ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಮ ದಿಗ್ವಿಜಯ ರಥಯಾತ್ರೆಗೆ ಭವ್ಯ ಸ್ವಾಗತ …

Share Below Link

ಶಿವಮೊಗ್ಗ : ನಿನ್ನೆ ನಡೆದ ಪರ್ತಗಾಳಿ ಮಠದ ದಿಗ್ವಿಜಯೋ ತ್ಸವದ ನಿಮಿತ್ತ ಆಯೋಜಿಸಲಾದ ಶ್ರೀರಾಮ ವ್ರತ ರಥಯಾತ್ರೆಗೆ, ಶಿವಮೊಗ್ಗ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಲಕ್ಷ್ಮಣ ಅಗ್ರಜ ಜಪ ಕೇಂದ್ರದಿಂದ ಭವ್ಯವಾದ ಸ್ವಾಗತ ನೀಡಲಾಯಿತು.
ಶೃಂಗೇರಿಯಿಂದ ಪ್ರಯಾಣ ಬೆಳೆಸಿದ ರಥವು ಸಂಜೆ ೭ ಗಂಟೆಯ ಸುಮಾರಿಗೆ ಸುಂದರ ಆಶ್ರಯ ಹೋಟೆಲ್ ಬಳಿಗೆ ಆಗಮಿಸಿತು. ಈ ರಥಕ್ಕೆ ಸ್ವಾಗತವನ್ನು ಪೂರ್ಣಕುಂಭ, ಬಿರುದು ಬಾವಲಿ, ಚತ್ರಚಾಮರ, ಭಾಜಭಜಂತ್ರಿ, ವೇಷಭೂಷಣ, ವಾನರ ಸೇನೆ, ಮಂಗಳವಾದ್ಯ ಮತ್ತು ಸಿಡಿಮದ್ದುಗಳ ಸದ್ದುಗದ್ದಲದ ನಡುವೆ ಅತ್ಯಂತ ಶ್ರದ್ಧೆ ಮತ್ತು ಭಕ್ತಿಭಾವದಿಂದ ಕರೆತರಲಾಯಿತು.


ಕಾರ್ಯಕ್ರಮದಲ್ಲಿ ಶಿವಮೊಗ್ಗ ಲಕ್ಷ್ಮಣಾಗ್ರಜ ಜಪ ಕೇಂದ್ರದಿಂದ ವಿಶೇಷ ಸಮೂಹ ಶಂಖನಾದದ ಮೂಲಕ ರಥಯಾತ್ರೆಗೆ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ರಾಮನಾಮ ಜಪದ ಘೋಷಗಳು ಮೊಳಗುತ್ತಿದ್ದಂತೆ, ವೇದಿಕೆಯ ಹಿಂಭಾಗದಿಂದ ಆಕರ್ಷಕ ಸಿಡಿಮದ್ದಿನ ಸಂಭ್ರಮವು ಭಕ್ತರ ಹೃದಯಗಳಲ್ಲಿ ಭಕ್ತಿಯ ಅಲೆಗಳನ್ನು ಉಂಟುಮಾಡಿತು.
ವೇದಿಕೆ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯಿಂದ ವಿಶೇಷ ಸಾಂಸ್ಕೃತಿಕ ಪ್ರದರ್ಶನಗಳು ನಡೆದು ರಥಯಾತ್ರೆಯ ಧಾರ್ಮಿಕ ವಾತಾವರಣಕ್ಕೆ ಸಾಂಸ್ಕೃತಿಕ ಶೋಭೆ ಯನ್ನು ಹೆಚ್ಚಿಸಿತು. ನಂತರ ಲಕ್ಷ್ಮಣ ಅಗ್ರಜ ಜಪ ಕೇಂದ್ರದ ದಾಖಲೆ ಗಳನ್ನು ರಥ ಸಮಿತಿಗೆ ಹಸ್ತಾಂತರಿಸುವ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲಿ ರಥಕ್ಕೆ ಧಾರ್ಮಿಕ ಪೂಜ ವಿಧಾನ ಗಳು ಪ್ರಾರಂಭಗೊಂಡು, ಶ್ರೀ ಲಕ್ಷ್ಮಿ ವೆಂಕಟರಮಣ ದೇವರ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಮತ್ತು ಶಿವಮೊಗ್ಗ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಅಧ್ಯಕ್ಷೆ ಭಾಸ್ಕರ್ ಜಿ. ಕಾಮತ್, ಉಪಾಧ್ಯಕ್ಷ ರಮೇಶ್ ಶೆಣೈ, ಪ್ರಮುಖರಾದ ವೇದಮೂರ್ತಿ ನರಸಿಂಹ ಭಟ್, ಕಿರಣ್ ಪೈ ಮತ್ತು ಲಕ್ಷ್ಮಣಾಗ್ರಜ ಜಪ ಕೇಂದ್ರದ ಅನೇಕ ಭಕ್ತರು ಭಾಗವಹಿಸಿದ್ದರು.