ಸಂಕಟ ವಿಮೋಚನ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಹೆಚ್. ಚೈತನ್ಯರಿಗೆ 83ರ ಸಂಭ್ರಮ…
ನನ್ನ ಬದುಕು ರೂಪಿಸಿದ, ಜೀವನ ಪಾಠ ಕಲಿಸಿದ, ಕೈ ಬೆರಳು ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ಕೃತಜ್ಞತೆ ಹೇಳುವ ದಿನ. ಅತ್ತಾಗ ಎದೆಗಪ್ಪುವ, ಸೋತಾಗ ಕೈಹಿಡಿದು ಮೇಲೆತ್ತುವ, ಪ್ರೀತಿ, ಸ್ನೇಹ, ಅಕ್ಕರೆಯ ಪ್ರತಿ ರೂಪದಂತಿರುವ ಅಪ್ಪನಿಗೆ ಪ್ರತಿಯೊಬ್ಬರ ಬಾಳಲ್ಲೂ ವಿಶೇಷ ಸ್ಥಾನಮಾನವಿದೆ. ಕರುಳ ಕುಡಿಯ ಭವಿಷ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಡುವ ಆತ ಪ್ರತಿ ಕಂದನ ಪಾಲಿಗೂ ಹೀರೋ. ಆತ ಬದುಕಿದ ರೀತಿ, ಆತನ ತ್ಯಾಗಮಯ ಜೀವನವೇ ಮಗುವಿಗೆ ಆದರ್ಶ.
ಅತ್ತಾಗ ಕಣ್ಣೊರೆಸುವ, ತಪ್ಪು ಮಾಡಿದಾಗ ಗದರುವ, ಯಶಸ್ಸು ಕಂಡಾಗ ಸಂಭ್ರಮಿಸುವ ಅಪ್ಪ, ನಾವು ವಿಫಲರಾದಾಗಲೂ ನಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲಾರ, ನಾ ಬೆಳೆಸಿದ ಕಂದ ಎಂದಿಗೂ ವಿಫಲನಾಗಲಾರ, ವಿಫಲನಾದರೂ ಎದ್ದು ನಿಲ್ಲಬಲ್ಲ ಎಂಬ ಅಚಲ ನಂಬಿಕೆ ಆತನಿಗಿರುತ್ತದೆ. ಆತನ ಆ ಗುಣವೇ ಆತನನ್ನು ತಂದೆಯೆಂಬ ಎತ್ತರದ ಸ್ಥಾನದಲ್ಲಿಟ್ಟಿದೆ.
ಅಪ್ಪನ ಗಾಂಭೀರ್ಯ, ಶಿಸ್ತುಬದ್ಧ ಜೀವನ, ಕಟ್ಟುನಿಟ್ಟಿನ ಜೀವನಕ್ರಮ ಕೆಲವೊಮ್ಮೆ ಅಹಿತವೆನಿಸಬಹುದು. ಆದರೆ ಆ ಗಾಂಭೀರ್ಯದ ಹಿಂದೆಯೂ ಒಂದು ಕಾಳಜಿ ಇದೆ. ಬತ್ತದ ಮಮತೆಯಿದೆ. ಮಕ್ಕಳನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸಬೇಕೆಂಬ ಉzಶವಿದೆ. ತನ್ನ ಬದುಕಿನ ರೀತಿ ಮಕ್ಕಳಿಗೆ ಆದರ್ಶವಾಗಬೇಕು ಎಂಬ ತುಡಿತವಿದೆ.
ಮಗುವನ್ನು ಸಂಸ್ಕಾರವಂತ ನಾಗಿ ಬೆಳೆಸುವಲ್ಲಿ ತಾಯಿಯ ಪಾತ್ರ ಎಷ್ಟಿದೆಯೋ, ಮಗುವಿನ ಭವಿಷ್ಯ ರೂಪಿಸುವಲ್ಲಿ ತಂದೆಯ ಪಾತ್ರವೂ ಅಷ್ಟೇ ಇದೆ. ವ್ಯಕ್ತಿ ಪರಿಪೂರ್ಣನಾಗಿ, ಸದೃಢನಾಗಿ ನಿಲ್ಲಬೇಕಾದರೆ ಆತನ ಗುರಿ ಸ್ಪಷ್ಟವಾಗಿರಬೇಕು, ಆ ಸ್ಪಷ್ಟ ಗುರಿಯನ್ನು ಕಟ್ಟಿಕೊಡುವಲ್ಲಿ ತಂದೆಯ ಶ್ರಮ ಬಹಳಷ್ಟಿರುತ್ತದೆ.
