ನಿಂತ್ತಿದ್ದ ಗೂಡ್ಸ್ ಲಾರಿಗೆ ಆಕಸ್ಮಿಕ ಬೆಂಕಿ…
ಶಿವಮೊಗ್ಗ : ಶಿವಮೊಗ್ಗ ರೈಲ್ವೆಸ್ಟೇಷನ್ ಬಳಿ ನಿಂತ್ತಿದ್ದ ಗೂಡ್ಸ್ ಲಾರಿ ಬೆಂಕಿ ಆಕಸ್ಮಿಕದಿಂದ ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದ್ದು, ಬಾರಿ ಅನಾಹುತ ತಪ್ಪಿದೆ.
ಇಂದು ಬೆಳಗಿನ ಜವ ಈ ಘಟನೆ ಸಂಭವಿಸಿದ್ದು, ಅಗ್ನಿಶಾಮಕ ದಳ ಕೂಡಲೇ ಸ್ಪಂದಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಪಕ್ಕ ದ ರಸ್ತೆಯುದ್ದಕ್ಕೂ ಹಲವಾರು ಲಾರಿಗಳು ನಿಂತ್ತಿದ್ದವು. ಪ್ರತಿನಿತ್ಯ ಗೂಡ್ಸ್ ರೈಲಿನಿಂದ ಸಾಮಾಗ್ರಿಗಳನ್ನು ಇಳಿಸಲು ಮತ್ತು ಇಲ್ಲಿಂದ ಕಳುಹಿಸಲು ನೂರಾರು ಲಾರಿಗಳು ರೈಲ್ವೇ ನಿಲ್ದಾಣದ ಅಕ್ಕ-ಪಕ್ಕ ನಿಂತಿರುತ್ತವೆ. ಶೇಷಾದ್ರಿಪುರಂ ರೈಲ್ವೆ ಮೇಲ್ ಸೇತುವೆಯ ಕೆಳಭಾಗದಲ್ಲಿ ನಿಂತ್ತಿದ್ದ ಈ ಲಾರಿ ಸಾಮಗ್ರಿಗಳನ್ನು ತುಂಬಲು ಬಂದ ಖಾಲಿ ಲಾರಿಯಾ ಗಿತ್ತು.
ಕೆ.ಎ.-೨೫ಬಿ-೦೮೫೫ ಎಸ್ಕೆಪಿ ರೋಡ್ ಲೈನ್ಸ್ನ ಮಹಮ್ಮದ್ ಆಲಿ ಇವರಿಗೆ ಸೇರಿದ ಲಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿzರೆ. ಲಾರಿಯ ಮುಂಭಾಗ ಮತ್ತು ಇಂಜಿನ್ ಸಂಪೂರ್ಣ ಸುಟ್ಟು ಹೋಗಿದೆ.
