ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪರೀಕ್ಷಾರ್ಥಿಗಳು ಮೊದಲ ಮೈಂಡ್‌ಸೆಟ್ ಮಾಡಿಕೊಳ್ಳಬೇಕು: ಡಾ| ಸರ್ಜಿ…

Share Below Link

ಶಿವಮೊಗ್ಗ, ಜು.೧: ಮೊದಲು ಪರೀಕ್ಷಾರ್ಥಿಗಳು ಮೈಂಡ್‌ಸೆಟ್ಟನ್ನು ಮಾಡಿಕೊಳ್ಳಬೇಕು. ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಕಸಿತ ಭಾರತದ ಕಲ್ಪನೆ ಬಂದ ಮೇಲೆ ಅನೇಕ ಸುಧಾರಣೆಗಳಾಗಿದ್ದು, ಹಾವಾಡಿಗರ ದೇಶ ಭಾರತ ಎನ್ನುವ ಜಾಗದಲ್ಲಿ ಅಭಿವೃದ್ಧಿಶೀಲ ಭಾರತ ಎಂದು ಪ್ರಪಂಚದಲ್ಲಿ ಖ್ಯಾತಿ ಬಂದಿದ್ದು ಭಾರತೀಯರನ್ನು ಗೌರವಿಸುವ ಕಾಲ ಬಂದಿದೆ ಎಂದು ಸರ್ಜಿ ಫೌಂಡೇಷನ್ನಿನ ಪ್ರಮುಖರಾದ ಡಾ|| ಧನಂಜಯ ಸರ್ಜಿ ಹೇಳಿzರೆ.
ಕುವೆಂಪು ರಂಗಮಂದಿರದಲ್ಲಿ ಇಂದು ಜೆಸಿಐ ಶಿವಮೊಗ್ಗ ಮಲ್ನಾಡ್, ಶಿವಮೊಗ್ಗ ಕೋಚಿಂಗ್ ಅಕಾಡೆಮಿ, ಸರ್ಜಿ ಫೌಂಡೇಷನ್ನಿನ ಆಶ್ರಯದಲ್ಲಿ ರಾಜ್ಯ ಸರ್ಕಾರದ ಪೊಲೀಸ್ ಇಲಾಖೆಯ ಬೃಹತ್ ನೇಮಕಾತಿ ಪರೀಕ್ಷೆಯ ಯಶಸ್ಸಿ ಗಾಗಿ ಮಿಷನ್ ಖಾಕಿ-೨೦೨೬ ಒಂದು ದಿನದ ಉಚಿತ ಪರೀಕ್ಷಾ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈಗ ಉಪಗ್ರಹವನ್ನು ನಮ್ಮ ನಿರ್ಮಿಸುವಷ್ಟು ಮತ್ತು ಮಾರಾಟ ಮಾಡುವಷ್ಟು ಅಭಿವೃದ್ಧಿ ಹೊಂದಿzವೆ. ಅದಕ್ಕೆ ಭಾರತೀಯರ ಮೈಂಡ್‌ಸೆಟ್ ಕಾರಣ. ಶೇ.೭೫ರಷ್ಟು ಜನ ಮೊಬೈಲ್ ನೋಡುವ ಮೈಂಡ್ ಸೆಟ್‌ನಲ್ಲಿzರೆ. ಆದರೆ ಯಾವುದೇ ಒಂದು ಸಾಧನೆ ಮಾಡಬೇಕಾದರೆ ಮಾನಸಿಕ ಸದೃಢತೆಯನ್ನು ಹೊಂದ ಬೇಕು. ನಮ್ಮ ಮಾನಸಿಕ ಸದೃಢತೆ ಸ್ಥಿರವಾಗಿದ್ದರೆ ಅದು ಸಬ್ ಕಾನ್‌ಸೆಸ್ ಮೈಂಡ್‌ಗೆ ಸೂಚನೆ ರವಾನಿಸುತ್ತದೆ. ಆಗ ಎಲ್ಲವೂ ಮನಸ್ಸಿಗೆ ಬರುತ್ತದೆ. ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯ. ಯಾವಾಗಲೂ ದೊಡ್ಡ ಕನಸ್ಸನ್ನೇ ಕಾಣಬೇಕು. ನಮ್ಮ ದೇಶದ ಅಂಧ ಯುವಕನೊಬ್ಬ ಅನೇಕ ಸಾಧನೆಗಳನ್ನು ಮಾಡಿ, ಶ್ರೇಷ್ಠ ಉದ್ಯಮಿ ಪ್ರಶಸ್ತಿಯನ್ನು ಪಡೆದಿದ್ದ. ಆತ ರಾಷ್ಟ್ರಪತಿಯಾಗುವ ಕನಸು ಕಂಡಿzನೆ ಎಂದು ಹೇಳುತ್ತಿದ್ದ. ಅದರಂತೆ ಸಾಧನೆಯನ್ನೂ ಮಾಡಿದ್ದ. ಇದು ನಮಗೆ ಮಾದರಿ ಯಾಗಬೇಕು. ಈ ನಿಟ್ಟಿನಲ್ಲಿ ಕಾಯಕ ಸೇತು, ಪರೀಕ್ಷಾ ಪಥ ತರಬೇತಿ ಪ್ರಾರಂಭಿಸಿzವೆ ಎಂದರು.


