ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗದ ಸ್ಥಾಪಿಸಿ
ಶಿವಮೊಗ್ಗ, ಅ.೧೦: ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಿರುವುದು ತಾತ್ಕಾಲಿಕ ಕಣ್ಣೊರೆಸುವ ಪ್ರಯತ್ನವಾಗಿದೆ. ಮಧ್ಯ ಕರ್ನಾಟಕದ ಜನರಿಗೆ ನ್ಯಾಯಾಂಗ ಸೇವೆ ಸುಲಭವಾಗಿ ದೊರೆಯುವ ದೃಷ್ಟಿಯಿಂದ ಹೈಕೋರ್ಟ್ ಸಂಚಾರಿ ಪೀಠವನ್ನು ಶಿವಮೊಗ್ಗದಲ್ಲಿಯೇ ಸ್ಥಾಪಿಸಬೇಕು ಎಂದು ಶಿವಮೊಗ್ಗ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನಾ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಕೆ. ಬಸಪ್ಪ ಗೌಡ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿಗಳು ರಚಿಸಿರುವ ಸಮಿತಿಯು ಮಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಮಡಿಕೇರಿ ಸೇರಿದಂತೆ ವಿವಿಧ ಜಿಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಹಾಗೂ ನ್ಯಾಯಾಂಗ ಸೇವೆಯ ಅಗತ್ಯ ಗಳನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಿದೆ. ಸಮಿತಿಯು ಶಿವಮೊಗ್ಗ ಜಿಗೂ ಭೇಟಿ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಯ ಜನರು ಹಾಗೂ ವಕೀಲರು ಸಂಚಾರಿ ಪೀಠದ ಸ್ಥಾಪನೆಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಎಚ್ಚರಿಕೆಯಿಂದ ಗಮನಹರಿಸಬೇಕು ಎಂದರು.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವುದಾದರೆ ಮಧ್ಯ ಕರ್ನಾಟಕದ ಜನರ ಅನುಕೂಲಕ್ಕಾಗಿ ಶಿವಮೊಗ್ಗಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂಬ ಭರವಸೆಯನ್ನು ಮುಖ್ಯಮಂತ್ರಿ ಗಳು ನೀಡಿದ್ದರು. ಆದರೆ, ಈವರೆಗೆ ಆ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹೈಕೋರ್ಟ್ ಸಂಚಾರಿ ಪೀಠದ ಸ್ಥಾಪನೆಗೆ ಸಂಬಂಧಿಸಿದಂತೆ ವಿವಿಧ ಜಿಗಳ ಅಭಿಪ್ರಾಯಗಳನ್ನು ಸಂಗ್ರಹಿಸುವುದು ಸ್ವಾಗತಾರ್ಹ ವಾದರೂ, ಸಮಿತಿಯ ವ್ಯಾಪ್ತಿಗೆ ಯಾವ ಜಿಗಳನ್ನು ಸೇರಿಸಲಾಗಿದೆ ಎಂಬುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಸನ ಮತ್ತು ದಾವಣಗೆರೆ ಜಿಗಳಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಬೇಡಿಕೆ ವ್ಯಕ್ತವಾಗದಿದ್ದರೂ, ಆ ಜಿ ಗಳನ್ನು ಸಮಿತಿಯ ಪರಿಶೀಲನಾ ವ್ಯಾಪ್ತಿಗೆ ಸೇರಿಸಿರುವುದರ ಉzಶ ವೇನು ಎಂಬುದನ್ನು ಸ್ಪಷ್ಟಪಡಿಸ ಬೇಕು ಎಂದು ಒತ್ತಾಯಿಸಿದರು.
ಎಲ್ಲ ಜಿಗಳ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಕೆಲವು ಜಿಗಳನ್ನು ಕೈಬಿಟ್ಟು, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಗಳನ್ನು ಮಂಗಳೂರಿನಲ್ಲಿ ಸ್ಥಾಪನೆಯಾಗಬಹುದಾದ ಪೀಠದ ವ್ಯಾಪ್ತಿಗೆ ಸೇರಿಸುವ ಉzಶ ವಿದೆಯೇ ಎಂಬ ಅನುಮಾನ ಮೂಡಿದೆ. ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಅಗತ್ಯ ವಾದ ಬೆಂಬಲವನ್ನು ಕ್ರೋಡೀಕರಿ ಸುವ ಉzಶದಿಂದ ಶಿವಮೊಗ್ಗ ಜಿಯನ್ನು ಅದರ ವ್ಯಾಪ್ತಿಗೆ ಸೇರಿಸುವ ಪ್ರಯತ್ನ ನಡೆಯುತ್ತಿ ದೆಯೇ ಎಂಬ ಆತಂಕವೂ ಇದೆ ಎಂದು ಹೇಳಿದರು.
ಶಿವಮೊಗ್ಗ ಜಿಯನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸಿದರೆ, ವಕೀಲರು ಹಾಗೂ ಕಕ್ಷಿದಾರರು ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಲು ದೂರದ ಮಂಗಳೂರಿಗೆ ಪ್ರಯಾಣಿಸಬೇಕಾಗುತ್ತದೆ. ಇದರಿಂದ ಹೆಚ್ಚಿನ ಸಮಯ ವ್ಯರ್ಥವಾಗುವುದರ ಜತೆಗೆ ಪ್ರಯಾಣ ವೆಚ್ಚವೂ ಹೆಚ್ಚಲಿದೆ. ಈಗಾಗಲೇ ಬೆಂಗಳೂರಿಗೆ ತೆರಳಿ ನ್ಯಾಯಾಂಗ ಸೇವೆ ಪಡೆಯಲು ಜಿಯ ಜನರು ಹೊಂದಿಕೊಂಡಿ zರೆ. ಆದರೆ, ಮಂಗಳೂರಿಗೆ ತೆರಳಿ ಬರುವುದು ಎಲ್ಲರಿಗೂ ಸುಲಭದ ಕೆಲಸವಲ್ಲ. ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾಗಿರುವ ಕಕ್ಷಿದಾರರಿಗೆ ಇದು ಹೆಚ್ಚುವರಿ ಹೊರೆಯಾಗಲಿದೆ ಎಂದರು.
