ನಾ ಮಾಡಿದ್ದು ತಪ್ಪಾ…?
(ನೈಜ ಘಟನೆ)
ಅಮ್ಮ ನಿನ್ನ ಬ್ಯಾಗಲ್ಲಿ ಮೊಬೈಲ್ ರಿಂಗ್ ಆಗ್ತಿದೆ ನೋಡು ಯಾರು ಅಂತ. ಇರೋ! ಪ್ರತೀಕ ಈ ಬಸ್ಸು ರಶ್ ಬೇರೆ ಎ ಲಗೇಜ್ ಬ್ಯಾಗ್‌ಗಳು ನನ್ನ ಮೇಲೆ ಇವೆ ಇರು ತಗೇದೆ ಎನ್ನುತಾ ತನ್ನ ವ್ಯಾನಿಟಿ ಬ್ಯಾಗ್ ನಿಂದ ರೂಪ ಮೊಬೈಲ್ ತೆಗೆದು ಹಲೋ ಶಾಂತಕ್ಕ ಸಿಟಿ ಬಸ್ಸಲ್ಲಿ ಇದ್ದೀವಿ. ಇನ್ನೇನು ಮಂಜುನಾಥ ನಗರ ನೆಕ್ಸ್ಟ್ ಸ್ಟಾಪ್ ಇಳಿತಿವಿ, ಎನ್ನತ್ತಲೇ ವಿಜಯ (ರೂಪಾಳ ಗಂಡ )ಎಲ್ಲರೂ ಬನ್ನಿ ನಮ್ಮ ಸ್ಟಾಪ್ ಬಂತು ಬೇಗ ಬೇಗ ಬ್ಯಾಗ ತಗೊಂಡು ಇಳಿಯಿರಿ ಎಂದನು. ಅವಸರವಸರವಾಗಿ ಪ್ರತೀಕ, ರೂಪ ಹಾಗೂ ವಿಜಯ್ ಲಗೇಜ್ ಎತ್ತಿಕೊಂಡು ಬಸ್ಸಿನಿಂದ ಇಳಿದು ಮದುವೆ ನಡೆಯುವ ಮನೆಯತ್ತ ಹೊರಟರು.
ಅಮ್ಮ ನೋಡು ! ಈ ನಮ್ಮ ಧಾರವಾಡವೆಂದರೆ, ದಕ್ಷಿಣ ಕಾಶಿ ಇದ್ದಂಗೆ ಬೇರೆ ಊರು, ಜಿ , ಅಷ್ಟೇ ಯಾಕೆ ಬೇರೆ ರಾಜ್ಯದಿಂದಲೂ ಇಲ್ಲಿ ಶಿಕ್ಷಣ ಪಡೆಯಲು ಸಾಕಷ್ಟು ವಿದ್ಯಾರ್ಥಿಗಳು ಬರುತ್ತಾರೆ. ಎಲ್ಲಿ ನೋಡಿದರಲ್ಲಿ ಗಿಳಿವಿಂಡಿನತರಹ ವಿದ್ಯಾರ್ಥಿಗಳ ಗುಂಪು. ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಗಲು ರಾತ್ರಿಯನ್ನದೆ ತಪಸ್ಸಿನ ತರಹ ಓದುತ್ತಾರೆ ಎಂದನು ಪ್ರತೀಕ.
ಹೌದು ಕಣೋ ನಮ್ಮ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಈ ಊರು ಅಂದರೆ ಪಂಚಪ್ರಾಣ. ಇಲ್ಲಿಯ ಪರಿಸರ, ಶಿಕ್ಷಣ, ಇಲ್ಲಿಯ ಸಂಸ್ಕೃತಿ ವಿದ್ಯಾರ್ಥಿಗಳು ಯಾವತ್ತೂ ತಮ್ಮ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ, ಎನ್ನುತ್ತಾ ತಂದೆ ತಾಯಿ ಹಾಗೂ ಮಗ ಮಾತನಾಡುತ್ತಾ ಧಾರವಾಡದ ತಂಪಾದ ರಸ್ತೆಯಲ್ಲಿ ಮುನ್ನಡೆಯುತ್ತ ಸಾಗಿದರು.

ಅಷ್ಟರಲ್ಲಿ ಮದುವೆ ಮನೆ ಬಂದೇಬಿಟ್ಟಿತು. ಒಳಗಿನಿಂದ ಓಡಿ ಬಂದ ಶಾಂತಕ್ಕ ಏನೇ ! ರೂಪ ನಿಂಗೆ ಎಷ್ಟು ಸಾರಿ ಫೋನ್ ಮಾಡೋದು ಎರಡು ಸಾರಿ ರಿಂಗ್ ಆಯ್ತು ನಂತರ ಸ್ವಿಚ್ ಆಫ್ ಆಯ್ತು ನಾವು ಬಸ್ ಸ್ಟಾಪ್‌ಗೆ ಕಾರ್ ಕಳಿಸ್ತೀವಿ ಅಂತ ಹೇಳೋಣ ಅಂದ್ರೆ ನಿನ್ನ ಫೋನ್ ಚಾರ್ಜ್ ಇರಲಿಲ್ಲವೇನೋ ಸ್ವಿಚ್ ಆಫ್ ಆಗಿತ್ತು ಎಂದರು.
ರೂಪ ಹೌದಾ ನನ್ನ ಫೋನ್ ಚಾರ್ಜ್ ಫುಲ್ ಇತ್ತಲ್ಲ, ಎನ್ನುತ್ತಲೇ ತನ್ನ ವ್ಯಾನಿಟಿ ಬ್ಯಾಗ್ ಅನ್ನು ತಡಕಾಡಿದಳು ಮೊಬೈಲ್ ಕಾಣಲಿಲ್ಲ, ಇನ್ನೊಂದು ಸಾರಿ ಜಗೃತವಾಗಿ ಬ್ಯಾಗನ್ನು ಹುಡುಕಿದಳು ಎಲ್ಲೂ ಸಿಗಲಿಲ್ಲ ಅಷ್ಟರಲ್ಲಿ ವಿಜಯ್ ತನ್ನ ಮೊಬೈಲ್‌ನಿಂದ ರೂಪಾಳ ಮೊಬೈಲ್‌ಗೆ ಕಾಲ್ ಮಾಡಿದರು ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ಗಾಬರಿಯಿಂದ ಅಯ್ಯೋ ನನ್ನ ಫೋನ್ ಕಳೆದು ಹೋಯಿತು ಎಂದು ದುಃಖ ತಪ್ತಳಾದಳು ರೂಪಾ. ವಿಜಯ್ ಕೊಂಚ ಸಿಟ್ಟಿನಿಂದ ಮೊನ್ನೆ ತಾನೆ ೨೬ ಸಾವಿರ ರೂಪಾಯಿ ಕೊಟ್ಟು ಮೊಬೈಲನ್ನು ತೆಗೆದುಕೊಟ್ಟಿz ಹುಷಾರಾಗಿ ಇಟ್ಟುಕೊಳ್ಳಲು ಬರುವುದಿಲ್ಲವಾ ಎಂದು ಗದರಿದನು.
ಅಷ್ಟರಲ್ಲಿ ಶಾಂತಕ್ಕ ಬೈಬೇಡ ಬಿಡಪ್ಪ ಯಾರಾದರೂ ಬೇಕು ಅಂತಲೇ ಕಳೆದುಕೊಳ್ಳುತ್ತಾರೆಯೇ ಏನೋ ಮರ್ಮೋಸ (ಕ್ಷಣ ಮರೆವು) ಆಗಿದೆ. ನನ್ನ ಮಗ ಕುಮಾರ ಪೊಲೀಸ ಅದಾನಲ್ಲ ಅವನಿಗೆ ಹೇಳು ಮೊನ್ನೆ ಇದೇ ಓಣಿಯಲ್ಲಿ ೧೦ ಮೊಬೈಲ್‌ಗಳು ಕಳ್ಳತನವಾಗಿದ್ದವು, ಅವುಗಳನ್ನೆ ಹುಡುಕಿಕೊಟ್ಟಿzನೆ. ಅವನಿಗೆ ಹೇಳೋಣ ಬರ್ರೀ ಗಾಬರಿಯಾಗಬೇಡಿ ಎಂದು ಅವರನ್ನು ಒಳಗೆ ಕರೆದಳು.
ಅಷ್ಟರಲ್ಲಿ ಕುಮಾರ ಒಳಗೆನಿಂದ ಬಂದು ಏನಕ್ಕ ಇವಾಗ ಬಂದ್ರಾ ಎ ಕ್ಷೇಮಾನಾ? ಎಂದು ಕೇಳಿದ.ರೂಪ ಸಪ್ಪೆ ಮುಖದಿಂದ ಹೂಂ ಕಣೋ ಚನ್ನಾಗಿದ್ದೀವಿ, ನೀ ಹೇಗಿದ್ದೀಯಾ, ನಿನ್ನ ಡ್ಯೂಟಿ ಹೇಗಿದೆ ? ಎಂದು ಕೇಳಿದಳು. ಪ್ರತೀಕ ಗಾಬರಿಯಿಂದ ಮಾಮಾ ಅಮ್ಮನ ಫೋನು ಬಸ್ಸಿನಲ್ಲಿ ಬರುವಾಗ ಕಳೆದು ಹೋಗಿದೆ ಎಂದನು. ಹೌದಾ ಅದರ ಐಎಂಇಐ ನಂಬರ್ ಗೊತ್ತಿದ್ದರೆ ಹೇಳು ಈಗಲೇ ಟೆಲಿಕಾಂ ಆಫೀಸ್‌ಗೆ ಕಂಪ್ಲೇಂಟ್ ಮಾಡ್ತೀನಿ ಎಂದನು.
