ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪತ್ರಕರ್ತರು ಆಮಿಷಗಳಿಗೆ ಒಳಗಾಗದಿರಿ: ಬಿವೈಆರ್ -ಪತ್ರಿಕೋಧ್ಯಮ ಅಹಂಕಾರವಲ್ಲ; ಅಲಂಕಾರ: ಅರುಣ್

Share Below Link

ಶಿವಮೊಗ್ಗ: ಆಧುನಿಕತೆಯ ಆರ್ಭಟದ ಭರಾಟೆಗೆ ಸಿಕ್ಕು ಪತ್ರಿಕೋದ್ಯಮ ಬದಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ, ಕುವೆಂಪು ವಿವಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಿಂದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾ ಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲೇಖನಿ ಹರಿತ ಎಂಬುದು ಎಲ್ಲಾ ಕಾಲಕ್ಕೂ ಸತ್ಯವಾಗುತ್ತದೆ. ಪ್ರಜಪ್ರಭುತ್ವದ ಕಾವಲು ನಾಯಿ ಎಂದೇ ಪತ್ರಿಕೋದ್ಯಮವನ್ನು ಪ್ರತಿಬಿಂಬಿಸಲಾಗುತ್ತದೆ. ಪತ್ರಿಕೆ ಗಳು ಆಡಳಿತ ಪಕ್ಷದ ಪರವಾಗಿ ಇರುವುದರ ಜೊತೆಗೆ ವಿರೋಧ ಪಕ್ಷವಾಗಿಯೂ ಇರಬೇಕಾಗುತ್ತದೆ. ಸರಿ ತಪ್ಪುಗಳನ್ನು ವಿಮರ್ಶೆ ಮಾಡಬೇಕಾಗುತ್ತದೆ. ಎಲ್ಲಾ ಹೊಸ ಬಗೆಯ ಪತ್ರಿಕೋದ್ಯಮಗಳ ನಡುವೆಯೂ ಪ್ರಿಂಟ್ ಮೀಡಿಯಾ ಎಂಬು ದು ಸದಾ ಉಸಿರಾಡುತ್ತಲೇ ಇರು ತ್ತದೆ ಎಂದರು.
ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ. ಅನೇಕ ಪತ್ರ ಕರ್ತರು ಸಮಾಜದ ಬದಲಾವಣೆ ಮಾಡಿದ್ದಾರೆ. ಅಂಕುಡೊಂಕು ಗಳನ್ನು ತಿದ್ದಿದ್ದಾರೆ. ಪತ್ರಿಕೋದ್ಯ ಮದ ಬೇರುಗಳು ಆಳವಾಗಿ ಚಾಚಿ ಕೊಂಡಿವೆ. ಡಿಟಿಪಿ, ಮುದ್ರಣ, ಹಂಚಿಕೆ, ವರದಿ ಇವೆಲ್ಲವೂ ಪತ್ರಿಕೋದ್ಯಮದ ಮತ್ತೊಂದು ಭಾಗವೇ ಆಗಿವೆ. ಪತ್ರಕರ್ತ ಯಾವ ಆಮಿಷಗಳಿಗೂ ಬಲಿಯಾಗದೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಪತ್ರಿಕೋದ್ಯಮ ಎನ್ನುವುದು ಅಹಂಕಾರ ಅಲ್ಲ. ಅದೊಂದು ಸಮಾಜಮುಖಿ ಅಲಂಕಾರವಾಗ ಬೇಕು. ಮುಖ್ಯವಾಗಿ ಮಲ್ಯಗ ಳನ್ನು ಉಳಿಸಿಕೊಳ್ಳಬೇಕು. ಆದರೆ ಮಲ್ಯಗಳು ಈಗ ಮರೆಯಾ ಗುತ್ತಿವೆ. ಟಿಆರ್‌ಪಿಯೇ ಮುಖ್ಯ ವಾಗಿಬಿಟ್ಟಿದೆ. ರಾಜಕೀಯ ಟ್ರೆಂಡ್ ಸೇರಿಕೊಂಡು ಒಬ್ಬ ನಾಯಕನನ್ನು ಸೃಷ್ಟಿ ಮಾಡುವ ಅಥವಾ ಅವನನ್ನು ಪಾತಾಳಕ್ಕೆ ನೂಕುವ ಕೆಲಸವನ್ನು ಪತ್ರಿಕೋದ್ಯಮ ಮಾಡ ಬಲ್ಲದು. ಹಾಗಾಗಿ ಎಚ್ಚರಿಕೆಯಿಂದ ಇರಬೇ ಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಿಟಿಪಿ ಆಪರೇಟರ್ ಶೋಭಾ, ಪ್ರಿಂಟರ್ ಹರೀಶ್, ಪತ್ರಿಕಾ ವಿತರಕ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ವಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಶಿವ ಕುಮಾರ್, ರಾಜ್ಯ ಸಮಿತಿ ನಿರ್ದೇಶಕ ರವಿಕುಮಾರ್, ಉಪಾ ಧ್ಯಕ್ಷ ಆರ್.ಎಸ್.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ನಗರ ಕಾರ್ಯದರ್ಶಿ ಗಳಾದ ಕೆ.ಆರ್. ಸೋಮನಾಥ್, ದೀಪಕ್ ಸಾಗರ್, ಗಾ.ರಾ. ಶ್ರೀನಿ ವಾಸ್ ಸೇರಿದಂತೆ ಹಲವರಿದ್ದರು. ಸಂಘದ ಉಪಾಧ್ಯಕ್ಷ ವೈದ್ಯ ಪ್ರಾಸ್ತಾವಿಕ ಮಾತನಾಡಿದರು.