ಜಿಲ್ಲಾ ಸುದ್ದಿತಾಜಾ ಸುದ್ದಿ

ಮಹಿಳೆ ಅಬಲೆಯಲ್ಲ, ಸಬಲೆ…

Share Below Link

ತೀರ್ಥಹಳ್ಳಿ, ಸೆ.೨೮: ಮಹಿಳೆ ಯರು ಅಬಲೆಯಲ್ಲ, ಸಬಲೆ ಯರು. ಸಮಾಜದಲ್ಲಿ ಮಹಿಳೆಯ ರನ್ನು ಗುರುತಿಸುವಂತೆ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯಂತಹ ಸಂಸ್ಥೆಗಳ ಪಾತ್ರ ಮಹತ್ವzಗಿದೆ ಎಂದು ರಾಷ್ಟ್ರೀಯ ಉತ್ತಮ ಶಿಕ್ಷಕಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ರತ್ನಕುಮಾರಿ ಹೇಳಿದರು.
ತೀರ್ಥಹಳ್ಳಿ-೧ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿ, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಅವಕಾಶ ಕಲ್ಪಿಸುವ ಕಾರ್ಯ ನಡೆಯುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯೋಜನಾಧಿಕಾರಿ ಮಮತಾ ಶೆಟ್ಟಿ ಮಾತನಾಡಿ, ಪೂಜ್ಯ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನ ಮತ್ತು ಸಂದೇಶಗಳನ್ನು ಓದಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಶಿವಮೊಗ್ಗದ ಸುರಭಿ ಮಹಿಳಾ ಮಂಡಳಿಯ ನಿರ್ದೇಶಕಿ ಶ್ರೀಮತಿ ರೇಖಾ ಜಿ.ಎಂ. ಅವರು, ಸೈಬರ್ ಅಪರಾಧ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕುರಿತು ಮಾಹಿತಿ ನೀಡಿದರು.
ಮೊಬೈಲ್ ಬಳಕೆಯಿಂದ ಅನುಕೂಲಗಳ ಜತೆಗೆ ಅಪಾಯಗಳೂ ಇವೆ. ಅಪರಿಚಿತರು ಕರೆ ಮಾಡಿ ಒಟಿಪಿ ಕೇಳಿದರೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳ ಬಾರದು. ಒಟಿಪಿ ನೀಡುವುದರಿಂದ ಬ್ಯಾಂಕ್ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.


ಎಐ ತಂತ್ರeನದ ದುರ್ಬಳಕೆಯಿಂದ ಉಂಟಾಗ ಬಹುದಾದ ಅಪಾಯಗಳ ಬಗ್ಗೆಯೂ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ವಿನುತಾ ಮುರುಳಿಧರ್ ಮಾತನಾಡಿ, ಮಹಿಳೆಯರ ಪ್ರತಿಭೆ ಹಾಗೂ ಸಾಮರ್ಥ್ಯ ಅನಾವರಣ ಗೊಳಿಸಲು ಇಂತಹ ಕಾರ್ಯಕ್ರಮ ಗಳು ಉತ್ತಮ ವೇದಿಕೆಯಾಗಿವೆ ಎಂದರು.
ತಾಲೂಕು ಸಮನ್ವಯಾಧಿಕಾರಿ ರಮ್ಯ ಕಾರ್ಯಕ್ರಮ ಆಯೋಜಿಸಿದರು. ಕೃಷಿ ಅಧಿಕಾರಿ ರಾಕೇಶ್ ನಿರೂಪಿಸಿದರು. ಸೇವಾ ಪ್ರತಿನಿಧಿಗಳಾದ ಜಯಶೀಲ ಸ್ವಾಗತಿಸಿದರು. ಮೈತ್ರಿ ವಂದಿಸಿದರು. ಸೇವಾ ಪ್ರತಿನಿಧಿಗಳು ಹಾಗೂ eನವಿಕಾಸ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *