251ನೇ ತಿಂಗಳ ಸಾಹಿತ್ಯ ಹುಣ್ಣಿಮೆ: ನಾಟಕ ಪ್ರದರ್ಶನ -250 ಗಾಯಕರಿಂದ ಸಮೂಹ ಗಾಯನ-ಹಾಸ್ಯ, ಕವನ, ಚುಟುಕು
ಶಿವಮೊಗ್ಗ, ಜೂ.೨೬: ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಪ್ರತಿ ಹುಣ್ಣಿಮೆ ಯಂದು ಏರ್ಪಡಿಸುವ ಮನೆ- ಮನ ಸಾಹಿತ್ಯ ಕಾರ್ಯಕ್ರಮದ ೨೫೧ನೇ ತಿಂಗಳ ಕಾರ್ಯಕ್ರಮ ವನ್ನು ಜೂ. ೨೯ರ ಸೋಮವಾರ ಸಂಜೆ ೫:೩೦ರಿಂದ ಕುವೆಂಪು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಡಿ. ಮಂಜುನಾಥ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಅವರ ಕುಟುಂಬದ ಆತಿಥ್ಯದಲ್ಲಿ ಈ ಬಾರಿಯ ಸಾಹಿತ್ಯ ಹುಣ್ಣಿಮೆ ನಡೆಯಲಿದೆ. ಅಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಾಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನಿಧ್ಯ ವಹುಸಲಿದ್ದು, ಖ್ಯಾತ ಚಲನಚಿತ್ರ ನಟ ಸುಚೇಂದ್ರ ಪ್ರಸಾದ್ ಉದ್ಘಾಟಿಸಲಿzರೆ ಎಂದರು.
ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಯುವ ನಾಯಕ ಕೆ.ಇ. ಕಾಂತೇಶ್ ಉಪಸ್ಥಿತರಿರಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಜಿ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿzರೆ. ಇದೇ ವೇಳೆ ಕಸಾಪ ಹಿರಿಯ ಸದಸ್ಯ ಟಿ. ಆರ್. ಅಶ್ವತ್ಥ ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದರು.
೨೫೦ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಆತಿಥ್ಯ ನೀಡಿದ್ದ ಆಕಾಶ್ ಇನ್ ಮಾಲೀಕರಾದ ಹೊಸ ತೋಟ ಸೂರ್ಯನಾರಾಯಣ, ಸನ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಆಕಾಶ್, ಉದ್ಯಮಿಗಳಾದ ಉಮೇಶ್ ಆರಾಧ್ಯ, ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶೋಭಾ ರಾಮಕೃಷ್ಣ ಅತಿಥಿಗಳಾಗಿ ಭಾಗವಹಿಸಲಿzರೆ.
ಇದೇ ವೇಳೆ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ತಂದೆ ಪಡುಮುನ್ನೂರು ಶ್ರೀ ನಾರಾಯಣ ಆಚಾರ್ಯರ ಜೀವನ ಚರಿತ್ರೆ ಆಧರಿಸಿದ ‘ನನ್ನ ಪಿತಾಮಹ’ ನಾಟಕ ಪ್ರದರ್ಶನಗೊಳ್ಳಲಿದ್ದು ವೀಣಾ ಬನ್ನಂಜೆರವರ ಕೃತಿ ಆಧಾರಿತ ನಾಟಕದ ಮುಖ್ಯ ಪಾತ್ರ ಮತ್ತು ನಿರ್ದೇಶನವನ್ನು ಚಲನಚಿತ್ರ ನಟರಾದ ಸುಚೇಂದ್ರ ಪ್ರಸಾದ್ ಅಭಿನಯಿಸಲಿzರೆ. ವಿವಿಧ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದರು ನಾಟಕದಲ್ಲಿ ನಟಿಸಲಿzರೆ ಎಂದರು.

