ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಸರ್ಪಗಂಧ – ಔಷಧಿಗಳ ರಾಣಿ…

Share Below Link

ಸರ್ಪಗಂಧ ಸಾವಿರಾರು ವರ್ಷಗಳಿಂದ ಆರೋಗ್ಯ ಕಾಪಾಡುತ್ತಿರುವ ದಿವ್ಯ ಔಷಧಿ.
ಇಂಗ್ಲಿಷ್ ಹೆಸರು: ಇಂಡಿಯನ್ ಸ್ನಾಕೇರೂಟ್.
ವೈeನಿಕ ಹೆಸರು: ರೌವೋಲ್ಫಿಯಾ ಸೇರಿಪೆಂತಿನ.
ಕುಲ: ಆಪೋನ್ಸಿನಸಿಡೆ.
ಭಾರತದ ಅರಣ್ಯಗಳಲ್ಲಿ ಬೆಳೆಯುವ ಅನೇಕ ಔಷಧೀಯ ಸಸ್ಯಗಳಲ್ಲಿ ಸರ್ಪಗಂಧ ರೌವೋಲ್ಫಿಯಾ ಸೇರಿಪೆಂತಿನ ಅತ್ಯಂತ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಔಷಧಿಗಳ ರಾಣಿ ಎಂದು ಕರೆಯಲ್ಪಡುವ ಈ ಸಸ್ಯವು ಸಾವಿರಾರು ವರ್ಷಗಳಿಂದ ಆಯುರ್ವೇದದಲ್ಲಿ ಪ್ರಮುಖ ಔಷಧಿಯಾಗಿ ಬಳಕೆಯಲ್ಲಿದೆ. ಇದರ ಬೇರು ಹಾವಿನಂತೆ ಸುತ್ತಿಕೊಂಡಿರುವುದರಿಂದ ಮತ್ತು ಹಾವಿನ ಕಚ್ಚುವಿಕೆಗೆ ಬಳಸಲಾಗುತ್ತಿದ್ದ ಕಾರಣದಿಂದಲೇ ಇದಕ್ಕೆ ಸರ್ಪಗಂಧ ಎಂಬ ಹೆಸರು ಬಂದಿದೆ.