ಪ್ರತೀಕ ನಂಬರ್ ಹೇಳಿದ ಆ ಕ್ಷಣದಿಂದಲೇ ಕುಮಾರ ಮೊಬೈಲ್ ಟ್ರ್ಯಾಕ್ ಮಾಡಲು ಪ್ರಾರಂಭಿಸಿದನು. ಸುಮಾರು ಐದು ಗಂಟೆಯ ನಂತರ ರೂಪಾಳ ಮೊಬೈಲ್ ಸ್ವಿಚ್ ಆನ್ ಆಯ್ತು . ಪೊಲೀಸರು ಆ ನಂಬರನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಿದರು ಅದು ನೇರವಾಗಿ ಧಾರವಾಡದ ಮುರುಘಾಮಠದ ಲೊಕೇಶನ್ ತೋರಿಸಿತು, ತಕ್ಷಣವೇ ಆ ಮಠಕ್ಕೆ ಕುಮಾರ್ ಹಾಗೂ ಅವನ ಟೀಮ್ ಹೋಯಿತು.
ಮಠದ ಉಸ್ತುವಾರಿ ಅಧಿಕಾರಿಗಳಿಗೆ ವಿಷಯ ತಿಳಿಸಿ ಎ ಮಕ್ಕಳನ್ನು ಪರೀಕ್ಷಿಸಲು ಮುಂದಾದರು. ಈ ವಿಷಯ ಮಠದ ತುಂಬೆಲ್ಲ ಹರಡಿತು . ಅಷ್ಟರ ಬಿಎಸ್ಸಿ ಓದುತ್ತಿದ್ದ ಸತೀಶ್ ಎಂಬ ಹುಡುಗ ಅಳುತ್ತಲೇ ಓಡಿ ಬಂದು ತನ್ನದು ತಪ್ಪಾಯಿತು ನಾನೇ ಮೊಬೈಲನ್ನು ಕದ್ದು ತಂದೆ ಕ್ಷಮಿಸಿ ಎಂದು ಕುಮಾರನ ಕಾಲು ಹಿಡಿದನು.
ಕುಮಾರನು ಏನಪ್ಪಾ ಓದೋಕೆ ಅಂತ ಬಂದು ಕಳ್ತನ ಮಾಡಲು ಶುರು ಮಾಡಿದ್ದೀಯಾ ಇಂತಹ ಪುಣ್ಯ ಸ್ಥಳದಲ್ಲಿ ಇದ್ದುಕೊಂಡು ಕದಿಯುವ ಕೆಲಸ ಮಾಡ್ತಿಯಲ್ಲ ನಾಚಿಕೆ ಆಗಲ್ವಾ ಎಂದು ಒಂದು ಕಪಾಳಕ್ಕೆ ಹೊಡೆದನು.
ಅಷ್ಟರಲ್ಲಿ ರೂಪ ಹೊಡಿಬೇಡ ಬಿಡೋ ಹೋಗ್ಲಿ ಎಂದು ತಡೆದಳು. ಇಲ್ಲ ಅಕ್ಕ ಇವರಿಗೆ ಹೀಗೆ ಬಾರಿಸಬೇಕು, ಇವರನ್ನ ಹೀಗೆ ಬಿಟ್ರೆ ಮುಂದೇ ದೊಡ್ಡ ಕಳ್ಳರು ಆಗ್ತಾರೆ. ಓದೋಕೆ ಅಂತ ಬರೋದು ಸಿಟಿ ಲೈಫ್ ಎಂಜಾಯ್ ಮಾಡ್ಲಿಕ್ಕೆ ದುಡ್ಡಿಲ್ದೆ ಕಳ್ತನಕ್ಕೆ ಇಳಿತಾರೆ ಎಂದನು ಕುಮಾರ.

