ರುದ್ರಭೂಮಿಗೆ ಎಡೆ ಕಟ್ಟೆ- ಕಾಂಕ್ರಿಟ್ ಕುರ್ಚಿಗಳ ಕೊಡುಗೆ
ಭದ್ರಾವತಿ: ನಗರದ ಭಾವಸಾರ ಕ್ಷತ್ರೀಯ ಸಮಾಜ, ಭಾವಸಾರ್ ಕೋ ಆಪರೇಟಿವ್ ಸೊಸೈಟ್, ಭಾವಸಾರ ವಿಷನ್ ಇಂಡಿಯಾ ಏರಿಯಾ ೧೦೩ ಭದ್ರಾವತಿ ಇವರ ಆಶ್ರಯದಲ್ಲಿ ನಗರದ ಹುತ್ತಾ ಕಾಲೋನಿ ಹಾಗು ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಿದ ನಂತರ ನಡೆಯುವ ಸಂಪ್ರದಾಯ ಸಂಸ್ಕಾರ ಕಾರ್ಯಕ್ರಮಗಳು ಹಾಗು ಕಾಗೆ ಎಡೆ ಇಡುವ ಕಟ್ಟೆ ಹಾಗು ಕಾಂಕ್ರೀಟ್ ಕುರ್ಚಿಗಳ್ನು ಅಳವಡಿದ್ದು ಇವುಗಳನ್ನು ನಗರಸಭೆ ಆಯುಕ್ತ ಮನುಕುಮಾರ್ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶೃತಿ ವಸಂತ ಕುಮಾರ್, ಉಪಾಧ್ಯಕಷೆ ಸರ್ವಮಂಗಳಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್, ಭಾವಸಾರ್ ವಿಷನ್ ಸಂಸ್ಥೆಯ ಪದಾಧಿಕಾರಿಗಳಾದ ಗಜೇಂದ್ರ ನಾಥ್ ಮಾಳೋದೆ, ಸಚಿನಗ್ ಸಾಕ್ರೆ, ರಾಘವೇಂದ್ರ ಡೋಯಿಜೋಡೆ, ದುಗ್ಗೇಶ್ ತೇಲ್ಕರ್, ಸುರೇಶ್ ಶೇಖರ್, ಟಿ.ಟಿ.ಶ್ರೀಧರ್, ಡಿ.ಎ.ರಾಜೇಶ್, ಆನಂದದ ಎ ಉತ್ತರ್ಕರ್, ಹಾಗು ಇತರರು ಉಪಸ್ಥಿತರಿದ್ದರು.