ಜಿಲ್ಲಾ ಸುದ್ದಿತಾಜಾ ಸುದ್ದಿ

ಭದ್ರಾವತಿ ದಸರಾ ಮಹೋತ್ಸವಕ್ಕೆ ರೂ.೫೦ ಲಕ್ಷ ವೆಚ್ಚ

Share Below Link

ಭದ್ರಾವತಿ : ನಗರಸಭೆ ವತಿಯಿಂದ ಈ ಬಾರಿ ನಾಡಹಬ್ಬ ದಸರಾ ಮಹೋತ್ಸವವನ್ನು ರೂ.೫೦ ಲಕ್ಷ ವೆಚ್ಚದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಉತ್ಸವದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅ.೧೧ರಿಂದ ೨೧ರವರೆಗೆ ೧೧ ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ ಎಂದು ನಗರಸಭೆ ಆಯುಕ್ತ ಕೆ.ಎನ್. ಹೇಮಂತ್ ತಿಳಿಸಿದರು.
ನಗರಸಭೆಯಲ್ಲಿ ನಡೆದ ದಸರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಆಹ್ವಾನ ಪತ್ರಿಕೆ ಹಾಗೂ ಉತ್ಸವದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ದಸರಾ ಮಹೋತ್ಸವದ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ನಗರಸಭೆ ಅಧ್ಯಕ್ಷೆ ಜೆ.ಸಿ. ಗೀತಾ ರಾಜಕುಮಾರ್ ಕಾರ್ಯ ನಿರ್ವಹಿಸಲಿzರೆ. ನಗರಸಭಾ ಸದಸ್ಯರಾದ ಲತಾ ಚಂದ್ರಶೇಖರ್ ಅವರು ಸ್ವಾಗತ ಸಮಿತಿ, ಜಾರ್ಜ್ ಅವರು ಸಾಂಸ್ಕೃತಿಕ ಮತ್ತು ಮೆರವಣಿಗೆ ಸಮಿತಿ, ಮಣಿ ಅವರು ಪ್ರಚಾರ ಮತ್ತು ಅಲಂಕಾರ ಸಮಿತಿ, ಸೈಯದ್ ರಿಯಾಜ್ ಅವರು ಮನರಂಜನಾ ಸಮಿತಿ, ಚನ್ನಪ್ಪ ಅವರು ಕ್ರೀಡಾ ಸಮಿತಿ ಹಾಗೂ ಬಿ.ಎಂ. ಮಂಜುನಾಥ್ ಅವರು ದೇವರುಗಳ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿ zರೆ. ಅನುಸೂಧಾ ಮೋಹನ್ ಪಳನಿ ಅವರು ಆಯುಧ ಪೂಜೆ ಉಸ್ತುವಾರಿ ಹಾಗೂ ಮಹಿಳಾ ದಸರಾ ಸಮಿತಿಗಳ ಅಧ್ಯಕ್ಷತೆಯನ್ನು ವಹಿಸಲಿzರೆ ಎಂದು ವಿವರಿಸಿದರು.
ನಗರಸಭೆ ಆವರಣದಲ್ಲಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ಅ.೧೧ರಂದು ೨೦೨೬ರ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು.
ಅ.೧೨ರ ಇಂದು ಸಂಜೆ ೬ಕ್ಕೆ ಅಪರಂಜಿ ಅಭಿನಯ ಶಾಲೆಯಿಂದ ಹಾಗೂ ರಾತ್ರಿ ೮ಕ್ಕೆ ಸಿರಿ ಚಂದನ ಕಲಾ ವೃಂದದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ಕಾರ್ಯಕ್ರಮ ಉದ್ಘಾಟಿಸಲಿzರೆ.