ಪುರಾಣಗಳಲ್ಲಿ, ಸಮುದ್ರಮಥನದ ವೇಳೆ ಹೊರಬಂದ ಅಮೃತದ ಕೆಲವು ಹನಿಗಳು ಭೂಮಿಗೆ ಬಿzಗ ಅವುಗಳಿಂದ ಕೆಲವು ಅಪರೂಪದ ಔಷಧೀಯ ಸಸ್ಯಗಳು ಹುಟ್ಟಿಕೊಂಡವು ಎಂಬ ನಂಬಿಕೆಯಿದೆ. ಅವುಗಳಲ್ಲಿ ಸರ್ಪಗಂಧವೂ ಒಂದೆಂದು ಕೆಲವು ಜನಪದ ಕಥೆಗಳು ಹೇಳುತ್ತವೆ. ನಾಗದೇವತೆಗಳ ಆಶೀರ್ವಾದ ಪಡೆದ ಸಸ್ಯವೆಂದು ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಗೌರವದಿಂದ ಕಾಣಲಾಗುತ್ತದೆ. ಅನೇಕ ಕಡೆಗಳಲ್ಲಿ ನಾಗಪಂಚಮಿಯ ಸಂದರ್ಭದಲ್ಲಿ ಈ ಸಸ್ಯಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವೂ ಕಂಡುಬರುತ್ತದೆ.
ಇತಿಹಾಸದ ಪುಟಗಳನ್ನು ತಿರುಗಿಸಿದರೆ, ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆಯಂತಹ ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಸರ್ಪಗಂಧದ ಔಷಧೀಯ ಮಹತ್ವವನ್ನು ವಿವರಿಸಲಾಗಿದೆ. ನಿದ್ರಾಹೀನತೆ, ಮಾನಸಿಕ ಅಶಾಂತಿ, ಅಧಿಕ ರಕ್ತದೊತ್ತಡ ಹಾಗೂ ಕೆಲವು ನರಸಂಬಂಧಿ ಸಮಸ್ಯೆಗಳ ಚಿಕಿತ್ಸೆಯಲ್ಲಿ ಈ ಸಸ್ಯವನ್ನು ಬಳಸಲಾಗುತ್ತಿತ್ತು. ನಂತರ ೨೦ನೇ ಶತಮಾನದಲ್ಲಿ ವಿeನಿಗಳು ಇದರ ಬೇರುಗಳಿಂದ ರೆಸರ್ಪಿನ್ ಎಂಬ ಪ್ರಮುಖ ಆಲ್ಕಲಾಯ್ಡ್ ಅನ್ನು ಪ್ರತ್ಯೇಕಿಸಿದರು. ಇದು ಅಧಿಕ ರಕ್ತದೊತ್ತಡ ನಿಯಂತ್ರಣ ಹಾಗೂ ಕೆಲವು ಮಾನಸಿಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಜಗತ್ತಿನಾದ್ಯಂತ ಪ್ರಸಿದ್ಧಿಯಾಯಿತು.
ಸರ್ಪಗಂಧ ಸಾಮಾನ್ಯವಾಗಿ ೩೦ ರಿಂದ ೬೦ ಸೆಂ.ಮೀ. ಎತ್ತರದವರೆಗೆ ಬೆಳೆಯುವ ಪೊದೆ ಸಸ್ಯವಾಗಿದೆ. ಇದರ ಎಲೆಗಳು ಉದ್ದವಾಗಿದ್ದು, ಹೊಳೆಯುವ ಹಸಿರು ಬಣ್ಣದಲ್ಲಿರುತ್ತವೆ. ಸಣ್ಣ ಬಿಳಿ ಅಥವಾ ಗುಲಾಬಿ ಮಿಶ್ರಿತ ಹೂಗಳು ಅರಳುತ್ತವೆ. ನಂತರ ಕೆಂಪು ಬಣ್ಣದಿಂದ ಕಪ್ಪುಬಣ್ಣಕ್ಕೆ ತಿರುಗುವ ಸಣ್ಣ ಹಣ್ಣುಗಳು ಬೆಳೆಯುತ್ತವೆ. ಭಾರತದ ಪಶ್ಚಿಮ ಘಟ್ಟ, ಹಿಮಾಲಯದ ತಪ್ಪಲು ಪ್ರದೇಶಗಳು ಹಾಗೂ ಈಶಾನ್ಯ ಭಾರತದ ತೇವಭರಿತ ಕಾಡುಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಆಯುರ್ವೇದದಲ್ಲಿ ಸರ್ಪಗಂಧವನ್ನು ಶಾಂತಿದಾಯಕ ಔಷಧಿಯಾಗಿ ಪರಿಗಣಿಸಲಾಗುತ್ತದೆ. ನರಮಂಡಲವನ್ನು ಸಮತೋಲನ ಗೊಳಿಸಲು, ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು, ನಿದ್ರೆಯನ್ನು ಸುಧಾರಿಸಲು ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಇದರ ಬೇರುಗಳನ್ನು ಬಳಸಲಾಗುತ್ತದೆ. ಆದರೆ ಇದು ಪ್ರಬಲ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ವೈದ್ಯರ ಸಲಹೆಯಿಲ್ಲದೆ ಬಳಸಬಾರದು.
ಇಂದು ಅತಿಯಾದ ಸಂಗ್ರಹಣೆ ಯಿಂದಾಗಿ ಕಾಡಿನಲ್ಲಿ ಸರ್ಪಗಂಧದ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಇದರ ಸಂರಕ್ಷಣೆ ಮತ್ತು ವೈeನಿಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಔಷಧೀಯ ಸಸ್ಯಗಳ ಸಂರಕ್ಷಣೆ ಎಂದರೆ ನಮ್ಮ ಪರಂಪರೆಯ eನ ಮತ್ತು ಪ್ರಕೃತಿಯ ಸಂಪತ್ತನ್ನು ಉಳಿಸುವ ಕಾರ್ಯವೂ ಹೌದು.
ಪ್ರಕೃತಿ ನೀಡಿದ ಪ್ರತಿಯೊಂದು ಔಷಧೀಯ ಸಸ್ಯವೂ ಮಾನವನ ಆರೋಗ್ಯದ ಅಮೂಲ್ಯ ನಿಧಿ. ಸರ್ಪಗಂಧ ಅದರಂದು ಅಪರೂಪದ ರತ್ನ. ವಿeನ, ಇತಿಹಾಸ ಮತ್ತು ಪುರಾಣಗಳ ಸುಂದರ ಸಂಗಮವಾಗಿರುವ ಈ ಸಸ್ಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಲೇಖನ : ಸನ್ನಿಧಿ ನಿಲೇಕಣಿ


Leave a Reply

Your email address will not be published. Required fields are marked *