ನಗರದ ಬೇರೆ ಬೇರೆ ಬಡಾವಣೆಗಳಿಂದ ೨೫೦ಕ್ಕೂ ಹೆಚ್ಚು ಗಾಯಕರು ಭಾವಗೀತೆ, ಭಕ್ತಿಗೀತೆ, ವಚನ, ತತ್ವಪದ, ದಾಸರಪದ, ಜನಪದ ಗೀತೆಗಳನ್ನು ಹಾಡುವ ಕಾರ್ಯಕ್ರಮ ರೂಪಿಸಲಾಗಿದೆ. ಆರಂಭದಲ್ಲಿ ಒಟ್ಟಿಗೆ ನಾಡಗೀತೆ ಹಾಡಿದರೆ, ಆ ನಂತರ ೫೦ ಗಾಯಕಿ ಯರ ಒಂದು ತಂಡ ಎರಡು ಗೀತೆಗಳನ್ನು ಹಾಡಲಿzರೆ. ಗಾಯಕಿಯರಾದ ನಳಿನಾಕ್ಷಿ, ಲಲಿತಮ್ಮ ವಿಠಲದಾಸ್, ಲಕ್ಷ್ಮೀ ಮಹೇಶ್, ಸುಶ್ಮಾ, ಡಾ. ನೇತ್ರಾವತಿ, ಸುಶೀಲಾ ಷಣ್ಮುಗಂ, ಕೆ. ಎಸ್. ಮಂಜಪ್ಪ ನಿರ್ದೇಶನದಲ್ಲಿ ನಡೆಯಲಿದೆ ಎಂದರು.
ನೂರು ಮಕ್ಕಳು ಎರಡು ಕವನ ಗಳನ್ನು ಹಾಡಲಿzರೆ. ವಿದೂಷಿ ಉಮಾ ದಿಲೀಪ್ ಅವರು ತಾವೇ ರಚಿಸಿದ ಕವನಗಳಿಗೆ ರಾಗ ಸಂಯೋಜನೆ, ನೃತ್ಯ ಸಂಯೋಜನೆ ಮಾಡಿzರೆ. ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ನೃತ್ಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿಲಿzರೆ. ವಿದೂಷಿ ಪುಷ್ಪಾ ಅವರ ನಿರ್ದೇಶನದಲ್ಲಿ ಜನಪದ ಹಾಡು, ನೃತ್ಯ ಕಾರ್ಯಕ್ರಮವನ್ನು ಪುಷ್ಪಾ ಫರ್ ಫಾರ್ಮಿಂಗ್ ಆರ್ಟ್ಸ್ ಕಲಾವಿದರು ನಡೆಸಿಕೊಡಲಿzರೆ. ಜಿಯ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರಣ ಹೊಸನಗರದ ಬಾಲಕಿ ಆರ್ವಿ, ಶಿಕಾರಿಪುರದ ಸ್ಕಂದ ಡಿ. ಎಸ್., ಶಿವಮೊಗ್ಗದ ನೇಹಾ ರಾಜಪ್ಪ, ಸೊರಬದ ಸಂಗೀತ ಚೌವ್ಹಾಣ್ ಅವರುಗಳು ಒಂದೊಂದು ಹಾಡು ಹೇಳಲಿzರೆ ಎಂದರು.
ದೂರದರ್ಶನ ಹರಟೆ ಖ್ಯಾತಿಯ ಭದ್ರಾವತಿ ಉಮೇಶ್ ಗೌಡರು ಕನ್ನಡ ಸಾಹಿತಿಗಳ ಬದುಕಿನ ಹಾಸ್ಯ ಪ್ರಸಂಗ ಕುರಿತು ಮಾತನಾಡಲಿzರೆ. ಶಿಕ್ಷಕಿ ಕವಿತಾ ಉಂಬಳೇಬೈಲು ಕಥೆ ಹೇಳುತ್ತಾರೆ. ಕವಿಗಳಾದ ಬಿ. ಟಿ. ಅಂಬಿಕಾ, ಲೀಲಾವತಿ ಯುವರಾಜ್, ಶಂಕರಘಟ್ಟ ಕೆ. ಎನ್. ರಮೇಶ್ ಕವನ ವಾಚಿಸುವರು. ಕವಿಗಳಾದ ಡಾ. ನಿವೇದಿತಾ ಹೆಗಡೆ, ಡಾ. ವಿನಯ ಶ್ರೀನಿವಾಸ್, ಶಶಿಧರ ಅವರು ಹನಿಗವನ ವಾಚಿಸಲಿzರೆ.