ಬಾಲ್ಯದಿಂದ ಹಿಡಿದು ಜೀವನದ ಅಂತ್ಯದವರೆಗೂ ಅಪ್ಪ ಒಂದಲ್ಲ ಒಂದು ರೀತಿಯಲ್ಲಿ ಪ್ರೇರಣೆಯಾಗುತ್ತಾರೆ. ಅಕ್ಕರೆ, ಪ್ರೀತಿಯ ಪ್ರತಿರೂಪವಾಗಿರುವ ಅವರನ್ನು ನೆನೆಯಲು ವಿಶೇಷ ದಿನ ಬೇಕಾಗಿಲ್ಲ. ಅವರು ಹೇಳಿಕೊಟ್ಟ ನೀತಿಪಾಠದಂತೆ ಜೀವನ ರೂಪಿಸಿದರೆ ಅದುವೇ ಅಪ್ಪನಿಗೆ ನಾವು ನೀಡುವ ದೊಡ್ಡ ಉಡುಗೊರೆ.
ತೆರೆಮರೆಯ ಸಾಧಕ ಶಿವಮೊಗ್ಗದ ಹೆಚ್ ಚೈತನ್ಯ : ಹರಿಹರ ಆತ್ಮಾರಾಮ್ ರಾವ್- ಸೀತಮ್ಮ ದಂಪತಿಗಳ ಪುತ್ರರಾದ ಹೆಚ್. ಚೈತನ್ಯ ರವರು ದಾವಣಗೆರೆ ಜಿ ಹರಪನಹಳ್ಳಿ ತಾಲೂಕು ಯಡೇಹಳ್ಳಿಯಲ್ಲಿ ೧೯೪೨ರ ಜುಲೈ ೧ ರಂದು ಜನಿಸಿದರು.
ಶಿಕ್ಷಣ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹರಪನಹಳ್ಳಿ ಮತ್ತು ಕೂಡ್ಲಿಗಿ ಕೊಟ್ಟೂರಿನಲ್ಲಿ ಪೂರೈಸಿದ ಚೈತನ್ಯ ರವರು ಟಿ.ಸಿ.ಹೆಚ್. ತರಬೇತಿಯನ್ನು ಶಿವಮೊಗ್ಗ ಜಿ ಸೊರಬ ತಾಲೂಕು ಆನವಟ್ಟಿಯಲ್ಲಿ ಪೂರೈಸಿದರು.
ವಿವಾಹ: ಶಿವಮೊಗ್ಗ ಜಿ ಶಿಕಾರಿಪುರದ ಕೆ. ರಾಮಾ ದೀಕ್ಷಿತ್ – ಸುಮಿತ್ರಮ್ಮ ದಂಪತಿಗಳ ಪುತ್ರಿ ಪುಷ್ಪರವರನ್ನು ೧೯೭೨ರ ಡಿಸೆಂಬರ್ ೧೦ ರಂದು ವಿವಾಹ ಬಂಧನಕ್ಕೆ ಒಳಗಾದರು.
ನೌಕರಿ: ಹೆಚ್. ಚೈತನ್ಯರವರು ವಿವಾಹ ಪೂರ್ವದಲ್ಲಿ ಬಳ್ಳಾರಿಯ ಇಂಡಿಯನ್ ಹ್ಯೂಮ್ ಪೈಪ್ (ವಾಲ್ ಚಂದ್-ಹಿರಾ ಚಂದ್ ಗ್ರೂಪ್, ಬಾಂಬೆ) ಹೊಸಪೇಟೆ ಶಾಖೆಯಲ್ಲಿ ಸೇವೆ ಸಲ್ಲಿಸಿzರೆ.
