಗ್, ಅನಂತ ಕುಲಕರ್ಣಿ, ರಮೇಶ್‌ಚಂದ್ರ, ಹುಸೇನ್‌ಸಾಬ್, ಅಜಯ್‌ವಾರಿಯರ್, ದಿವ್ಯರಾಘವನ್, ಸುಪ್ರಿಯಾ ಆಚಾರ್ಯ, ಬಿ.ಆರ್.ಛಾಯಾ, ಎಂಡಿ.ಪಲ್ಲವಿ, ಮಂಗಳಾರವಿ, ಅನುರಾಧ ಪೌಡ್‌ವಾಲ್ ಸೇರಿದಂತೆ ಹಲವಾರು ಗಾಯಕ- ಗಾಯಕಿಯರಿಗೆ ತಬಲ ಸಾಥ್ ನೀಡಿzರೆ.
ಆಕಾಶವಾಣಿಯಲ್ಲಿ : ಆಕಾಶವಾಣಿ ಬೆಂಗಳೂರು, ಭದ್ರಾವತಿ, ಚಿತ್ರದುರ್ಗ, ಕಾರವಾರ, ಹಾಸನ, ಮಡಿಕೇರಿಗಳ ಕಾರ್ಯಕ್ರಮಗಳಲ್ಲಿ ತಬಲ ಸಾಥ್ ನೀಡಿzರೆ. ದೆಹಲಿ, ಕೊಲ್ಕತ್ತಾ, ಗೋವಾ, ಮುಂಬಯಿ, ಚೆನ್ನೈ, ಕೊಚ್ಚಿನ್, ಎರ್ಲಾಕುಲಂ, ಕ್ಯಾಲಿಕಟ್‌ಗಳಲ್ಲಿನ ಸಂಗೀತ ಕಾರ್ಯಕ್ರಮಗಳಲ್ಲಿ ತಬಲ ಸಾಥ್ ನೀಡಿzರೆ. ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವತಿಯಿಂದ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಆರ್. ತುಕಾರಾಮ್‌ರಾವ್ ರಂಗಧೋಳ್ ತಬಲ ಸಾಥ್ ನೀಡಿzರೆ. ಹಲವಾರು ಖಾಸಗಿ ವೇದಿಕೆ ಕಾರ್ಯಕ್ರಮಗಳಲ್ಲೂ ಸಹ ಇವರು ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸುವ ಮೂಲಕ ಮನೆಮಾತಾಗಿzರೆ.
ಒಟ್ಟಾರೆ ಕಲೆ, ಸಾಹಿತ್ಯ ಮತ್ತು ಕಾಯಕಕ್ಕೆ ಇಡೀ ರಂಗಧೋಳ್ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ. ಏ.೧೨ ರ ಭಾನುವಾರ ಸಂಜೆ ೫-೩೦ ಗಂಟೆಗೆ ನಡೆಯಲಿರುವ ಅಭಿನಂದನಾ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಆಯೋಜಕರು ಕೋರಿzರೆ.

ಮುರುಳೀಧರ್ ಹೆಚ್.ಸಿ. ಪತ್ರಕರ್ತರು, ಶಿವಮೊಗ್ಗ.