ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

2ಬಿ ಮುಸ್ಲಿಂ ಮೀಸಲಾತಿ ಯತಾಸ್ಥಿತಿಗೆ ಆಗ್ರಹಿಸಿ ಎಸ್‌ಡಿಪಿಐನಿಂದ ಮನವಿ…

Share Below Link

ಶಿವಮೊಗ್ಗ: ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಮಾ. ೨೪ರ ಸಂಪುಟ ಸಭೆಯಲ್ಲಿ ೨(ಬಿ) ಅಡಿಯಲ್ಲಿ ಮುಸ್ಲಿಂ ಸಮುದಾಯ ಕ್ಕಿದ್ದ ಮೀಸಲತಿಯನ್ನು ರದ್ದುಪಡಿ ಸಿದ್ದು, ಇದು ಅಸಾಂವಿಧಾನಿಕ ವಾಗಿದ್ದು, ಒಂದು ನಿರ್ದಿಷ್ಟ ಸಮು ದಾಯವನ್ನು ಗುರುಪಡಿಸಲಾಗಿದೆ ಎಂದು ಆರೋಪಿಸಿ ಕೂಡಲೇ ಮೀಸಲಾತಿಯನ್ನು ಪುನರ್ ಸ್ಥಾಪಿ ಸುವಂತೆ ಆಗ್ರಹಿಸಿ ಎಸ್‌ಡಿಪಿಐ ಜಿಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಡಳಿತದ ಮೂಲಕ ರಾಜ್ಯಪಲರಿಗೆ ಮನವಿ ಸಲ್ಲಿಸಲಾಯಿತು.
ಸಂವಿಧಾನದಲ್ಲಿ ಧರ್ಮಾಧಾ ರಿತ ಮೀಸಲಾತಿ ಇಲ್ಲದಿರುವುದ ರಿಂದ ೨(ಬಿ) ಪ್ರವರ್ಗದಡಿಯಲ್ಲಿ ಇತರ ಹಿಂದುಳಿದ ವರ್ಗಗಳಂತೆ ಸಾಮಾಜಿಕ, ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ಕರ್ನಾ ಟಕದ ಮುಸ್ಲಿಂ ಸಮುದಾಯವನ್ನು ವೈeನಿಕ ಅಧ್ಯಯನದ ಮೂಲಕ ಗುರುತಿಸಲಾಗಿದ್ದು, ೨(ಬಿ) ಮೀಸ ಲಾತಿ ನೀಡಲಾಗಿತ್ತು. ಸ್ವಾತಂತ್ರ್ಯಾನಂತರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಮತ್ತು ೧೯೯೦ರ ಚನ್ನಪ್ಪ ರೆಡ್ಡಿ ಆಯೋಗ ಕೂಡ ಮುಸ್ಲಿಂರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿತ್ತು.
ಹೀಗಿದ್ದರೂ ಸಹ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆ ಯೊಡ್ಡುವ ಹಾಗೂ ಮುಖ್ಯವಾಹಿ ನಿಗೆ ಬರದಂತೆ ನೋಡಿಕೊಳ್ಳುವ ಷಡ್ಯಂತ್ರದ ಮುಂದುವರಿದ ಭಾಗವಾಗಿ ಬಿಜೆಪಿ ಸರ್ಕಾರ ೨(ಬಿ) ಮೀಸಲಾತಿಯನ್ನು ರದ್ದು ಪಡಿಸಿರುವುದು ದೃಢವಾಗುತ್ತದೆ. ಈ ನಿಟ್ಟಿನಲ್ಲಿ ಮುಸ್ಲಿಂ ಸಮು ದಾಯಕ್ಕೆ ನಿಗದಿಯಾಗಿದ್ದ ೨(ಬಿ) ಮೀಸಲಾತಿಯನ್ನು ಮರುಸ್ಥಾಪಿ ಸಬೇಕೆಂದು ಎಸ್‌ಡಿ.ಪಿಐ ಆಗ್ರ ಹಿಸಿದೆ.
ಹಿಂದುಳಿದ ವರ್ಗಗಳ ಪಟ್ಟಿ ಯಲ್ಲಿರುವ ಮುಸ್ಲಿಂರ ಹಿತದೃಷ್ಟಿ ಯಿಂದ ಸರ್ಕಾರ ಕರ್ತವ್ಯ ನಿರ್ವ ಹಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಅಧ್ಯಕ್ಷ ಇಮ್ರಾನ್ ಹಾಗೂ ಪದಾಧಿಕಾರಿಗಳು ಇದ್ದರು.