ದಿನಗೂಲಿ ನೌಕರರಾಗಿ ಮಲೇರಿಯಾ ಇಲಾಖೆಯಲ್ಲಿ, ಕೊಟ್ಟೂರಿನ ಗಜಾಪುರದಲ್ಲಿ ಖಾಸಗಿ ಶಾಲೆಯಲ್ಲಿ ಎರಡು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿzರೆ. ಎಸ್.ವಿ.ಎಂ.ಎಸ್. ಬಸ್‌ನ ಕಛೇರಿಯಲ್ಲಿ ಚೆಕಿಂಗ್ ಆಫೀಸರ್ ಆಗಿಯೂ ಸಹ ಕೆಲಸ ಮಾಡಿzರೆ.
ಸರ್ಕಾರಿ ಶಾಲೆಯ ಶಿಕ್ಷಕರಾಗಿ : ಸರ್ಕಾರಿ ಶಾಲೆಯ ಶಿಕ್ಷಕರಾಗಿ ನೇಮಕ ಹೊಂದಿದ ಚೈತನ್ಯ ಅವರು ಶಿವಮೊಗ್ಗ ತಾಲೂಕು ತ್ಯಾಜವಳ್ಳಿ ಯ ಸರ್ಕಾರಿ ಶಾಲೆ, ಮಂಡಘಟ್ಟ ಶಾಲೆ, ದುರ್ಗಿಗುಡಿ ಆಂಗ್ಲ ಮಾಧ್ಯಮ ಶಾಲೆ, ಬಾಪೂಜಿ ನಗರದ ಸರ್ಕಾರಿ ಶಾಲೆ, ಹೊಸಮನೆ ಬಡಾವಣೆ ಸರ್ಕಾರಿ ಶಾಲೆ, ನವುಲೆಯ ಸರ್ಕಾರಿ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿzರೆ.
ನಿವೃತ್ತಿಯ ಕೆಲವು ತಿಂಗಳುಗಳ ಮುಂಚೆ ಹೆಚ್. ಚೈತನ್ಯರವರನ್ನು ತೀರ್ಥಹಳ್ಳಿ ತಾಲೂಕು ಮಂಡಗz ಸಮೀಪದ ಹಳಗ ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಿ ಮುಖ್ಯ ಶಿಕ್ಷಕರಾಗಿ ಭಡ್ತಿ ನೀಡಲಾಯಿತು.
ಶಿವಮೊಗ್ಗದ ಹೊಸಮನೆ ಶಾಲೆಯ ಹಿಂದಿನ ವಿದ್ಯಾರ್ಥಿಗಳು ಈಗಲೂ ಶಿಕ್ಷಕರಾಗಿದ್ದ ಚೈತನ್ಯ ರವರನ್ನು ನೆನಪಿಸಿಕೊಳ್ಳುತ್ತಾರೆ. ಕಾರಣವೇನೆಂದರೆ, ಆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನವಲ್ಲದೇ ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲೆಯ ವತಿಯಿಂದ ಏರ್ಪಡಿಸಿ ವರ್ಣಾಲಂಕಾರವನ್ನೂ ಸಹ ಮಾಡುತ್ತಿದ್ದರು. ಹಾಗೆಯೇ ಶಾಲಾ ಅವಧಿಯಲ್ಲಿ ತುಂಬಾ ಶಿಸ್ತಿನ ಸಿಪಾಯಿಯಾಗಿದ್ದರು. ಅವರ ಅವಧಿಯಲ್ಲಿ ಹೆಣ್ಣು ಮಕ್ಕಳು ಕೈಗೆ ಬಳೆ ಹಾಗೂ ಹಣೆಗೆ ಕುಂಕುಮ ಹಚ್ಚಿಕೊಳ್ಳುವುದು ಕಡ್ಡಾಯವಾಗಿತ್ತು. ತಪ್ಪಿದಲ್ಲಿ ಶಿಕ್ಷೆ ಖಾಯಂ ಆಗಿರುತ್ತಿತ್ತು. ಆ ಮೂಲಕ ಅವರು ಭಾರತೀಯ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡಿದ್ದರು.
