ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರಾಜ್ಯದ ಜನತೆಗೆ ಕಾಂಗ್ರೆಸ್ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕಿತ್ತುಕೊಳ್ಳುತ್ತಿದೆ: ಸಂಸದ ಬಿವೈಆರ್

Share Below Link

ಭದ್ರಾವತಿ: ಕಾಂಗ್ರೆಸ್ ಸರಕಾರ ಗ್ಯಾರೆಂಟಿ ನೆಪದಲ್ಲಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕಿತ್ತುಕೊಳ್ಳುವ ಕಾರ್ಯವನ್ನು ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಟಿಯಲ್ಲಿ ಆಪಾದಿಸಿದರು.
ಕಾಂಗ್ರೆಸ್‌ನ ಯಾವುದೇ ಭಾಗ್ಯದ ಬಗ್ಗೆ ಬೇಸರವಿಲ್ಲ, ಜನರಿಗೆ ಅವೆಲ್ಲವೂ ತಲುಪಬೇಕು. ಆದರೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಸರಿ ಅಲ್ಲ. ವಿದ್ಯುತ್ ಯುನಿಟ್ ದರವನ್ನು ಹೆಚ್ಚಳ ಮಾಡಿರುವುದಲ್ಲದೇ, ೨೦೦ರ ಬದಲು ೨೦೧ ಯುನಿಟ್ ಬಳಕೆ ಮಾಡಿದರೂ ಪೂರ್ಣ ದರ ಕಟ್ಟಿಸಿಕೊಂಡು ಸಬ್ಸಿಡಿಯನ್ನು ಕಿತ್ತುಕೊಳ್ಳುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆಪಾದಿಸಿದರು. ಈ ನಿಟ್ಟಿನಲ್ಲಿ ಮೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕುವ ಕೆಲಸವನ್ನು ಬಿಜೆಪಿ ಆರಂಭ ಮಾಡಿದೆ ಎಂದರು.
ಪಕ್ಷದ ಕಾರ್ಯಕರ್ತರ ನೇತೃತ್ದಲ್ಲಿ ಸಂಪರ್ಕ್ ಸೆ ಸಮರ್ಥನ್ ಕಾರ್ಯಕ್ರಮದಡಿ ಕಾರ್ಯಕರ್ತರು, ಸಂಘಟನೆಯ ಹಿತೈಷಿಗಳನ್ನು, ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವಂತಹ ವಿಶೇಷ ಕಾರ್ಯಕ್ರಮ ಇಡೀ ದೇಶಾದ್ಯಂತ ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಈ ಮುಖಾಂತರ ಕೇಂದ್ರ ಸರಕಾರದ ಸಾಧನೆಗಳನ್ನು ಚರ್ಚೆ ಮಾಡಿ ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಪ್ರದೇಶಗಳಲ್ಲಿ ಭೇಟಿ ನೀಡಿ, ಅಪೂರ್ಣಗೊಂಡ ಕಾಮಗಾರಿ ಗಳನ್ನು ತ್ವರಿತಗತಿಯಲ್ಲಿ ಪೂರೈಸುವ ನಿಟ್ಟಿನಲ್ಲಿ ಹಾಗೂ ಚುನಾಯಿತ ಪ್ರತಿನಿಧಿಗಳ ನೇತೃತ್ವದಲ್ಲಿ ವಿಕಾಸ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಭದ್ರಾವತಿಯ ಬುಳ್ಳಾಪುರ ಗ್ರಾಮದಲ್ಲಿ ೫೦.೨೯ ಎಕರೆ ಪ್ರದೇಶ ದಲ್ಲಿ ರಾಪಿಡ್ ಆಕ್ಷನ್ ಫೋರ್ಸ್ ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಈಗಾಗಲೇ ಭೂಮಿ ಪೂಜೆ ನೆರವೇರಿಸಿzರೆ. ಈ ರಾಪಿಡ್ ಅಕ್ಷನ್ ಪೋರ್ಸ್ ಕರ್ನಾಟಕದ ೩೧ ಜಿಗಳನ್ನೊಳ ಗೊಂಡಿದ್ದಷ್ಟೇ ಅಲ್ಲದೇ, ಕೇರಳದ ೪ ಜಿಗಳು, ಗೋವಾದ ೨ ಜಿಗಳು, ಲಕ್ಷದ್ವೀಪದ ೧ ಜಿ ಹಾಗೂ ಪುದುಚೆರಿಯ ೧ ಜಿಗಳ ವ್ಯಾಪ್ತಿಯನ್ನು ಸಹ ಒಳಗೊಂಡಿ ರುತ್ತದೆ. ಕಮಾಂಡೆಂಟ್, ಡೆಪ್ಯುಟಿ ಕಮಾಂಡೆಂಟ್ ಸೇರಿದಂತೆ ಒಟ್ಟು ೪೪೫ ಜನ ಸಿಬ್ಬಂದಿ ಕಾರ್ಯ ನಿರ್ವಹಿಸಲಿzರೆ.
೨೦೦೯ಕ್ಕೂ ಮೊದಲು ಕೇವಲ ೮-೧೦ ರೈಲುಗಳು ಮಾತ್ರ ಓಡಾಟ ಇತ್ತು. ಇದೀಗ ೨೮ ರೈಲುಗಳ ಟ್ರಿಪ್ ಓಡಾಟ ಆರಂಭವಾಗಿದೆ. ಎರಡು ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣವಾಗಿದ್ದು (ಭದ್ರಾವತಿ ತರೀಕೆರೆ ರಸ್ತೆಯಲ್ಲಿ, ಶಿವಮೊಗ್ಗ- ಹೊನ್ನಾಳಿ ರಸ್ತೆಯಲ್ಲಿ), ಇನ್ನೂ ನಾಲ್ಕು ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ ಎಂದ ಅವರು, ರಾ.ಹೆ.೨೦೬ ತುಮಕೂರಿನಿಂದ ಶಿವಮೊಗ್ಗ ವರೆಗಿನ ೨೧೪.೪೫ ಕಿ.ಮೀ ಉದ್ದದ ೪ ಪಥದ ರಸ್ತೆಯ ನಿರ್ಮಾಣ ರೂ. ೭೧೬೨ ಕೋಟಿ, ರಾ.ಹೆ. ೧೩ ಚಿತ್ರದುರ್ಗ ಶಿವಮೊಗ್ಗ ರಸ್ತೆಯ ಬಾಕಿ ಉಳಿದ ಉಮಗಾರಿಗಳು ೫೧೬೯ ಕೋಟಿ ರೂ.ಕಾಮಗಾರಿ ಪ್ರಾರಂಭಗೊಂಡು ಶೇ ೧೦ರಷ್ಟು ಕೆಲಸ ಮುಗಿದಿದ್ದು ಹೊಳೆಹೊನ್ನೂರಿನ ಬೈಪಾಸ್ ರಸ್ತೆ ಮತ್ತು ಭದ್ರಾನದಿಗೆ ಸೇತುವೆ ಸೇರಿದಂತೆ ಕೈಮರದಿಂದ ಶಿವಮೊಗ್ಗ ವರೆಗಿನ ರಸ್ತೆ ಕೆಲಸ ಪ್ರಗತಿಯಲ್ಲಿವೆ. ರಾಷ್ಟ್ರೀಯ ಹೆzರಿ ೨೦೬ ತುಮಕೂರು- ಶಿವಮೊಗ್ಗ ರಸ್ತೆ, ತುಮಕೂರಿನಿಂದ ಶಿವಮೊಗ್ಗ ವರೆಗಿನ ಹೆzರಿಯ ೪ ಪಥದ ರಸ್ತೆ ನಿರ್ಮಾಣದ ಕೆಲಸ ಪ್ರಗತಿ ಯಲ್ಲಿದ್ದು, ಶಿವಮೊಗ್ಗಲೋಕಸಭಾ ಕ್ಷೇತ್ರದ ಶಿವಮೊಗ್ಗದಿಂದ ತಾಳಗುಪ್ಪ ಚೂರಿಕಟ್ಟೆ ಜಂಕ್ಷನ್ ವರೆಗೆ ಸುಮಾರು ೮೦ ಕಿ.ಮೀ ಉದ್ದದ ರಾಷ್ಟ್ರೀಯ ಹೆzರಿಯನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಈ ಕೆಳಗಿನಂತೆ ಡಿ.ಪಿ.ಆರ್ ತಯಾರಿಸಲಾಗುತ್ತಿರುತ್ತದೆ.
ಭದ್ರಾವತಿ ವಿ.ಐ.ಎಸ್.ಎಲ್. ಕಾರ್ಖಾನೆಯನ್ನು ಬಂಡವಾಳ ಹೂಡಿಕೆ ಪಟ್ಟಿಯಿಂದ ಹಿಂಪಡೆದಿದ್ದನ್ನು ರದ್ದುಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿದ್ದರ ಪರಿಣಾಮ ಕೇಂದ್ರ ಸರ್ಕಾರ ವಾಪಸು ಪಡೆದಿದೆ. ಕೆಲವು ಸಣ್ಣಪುಟ್ಟ ಯುನಿಟ್‌ಗಳನ್ನು ಫೋರ್ಜ್ ಯುನಿಟ್‌ಗಳನ್ನು ಪ್ರಾರಂಭಿಸಲಾಗಿದ್ದು, ಉತ್ತಮ ಆದಾಯ ಬರುವಂತಾಗಿದೆ ಎಂದರು.
ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ ಒಟ್ಟಾರೆ ೩೭ ಕೋಟಿ ವೆಚ್ಚದಲ್ಲಿ ಅಂದಾಜು ೧೦೦೦ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ. ( ಪ್ರಯಾಣಿಕರ ತಂಗುದಾಣ, ಹೈಮಾಸ್ಟ್ ಲೈಟ್ಸ್ ಸಮುದಾಯಭವನಗಳು, ರಸ್ತೆ, ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಗಳು, ಸ್ಮಶಾನ ಅಭಿವೃದ್ಧಿ, ಪಾರ್ಕ್ ಅಭಿವೃದ್ಧಿ, ರೈತ ಸಹಕಾರಿ ಸಂಘಗಳ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳು, ಭದ್ರಾವತಿಯಲ್ಲಿ ೨ ಡಿಸ್ಪೆನ್ಸರಿಗಳನ್ನು ಪ್ರಾರಂಭಿಸಲಾಗಿದೆ, ಮತ್ತಿತರೆ ಅಭಿವೃದ್ಧಿ ಕಾರ್ಯ ). ಹೀಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.
ಈಗ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವುದು ತಾತ್ಕಾಲಿಕ ಮಾತ್ರ. ಈ ಸಂದರ್ಭ ಕಾಂಗ್ರೆಸ್ ಸರಕಾರ ಮಾಡುತ್ತಿರುವು ಘೋಷಣೆಗಳು ಹಾಗೂ ತೆಗೆದು ಕೊಳ್ಳುವಂತಹ ನಿಲುವುಗಳು ಎಲ್ಲವೂ ಅಚ್ಚರಿಯಾಗಿದೆ. ದೇಶದ ಹಿತದೃಷ್ಟಿಯಿಂದ ಮಹಾನ್ ನಾಯಕ ಸಾವರ್ಕರ್ ಅವರ ಇತಿಹಾಸ ಪುಟದಿಂದ ಮುಚ್ಚಿಡು ವಂತಹ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಅದನ್ನು ಸೇರಿಸುವಂತಹ ಕೆಲಸವನ್ನು ಬಿಜೆಪಿ ಸರಕಾರ ಮಾಡಿದಾಗ , ಈಗ ಕಾಂಗ್ರೆಸ್ ಸರಕಾರ ತೆಗೆಯುವ ಕೆಲಸವನ್ನು ಮಾಡುತ್ತಿದೆ. ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಥವಾ ಬಿಜೆಪಿಯ ಸಿದ್ಧಾಂತಗಳಿಲ್ಲ, ಇವರು ಬ್ರಿಟೀಷರ ವಿರುದ್ಧ ಗುಂಡಿಗೆ ಎದೆಗೊಟ್ಟು ದೇಶದ ರಕ್ಷಣೆಗೋಷ್ಕರ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹಾನ್ ನಾಯಕರ ಪಾಠವನ್ನು ತೆಗೆದು ಹಾಕುವ ಕೆಲಸ ನಿಜಕ್ಕೂ ಖಂಡನೀಯ, ಅಲ್ಲದೇ ಗೋ ಹತ್ಯೆಯನ್ನು ನಿಷೇಧ ಕಾಯಿದೆ ರದ್ದಗೊಳಿಸುವ ಕುರಿತು ಪಶು ಸಂಗೋಪನಾ ಸಚಿವರು ಹೇಳಿರು ವುದು ದೌರ್ಭಾಗ್ಯ. ಕಾಂಗ್ರೆಸ್ ಹೀಗೆ ದ್ವೇಷದ ಕಾರಣವನ್ನು ಮಾಡಿದರೆ ಮತ್ತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂತರೆ ಅನುಮಾನ ಇಲ್ಲ ಎಂದರು.
ರಾಜ್ಯದ ಎಲ್ಲ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ಅನುಕೂಲ ವಾಗುವಂತೆ ಬಸ್ ಸಂಚಾರವನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಭದ್ರಾವತಿ ಕ್ಷೇತ್ರ ಬಿಜೆಪಿ ಉಸ್ತುವಾರಿ ಅಶೋಕ್ ಮೂರ್ತಿ, ಜಿ ಬಿಜೆಪಿ ಮುಖಂಡರಾದ ಡಾ.ಧನಂಜಯ ಸರ್ಜಿ, ಮಂಗೋಟೆ ರುದ್ರೇಶ್, ಧರ್ಮ ಪ್ರಸಾದ್, ಪ್ರಧಾನ ಕಾರ್ಯದರ್ಶೀ ಶ್ರೀನಾಥ್, ಕೂಡ್ಲಿಗೆರೆ ಹಾಲೇಶ್ ಮತ್ತಿತರರು ಹಾಜರಿದ್ದರು.