ನನ್ನ ಸ್ಪರ್ಧೆ ಬಿವೈಆರ್ಗೆ ಭಯ ಮೂಡಿಸಿದೆ: ಈಶ್ವರಪ್ಪ
ಶಿವಮೊಗ್ಗ: ಆರ್ಎಸ್ಎಸ್ ಎಂದೂ ರಾಜಕೀಯವಾಗಿ ಗುರು ತಿಸಿ ಕೊಂಡಿಲ್ಲ. ಆ ಸಂಘಟನೆ ಯಲ್ಲಿ ಇರುವವರು ಯಾವುದೇ ಪಕ್ಷ ಮತ್ತು ಅಭ್ಯರ್ಥಿಗಳನ್ನು ಬೆಂಬಲಿಸುವ ಸ್ವಾತಂತ್ರ್ಯ ಹೊಂದಿ zರೆ. ರಾಷ್ಟ್ರೀಯತೆಯ ಗುರಿ ಹೊಂದಿರು ವವರಿಗೆ ಸಂಘ ಪರಿವಾರದ ಕಾರ್ಯಕರ್ತರು ಬೆಂಬಲಿಸುತ್ತಾರೆ. ಈ ಚುನಾವಣೆ ಯಲ್ಲಿ ನನ್ನ ನಿಲುವನ್ನು ಸಾಕಷ್ಟು ಸಂಘ ಪರಿವಾರದ ಕಾರ್ಯ ಕರ್ತರು ಒಪ್ಪಿ ಬೆಂಬಲಿಸಿ zರೆ ಎಂದು ಸ್ವತಂತ್ರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಅವರು ಸುದ್ದಿ ಗೋಷ್ಟಿಯಲ್ಲಿ ಹೇಳಿದರು.
ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಪರಿಶುದ್ಧವಾಗಿರ ಬೇಕು ಎಂದು ಆರ್ಎಸ್ಎಸ್ ಹೇಳುತ್ತದೆ. ನಾನೂ ಕೂಡ ಆರ್ಎಸ್ಎಸ್ ಕಾರ್ಯಕರ್ತನಾ ಗಿದ್ದು, ಈ ಪರಿಶುದ್ಧತೆಯ ತತ್ವದ ಹಿನ್ನೆಲೆಯಲ್ಲಿ ಬಿಜೆಪಿ ಶುದ್ಧೀಕರ ಣದ ಕಾರ್ಯಕ್ಕೆ ಮುಂದಾಗಿzನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಡಮ್ಮಿ ಅಭ್ಯರ್ಥಿ ಎಂಬ ನನ್ನ ಮಾತಿಗೆ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿzರೆ. ಹಾಗಾದರೆ ಬೇರೇನು ಹೇಳಬೇಕೆಂದು ಅವರೇ ಹೇಳಲಿ, ಅದರಂತೆ ಕರೆಯುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆಯಾಗಿದೆ. ಒಂದರ್ಥದಲ್ಲಿ ಇವರು ಚುನಾ ವಣಾ ಪಾರ್ಟ್ನರ್ಸ್ ಹೀಗಾ ಗಿಯೇ ಕಾಂಗ್ರೆಸ್ ಎಲ್ಲಿಯೂ ಸರಿಯಾದ ಪ್ರಚಾರ ಮಾಡುತ್ತಿಲ್ಲ. ಅವರ ಹೊಂದಾಣಿಕೆಯ ರಾಜ ಕಾರಣ ಢಾಳಾಗಿ ಕಾಣಿಸುತ್ತಿದೆ. ಮಧು ಬಂಗಾರಪ್ಪ ಮತ್ತು ರಾಘ ವೇಂದ್ರ ಎಲ್ಲಿಯೂ ಪರಸ್ಪರ ಟೀಕಿಸುತ್ತಿಲ್ಲ. ಇಬ್ಬರೂ ನನ್ನನ್ನು