ಹೆಚ್. ಚೈತನ್ಯರವರು ಕೇವಲ ಶಿಕ್ಷಕರಾಗದೇ ಹೋಂಗಾರ್ಡ್ ಮತ್ತು ಸ್ಕೌಟ್‌ನಲ್ಲಿಯೂ ಸಹ ಸೇವೆ ಸಲ್ಲಿಸಿzರೆ. ಸಾರ್ಥಕ ಹತ್ತು ವರ್ಷಗಳ ಕಾಲ ಸ್ಕೌಟ್‌ನಲ್ಲಿ ಸಲ್ಲಿಸಿದ ಸೇವೆಗೆ ಜನರಲ್ ಕಾರ್ಯಪ್ಪನವರಿಂದ ರಜತ ಪದಕಕ್ಕೆ ಭಾಜನರಾಗಿzರೆ.
ಧಾರ್ಮಿಕ: ಇವೆಲ್ಲದರ ಮಧ್ಯೆ ಶ್ರೀ ಶನೈಶ್ಚರ ಸ್ವಾಮಿಯ ಹರಿಕಥೆಯನ್ನು ಮಾಡುವ ಮೂಲಕ ನಾಡಿನ ಮನೆಮಾತಾಗಿzರೆ. ಸುಮಾರು ೪೦ ವರ್ಷಗಳಿಂದ ನಿರಂತರವಾಗಿ ಶ್ರೀ ಸ್ವಾಮಿ ಕಥಾ ಪ್ರವಚನ ನೀಡುತ್ತಿರುವ ಚೈತನ್ಯರವರು ನವುಲೆಯ ಶ್ರೀ ಮಾರುತಿ ಬಡಾವಣೆಯಲ್ಲಿ ಹರಿಹರದ ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜ್‌ರವರ ದಿವ್ಯ ಕೃಪಾಶೀರ್ವಾದದಿಂದ ಹಾಗೂ ಸಮಸ್ತ ಭಕ್ತರು, ಗ್ರಾಮದ ಸಾರ್ವಜನಿಕರ ಸಹಕಾರದಿಂದ ಶ್ರೀ ಶನೈಶ್ಚರ ಸ್ವಾಮಿ ದೇವಾಲಯವನ್ನು ಪ್ರಾರಂಭ ಮಾಡಿದರು. ಇದಕ್ಕೆ ಕೆ.ಟಿ. ಕರಿಯಪ್ಪ ಮಾಸ್ಟರ್, ಶಿವಾನಂದಪ್ಪ ಮಾಸ್ಟರ್ ಹಾಗೂ ಸುರಹೊನ್ನೆ ಶೇಖರಪ್ಪನವರು ಸಾಥ್ ನೀಡಿದರು. ಇಂತಹ ಶ್ರೀ ಸ್ವಾಮಿ ದೇವಸ್ಥಾನಕ್ಕೆ ಈಗ ೩೬ ವರ್ಷದ ಸಂಭ್ರಮ.
ಸಂಸಾರ: ಹೆಚ್ ಚೈತನ್ಯ ಅವರಿಗೆ ಎರಡು ಗಂಡು ಹಾಗೂ ಒಬ್ಬ ಹೆಣ್ಣು ಮಕ್ಕಳಿzರೆ. ಅವರ ಈ ಎ ಕೆಲಸಗಳ ಹಿಂದೆ ಪತ್ನಿ ಶ್ರೀಮತಿ ಪುಷ್ಪರವರು ಇzರೆ.
ಇದೀಗ ಭರ್ತಿ ೮೩ ಸಂವತ್ಸರಗಳನ್ನು ಜುಲೈ ೧ಕ್ಕೆ ಪೂರೈಸುತ್ತಿರುವ ಆ ಹಿರಿಯ ಚೇತನ ಇನ್ನೂ ನೂರು ವರ್ಷ ಸುಖವಾಗಿ, ಸಂತೋಷವಾಗಿ ಬಾಳಿ ನಮ್ಮೆಲ್ಲರನ್ನು ಹರಸಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.
ನನ್ನ ಅಪ್ಪನ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ಓದುಗರಿಗೆ ತಿಳಿಸುವ ಪ್ರಯತ್ನ ಮಾಡಿzನೆ.

