ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ತುಂಗಾ ನದಿಗೆ ಮಲೀನ ನೀರು ತಡೆಯಲು ಕ್ರಿಯಾ ಯೋಜನೆ: ಆಯುಕ್ತ ಮಾಯಣ್ಣಗೌಡ…

Share Below Link

ಶಿವಮೊಗ್ಗ: ತುಂಗಾ ನದಿಗೆ ಮಲಿನ ನೀರು ಸೇರುವುದನ್ನು ತಡೆಯಲು ವೆಟ್‌ವೆಲ್‌ಗಳ ಹಾಗೂ ಟ್ರೀಟ್ ಮೆಂಟ್ ಪ್ಲಾಂಟ್‌ಗಳ ಸಮರ್ಪಕ ಬಳಕೆ ಮಾಡುವುದು ಮತ್ತು ಪ್ರತಿ ಮನೆಯೂ ಕಡ್ಡಾಯವಾಗಿ ಯುಜಿಡಿ ಸಂಪರ್ಕ ಪಡೆಯುವಂತೆ ಮಾಡಲು ಪಾಲಿಕೆ ಸಭೆಯಲ್ಲಿ ಚರ್ಚಿಸಲಾಯಿತು.
ನಗರದ ತುಂಗಾ ನದಿಗೆ ಕೊಳಚೆ ನೀರು ಸೇರುವುದನ್ನು ತಪ್ಪಿಸಲು ಕ್ರಿಯಾಯೋಜನೆ ರೂಪಿಸುವ ಸಂಬಂಧ ನಡೆದ ಪಾಲಿಕೆ ವಿಶೇಷ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಮೂಲಕ ತುಂಗಾ ನದಿ ನೀರು ಮಲಿನವಾಗುತ್ತಿರುವುದು ಹಾಗೂ ಅದರ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಲಾಯಿತು.


