ಜಿಲ್ಲಾ ಸುದ್ದಿತಾಜಾ ಸುದ್ದಿ

ಶ್ರೀ ಶನೈಶ್ಚರ ದೇವಳದಲ್ಲಿ ತಿಂಗಳ ಕಾಲ ಧಾರ್ಮಿಕ ಕಾರ್ಯಕ್ರಮ

Share Below Link

ಶಿವಮೊಗ್ಗ: ವಿನೋಬನಗರ ೬೦ಅಡಿ ರಸ್ತೆಯ ಶ್ರೀ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್‌ನಿಂದ ಶುಭಮಂಗಳ ಸಮುದಾಯ ಭವನದಲ್ಲಿ ಅಧಿಕ ಶ್ರಾವಣ ಮಾಸ ದ ಅಂಗವಾಗಿ ಒಂದು ತಿಂಗಳ ಕಾಲ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿ ಸಲಾಗಿದೆ ಎಂದು ದೇವಾಲಯದ ಮುಖ್ಯ ಅರ್ಚಕ ವಿನಾಯಕ ಬಾಯರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಧಿಕ ಮಾಸ ಎಂಬುದು ಭಾರತೀಯ ಹಿಂದೂ ಪಂಚಾಂಗದಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ಸಂದರ್ಭ ದಲ್ಲಿ ಶುಭ ಕಾರ್ಯಗಳು ನಡೆಯದಿದ್ದರೂ ಕೂಡ ಧಾರ್ಮಿಕ, ಸಾಂಸ್ಕೃತಿಕ, ಇತರೆ ಲೋಕ ಕಲ್ಯಾಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತದೆ. ದೇವಾಲಯ ಸಮಿತಿ ಕೂಡ ಜು.೧೮ರಿಂದ ಆ.೧೬ ರವರೆಗೆ ಅರ್ಚಕ ವೃಂದ, ಭಜನಾ ಪರಿಷತ್, ದಿ ಆರ್ಟ್ ಆಫ್ ಲಿವಿಂಗ್, ಭಾರತೀಯ ವೈದ್ಯ ಕೀಯ ಸಂಘದ ಸಹಯೋಗದಲ್ಲಿ ಹಲವು ಕಾರ್‍ಯಕ್ರಮ ಆಯೋಜಿಸಿದೆ ಎಂದರು.
ಒಂದು ತಿಂಗಳಕಾಲ ಹೋಮ ಹವನ, ಮಾತೆಯರಿಂದ ಭಜನೆ, ವಿದ್ವಾಂಸರಿಂದ ಧಾರ್ಮಿಕ ಉಪ ನ್ಯಾಸ, ಆರೋಗ್ಯ ಶಿಬಿರ, ಸಾಧಕರಿಗೆ ಸನ್ಮಾನ, ಯೋಗ, ಹೀಗೆ ಹಲವು ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ ಎಂದರು.
ಜು.೧೮ರಂದು ಸಂಜೆ ೬ ಗಂಟೆಗೆ ಗೋಣಿಬೀಡಿನ ಶೀಲ ಸಂಪಾದನಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅಧ್ಯಕ್ಷತೆ ವಹಿಸಲಿದ್ದು, ಉಪನ್ಯಾಸಕ ಜಿ.ಎಸ್. ನಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿ ಸಲಿದ್ದಾರೆ. ಸಮಾರೋಪ ಸಮಾ ರಂಭ ಆ.೧೪ರಂದು ನಡೆಯ ಲಿದ್ದು, ಇದರ ಸಾನಿಧ್ಯವನ್ನು ಚಿನ್ಮಯ ಮಿಷನ್ನಿನ ಶ್ರೀ ಬ್ರಹ್ಮಾ ನಂದ ಸರಸ್ವತಿ ಸ್ವಾಮೀಜಿ ವಹಿಸಲಿ ದ್ದಾರೆ ಎಂದರು.
ಜು.೧೮ರಿಂದ ಆ.೧೬ರವರೆಗೆ ಪ್ರತಿದಿನ ಭಜನೆ ಮತ್ತು ಸಂಜೆ ೬.೩೦ಕ್ಕೆ ವಿದ್ವಾಂಸರಿಂದ ಉಪನ್ಯಾಸ ಮಾಲಿಕೆ ಇರುತ್ತದೆ. ವಿ| ಜಿ.ಎಸ್. ನಟೇಶ್, ವಿ| ಮೋಹನ್ ಕುಮಾ ರ್, ಹಂದಲಸು ವಾಸುದೇವ ಭಟ್ಟರು, ಡಾ. ವೀಣಾ ಬನ್ನಂಜೆ ಭಾಗವಹಿಸಲಿದ್ದಾರೆ ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸ ಲಾಗುವುದು ಎಂದರು.
ದಿ ಆರ್ಟ್ ಆಫ್ ಲಿವಿಂಗ್ ಹಾಗೂ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಜು.೧೮ರಿಂದ ಆ.೧೪ ರವರೆಗೆ ಒಂದು ತಿಂಗಳು ಕಾಲ ಬೆಳಿಗ್ಗೆ ೬ರಿಂದ ಏಳರವರೆಗೆ ಸರಳ ಯೋಗಾ ಭ್ಯಾಸ, ಧ್ಯಾನ, ಪ್ರಾಣಾಯಾಮ ನಡೆಯಲಿದೆ. ಇದರ ಜೊತೆಗೆ ಖ್ಯಾತ ವೈದ್ಯರು ಶಿಬಿರಕ್ಕೆ ಆಗಮಿಸಿ ಆಹಾರ ಮತ್ತು ಆರೋಗ್ಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಐಎಂಎ ಕಾರ್ಯದರ್ಶಿ ಡಾ. ರಕ್ಷಾರಾವ್ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಪ್ರಮುಖರಾದ ಸ.ನಾ. ಮೂರ್ತಿ, ಪ್ರಭಾಕರ್, ಎಸ್.ಎಂ. ವೆಂಕಟೇಶ್, ಶಬರೀಶ್ ಕಣ್ಣನ್, ವಿನಯ್ ಇದ್ದರು.