ಅ.೧೩ರಂದು ಬೆಳಿಗ್ಗೆ ೧೦ಕ್ಕೆ ಕನಕ ಮಂಟಪ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಅ.೧೪ ರಂದು ಬೆಳಿಗ್ಗೆ ೧೦ಕ್ಕೆ ಪುರುಷರು ಮತ್ತು ಮಹಿಳೆಯರ ಕ್ರೀಡಾಕೂಟ ಹಾಗೂ ಅ.೧೫ರಂದು ಬೆಳಿಗ್ಗೆ ೧೦ಕ್ಕೆ ವಿವಿಧ ಇಲಾಖೆಗಳು, ಸಂಘ- ಸಂಸ್ಥೆಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರ ಕ್ರೀಡಾಕೂಟ ಆಯೋಜಿಸಲಾಗಿದೆ. ಈ ಕ್ರೀಡಾಕೂಟಗಳನ್ನು ವಿಶ್ವೇಶ್ವರಯ್ಯ ಬಿ.ಇಡಿ. ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಶಿವಲಿಂಗೇಗೌಡ ಉದ್ಘಾಟಿಸಲಿzರೆ.
ಅ.೧೫ರಂದು ಸಂಜೆ ೬ಕ್ಕೆ ಕನಕ ಮಂಟಪ ಮೈದಾನದಲ್ಲಿ ಭದ್ರಾ ಸುಗಮ ಸಂಗೀತ ವೇದಿಕೆಯಿಂದ ಸುಗಮ ಸಂಗೀತ ಸಂಜೆ ಹಾಗೂ ರಾತ್ರಿ ೮ಕ್ಕೆ ಮಿತ್ರಕಲಾ ಮಂಡಳಿ ಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿzರೆ.
ಅ.೧೬ರಂದು ಸಂಜೆ ೬ಕ್ಕೆ ಕನಕ ಮಂಟಪ ಮೈದಾನದಲ್ಲಿ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯ ಲಿದೆ. ರಾಜ್ಯ ಸಹಕಾರ ಮಹಾ ಮಂಡಳದ ಉಪಾಧ್ಯಕ್ಷ ಬಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದು, ನಗರಸಭೆಯ ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ ರೇವಣ್ಣ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿzರೆ.
ಅ.೧೭ರಂದು ಬೆಳಿಗ್ಗೆ ೧೦ಕ್ಕೆ ಕನಕ ಮಂಟಪ ಮೈದಾನದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ನಗರದ ಹಿರಿಯ ಕಬಡ್ಡಿ ಆಟಗಾರ ಮುನಿಸ್ವಾಮಿ ಉದ್ಘಾಟಿಸಲಿzರೆ. ಅ.೧೮ರಂದು ಬೆಳಿಗ್ಗೆ ೧೦ಕ್ಕೆ ಇದೇ ಮೈದಾನದಲ್ಲಿ ಬಯಲು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದ್ದು, ರಾಷ್ಟ್ರೀಯ ಕುಸ್ತಿಪಟು ಚನ್ನಬಸಪ್ಪ ಚಾಲನೆ ನೀಡಲಿzರೆ.
ಅ.೧೯ರಂದು ಸಂಜೆ ೬ಕ್ಕೆ ವಿವಿಧ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯ ಲಿದೆ. ಪಂಚ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಬಿ.ಎಸ್. ಗಣೇಶ್ ಉದ್ಘಾಟಿಸಲಿzರೆ.
ಅ.೨೦: ಆಯುಧ ಪೂಜೆ,
ಹಾಸ್ಯ ಸಂಜೆ:
ಅ.೨೦ರಂದು ಬೆಳಿಗ್ಗೆ ೧೦ಕ್ಕೆ ನಗರಸಭೆ ಕಚೇರಿ ಆವರಣದಲ್ಲಿ ಆಯುಧ ಪೂಜೆ ನಡೆಯಲಿದ್ದು, ನಗರಸಭೆ ಆಯುಕ್ತ ಕೆ.ಎನ್. ಹೇಮಂತ್ ಉದ್ಘಾಟಿಸಲಿzರೆ.