ಅಷ್ಟರ ಸತೀಶ ಅಳುತ್ತಾ ಮೇಡಂ ಕ್ಷಮಿಸಿ, ನಾನು ಅಂತವನಲ್ಲ ನೀವು ಅವಸರದಲ್ಲಿ ಬಸ್ ಅನ್ನು ಇಳಿಯುವಾಗ ನಿಮ್ಮ ಮೊಬೈಲ್ ಕೆಳಗೆ ಬಿತ್ತು, ನಾನು ಅದನ್ನು ಹಿಡಿದುಕೊಂಡು ನಿಮ್ಮನ್ನು ಕೂಗಿದೆ ಆದರೇ ನೀವು ತಿರುಗಿ ನೋಡಲಿಲ್ಲ ಬೇಗನೆ ಇಳಿದು ಹೋದಿರಿ, ನಿಮ್ಮ ಮೊಬೈಲನ್ನು ನೋಡಿ ನಿಮಗೆ ಓಡಿ ಬಂದು ಹಿಂದಿರುಗಿಸೋಣ ಎಂದುಕೊಂಡೆ ಆದರೆ ನನ್ನ ಬಡತನ ನನ್ನನ್ನು ತಡೆಯಿತು. ನಾನು ಇ ಪಕ್ಕದ ಅಮ್ಮೀನಬಾವಿ ಊರಿನ ಹುಡುಗ ನನ್ನ ಅಪ್ಪ ತೀರಿ ಹೋಗಿzರೆ, ನಮ್ಮ ತಾಯಿ ಕೂಲಿ ನಾಲಿ ಮಾಡಿ ಮೂರು ಮಕ್ಕಳನ್ನು ಓದಿಸುತ್ತಿzರೆ. ಅದರಲ್ಲಿ ನಾನೇ ದೊಡ್ಡವನು ಕಷ್ಟಪಟ್ಟು ಪಿಯುಸಿವರೆಗೆ ಓದಿ ಡಿಗ್ರಿ ಓದಲು ಧಾರವಾಡಕ್ಕೆ ಬಂದಿರುವೆ ತುಂಬಾ ಕಷ್ಟದಲ್ಲಿದ್ದೀನಿ ಮೇಡಂ ಪುಸ್ತಕಗಳನ್ನು ಕೊಳ್ಳಲು ನನ್ನ ಹತ್ತಿರ ದುಡ್ಡು ಇಲ್ಲ ಅವರಿವರ ಪುಸ್ತಕವನ್ನು ಕೇಳಿ ಪಡೆದು ಓದುತ್ತಾ ಇzನೆ. ಆದರೆ ಈಗಿನ ತಂತ್ರeನ ಯುಗದಲ್ಲಿ ಮೊಬೈಲ್ ನನಗೆ ತುಂಬಾ ಅವಶ್ಯಕ, ದಿನಾಲು ಬೇರೆಯವರ (ಗೆಳೆಯರ) ಮೊಬೈಲನ್ನು ಇಸಿದುಕೊಂಡು ಓದುವಾಗ ಅವರ ಕೊಂಕುಮಾತು, ಅವರ ಅಣಕು ನೋಟ ನನ್ನನ್ನು ಕುಗ್ಗಿಸುತ್ತಿತ್ತು. ದೇವರೇ ನನ್ನನ್ನು ಯಾಕೆ ಬಡವರ ಹೊಟ್ಟೆಯಲ್ಲಿ ಹುಟ್ಟಿಸಿದ್ದೀಯ ಎಂದು ದಿನಾಲೂ ದೇವರನ್ನು ಶಪಿಸುತಿz. ಅಂತದರಲ್ಲಿ ನಿಮ್ಮ ಮೊಬೈಲ್ ಸಿಕ್ಕಿದ್ದು ಆ ದೇವರು ಕರುಣಿಸಿದ ವರವೆಂದು ತಿಳಿದುಕೊಂಡೆ. ನನ್ನ ಓದಿಗಾಗಿ ಹತ್ತಿರವೇ ಇಟ್ಟುಕೊಳ್ಳಲು ಮುಂದಾದೆ ಅಷ್ಟೇ, ಯಾವ ದುರುzಶದಿಂದ ನಿಮ್ಮ ಮೊಬೈಲನ್ನು ಕದ್ದಿಲ್ಲ ಮೇಡಂ, ನಂದೇನು ತಪ್ಪಿಲ್ಲ ಕ್ಷಮಿಸಿ ಎಂದು ಗೋಳಾಡಿದನು.
ಅಲ್ಲಿ ನೆರೆದಿದ್ದ ಅವನ ಗೆಳೆಯರು ಕೂಡ ಹೌದು ಮೇಡಂ ಸತೀಶ ತುಂಬಾ ಒಳ್ಳೆಯ ಹುಡುಗ, ಮುಗ್ಧ, ದಯವಿಟ್ಟು ಅವನಿಗೆ ಏನು ಮಾಡಬೇಡಿ ಎಂದರು.