ಕಾರ್ಯಕ್ರಮದ ನಂತರ ರಂಗಮಂದಿರದಿಂದ ದೂರದ ಬಡಾವಣೆಗೆ ತೆರಳಲಿರುವ ಗಾಯಕರು, ಕಲಾವಿದರಿಗೆ ನಗರ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಶಿವಮೊಗ್ಗ ಜಿಯ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಾಹಿತ್ಯ ಹುಣ್ಣಿಮೆಯೂ ಒಂದಾಗಿದೆ. ಕಳೆದ ಇಪ್ಪತ್ತೊಂದು ವರ್ಷ ಪೂರೈಸಿ ಮುಂದು ವರಿಯುತ್ತಿರುವ ಈ ಕಾರ್ಯಕ್ರಮ ಸಾವಿರಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ. ನಗರದಲ್ಲಿ ಮಾತ್ರವಲ್ಲದೆ ಜಿಯ ಬೇರೆ ಬೇರೆ ತಾಲ್ಲೂಕು ಗಳು, ಗ್ರಾಮಾಂತರ ಸ್ಥಳದಲ್ಲೂ ಆಯೋಜನೆ ಮಾಡಿzವೆ. ಆತಿಥ್ಯ ನೀಡಿದ ಮಹನೀಯರು, ನೆರವಾದ ಸಹೃದಯಿಗಳು, ಭಾಗವಹಿಸಿದ್ದ ಗಾಯಕರು, ಕಥೆಗಾರರು, ಕವಿಗಳು, ಹನಿಗವನ ವಾಚಿಸಿದವರು, ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟ ನಾಡಿನ ಪ್ರಸಿದ್ಧರಿಗೆ, ಹೊಸಬರಿಗೆ, ಹಿರಯರಿಗೆ ಎಲ್ಲರಿಗೂ ಡಿ. ಮಂಜುನಾಥ ಕೃತಜ್ಞತೆ ಸಲ್ಲಿಸಿದರು. ಮುಂದೆಯೂ ಹೆಚ್ಚಿನ ಸಹಕಾರಕೊಡಿ ಆ ಮೂಲಕ ಸಹೃದಯಿ ಸಮಾಜ ಕಟ್ಟೋಣ ಎಂದು ವಿನಂತಿಸಿದರು.
ಸಾಹಿತ್ಯ ಹುಣ್ಣಿಮೆಗೆ ಮೊದಲ ಆತಿಥ್ಯ ನೀಡಿದವರು ಕೆ. ಎಸ್. ಈಶ್ವರಪ್ಪನವರ ಕುಟುಂಬ. ಆ ನಂತರ ಪ್ರಮುಖ ಘಟ್ಟದಲ್ಲಿ ಅದಕ್ಕೆ ಶಕ್ತಿತುಂಬಿ ಜನಾಕರ್ಶಕ ಗೊಳ್ಳುವಂತೆ ಪ್ರೇರಣೆ ನೀಡಿದ್ದನ್ನು ಡಿ. ಮಂಜುನಾಥ ಕೃತಜ್ಞತೆಯಿಂದ ಸ್ಮರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಯುವ ನಾಯಕರಾದ ಕೆ.ಈ.ಕಾಂತೇಶ್, ಉಮೇಶ್ ಆರಾಧ್ಯ, ಯು.ಮಧುಸೂದನ್ ಐತಾಳ್, ಶ್ರೀಕಾಂತ್, ಎಂ.ನವೀನ್ ಕುಮಾರ್, ಡಿ.ಗಣೇಶ್ ಉಪಸ್ಥಿತರಿದ್ದರು.