ಖಾಸಗಿ ಏಜೆನ್ಸಿಗಳ ಮೂಲಕ ಪ್ರತಿ ಮನೆಯಲ್ಲಿ ಯುಜಿಡಿ ಸಂಪರ್ಕ ನೀಡಲಾಗಿದೆಯೇ, ಇಲ್ಲವೇ ಎಂದು ಸಮೀಕ್ಷೆ ಮಾಡಿಸಿ ನಂತರ ಕಡ್ಡಾಯ ವಾಗಿ ಎಲ್ಲರೂ ಯುಜಿಡಿ ಸಂಪರ್ಕ ಪಡೆಯಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪ್ರಮುಖವಾಗಿ ಸೀಗೆಹಟ್ಟಿ, ಆಟೋ ಕಾಂಪ್ಲೆಕ್ಸ್, ತ್ಯಾವರಚೆಟ್ನಳ್ಳಿ, ಗುರುಪುರ, ಕೋಟೆ ರಸ್ತೆ, ಗುಂಡಪ್ಪ ಶೆಡ್‌ಗಳಲ್ಲಿ ವೆಟ್‌ವೆಲ್‌ಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಆಟೋ ಕಾಂಪ್ಲೆಕ್ಸ್, ಸೀಗೆಹಟ್ಟಿ, ಕೋಟೆ ರಸ್ತೆಯ ವೆಟ್‌ವೆಲ್‌ಗಳ ನಿರ್ವಹಣೆಗೆ ತಲಾ ೩ ಜನರಂತೆ ೯ ಸಿಬ್ಬಂದಿ ಅಗತ್ಯ ಇರುವು ದನ್ನು ಕೊಳಚೆ ನೀರು ನಿರ್ವಹಣಾ ಮಂಡಳಿ ಎಂಜಿನಿಯರ್ ಮಿಥುನ್ ರವರು ಸಭೆಗೆ ಕೋರಿದರು.
ಇದಕ್ಕೆ ಪಾಲಿಕೆ ಸದಸ್ಯರು ಒಪ್ಪಿಗೆ ನೀಡಿ ವೆಟ್‌ವೆಲ್ ಸಿಬ್ಬಂದಿ ವೆಚ್ಚವನ್ನು ಭರಿಸಲು ನಿರ್ಧರಿಸಿದರು. ಇದರಿಂದ ನಗರದ ೯ ಕಡೆಗಳಲ್ಲಿ ನದಿಗೆ ಸೇರುವ ಕೊಳಚೆ ನೀರನ್ನು ವೆಟ್‌ವೆಲ್‌ಗೆ ಕಳುಹಿಸುವ ಕೆಲಸ ಆಗಲಿದೆ. ತ್ಯಾವರೆ ಚಟ್ನಳ್ಳಿಯ ಮಲೀನ ನೀರು ಶುದ್ಧಿ ಕರಣ ಘಟಕವು ೩೫ ಎಂಎಲ್‌ಡಿ ನೀರನ್ನು ಶುದ್ಧಿಕರಿಸುತ್ತದೆ ಎಂದು ಸಭೆಯಲ್ಲಿ ಚರ್ಚಿಸಿದರು.
ಕೆಲವೆಡೆ ಮ್ಯಾನ್ ಹೋಲ್‌ಗಳ ನಡುವೆ ಪೈಪ್‌ಲೈನ್ ಹಾಳಾಗಿ ಲಿಂಕ್ ತಪ್ಪಿರುತ್ತದೆ. ಇಂತಹ ಸಮಸ್ಯೆಯನ್ನು ಗುರುತಿಸಿ ಸರಿ ಮಾಡಬೇಕು. ಕೆಲವೆಡೆ ಮಿಸ್ಸಿಂಗ್ ಲಿಂಕ್‌ನಿಂದಾಗಿ ರಾಜ ಕಾಲುವೆಗೆ ಮಲೀನ ನೀರು ಹರಿಯುತ್ತಿದೆ ಇದನ್ನು ತಪ್ಪಿಸಬೇಕು ಎಂದು ಚರ್ಚಿಸಲಾಯಿತು.
ನಗರದ ತುಂಗಾ ಎಡ ಮತ್ತು ಬಲ ದಂಡೆ ನಾಲೆಗಳಿಗೆ ಸುಮಾರು ೧೪೦ ಕಡೆಗಳಲ್ಲಿ ಮಲೀನ ನೀರು ಸೇರುತ್ತಿದೆ ಎಂದು ತುಂಗಾ ಮೇಲ್ದಂಡೆ ಯೋಜನೆ ಎಂಜಿನಿಯರ್ ಸುರೇಶ್ ಸಭೆಗೆ ಮಾಹಿತಿ ನೀಡಿದರು.
ಮಲವಗೊಪ್ಪದಲ್ಲಿ ಯುಜಿಡಿ ಸೌಲಭ್ಯವೇ ಇಲ್ಲದಿರುವುದರಿಂದ ಕೆರೆಗೆ ಮಲೀನ ನೀರು ಬಿಡಲಾಗುತ್ತಿದೆ. ಇದೇ ರೀತಿ ನಗರದ ಅನೇಕ ಕೆರೆಗಳಿಗೂ ಮಲೀನ ನೀರು ಹೋಗುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು.
ಶಾಸಕ ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಯೋಗೀಶ್, ರಮೇಶ್ ಹೆಗ್ಡೆ, ವಿಶ್ವಾಸ್, ಮೆಹಕ್ ಶರೀಫ್, eನೇಶ್ವರ್, ಧೀರ್‌ರಾಜ್ ಹೊನ್ನವಿಲೆ ಮತ್ತಿತರರು ಯುಜಿಡಿ ನಿರ್ವಹಣೆ ಬಗ್ಗೆ ಸಲಹೆಗಳನ್ನು ನೀಡಿದರು.
ಆಯುಕ್ತ ಮಾಯಣ್ಣಗೌಡ ಅವರು ಎಲ್ಲಾ ಸಲಹೆಗಳನ್ನು ಪಡೆದು ತುಂಗಾ ನದಿಗೆ ಮಲೀನ ನೀರು ಹೋಗುವು ದನ್ನು ತಡೆಯಲು ಕ್ರಿಯಾ ಯೋಜನೆ ರೂಪಿಸುವುದಾಗಿ ತಿಳಿಸಿದರು.
ಅಲ್ಯೂಮಿನಿಯಂ: ತುಂಗಾ ನದಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಅಲ್ಯುಮಿನಿಯಂ ಅಂಶ ಇರುವುದು ಕಂಡು ಬಂದಿದೆ. ಆದರೆ ಇದಕ್ಕೂ ನಗರದ ಮಲೀನ ನೀರು ಸೇರುವುದಕ್ಕೆ ಸಂಬಂಧವಿಲ್ಲ. ನಗರದ ತುಂಗಾ ನದಿ ನೀರಿನಿಂದ ಹಿಡಿದು, ಗಾಜನೂರು ಡ್ಯಾಂ, ಶೃಂಗೇರಿವರೆಗೂ ನೀರಿನಲ್ಲಿ ಅಲ್ಯೂಮಿನಿಯಂ ಅಂಶ ಹೆಚ್ಚಿರು ವುದು ಪರೀಕ್ಷೆಯಲ್ಲಿ ಧೃಡಪಟ್ಟಿದೆ. ಇದನ್ನು ಸರಿ ಮಾಡಲು ಬೇರೆ ಮಾರ್ಗವನ್ನೇ ಹುಡುಕಬೇಕು. ಆದರೆ ಪಂಪ್‌ಹೌಸ್‌ನಲ್ಲಿ ನೀರು ಶುದ್ಧಿಕರಿಸು ವುದರಿಂದ ನಗರದ ಕುಡಿಯುವ ನೀರಿನಲ್ಲಿ ಅಲ್ಯಮಿನಿಯಂ ಅಂಶ ಅಗತ್ಯಕ್ಕಿಂತ ಹೆಚ್ಚಿಲ್ಲ ಎಂದರು.
ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರನಾಯಕ್ ಉಪಸ್ಥಿತರಿದ್ದರು.