ಅಂದು ಸಂಜೆ ೬.೩೦ಕ್ಕೆ ಕನಕ ಮಂಟಪ ಮೈದಾನದಲ್ಲಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು, ಮಿಮಿಕ್ರಿ ಕಲಾವಿದ ದಯಾನಂದ, ಖ್ಯಾತ ವಾಗ್ಮಿ ಇಂದುಮತಿ ಸಾಲಿಮಠ ಹಾಗೂ ಹಾಸ್ಯ ಕಲಾವಿದ ಉಮೇಶ್ ಗೌಡ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಬಿ.ಕೆ. ಸಂಗಮೇಶ್ವರ ಉದ್ಘಾಟಿಸಲಿzರೆ.
ಅ.೨೧: ಭವ್ಯ ಮೆರವಣಿಗೆ,
ಬನ್ನಿ ಮುಡಿಯುವ ಕಾರ್ಯಕ್ರಮ:
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಭವ್ಯ ಮೆರವಣಿಗೆ ಅ.೨೧ರಂದು ಮಧ್ಯಾಹ್ನ ೩ಕ್ಕೆ ಲೋಯರ್ ಹುತ್ತಾದ ಶ್ರೀ ತಿರುಮಲ ವೆಂಕಟೇಶ್ವರ ದೇವಸ್ಥಾನದ ಆವರಣ ದಿಂದ ಆರಂಭವಾಗಲಿದೆ. ಅಲಂಕೃತ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ, ನಗರದ ವಿವಿಧ ದೇವಾಲಯಗಳ ದೇವಾನು ದೇವತೆಗಳ ಉತ್ಸವ ಮೂರ್ತಿಗಳು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಶಾಸಕ ಬಿ.ಕೆ. ಸಂಗಮೇಶ್ವರ ಮೆರವಣಿಗೆಗೆ ಚಾಲನೆ ನೀಡಲಿzರೆ.
ಮೆರವಣಿಗೆಯು ಅಂಡರ್ ಬ್ರಿಡ್ಜ್, ಬಿ.ಎಚ್. ರಸ್ತೆ, ಹಾಲಪ್ಪ ವೃತ್ತ, ಮಾಧವಾಚಾರ್ ವೃತ್ತ, ಸಿ.ಎನ್. ರಸ್ತೆ, ರಂಗಪ್ಪ ವೃತ್ತ ಹಾಗೂ ತಾಲೂಕು ಕಚೇರಿ ರಸ್ತೆಯ ಮೂಲಕ ಸಾಗಿ ಕನಕ ಮಂಟಪ ಮೈದಾನ ತಲುಪಲಿದೆ.
ನಂತರ ಸಂಜೆ ೬ಕ್ಕೆ ಕನಕ ಮಂಟಪ ಮೈದಾನದಲ್ಲಿ ಹಳೇ ನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್. ರಂಗನಾಥ ಶರ್ಮ ಅವರ ನೇತೃತ್ವದಲ್ಲಿ ವಿಶೇಷ ಪೂಜ ವಿಧಿವಿಧಾನಗಳು ನಡೆಯಲಿವೆ. ಬಳಿಕ ತಹಶೀಲ್ದಾರ್ ಪ್ರದೀಪ್ ದೇವಗಿರಿ ಅವರಿಂದ ಬನ್ನಿ ಮುಡಿಯುವ (ಶಮೀ ಪೂಜೆ) ಕಾರ್ಯಕ್ರಮ ನೆರವೇರಲಿದೆ. ಕೊನೆಯಲ್ಲಿ ರಾವಣನ ಸಂಹಾರದ ಪ್ರತಿಕೃತಿ ಯೊಂದಿಗೆ ಪಟಾಕಿ ಸಿಡಿಮದ್ದುಗಳ ಪ್ರದರ್ಶನ ನಡೆಸುವ ಮೂಲಕ ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುವುದು ಎಂದು ಹೇಮಂತ್ ತಿಳಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ. ಗೀತಾ ರಾಜಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಕೆ. ನಾಗಮ್ಮ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆಶಾಲತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ನರಸಿಂಹಮೂರ್ತಿ ಸ್ವಾಗತಿಸಿದರು. ಮೊಹಮದ್ ಗೌಸ್ ವಂದಿಸಿದರು.

Leave a Reply

Your email address will not be published. Required fields are marked *