ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ: ಬಿ.ಎಸ್.ಸಿ. ಟೆಕ್ಸ್‌ಟೈಲ್ಸ್ ಅದ್ದೂರಿ ಪ್ರಾರಂಭೋತ್ಸವ

Share Below Link

ಶಿವಮೊಗ್ಗ,ಅ.೧೨: ಇಡೀ ರಾಜ್ಯದ ಅತ್ಯಂತ ವಿಶಾಲವಾದ ಜವಳಿ ಕ್ಷೇತ್ರದ ಶೋರೂಮ್ ಶಿವಮೊಗ್ಗದಲ್ಲಿ ಇಂದು ಉದ್ಘಾಟನೆ ಯಾಗಿದ್ದು, ಶಿವಮೊಗ್ಗ ಬಿ.ಹೆಚ್. ರಸ್ತೆಯ ಬಿಎಸ್‌ಸಿ ಟೆಕ್ಸ್ ಟೈಲ್ಸ್ ಪ್ರಾರಂಭೋತ್ಸವ ವೈಭವದಿಂದ ನಡೆಯಿತು.
ಇಂದು ಬೆಳಿಗ್ಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಹಾಗೂ ಇತರ ಗಣ್ಯರು ನೂತನ ಶೋರೂಮ್ ಅನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತಮ ಗುಣಮಟ್ಟದ ಬಿ ಎಸ್ ಸಿ ಜವಳಿ ಶೋರೂಮ್‌ಗಳು ರಾಜ್ಯದ ಅತ್ಯಂತ ಹೆಸರುವಾಸಿ ಯಾಗಿ ಬೆಳೆದಿವೆ. ಇಂತಹ ಶೋ ರೂಮ್ ಅನ್ನು ಶಿವಮೊಗ್ಗಕ್ಕೆ ತರುವ ಜಿಯ ಜನರ ಬಹುದೊಡ್ಡ ಬೇಡಿಕೆ ಈಗ ಈಡೇರಿದೆ. ಅದು ಸಹ ಇಡೀ ರಾಜ್ಯದಲ್ಲಿ ಅತ್ಯಂತ ದೊಡ್ಡ ಶೋ ರೂಮ್ ಇಲ್ಲಿ ಆಗಿರುವುದು ನಿಜಕ್ಕೂ ಸಂತಸದ ವಿಷಯ ಎಂದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ೮೫ ವರ್ಷಗಳ ಕಾಲ ಒಂದೇ ಬಗೆಯ ದೋಣಿಯಲ್ಲಿ ಜವಳಿ ಉದ್ಯಮ ವನ್ನು ನಡೆಸುತ್ತಿರುವ ಬಿಎಸ್ ಸಿ ಕುಟುಂಬದ ಸರಳತೆ ಸಜ್ಜನಿಕೆ ಹಾಗೂ ನಂಬಿಕೆ ರಾಜ್ಯದ ಜನತೆಯ ಅಚ್ಚುಮೆಚ್ಚಿನ ವಿಷಯವಾಗಿದೆ. ಶಿವಮೊಗ್ಗದಲ್ಲಿ ಇಂತಹದೊಂದು ದೊಡ್ಡ ಶೋರೂಮ್ ಆರಂಭವಾಗುವ ಮೂಲಕ ಇಲ್ಲಿನ ನೂರಾರು ಜನರಿಗೆ ಉದ್ಯೋಗದ ಅವಕಾಶ ನೀಡಿದೆ ಎಂದರು.
ಬೇರೆ ಉದ್ಯಮದತ್ತ ಈ ಕುಟುಂಬ ಯೋಚಿಸದೆ ತಮ್ಮ ಕುಟುಂಬ ಇದೇ ಕೆಲಸವನ್ನು ಮಾಡಬೇಕೆಂದು ಪ್ರಯತ್ನಿಸುತ್ತಿ ರುವ ಬಿಎಸ್ಸಿ ಕುಟುಂಬದ ಶ್ರಮ ನಿಜಕ್ಕೂ ಶ್ಲಾಘನೀಯ ಹಾಗೂ ನಂಬಿಕೆಗೆ ಅರ್ಹವಾದದ್ದು ಎಂದರು.
ಕರ್ನಾಟಕದ ರಾಜ್ಯದ ರಾಜಧಾನಿ ಬೆಂಗಳೂರು ಹೊರತು ಪಡಿಸಿದರೆ ಶಿವಮೊಗ್ಗ ಜಿ ಅತಿ ಹೆಚ್ಚು ಮುಂದುವರೆದ ಜಿಯಾಗಿ ಹೊರಹೊಮ್ಮುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ನಂತರ ಕೆಲಸ ಹಾಗೂ ಅಭಿವೃದ್ದಿ ವಿಷಯದಲ್ಲಿ ಪಟ್ಟು ಹಿಡಿದು ಮಾಡಿಸುವ ಶಕ್ತಿ ಹೊಂದಿರುವ ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಜಿ ಈ ಮಟ್ಟದ ಅಭಿವೃದ್ಧಿ ಕಂಡಿದೆ. ನಮ್ಮ ಪ್ರಧಾನಿಗಳು ಹೇಳುವಂತೆ ರೈಲ್ವೆ ಹಾಗೂ ಹೈವೇ ಅತಿ ದೊಡ್ಡ ಅಭಿವೃದ್ಧಿಯ ಆಸ್ತಿಯಾಗಿದೆ. ಅದಕ್ಕೆ ಪೂರಕವಾದ ವ್ಯವಸ್ಥೆ ಶಿವಮೊಗ್ಗ ಜಿಯಲ್ಲಿ ಕಂಡುಬರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಬಿ. ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಮಾಜಿ ಸಚಿವರು ಹಾಗೂ ಶಾಸಕರಾದ ಮುರುಗೇಶ್ ನಿರಾಣಿ, ಆರಗ eನೇಂದ್ರ, ಶಾಸಕರಾದ ಎಸ್. ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಸಂಸದ ಆಯನೂರು ಮಂಜುನಾಥ್, ಪ್ರಮುಖರಾದ ಮಾಡಾಳು ವಿರುಪಾಕ್ಷಪ್ಪ, ಎಸ್. ರುದ್ರೇಗೌಡ, ಅಶ್ವತ್ ನಾರಾಯಣ ಶೆಟ್ಟಿ, ಸಿ. ಎಸ್. ಷಡಾಕ್ಷರಿ, ಮೋಹನ್, ಬೆನಕಪ್ಪ, ಹೆಚ್ ಸಿ ಯೋಗೀಶ್, ಪಟ್ಟಾಭಿರಾಮ್ ಹಾಗೂ ಇತರರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಕುಮಾರಿ ಆದ್ಯ ಪ್ರಾರ್ಥಿಸಿದರು. ಬಿಎಸ್ ಸಿ ಮಾಲೀಕರಾದ ಬಿ. ಯು. ಚಂದ್ರಶೇಖರ್ ಸ್ವಾಗತಿಸಿದರು. ಬಿಎಸ್ ಸಿ ಮಾಲೀಕರಾದ ಬಿ.ಸಿ. ಉಮಾಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲೀಕರಾದ ವೇದ್ ಬಂಕಾಪುರ ವಂದಿಸಿದರು. ಕಾರ್ಯಕ್ರಮವನ್ನು ನಂದಿನಿ ಸಾಗರ ಅವರು ನಿರೂಪಿಸಿದರು.

Leave a Reply

Your email address will not be published. Required fields are marked *