ಜಿಲ್ಲಾ ಸುದ್ದಿತಾಜಾ ಸುದ್ದಿ

ಉಚಿತ ನೇತ್ರ ತಪಾಸಣೆ : ಕನ್ನಡಕಗಳ ವಿತರಣೆ

Share Below Link

ಶಿವಮೊಗ್ಗ, ಅ.೧೫: ಲಯನ್ಸ್ ಕ್ಲಬ್ ವತಿಯಿಂದ ನಗರದ ಲಯನ್ಸ್ ಭವನದಲ್ಲಿ ನೇತ್ರ ತಪಾಸಣೆ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಮಮತಾ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಥಮ ಉಪ ಜಿ ಗವರ್ನರ್ ಡಾ. ಎಸ್. ಐ. ಬಿರಾದಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.


ನೇತ್ರ ತಪಾಸಣೆಯ ಮಹತ್ವ ಹಾಗೂ ಲಯನ್ಸ್ ಇಂಟರ್ ನ್ಯಾಷನಲ್‌ನ ಸೇವಾ ಪರಂಪರೆಯನ್ನು ಡಾ| ಬಿರಾದಾರ್ ವಿವರಿಸಿದರಲ್ಲದೆ, ಲಯನ್ಸ್ ಭವನದಲ್ಲಿ ಪ್ರತಿ ತಿಂಗಳು ನೇತ್ರ ತಪಾಸಣಾ ಶಿಬಿರವನ್ನು ಶಾಶ್ವತ ಸೇವಾ ಯೋಜನೆಯಾಗಿ ಮುಂದುವರಿಸುವಂತೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾದ ಮೆಗ್ಗಾನ್ ಆಸ್ಪತ್ರೆಯ ಜಿ ಮೊಬೈಲ್ ನೇತ್ರ ಚಿಕಿತ್ಸಾ ಘಟಕದ ವೈದ್ಯಾಽಕಾರಿ ಡಾ. ಭಾಗ್ಯಲಕ್ಷ್ಮಿ ಅವರು ಮಾತನಾಡಿ, ನೇತ್ರ ತಪಾಸಣೆಯ ಅಗತ್ಯತೆ ಹಾಗೂ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ಸರ್ಕಾರ ದಿಂದ ದೊರೆಯುವ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ದಲ್ಲಿ ಅವರನ್ನು ಡಾ. ಬಿರಾದಾರ್ ಹಾಗೂ ಲಯನ್ಸ್ ಕ್ಲಬ್ ಶಿವಮೊಗ್ಗದ ಸದಸ್ಯರು ಗೌರವಿಸಿದರು.
ವಲಯ ಅಧ್ಯಕ್ಷರು ಹಾಗೂ ಜಿ ದೃಷ್ಟಿ ಮತ್ತು ನೇತ್ರ ಶಿಬಿರ ಸಂಯೋಜಕರಾದ ನಂದೀಶ್ ಎನ್.ಟಿ. ಅವರು ತಮ್ಮ ದೀರ್ಘಕಾಲದ ನೇತ್ರ ಸೇವಾ ಅನುಭವವನ್ನು ಹಂಚಿಕೊಂಡರು. ಮೊಬೈಲ್ ನೇತ್ರ ಚಿಕಿತ್ಸಾ ಘಟಕದ ವೈದ್ಯಕೀಯ ತಂಡದ ಕಾರ್ಯವನ್ನು ಪ್ರಶಂಸಿಸಿದರು.
ಶಿಬಿರದಲ್ಲಿ ಶಿವಮೊಗ್ಗ ಆಪ್ಟಿಕಲ್ಸ್ ವತಿಯಿಂದ ಆಪ್ಟೋಮೆಟ್ರಿಸ್ಟ್‌ಗಳಾದ ರಮ್ಯಾ ಮತ್ತು ನಿಶ್ಮಾ ಹಾಗೂ ತಂತ್ರಜ್ಞ ಮೊಹಮ್ಮದ್ ಸೊಹೈಲ್ ಅವರು ನೇತ್ರ ತಪಾಸಣೆ ಸೇವೆ ಸಲ್ಲಿಸಿದರು.
ಶಿಬಿರದಲ್ಲಿ ಒಟ್ಟು ೫೮ ಜನರಿಗೆ ನೇತ್ರ ತಪಾಸಣೆ ನಡೆಸಲಾಯಿತು. ಅಗತ್ಯವಿರುವ ಫಲಾನುಭವಿಗಳಿಗೆ ೩೮ ಉಚಿತ ಕನ್ನಡಕಗಳನ್ನು ವಿತರಿಸ ಲಾಯಿತು. ಪ್ರಾದೇಶಿಕ ಅಧ್ಯಕ್ಷರಾದ ವಿ. ರಾಜು, ಸಂಯೋಜಕ ಎಸ್. ಜೆ. ಸತೀಶ್ ಹಾಗೂ ಗಿರೀಶ್ ಭಂಡಿಗಡಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಶಿವಮೊಗ್ಗದ ಕಾರ್ಯದರ್ಶಿ ಸುಖಿಲ್ ನಂದೀಶ್ ವಂದಿಸಿದರು.

Leave a Reply

Your email address will not be published. Required fields are marked *