ಕೈಗಾರಿಕಾ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ
ಶಿವಮೊಗ್ಗ : ಜಿಯ ಕೈಗಾ ರಿಕಾ ಪ್ರದೇಶಗಳಿಗೆ ಅಗತ್ಯವಿರುವ ನೀರು, ರಸ್ತೆ, ವಿದ್ಯುತ್ ಇತರೆ ಮೂಲಸೌಕರ್ಯಗಳನ್ನು ಒದಗಿ ಸುವ ಸಂಬಂಧ ಜಿಧಿಕಾರಿ ಡಾ.ಸೆಲ್ವಮಣಿ.ಆರ್ ಇಂದು ನಡೆದ ಜಿ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಜಿಡಳಿತ ಕಚೇರಿ ಸಭಾಂ ಗಣದಲ್ಲಿ ನಡೆದ ೧೮೭ ನೇ ಜಿ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದರು.
ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ೧೫೦ ಪ್ಲಾಟ್ಗ ಳಿದ್ದು, ಇದಕ್ಕೆ ಸರಿಹೊಂದುವಂತೆ ಸಬ್ ಸ್ಟೇಷನ್ ನಿರ್ಮಿಸುವ ಸಂಬಂಧ ಮೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ಲೈನ್ ಅಸೆಸ್ ಮೆಂಟ್ ಮಾಡಿ ಒಂದು ವಾರದ ಒಳಗೆ ವರದಿ ನೀಡುವಂತೆ ಸೂಚನೆ ನೀಡಿದರು.
ನಿಸ್ತೇಜಗೊಂಡ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವೈeನಿಕವಾಗಿ ಇ- ತ್ಯಾಜ್ಯ ನಿರ್ವಹಣೆಗಾಗಿ ಹಾಗೂ ಇ-ಮಾಲಿನ್ಯ ತಡೆಗಾಗಿ ನಗರದ ಹೊರವಲಯದಲ್ಲಿ ೫ ಎಕರೆ ಯಷ್ಟು ಜಮೀನನ್ನು ಗುರುತಿಸಿ, ಅದನ್ನು ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಲೀಸ್ ಆಧಾ ರದಲ್ಲಿ ನೀಡಲು ಕ್ರಮ ಕೈಗೊಳ್ಳು ವಂತೆ ಕೆಐಎಡಿಬಿ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ದೇವಕಾತಿಕೊಪ್ಪದ ಕೈಗಾರಿಕಾ ಪ್ರದೇಶಕ್ಕೆ ಗ್ರಾಮೀಣ ನೀರು ಸರ ಬರಾಜು ಯೋಜನೆಯ ಬಹು ಗ್ರಾಮ ಕುಡಿಯುವ ನೀರು ಯೋ ಜನೆಯಲ್ಲಿ ನೀರು ಒದಗಿಸಲು ಯೋಜಿನೆ ರೂಪಿಸಲಾಗಿದ್ದು ಈ ಕುರಿತಾದ ಡಿಪಿಆರ್ ತಾಂತ್ರಿಕ ಪರಿ ಶೀಲನೆ ಹಂತದಲ್ಲಿದೆ ಎಂದರು.
ನಿದಿಗೆ ಕೈಗಾರಿಕಾ ಪ್ರದೇಶದ ಲ್ಲಿರುವ ಮೆ|| ಶಾಹಿ ಎಕ್ಸ್ಪೋ ರ್ಟ್ ಪ್ರೈ.ಲಿ ನಿಂದ ಮಾಲಿನ್ಯ ಉಂಟಾಗುತ್ತಿದ್ದು ಕೈಗಾರಿಕಾ ಪ್ರದೇ ಶದ ಘಟಕಗಳಿಗೆ ತೊಂದರೆಯಾ ಗುತ್ತಿರುವ ಬಗ್ಗೆ ಮಾಲಿನ್ಯ ನಿಯಂ ತ್ರಣ ಮಂಡಳಿಯವರು ಈಗಾ ಗಲೇ ನೋಟಿಸ್ ನೀಡಿರುತ್ತಾರೆ. ಆದರೂ ಮಾಲಿನ್ಯ ನಿಯಂತ್ರಣ ವಾಗಿಲ್ಲದ ಕಾರಣ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಜಿಧಿಕಾರಿಗಳು ಮಾಲಿನ್ಯ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಗಾನೆ ಕೈಗಾರಿಕಾ ಪ್ರದೇಶ ಅಭಿವೃದ್ದಿಪಡಿಸುವ ಸಂಬಂಧ ಅನಧಿಕೃತ ಸಾಗುವಳಿ, ಜಮೀನು ಹಸ್ತಾಂತರ, ಕೋರ್ಟ್ ಪ್ರಕರಣ ಗಳು ಇತರೆ ಸಮಸ್ಯೆಗಳಿದ್ದು ಇದ ನ್ನು ಸರಿಪಡಿಸಲು ಎಸಿ, ತಹಶೀ ಲ್ದಾರ್, ಎಸ್ಎಲ್ಎಓ, ಕೆಐಎಡಿ ಬಿ ಅಧಿಕಾರಿ ಇತರರ ಒಂದು ಸಮಿತಿ ರಚಿಸಿ ಕ್ರಮ ವಹಿಸಲಾ ಗುವುದು ಎಂದು ತಿಳಿಸಿದರು.