ಆ ಪರಸ್ಥಿತಿಯನ್ನು ಕಂಡಾಗ ಅಲ್ಲಿದ್ದ ಎಲ್ಲರಿಗೂ ಕಣ್ಣಾಲೆಗಳು ತುಂಬಿದ್ದವು. ನಮ್ಮ ಮುಂದೆ ಇರುವ ಇಂತಹ ನೂರಾರು ನತದೃಷ್ಟ ವಿದ್ಯಾರ್ಥಿಗಳನ್ನು ನೋಡಿದಾಗ ಮನಸ್ಸು ಮಮ್ಮಲ ಮರಗುವುದಂತೂ ನಿಜ ಎಂದು ರೂಪ ಆ ಮೊಬೈಲನ್ನು ಮರಳಿ ಅವನ ಕೈಗೆ ಇಟ್ಟಳು. ಈ ಮೊಬೈಲ್ ನನಗಿಂತ ನಿನ್ನ ಹತ್ತಿರ ಇರುವುದೇ ಒಳ್ಳೆಯದು ಎಂದಳು.
ಆಗ ಸತೀಶ ಬೇಡ ಮೇಡಂ ಒಮ್ಮೆ ತಪ್ಪು ಮಾಡಿರುವೆ, ಇನ್ನೆಂದೂ ಇನ್ನೊಬ್ಬರ ವಸ್ತುವನ್ನು ಮುಟ್ಟಲಾರೆ, ಬೇಡ ಮೇಡಂ ! ನನಗೆ ಬೇಡ ! ಎಂದು ಮರಳಿ ಕೊಡಲು ಪ್ರಯತ್ನಿಸಿದ. ವಿಜಯ್ ಹಾಗೂ ಕುಮಾರನು ಕೂಡ ಇರಲಿ ನಿನ್ನ ಉzಶ ಒಳ್ಳೆಯದಾಗಿತ್ತು. ನೀನು ಕದ್ದಿರುವುದು ವಿದ್ಯೆಗಾಗಿಯೇ ವಿನಃ ಮೋಜಿಗಾಗಿ ಅಲ್ಲ ಎಂದು ಒತ್ತಾಯ ಪೂರಕವಾಗಿ ಅವನಿಗೆ ಮೊಬೈಲನ್ನು ಕೊಟ್ಟರು. ಅಲ್ಲದೆ ಅವನ ಓದಿಗಾಗಿ ಸ್ವಲ್ಪ ದುಡ್ಡನ್ನು ಕೂಡ ವಿಜಯ್ ಅವನ ಕೈಗೆತ್ತನು. ಅಷ್ಟರ ಶರಣಾಗಿದ್ದ ಸತೀಶ ಅವರೆಲ್ಲರನ್ನು ತುಂಬು ಹೃದಯದಿಂದ ನಮಸ್ಕರಿಸಿ ಕಣ್ಣೀರು ಹಾಕ ತೊಡಗಿದ. ಇರಲಿ ಯಾವುದಕ್ಕೂ ಯೋಚಿಸಬೇಡ ನಿನಗೆ ಏನಾದರೂ ಕಷ್ಟವಿದ್ದರೆ ನನ್ನ ನಂಬರ್‌ಗೆ ಫೋನ್ ಮಾಡು, ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಕುಮಾರ ತನ್ನ ಮೊಬೈಲ್ ನಂಬರನ್ನು ಕೊಟ್ಟು ಬೆನ್ನನ್ನು ತಟ್ಟಿದ.
ಮುಂದೆ ಒಳ್ಳೆಯ ಓದನ್ನು ಓದಿ ಉತ್ತಮ ಪ್ರಜೆಯಾಗು ಎಂದು ಅಲ್ಲಿ ಇದ್ದವರೆಲ್ಲರೂ ಹರಸಿ ಮುಂದೆ ಸಾಗಿದರು. ಕೃತಜ್ಞನಾದ ಸತೀಶನು ಅವರೆಲ್ಲರನ್ನು ಮರೆಯಾಗುವವರೆಗೂ ಕಣ್ಣೀರಿನ ಧಾರೆಯೊಂದಿಗೆ ಬೇಳ್ಕೊಟ್ಟು ಮೊಬೈಲನ್ನು ಜೇಬಿಗಿಳಿಸಿದನು.
ಅಶ್ವಿನಿ ಅಂಗಡಿ, ಬಾದಾಮಿ.