ಜಿ ರಕ್ಷಣಾಧಿಕಾರಿ ನಿಖಿಲ್ ಬಿ. ಮಾತನಾಡಿ, ಪೊಲೀಸ್ ಕೆಲಸ ಸುಲಭದ ಕೆಲಸವಲ್ಲ, ದುಡ್ಡು ಮಾಡುವ ಕೆಲಸವೂ ಅಲ್ಲ, ಆದರೆ ಪೊಲೀಸರಿಗೆ ಸಿಗುವ ಗೌರವ ಯಾವ ಕೆಲಸಕ್ಕೂ ಸಿಗುವುದಿಲ್ಲ. ಪೊಲೀಸ್ ಇಲಾಖೆಗೆ ಯಾಕೆ ಸೇರಬೇಕೆಂದರೆ ಜನರ ಹೃದಯದಿಂದ ಅವರಿಗೆ ಗೌರವ ಸಿಗುತ್ತದೆ. ಜನಸಾಮಾನ್ಯರಿಗೆ ಸಹಾಯ ಮಾಡುವ ಅವಕಾಶ ಸಿಗುತ್ತದೆ. ನ್ಯಾಯದ ಪಯಣದಲ್ಲಿ ಜೊತೆಗೂಡಿ ಕರ್ತವ್ಯ ಮಾಡುವ ಅವಕಾಶ ಸಿಗುತ್ತದೆ. ಏನೇ ತೊಂದರೆ ಬಂದರೂ ಮೊದಲು ಫೋನ್ ಮಾಡುವುದು ಪೊಲೀಸರಿಗೆ. ದೇಶ ಕಾಯುವ ಸೈನಿಕರಿಗೆ ವರ್ಷಕ್ಕೆ ಎರಡು ತಿಂಗಳು ರಜೆ ಇದೆ. ಪೊಲೀಸಪ್ಪ ಬೆಳಿಗ್ಗೆ ೫ ಗಂಟೆಗೆ ಎದ್ದರೆ ರಾತ್ರಿ ೯ ಗಂಟೆಯವರೆಗೆ ಕೆಲವೊಮ್ಮೆ ಅಗತ್ಯ ಸಂದರ್ಭದಲ್ಲಿ ಅಹೋರಾತ್ರಿ ಕೆಲಸ ಮಾಡುವ ಸಂದರ್ಭ ಬರುತ್ತದೆ. ಆತನಿಗೆ ಯಾವ ಹಬ್ಬ-ಹರಿದಿನಗಳಿರು ವುದಿಲ್ಲ. ಬೆಳಿಗ್ಗೆ ೮ ಗಂಟೆಗೆ ರೋಲ್‌ಕಾಲ್ ಮಾಡಿ ಆ ದಿನದ ಅವನ ಕರ್ತವ್ಯದ ವಿವರವನ್ನು ಪಡೆದು ಅವನ ವ್ಯಾಪ್ತಿಗೆ ಹೋಗಿ ಅಲ್ಲಿ ಅರ್ಜಿಗಳ ವಿಚಾರಣೆ, ಪಾಸ್‌ಪೋರ್ಟ್ ವೇರಿಫಿಕೇಷನ್, ಸಮನ್ಸ್ ಜರಿ, ಎ ಒಂದು ಕಡೆ ಮಧ್ಯಾಹ್ನದ ಊಟ, ೪ ಗಂಟೆಗೆ ಠಾಣೆಗೆ ಬಂದರೆ ಸ್ವಲ್ಪ ವಿಶ್ರಾಂತಿ ಪಡೆಯುವ ಎಂದು ಮನೆಗೆ ಹೋಗುವ ಹೊತ್ತಿಗೆ ಮತ್ತೆ ಹಿರಿಯ ಅಧಿಕಾರಿಗಳಿಂದ ತುರ್ತುಕರೆ ಬರುತ್ತದೆ. ಅದನ್ನು ಮುಗಿಸಿ ರಾತ್ರಿ ಮನೆ ಸೇರುವಾಗ ಮತ್ತೆ ಬಂದೋಬಸ್ತಿಗೆ ಬೇರೆ ಊರಿಗೆ ತೆರಳಬೇಕಾಗುತ್ತದೆ. ಇಷ್ಟೆ ಕಷ್ಟಪಟ್ಟು ಯಾಕೆ ಪೊಲೀಸ್ ಕೆಲಸಕ್ಕೆ ಸೇರಬೇಕು ಎಂದು ಅನಿಸಬಹುದು. ಆದರೆ ಪೊಲೀಸ್ ಕೆಲಸದಲ್ಲಿ ಸಿಗುವ ನೆಮ್ಮದಿ ಬೇರೆ ಯಾವ ವಿಭಾಗ ದಲ್ಲೂ ಸಿಗುವುದಿಲ್ಲ. ಆದ್ದರಿಂದ ಯೋಚಿಸಿ ಆತ್ಮತೃಪ್ತಿಗಾಗಿ ಸಹಾಯ ಮಾಡುವ ಮನಸ್ಸಿದ್ದರೆ ಮಾತ್ರ ಪೊಲೀಸ್ ಕೆಲಸಕ್ಕೆ ಸೇರಿಕೊಳ್ಳಿ ಎಂದರು.
ಘನಶ್ಯಾಮ್ ಗಿರಿಮಾಜಿ, ವಿಕಾಸ್‌ಹೆಗ್ಡೆ, ಸುಮಂತ್, ಸುಮಾ, ನಾಗರಾಜ್ ರೆಡ್ಡಿ, ಸೋಮಪ್ಪ ದುಂಡಿಗೇರಿ ಇದ್ದರು.

Leave a Reply

Your email address will not be published. Required fields are marked *