ಆಟೋ ಕಾಂಪ್ಲೆಕ್ಸ್ ಅಸೋಸಿ ಯೇಷನ್ ಅಧ್ಯಕ್ಷ ಸುರೇಶ್ ಮಾತನಾಡಿ ಆಟೋ ಕಾಂಪ್ಲೆಕ್ಸ್ ಬಳಿ ವಾಹನ ಸಂದಣಿ ಹೆಚ್ಚಿದೆ. ಹಾಗೂ ಶೌಚಾಲಯದ ಅಗತ್ಯವಿದೆ ಎಂದು ತಿಳಿಸಿದರು.
ಜಿಧಿಕಾರಿಗಳು ತಾವು ಪಾಲಿಕೆ ಕಾರ್ಯಪಾಲಕ ಅಭಿಯಂ ತರರೊಂದಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು. ಹಾಗೂ ಆಟೋ ಕಾಂಪ್ಲೆಕ್ಸ್ನಲ್ಲಿ ಸ್ಥಳ ಗುರುತಿಸಿ ನೀಡಿದಲ್ಲಿ ಸುಲಭ ಶೌಚಾಲಯದ ವತಿಯಿಂದ ಶೌ ಚಾಲಯ ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಸಾಗರ ರಸ್ತೆ ಕೆಎಸ್ಎಸ್ಐಡಿಸಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಉಮೇಶ್ ಶಾಸ್ತ್ರಿ ಸಾಗರ ರಸ್ತೆ ಕೈಗಾ ರಿಕಾ ವಸಾಹತು ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು ಮಧ್ಯರಸ್ತೆಯಲ್ಲಿ ಒಂದು ವಾಹನ ಹೋಗುವುದು ಕಷ್ಟವಾಗಿದ್ದು ಇದನ್ನು ಸರಿಪಡಿಸಬೇಕೆಂದು ಕೋ ರಿದರು.ಜಿಧಿಕಾರಿಗಳು ಈ ಕುರಿ ತು ತಾವು ಭೇಟಿ ನೀಡಿ, ಎಸ್ಪಿ ಯವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಈಗಾಗಲೇ ಅನುಮೋದನೆ ಪಡೆದು ಹೆಚ್ಚುವರಿ ಮತ್ತು ಬದಲಿ ಉತ್ಪನ್ನ ತಯಾರಿಕೆಗಾಗಿ ಪ್ರಸ್ತಾವನೆ ಸಲ್ಲಿಸಿದ ಕೈಗಾರಿಕೆಗಳಿಗೆ ಮಾಲಿನ್ಯ ಮಂಡಳಿ ಎನ್ಓಸಿ ಪಡೆದು ಬದ ಲಾಯಿಸಲು ಅನುಮೋದನೆ ನೀಡಿ ದರು.
ಕೈಗಾರಿಕಾ ಪ್ರದೇಶಗಳಿಗೆ ಅಗ ತ್ಯವಾದ ಕುಡಿಯುವ ನೀರು( ೨೪೭) ಬೀದಿ ದೀಪಗಳು, ಚರಂಡಿ, ವಿದ್ಯುತ್, ಪಾರ್ಕಿಂಗ್ ಇತರೆ ಸೌಲಭ್ಯಗಳ ಕುರಿತಾದ ಕೈಗಾರಿಕೋದ್ಯಮಿಗಳ ಮನವಿ ಮತ್ತು ಅಹವಾಲುಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.
ಜಿಪಂ ಸಿಇಓ ಸ್ನೇಹಲ್ ಸುಧಾ ಕರ ಲೋಖಂಡೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಕೆಐಎಡಿಬಿ ಕಾರ್ಯ ಪಾಲಕ ಅಭಿಯಂತರ ನಾರಾಯ ಣ್, ಡಿಐಸಿ ಜಂಟಿ ನಿರ್ದೇಶಕ ಗಣೇಶ್, ಮಹಾನಗರಪಾಲಿಕೆ ಕಾ.ಅಭಿಯಂತರ ನಟೇಶ್, ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರು, ಇತರೆ ಅಧಿಕಾರಿಗಳು, ಕೈಗಾರಿಕೋದ್ಯಮಿ ಗಳು ಹಾಜರಿದ್ದರು.