ಟೀಕಿಸುತ್ತಿzರೆ. ಇಂತಹ ಯಾವುದೇ ಟೀಕೆಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ರಾಘವೇಂದ್ರ ಅವರಿಗೆ ಕಾಂಗ್ರೆಸ್ನ ಡಮ್ಮಿ ಅಭ್ಯರ್ಥಿ ಭಯವೇ ಇಲ್ಲ. ಬದಲಾಗಿ ನನ್ನ ಬಗ್ಗೆ ಭಯ ಶುರುವಾಗಿದೆ. ಹೀಗಾಗಿ ನನ್ನ ಬಗ್ಗೆ ಟೀಕಿಸುತ್ತಿ zರೆ. ನನ್ನ ಕುರಿತು ಅನಗತ್ಯ ಗೊಂದಲ ಸೃಷ್ಟಿಸುತ್ತಿzರೆ. ನಾನು ಟಿಕೆಟ್ ಹಿಂದೆ ಪಡೆದು ಚುನಾ ವಣಾ ನಿವೃತ್ತಿ ಪಡೆಯುವ ಪ್ರಶ್ನೆ ಯೇ ಇಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿzನೆ. ಬ್ರಹ್ಮ ಬಂದು ಹೇಳಿದರೂ, ಮೋದಿ ಹೇಳಿದರೂ ಹಿಂದಕ್ಕೆ ಪಡೆಯೋದಿಲ್ಲ ಎಂದು ಹೇಳಿ ದರೂ ಪುನಃ ಪುನಃ ವಾಪಸ್ಸು ಪಡೆಯುವ ಸಾಧ್ಯತೆ ಎಂದು ಗುಲ್ಲು ಹರಡಿಸುತ್ತಾರೆ. ಇದು ನನ್ನ ಬೆಂಬಲಿತ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡುವ ಯತ್ನ. ಆದರೆ ಇಂತಹ ಯತ್ನ ಸಫಲವಾ ಗುವುದಿಲ್ಲ. ನಾನು ಯಾವುದೇ ಕಾರಣಕ್ಕೂ ನಾಮಪತ್ರ ಹಿಂದಕ್ಕೆ ಪಡೆಯುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಉತ್ಸಾಹಿ ನಾಯಕ ಗೂಳಿಹಟ್ಟಿ ಶೇಖರ್ ಸ್ವಯಂಪ್ರೇರಿತರಾಗಿ ನನ್ನ ಬೆಂಬಲಕ್ಕೆ ಬಂದು ನಿಂತಿzರೆ. ಕಳೆದ ೧೦ ದಿನಗಳಿಂದ ರಣೋತ್ಸಾ ಹದಲ್ಲಿ ಕ್ಷೇತ್ರದಲ್ಲಿ ಸುತ್ತಾಡುತ್ತಿ zರೆ.
ಭೋವಿ, ದಲಿತ ಮತ್ತು ಹಿಂದುಳಿದ ವರ್ಗ ದವರನ್ನು ಸಂಪರ್ಕಿಸುತ್ತಿzರೆ. ಪ್ರಧಾನಿ ನರೇಂದ್ರ ಮೋದಿಯವರೇ ಇನ್ನೊಮ್ಮೆ ಪ್ರಧಾನಿಯಾಗ ಬೇಕೆಂಬ ಗುರಿ ಅವರದ್ದೂ ಆಗಿದೆ ಎಂದರು.
ಗೋಷ್ಟಿಯಲ್ಲಿ ಗೂಳಿಹಟ್ಟಿ ಶೇಖರ್, ಕಾಚಿನಕಟ್ಟೆ ಸತ್ಯನಾರಾ ಯಣ, ಮಹಾಲಿಂಗ ಶಾಸ್ತ್ರಿ, ಗಂಗಾಧರ್ ಮಂಡೇನಕೊಪ್ಪ, ಶಿವಾಜಿ, ರಾಜಣ್ಣ, ತಿಪ್ಪೆಸ್ವಾಮಿ, ವಿಶ್ವಾಸ್ ಮತ್ತಿತರರು ಇದ್ದರು.