ಜಿಲ್ಲಾ ಸುದ್ದಿತಾಜಾ ಸುದ್ದಿ

ಸಾಧನೆ ಮೂಲಕ ಮರಣಾ ನಂತರದಲ್ಲೂ ಬದಕಲು ಸಾಧ್ಯಎಂಬುದನ್ನು ನಟ ಶಂಕರ್‌ನಾಗ್ ತೋರಿಸಿಕೊಟ್ಟಿದ್ದಾರೆ: ವೈಭವ್

Share Below Link

ಶಿಕಾರಿಪುರ: ಮನುಷ್ಯ ಮರಣಾ ನಂತರದಲ್ಲಿಯೂ ಬದುಕಲು ಸಾಧ್ಯ ಎಂಬುದಕ್ಕೆ ಶಂಕರ್‌ನಾಗ್‌ರಂತಹ ಸಾಧಕರು ಪ್ರತ್ಯಕ್ಷ ಸಾಕ್ಷಿಯಾಗಿzರೆ ಎಂದು ಚಲನಚಿತ್ರ ನಿರ್ಮಾಪಕ ವೈಭವ್ ಬಸವರಾಜ್ ಅವರು ತಿಳಿಸಿದರು.
ಪಟ್ಟಣದ ಶಿವಗಿರಿ ಮರಾಠ ಮಂದಿರದ ಬಳಿ ನಡೆಯುತ್ತಿರುವ ಶ್ರೀ ಮಂಜುನಾಥ ನಾಟ್ಯ ಸಂಘದ ರಂಗವೇದಿಕೆಯಲ್ಲಿ ನಟ,ನಿರ್ದೇಶಕ ದಿ.ಶಂಕರ್‌ನಾಗ್‌ರವರ ೬೯ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಂಕರ್‌ನಾಗ್ ಅವರು ದೈಹಿಕ ವಾಗಿ ನಮ್ಮೆಲ್ಲರ ಮಧ್ಯೆ ಇಲ್ಲದಿರಬಹುದು ಆದರೆ ಅವರ ಆಲೋಚನೆಗಳು, ಅಭಿವೃದ್ಧಿ ಚಿಂತನೆಗಳು, ಸತ್ಕಾರ್ಯಗಳು ನಮ್ಮೆಲ್ಲರ ಜೊತೆಗಿದ್ದು ಮಾರ್ಗದರ್ಶನ ಮಾಡುತ್ತಿವೆ, ಪುನೀತ್ ಹಾಗೂ ಶಂಕರ್‌ನಾಗ್ ರಂತವರು ಕೇವಲ ಕಲಾವಿದರಾಗಿರದೆ ಜನಸೇವೆಯಲ್ಲಿ ತೊಡಗಿ ನುಡಿದಂತೆ ನಡೆದವರು ಎಂದ ಅವರು ರಂಗಕರ್ಮಿಯಾದ ಶಂಕರ್‌ನಾಗ್ ಜನ್ಮದಿನಾಚರಣೆ ಯನ್ನು ಈ ಬಾರಿ ರಂಗ ಮಂಟಪದ ವೇದಿಕೆಯಲ್ಲಿ ರಂಗ ಕಲಾವಿದರ ಜೊತೆಗೆ ಆಚರಿಸುತ್ತಿರುವುದು ಸಂತಸದ ವಿಷಯ ಆ ಮೂಲಕ ಕಾರ್ಯಕ್ರಮ ಅರ್ಥಪೂರ್ಣ ವಾಗಿದೆ ಎಂದರು.
ರಂಗಭೂಮಿ ಮಾಲೀಕರಾದ ನಾಗರತ್ನಮ್ಮ ಚಿಕ್ಕಮಠ್ ಮಾತನಾಡಿ, ಶ್ರೇಷ್ಟ ನಟ ನಿರ್ದೇಶಕ ದಿ.ಶಂಕರನಾಗ್ ಅವರ ಜನ್ಮ ದಿನಾಚರಣೆಯನ್ನು ವೃತ್ತಿ ನಾಟಕದ ಕಂಪನಿಗೆ ಅಭಿಮಾನಿಗಳು ಬಂದು ಆಚರಿಸಿ ರಂಗ ಕಲಾವಿದರಿಗೆ ಸಹಾಯ ಹಸ್ತ ನೀಡಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದರು.
ಇದೇ ಸಂದರ್ಭದಲ್ಲಿ ರಂಗ ಕಲಾವಿದರಿಗೆ ದವಸ ಧಾನ್ಯಗಳನ್ನು ವಿತರಿಸಲಾಯಿತು. ಶಂಕರ್‌ನಾಗ್ ಬಳಗದ ವಿಠ್ಠಲ್ ಮಹೇಂದ್ರಕರ್, ಕನ್ನಡ ಯುವಕ ಸಂಘದ ಅಧ್ಯಕ್ಷ ರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ರಘು, ಬೆಣ್ಣೆ ಪ್ರವೀಣ್, ಜಿ.ಕೆ ಹೆಬ್ಬಾರ್, ಮೇಸ್ತ್ರೀ ಚಂದ್ರು, ಕಾರ್ತಿಕ್, ಮಾಜಿ ರಾಘು, ಜಮೀನ್ದಾರ ಮಂಜುನಾಥ್, ಸಿದ್ದನಗೌಡ, ವಿನಯ್, ವೀರನಗೌಡ,ಗುರು ಪ್ರಸಾದ್, ಶ್ರೀನಿವಾಸ್, ರಾಜು, ಹದಡಿ ಪ್ರವೀಣ್, ಕೃಷ್ಣ ಮೂರ್ತಿ, ಮಂಜುನಾಥ್ ಹಾಗೂ ರಂಗಭೂಮಿ ಕಲಾವಿದರು ಈ ಸಂದರ್ಭದಲ್ಲಿ ಹಾಜರಿದ್ದರು.