ಹಿರಿಯ ಪತ್ರಕರ್ತರಾದ ಚಂದ್ರಕಾಂತ್, ಜೇಸುದಾಸ್ಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆತ್ಮೀಯ ಸನ್ಮಾನ
ಶಿವಮೊಗ್ಗ: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜೀವಮಾನ ಸಾಧನಾ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಅವಾರ್ಡ್ ಪಡೆದ ಪತ್ರಕರ್ತ ಪಿ. ಜೇಸುದಾಸ್ ಅವರನ್ನು ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್. ಚಂದ್ರಕಾಂತ್ ಅವರು, ಜೇಸುದಾಸ್ ಅವರಿಗೆ ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿzಗಲೇ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದ ಅವರಿಗೆ ಪತ್ರಕರ್ತರ ಸಂಘ ಬೆಂಬಲ ನೀಡಿತ್ತು. ಅವರು ಸರಳತೆ ಮತ್ತು ಸಜ್ಜನಿಕೆಗೆ ಹೆಸರಾದ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾವು ಮೊಳೆ ಜೋಡಿಸಿ ಪತ್ರಿಕೆ ಮುದ್ರಿಸುತ್ತಿದ್ದ ಕಾಲದಿಂದಲೂ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಅಂದು ಸುದ್ದಿ ಸಂಗ್ರಹಿಸಲು ಪತ್ರಕರ್ತರು ಸಾಕಷ್ಟು ಶ್ರಮಿಸಬೇಕಾಗಿತ್ತು. ಇಂದು ವಾಟ್ಸ್ಅಪ್ ಸೇರಿದಂತೆ ಡಿಜಿಟಲ್ ಮಾಧ್ಯಮಗಳ ಮೂಲಕ ಸುದ್ದಿಗಳು ಸುಲಭವಾಗಿ ಲಭ್ಯವಾಗುತ್ತಿವೆ. ಕಾಲ ಬದಲಾದಂತೆ ಪತ್ರಿಕೋದ್ಯಮದ ಸ್ವರೂಪವೂ ಬದಲಾಗಿದೆ ಎಂದು ಹೇಳಿದರು.
ಜೇಸುದಾಸ್ ಮಾತನಾಡಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿzಗ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕಾರಣ ವಿಶ್ವವಿದ್ಯಾಲಯದಿಂದ ಹೊರಹಾಕುವ ಪರಿಸ್ಥಿತಿ ಎದುರಾಗಿತ್ತು. ಆ ಸಂದರ್ಭದಲ್ಲಿ ಪತ್ರಕರ್ತರ ಸಂಘ ಹಾಗೂ ಅಂದಿನ ಅಧ್ಯಕ್ಷ ಎನ್. ಮಂಜುನಾಥ್ ನೀಡಿದ ಬೆಂಬಲವನ್ನು ಎಂದಿಗೂ ಮರೆಯಲಾಗದು. ಪ್ರಶಸ್ತಿ ಲಭಿಸಿರುವ ಸಂತೋಷವನ್ನು ಪತ್ರಿಕಾ ಮಿತ್ರರ ಪ್ರೀತಿ ಮತ್ತಷ್ಟು ಹೆಚ್ಚಿಸಿದೆ ಎಂದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ಐದು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಚಂದ್ರಕಾಂತ್ ಅವರ ಸೇವೆ ಅನುಕರಣೀಯ. ಜೇಸುದಾಸ್ ವಿವಿಧ ಪ್ರದೇಶಗಳಿಗೆ ತೆರಳಿ ಈವರೆಗೆ ೯೫೦ಕ್ಕೂ ಹೆಚ್ಚು ವಿಶೇಷ ವರದಿಗಳನ್ನು ಸಿದ್ಧಪಡಿಸಿದ್ದು, ಹಳೆಯ ವಿಡಿಯೊಗಳನ್ನೂ ಸಂಗ್ರಹಿಸಿಟ್ಟಿzರೆ. ಈ ಪ್ರಶಸ್ತಿಗಳು ಅವರ ಜವಾಬ್ದಾರಿಯನ್ನು ಹೆಚ್ಚಿಸಿವೆ ಎಂದರು.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಚಂದ್ರಕಾಂತ್ ಅವರ ಸಾಧನೆ ಹಾಗೂ ಜೇಸುದಾಸ್ ಅವರ ಪತ್ರಿಕೋದ್ಯಮದ ಕೊಡುಗೆ ಹೆಮ್ಮೆಯ ಸಂಗತಿ ಎಂದರು.
ಪತ್ರಕರ್ತರಾದ ಗಜೇಂದ್ರ ಸ್ವಾಮಿ, ಹೊನ್ನಾಳಿ ಚಂದ್ರಶೇಖರ್, ಸಂತೋಷ್ ಕಾಚಿನಕಟ್ಟೆ, ಗೋಪಾಲ್ ಯಡಗೆರೆ, ಮೋಹನ್ ಕೃಷ್ಣ, ಶಿ. ಜು. ಪಾಷಾ, ರಾಮಚಂದ್ರ ಗುಣಾರಿ, ನವೀನ್ ಪುರದಾಳ್, ಸೌಮ್ಯ, ಸಂತೋಷ್ ಎಲಿಗಾರ್ ಮತ್ತಿತರರು ಉಪಸ್ಥಿತರಿದ್ದರು.
