ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಗುಣಾತ್ಮಕ ಶಿಕ್ಷಣ ನೀಡುವುದೇ ನಮ್ಮ ಗುರಿ: ಭಾನುಪ್ರಕಾಶ್

Share Below Link

ಹೊನ್ನಾಳಿ: ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಹೆಗ್ಗುರಿ. ಈ ನಿಟ್ಟಿನಲ್ಲಿ ಹೈಟೆಕ್ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದೇವೆ. ವಿದ್ಯಾರ್ಥಿಗಳು -ಪೋಷಕರು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಲ್ಲನಾಯಕನಹಳ್ಳಿಯ ನೀಲಮ್ಮ -ವೀರಬಸಪ್ಪ ಎಜುಕೇಷನ್ ಟ್ರಸ್ಟ್‌ನ ಸಿಇಒ ಪಿ.ವಿ. ಭಾನುಪ್ರಕಾಶ್ ಹೇಳಿದರು.
ತಾಲೂಕಿನ ಸುಂಕದಕಟ್ಟೆ ಗ್ರಾಮದ ಬಳಿ ಸ್ಥಾಪನೆಗೊಂಡಿರುವ ಶ್ರೀ ವಿಜಯಾಕ್ಷರ ಹೈಟೆಕ್ ಸ್ಕೂಲ್‌ನ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನ ಸುಂಕದಕಟ್ಟೆ ಗ್ರಾಮದ ಬಳಿ ನಿಸರ್ಗದ ಮಡಿಲಿ ನಲ್ಲಿ, ವಿಶಾಲವಾದ ಜಗದಲ್ಲಿ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲಾ ಗಿದೆ. ನುರಿತ ಬೋಧಕರು ಗುಣಾತ್ಮಕ ಶಿಕ್ಷಣಕ್ಕೆ ಖಾತ್ರಿ ಒದಗಿಸುತ್ತಿzರೆ. ಆಧುನಿಕ ಉಪಕರಣಗಳನ್ನು ಹೊಂದಿದ ಸುಸಜ್ಜಿತ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಮಲ್ಲನಾಯಕನಹಳ್ಳಿಯ ನೀಲಮ್ಮ-ವೀರಬಸಪ್ಪ ಎಜುಕೇಷನ್ ಟ್ರಸ್ಟ್‌ನ ಅಡಿಯಲ್ಲಿ ಪ್ರಿ ಕೆಜಿಯಿಂದ ಬಿ.ಇಡಿ.,ವರೆಗೆ ತರಗತಿಗಳನ್ನು ನಡೆಸಲಾಗುತ್ತಿದೆ. ಶ್ರೀ ಭಾನುಪ್ರಕಾಶ್ ಪಿ.ವಿ. ಕಾಲೇಜ್ ಆಫ್ ಎಜುಕೇಷನ್, ಶ್ರೀ ಮಾಲತೇಶ ಪ್ರೀ-ಪ್ರೈಮರಿ ಸ್ಕೂಲ್, ಶ್ರೀ ಮಾಲತೇಶ ಪಬ್ಲಿಕ್ ಸ್ಕೂಲ್, ಶ್ರೀ ಭಾನು ಹೈಟೆಕ್ ಪಬ್ಲಿಕ್ ಸ್ಕೂಲ್, ಶ್ರೀ ಭಾನು ಹೈಟೆಕ್ ಸ್ಕೂಲ್, ಮಲೇಬೆನ್ನೂರಿನ ಶ್ರೀ ಮಾಲತೇಶ ಬಿ.ಇಡಿ., ಕಾಲೇಜು, ಮಾಲತೇಶ ಕಾಲೇಜ್ ಆಫ್ ಡಿ. ಫಾರ್ಮಸಿ ಇವರ ಸಂಯೋಜನೆಯೊಂದಿಗೆ ಹೊನ್ನಾಳಿ ಯಲ್ಲಿ ಶ್ರೀ ವಿಜಯಾಕ್ಷರ ಹೈಟೆಕ್ ಸ್ಕೂಲ್ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ನರ್ಸಿಂಗ್ ಕಾಲೇಜನ್ನೂ ಆರಂಭಿಸಲಾಗುವುದು ಎಂದರು.
ನೀಲಮ್ಮ-ವೀರಬಸಪ್ಪ ಎಜುಕೇಷನ್ ಟ್ರಸ್ಟ್‌ನ ಆಡಳಿತಾಧಿಕಾರಿ ಎಂ.ಪಿ. ಹಾಲಸ್ವಾಮಿ, ಶ್ರೀ ಭಾನುಪ್ರಕಾಶ ಶಿಕ್ಷಣ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ತಿಪ್ಪೇಸ್ವಾಮಿ, ಕಂಪ್ಯೂಟರ್ ಉಪನ್ಯಾಸಕಿ ಕೆ.ಜಿ. ಸುನಿತಾ, ಶ್ರೀ ವಿಜಯಾಕ್ಷರ ಹೈಟೆಕ್ ಸ್ಕೂಲ್‌ನ ಮುಖ್ಯ ಶಿಕ್ಷಕ ಸಿ. ಜಯಪ್ಪ, ಸಹ ಶಿಕ್ಷಕರಾದ ಕೆ. ಅಣ್ಣಪ್ಪ, ಕೆ. ಚೈತ್ರ, ಎಸ್.ಎಸ್. ನಿಶಾ, ಶಬಾನಾ, ಚೇತನಾ, ಎಚ್. ಗೀತಾ, ನೇಹಾ ಕೌಸರ್, ಸೌಮ್ಯಶ್ರೀ ಇತರರು ಹಾಗೂ ಸಿಬ್ಬಂದಿ ಇದ್ದರು.
ನೀಲಮ್ಮ-ವೀರಬಸಪ್ಪ ಎಜುಕೇಷನ್ ಟ್ರಸ್ಟ್‌ನ ಸಿಇಒ ಪಿ.ವಿ. ಭಾನುಪ್ರಕಾಶ್ ವಿದ್ಯಾರ್ಥಿ ಗಳ ನೂತನ ಬಸ್‌ಗಳಿಗೆ ಪೂಜೆ ಸಲ್ಲಿಸಿದರು.