ಕೆರೆಕಟ್ಟೆ ಪುಣ್ಯಕ್ಷೇತ್ರದಲ್ಲಿ ಸಂತ ಅಂತೋನಿಯವರ ಮಹೋತ್ಸವ…
ಕುಂದಾಪುರ : ತಾಲೂಕಿನ ಹೊಸಂಗಡಿ, ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯ ಕ್ಷೇತ್ರದಲ್ಲಿ ಫೆ.೧೫ರಂದು ಸಂತ ಅಂತೋನಿಯವರ ಅವರ ನಾಲಿಗೆಯ ಅವಶೇಷದ ಹಬ್ಬವನ್ನು ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ವಿವಿಧೆಡೆಗಳಿಂದ ಬಂದ ಧರ್ಮಗುರುಗಳೊಂದಿಗೆ ಹಬ್ಬದ ಸಂಭ್ರಮದ ಪೂಜಾವಿಧಿಗಳನ್ನು ಸಮರ್ಪಿಸಿದರು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಪರಮಪೂಜ್ಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಇದು ನಮಗೆ ಪ್ರಾರ್ಥನೆಯ ವರ್ಷ, ನಾವು ನಮ್ಮ ದಿನ ನಿತ್ಯದ ಪ್ರಾರ್ಥನೆ ಜಪಗಳನ್ನು ಮಾಡುವ, ಪವಿತ್ರ ಪುಸ್ತಕವನ್ನು ಓದಿ ಅಧ್ಯಾತ್ಮಿಕತೆಯನ್ನು ಹೆಚ್ಚಿಸೋಣ, ನಮ್ಮಲ್ಲಿನ ಮನಃಸ್ಥಾಪ ನಿಲ್ಲಿಸೋಣ, ರಾಜಿ ಸಂಧಾನ ಮಾಡಿಕೊಳ್ಳೋಣ ಎಂದು ಕರೆ ನೀಡಿದರು.
ಈ ಪುಣ್ಯ ಕ್ಷೇತ್ರದಲ್ಲಿ ಅನಾಥರಿಗಾಗಿ ನಿರ್ಗತಿಕರಿಗೆ ಆಶ್ರಮವನ್ನು ಕಟ್ಟಲು ಆರಂಭಿಸೇzವೆ, ಅದಕ್ಕೆ ಸಹಾಕಾರ ನೀಡಬೇಕು, ಸಂತ ಅಂತೋನಿ ಬಡವರ ನಿರ್ಗತಿಕರ ಸಂತನಾಗಿದ್ದ, ಅವರ ಕೆಲಸ ನಾವು ಮುಂದುವರಿಸೋಣ ಎಂದರು.
ದೇವರೆ ನಮಗೆ ಪ್ರಾರ್ಥಿಸಲು ಕಲಿಸು ಎಂಬುದು ಹಬ್ಬದ ವಿಷಯ ವಾಗಿದ್ದು, ತೊಟ್ಟಾಮ್ ಚರ್ಚಿನ ಧರ್ಮಗುರು ಹಾಗೂ ಸಂಪರ್ಕ ಸಾಧನ ಆಯೋಗದ ನಿರ್ದೇಶಕ ರೆ|ಫಾ| ಡೆನಿಸ್ ಡೆಸಾ ದೇವರ ವಾಕ್ಯವನ್ನು ಪಠಿಸಿ ಪ್ರೀತಿ ಒಂದು ಅದ್ಬುತ ಶಕ್ತಿ; ನಿರಂತರವಾಗಿ ಪ್ರೀತಿಸು; ಪ್ರೀತಿಸು ಅಂದರೆ ನಿಮಗೆ ಅದು ಕೇಳಿ ಕೇಳಿ ಬೇಜರಾಗ ಬಹುದು, ಆದರೆ ನಿತ್ಯವೂ ನಾವು ಊಟ ಮಾಡುತ್ತೇವೆ ಆದರೆ ಊಟ ಮಾಡಿ ಸಾಕಗುವುದಿ, ನಾವು ಶ್ವಾಸವನ್ನು ಪುನಃ ಪುನಃ ತೆಗೆದು ಕೊಳ್ಳುತ್ತೇವೆ ಆದರೆ ಸಾಕಾಗುವುದಿಲ್ಲ, ಹಾಗೇಯೆ ಪ್ರೀತಿ ಮಾಡುವುದು, ಪ್ರಾರ್ಥನೆ ಅಂದರೆ ನಮಗೆ ಆಮ್ಲಜನಕ ಇದ್ದಂತೆ. ಪ್ರಾರ್ಥನೆ ಮಾಡಿ ಮೇರಿ ಮಾತೆಗೆ ಸಾಕಾಗಲಿಲ್ಲ, ಯೇಸು ದೇವರ ಪುತ್ರ ಆದರೂ ಆತನು ಪಿತನಲ್ಲಿ ಪ್ರಾರ್ಥಿಸುತ್ತಿದ್ದ ಪಿತನೇ ನನಗೆ ಸರಿಯಾದ ದಾರಿ ತೋರಿಸು ಎಂದು. ಪ್ರಾರ್ಥನೆ ಅಂದರೆ ದೇವರೊಡನೆ ನಾವು ಸಂಬಂಧ ಇಟ್ಟುಕೊಳ್ಳುವುದು. ನಮ್ಮ ಮಕ್ಕಳಿಗೆ ಮೊತ್ತ ಮೊದಲು ಶಿಕ್ಷಕರು, ಧರ್ಮಗುರುಗಳು ಪ್ರಾರ್ಥನೆ ಪ್ರೀತಿಯ ಪಾಠವನ್ನು ಕಲಿಸುವುದ, ಅದು ಮೊತ್ತ ಮೊದಲು ಮನೆಯಲ್ಲಿ ಹೆತ್ತವರು ಕಲಿಸಬೇಕು. ಪ್ರೀತಿ ಇಗರ್ಜಿ ಯೊಳಗೆ ಮಾತ್ರವಲ್ಲ, ಅದು ಇಗರ್ಜಿಯ ಹೊರಗೆ ತೋರು ವುದು ಅತ್ಯಂತ ಮಹತ್ವ, ಇಗರ್ಜಿ ಒಳಗೆ ತೊರ್ಪಡಿಸು ವುದು ಬಹಳ ಸುಲಭ, ಸಮಾಜ ದಲ್ಲಿ ಒಂದು ದೇಹಕ್ಕೆ ಬಟ್ಟೆ ಇಲ್ಲದಿದ್ದರೆ ನಮ್ಮ ಪ್ರಾರ್ಥನೆ, ಪ್ರೀತಿ ಸಂಪೂರ್ಣ ವಾಗುವುದಿ, ಆ ದೇಹಕ್ಕೆ ಬಟ್ಟೆ, ಊಟ ಕೊಡದಿದ್ದಲ್ಲಿ ನೀವು ಚರ್ಚಿನೊಳಗೆ ಅರ್ಪಿಸಿದ ಬಲಿ ದಾನ ವ್ಯರ್ಥ, ಇದೇ ಕಾರ್ಯ ರೂಪಕ್ಕೆ ತರುವ ಪ್ರಾರ್ಥನೆ ಪ್ರೀತಿಯೇ ನೀಜವಾದ ವಿಧಾನ ಎಂದರು. ಯಾವುದೇ ವ್ಯಕ್ತಿಯಿಂದ ಗುಂಡಿಟ್ಟು ಕೊಲ್ಲಬೇಕೆಂದಿಲ್ಲ, ನಾಲಿಗೆಯಿಂದ ಕೂಡ ಕೊಲ್ಲ ಬಹುದು, ಆದರೆ ಸಂತ ಅಂತೋನಿಯವರ ನಾಲಿಗೆ ಅತ್ಯಂತ ಪವಿತ್ರವಾದದ್ದು, ಅವರು ಹೇಗೆ ನುಡಿಯುತ್ತಿದ್ದರೊ, ಅದರಂತೆ ಅವರು ನೆಡದರು. ಅವರಂತೆ ನಾವು ಜೀವಿಸೋಣ ಎಂದು ಅವರು ಪ್ರವಚನ ನೀಡಿದರು.
ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ಹಬ್ಬಕ್ಕೆ ಶುಭ ಕೋರಿದರು. ಪುಣ್ಯ ಕ್ಷೇತ್ರದ ರೆಕ್ಟರ್ ವಂ| ಸುನೀಲ್ ವೇಗಸ್ ಧನ್ಯವಾದಗಳನ್ನು ಸಮರ್ಪಿಸಿದರು. ಉಡುಪಿ ಧರ್ಮಪ್ರಾಂತ್ಯದ ನಿಲಯದ ಧರ್ಮಗುರು ವಂ| ಸಿರಿಲ್ ಲೋಬೊ ಹಬ್ಬದ ಕಾರ್ಯಕ್ರಮಕ್ಕೆ ಸಹಕರಿಸಿದರು.