ನಗರದಲ್ಲಿ ಐದು ದಿನಗಳ ರಂಗ ದಸರಾ…
ಶಿವಮೊಗ್ಗ: ಮಹಾನಗರ ಪಾಲಿಕೆಯ ದಸರಾ ಮಹೋತ್ಸವದಲ್ಲಿ ಈ ಬಾರಿ ಐದು ದಿನಗಳ ಕಾಲ ರಂಗ ದಸರಾವನ್ನು ವಿಭಿನ್ನವಾಗಿ ಸಂಯೋಜಿಸಲಾಗಿದೆ ಎಂದು ರಂಗ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿ ಮಧು ನಾಯಕ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಅ.೫ರ ಸಂಜೆ ೫.೩೦ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗ ದಸರಾ ಉದ್ಘಾಟನಾ ಸಮಾರಂಭ ನಡೆಯಲಿದೆ. ನೀನಾಸಂ ಪಾಧ್ಯಾಪಕ ಮಂಜು ಕೊಡಗು ಉದ್ಘಾಟನೆ ಮಾಡಲಿzರೆ. ಸಂಜೆ ೭ಕ್ಕೆ ಅಜೇಯ ನೀನಾಸಂ, ಚಂದ್ರಶೇಖರ್ ಹಿರೇಗೋಣಿಗೆರೆ ನಿರ್ದೇಶನದಲ್ಲಿ ಪದವಿ ಮತ್ತು ಬಿಎಡ್ ವಿದ್ಯಾರ್ಥಿಗಳು ರಂಗಗೀತೆ ಪ್ರಸ್ತುತ ಪಡಿಸುವರು ಎಂದರು.
ಅ.೬ರಂದು ಕುವೆಂಪು ರಂಗಮಂದಿರ ದಲ್ಲಿ ಬೆಳಿಗ್ಗೆ ೧೦.೧೫ ರಿಂದ ಮಕ್ಕಳ ರಂಗ ದಸರಾ ನಡೆಯಲಿದೆ. ನಾಗರಾಜ ಮಂಡಗz ಅವರಿಂದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಇದೆ. ಬೆಳಿಗ್ಗೆ ೧೧ ರಿಂದ ಮಕ್ಕಳ ನಾಟಕ ಪ್ರದರ್ಶನ ಇರುತ್ತದೆ. ವಿನೋಬನಗರ ಸರ್ಕಾರಿ ಶಾಲೆ ಮಕ್ಕಳಿಂದ ಪಂಜರ ಶಾಲೆ, ದುರ್ಗಿಗುಡಿ ಸರ್ಕಾರಿ ಶಾಲೆ ಮಕ್ಕಳಿಂದ ನಾಣಿ ಭಟ್ಟನ ಸ್ವರ್ಗದ ಕನಸು, ಗಾಡಿಕೊಪ್ಪ ಶಾಲೆ ಮಕ್ಕಳಿಂದ ಬಿಲ್ಲಹಬ್ಬ ಹಾಗೂ ತಾಯಿಮನೆ ಅನಾಥಾಲಯದ ಮಕ್ಕಳಿಂದ ಹುಲಿರಾಯ ನಾಟಕ ಪ್ರದರ್ಶನ ಏರ್ಪಡಿಸಿದೆ ಎಂದರು.
ಅದೇ ದಿನ ಸಂಜೆ ೭ ರಿಂದ ಮಹಿಳಾ ನಿರ್ದೇಶಕರ ನಾಟಕ ಪ್ರದರ್ಶನ ರಂಗಮಂದಿರದಲ್ಲಿ ನಡೆಯಲಿದೆ. ಕಲೆಯ ಕೊಲೆ ಹಾಗೂ ಸಂಸಾರದಲ್ಲಿ ಸನಿದಪ ನಾಟಕಗಳ ಪ್ರದರ್ಶನ ಇದೆ. ಡಾ.ಶಿವರಾಮ ಕೃಷ್ಣ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಅ.೭ ರಂದು ಸಂಜೆ ೬ ರಿಂದ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ. ಕೂಡ್ಲಿ ಶ್ರೀಧರಾಚಾರ್ ಅವರಿಂದ ಕನಕ, ದಾಳೇಗೌಡರಿಂದ ತದ್ರೂಪಿ, ಅಜಯ್ ನೀನಾಸಂ ಅವರಿಂದ ಸ್ವಗತ ನಾಟಕ ಪ್ರದರ್ಶನ ಇರುತ್ತದೆ ಎಂದರು.
ಅ.೮ ರಂದು ಪೌರಾಣಿಕ ನಾಟಕ ಪ್ರದರ್ಶನ ಇದೆ. ಸಂಜೆ ೭ ರಿಂದ ನಗರದ ರಂಗಭೂಮಿ ಕಲಾವಿದರು ಮಹಿಷಾ ಸುರ ಮರ್ದಿನಿ ನಾಟಕ ಪ್ರದರ್ಶಿಸ ಲಿದ್ದಾರೆ. ಅ.೯ ರಂದು ಕುಟುಂಬ ರಂಗ-ಪರಿಕಲ್ಪನೆಯಲ್ಲಿ ಮನೆಯಲ್ಲೇ ನಾಟಕ ಪ್ರದರ್ಶನ ಮಾಡಿದವರ ಆಯ್ದ ನಾಟಕ ಪ್ರದರ್ಶನವಿದೆ. ನಾಲ್ಕು ನಾಟಕಗಳ ಪ್ರದರ್ಶನ ನಡೆಯಲಿದೆ. ಅ.೧೦ ರಂದು ಸಮಾರೋಪ ನಡೆಯಲಿದೆ. ವೃತ್ತಿ ರಂಗಭಮಿಯ ಕಲಾವಿದೆ ಅನ್ನಪೂರ್ಣಮ್ಮ ಸಾಗರ್ ಸಮಾರೋಪ ನುಡಿ ನುಡಿಯಲಿದ್ದಾರೆ. ನಂತರ ಮುದುಕನ ಮದುವೆ ನಾಟಕ ಪ್ರದರ್ಶನ ನಡೆಯಲಿದೆ. ಶಿವಮೊಗ್ಗ ಜನತೆ ಪಾಲ್ಗೊಳ್ಳಲು ಕೋರಿದರು.
ಚಂದನ್, ಸುರೇಶ್, ಕಾಂತೇಶ್ ಕದರಮಂಡಲಗಿ, ಹೊನ್ನಾಳಿ ಚಂದ್ರು, ಚಂದ್ರಶೇಖರ ಇನ್ನಿತರರಿದ್ದರು.