ನ್ಯಾಯಾಂಗ ಸೇವೆ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಬೇಕು ಎಂಬುದು ಸಂಚಾರಿ ಪೀಠ ಸ್ಥಾಪನೆಯ ಮೂಲ ಉzಶವಾಗಿರಬೇಕು. ಆದರೆ, ಶಿವಮೊಗ್ಗದ ಜನರು ಮಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣ ವಾದರೆ, ಪ್ರಯಾಣದ ಸಮಯ ಮತ್ತು ವೆಚ್ಚದ ದೃಷ್ಟಿಯಿಂದ ಅವರಿಗೆ ಅನುಕೂಲವಾಗುವ ಬದಲು ಅನಾನುಕೂಲವೇ ಹೆಚ್ಚಾಗಲಿದೆ. ಆದ್ದರಿಂದ ಶಿವಮೊಗ್ಗ ಜಿಯನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವ ಯಾವುದೇ ಪ್ರಸ್ತಾಪಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಈಗಾಗಲೇ ಕಲಬುರಗಿ ಮತ್ತು ಧಾರವಾಡಗಳಲ್ಲಿ ಹೈಕೋರ್ಟ್ ಪೀಠಗಳು ಕಾರ್ಯ ನಿರ್ವಹಿಸುತ್ತಿವೆ. ಇದೇ ಮಾದರಿ ಯಲ್ಲಿ ಮಧ್ಯ ಕರ್ನಾಟಕದ ಜನರ ನ್ಯಾಯಾಂಗ ಅಗತ್ಯಗಳನ್ನೂ ಪರಿಗಣಿಸಬೇಕು. ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ಸಂಚಾರಿ ಪೀಠ ಸ್ಥಾಪಿಸಿದರೆ ಶಿವಮೊಗ್ಗ ಮಾತ್ರ ವಲ್ಲದೆ, ಸುತ್ತಮುತ್ತಲಿನ ಜಿಗಳ ವಕೀಲರು ಮತ್ತು ಕಕ್ಷಿದಾರರಿಗೂ ಅನುಕೂಲವಾಗಲಿದೆ. ಹೀಗಾಗಿ ಮಂಗಳೂರಿನಲ್ಲಿ ಪೀಠ ಸ್ಥಾಪಿಸುವ ಸಾಧ್ಯತೆಯೊಂದನ್ನೇ ಪ್ರಮುಖ ವಾಗಿ ಪರಿಗಣಿಸುವ ಬದಲು, ಮಧ್ಯ ಕರ್ನಾಟಕದ ಭೌಗೋಳಿಕ ಪರಿಸ್ಥಿತಿ, ಪ್ರಯಾಣದ ಅಂತರ ಹಾಗೂ ನ್ಯಾಯಾಂಗ ಸೇವೆಯ ಅಗತ್ಯಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕೆಂಬ ಬೇಡಿಕೆ ಇಂದಿನದಲ್ಲ. ೧೯೫೦ ರಲ್ಲಿಯೇ ಶಿವಮೊಗ್ಗದಲ್ಲಿ ನಡೆದ ವಕೀಲರ ಸಮ್ಮೇಳನದಲ್ಲಿ ಜಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವಂತೆ ಒತ್ತಾಯಿಸ ಲಾಗಿತ್ತು. ಹಲವು ದಶಕಗಳಿಂದ ಮುಂದುವರಿದಿರುವ ಈ ಬೇಡಿಕೆ ಯನ್ನು ಸರ್ಕಾರ ಹಾಗೂ ಹೈಕೋರ್ಟ್ ಆಡಳಿತ ಗಂಭೀರ ವಾಗಿ ಪರಿಗಣಿಸಬೇಕು. ಜಿಯ ಜನರ ಹಿತದೃಷ್ಟಿಯಿಂದ ಶಿವಮೊಗ್ಗ ದಲ್ಲಿಯೇ ಸಂಚಾರಿ ಪೀಠ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆ. ಬಸಪ್ಪ ಗೌಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಧ್ಯಕ್ಷ ಎನ್. ಜಗದೀಶ್, ಕಾಂಗ್ರೆಸ್ ಜಿಧ್ಯಕ್ಷ ಎಚ್.ಸಿ. ಯೋಗೀಶ್, ಜೆಡಿಎಸ್ ಜಿಧ್ಯಕ್ಷ ರಾಮಕೃಷ್ಣ, ಜಿ ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕೆಡಬ್ಲ್ಯುಜೆಎ ಜಿಧ್ಯಕ್ಷ ವೈದ್ಯನಾಥ್, ವಕೀಲರಾದ ಕೆ.ಪಿ. ಶ್ರೀಪಾಲ್, ವಿದ್ಯಾರಾಣಿ, ಡಿಎಸ್‌ಎಸ್‌ನ ಗುರುಮೂರ್ತಿ ಸೇರಿದಂತೆ ಇನ್ನಿತರರಿದ್ದರು.
