ಧನಾತ್ಮಕ ಚಿಂತನೆ: ಬದುಕನ್ನು ಬೆಳಗಿಸುವ ಬೆಳಕು…
ನಮ್ಮ ಯೋಚನೆಗಳೇ ನಮ್ಮ ಬದುಕಿನ ಶಿಲ್ಪಿಗಳು ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಧನಾತ್ಮಕ ಚಿಂತನೆ ಎಂದರೆ ಸುಮ್ಮನೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಕನಸು ಕಾಣುವುದಲ್ಲ. ಕಷ್ಟದಲ್ಲೂ ಅವಕಾಶವನ್ನು ಹುಡುಕುವ, ಬಿದ್ದರೂ ಏಳುವ ಧೈರ್ಯ ತಂದುಕೊಳ್ಳುವ, ಇರುವದರಲ್ಲಿ ಸಂತೋಷ ಕಾಣುವ ಮನಸ್ಥಿತಿ ಅದು.
ಧನಾತ್ಮಕ ಚಿಂತನೆ ಎಂದರೆ ಸಮಸ್ಯೆಯನ್ನು ನಿರಾಕರಿಸುವುದಲ್ಲ, ಸಮಸ್ಯೆಗಿಂತ ಪರಿಹಾರ ದೊಡ್ಡದು ಎಂದು ನಂಬುವುದು. ಮಳೆ ಬಂದಾಗ ಅಯ್ಯೋ ಎ ನೆನೆದು ಹೋಯಿತು ಎನ್ನುವುದು ನಕಾರಾತ್ಮಕ. ಮಳೆಯಿಂದ ಭೂಮಿ ತಂಪಾಯಿತು, ಕೆರೆ ತುಂಬಿತು ಎನ್ನುವುದು ಧನಾತ್ಮಕ. ಘಟನೆ ಒಂದೇ, ಪ್ರತಿಕ್ರಿಯೆ ಬೇರೆ.

ಧನಾತ್ಮಕ ಚಿಂತನೆಯ ಮಹತ್ವ:
೧. ಆರೋಗ್ಯಕ್ಕೆ ಬೂಸ್ಟರ್: ಸಂಶೋಧನೆಗಳು ಹೇಳುತ್ತವೆ ಧನಾತ್ಮಕವಾಗಿ ಯೋಚಿಸುವವರಿಗೆ ಹೃದಯ ರೋಗ, ಒತ್ತಡ, ಖಿನ್ನತೆ ಕಡಿಮೆ. ಏಕೆಂದರೆ ಮನಸ್ಸು ಸಂತೋಷವಾಗಿದ್ದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಗು ರೋಗಕ್ಕೆ ಮದ್ದು ಎಂಬುದು ಸುಳ್ಳಲ್ಲ.
೨. ಸಂಬಂಧಗಳು ಗಟ್ಟಿಯಾಗುತ್ತವೆ: ಯಾವಾಗಲೂ ದೂರುವ, ಟೀಕಿಸುವ ವ್ಯಕ್ತಿಯ ಜೊತೆ ಯಾರು ಇರಲು ಇಷ್ಟಪಡುತ್ತಾರೆ? ಧನಾತ್ಮಕ ಮಾತು, ಪ್ರೋತ್ಸಾಹ, ಕ್ಷಮಿಸುವ ಗುಣ ಇದ್ದರೆ ಸ್ನೇಹ, ಸಂಸಾರ, ಕೆಲಸದ ಜಾಗ ಎಲ್ಲವೂ ಸುಂದರವಾಗುತ್ತದೆ. ಒಂದು ಸಣ್ಣ ಮೆಚ್ಚುಗೆಯ ಮಾತು ಬೇರೆಯವರ ಇಡೀ ದಿನವನ್ನು ಬೆಳಗಬಹುದು.
೩.ಯಸಸ್ಸಿನ ರಹಸ್ಯ ಕೀಲಿಕೈ: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರಾಮೇಶ್ವರದ ಬಡ ಕುಟುಂಬದಲ್ಲಿ ಹುಟ್ಟಿದರು. ನನ್ನಿಂದ ಸಾಧ್ಯವಿಲ್ಲ ಎಂದುಕೊಂಡಿದ್ದರೆ ಅವರು ಪೇಪರ್ ಹಂಚುವ ಹುಡುಗನಾಗಿಯೇ ಉಳಿಯುತ್ತಿದ್ದರು. ನಾನು ಕ್ಷಿಪಣಿ ಮನುಷ್ಯನಾಗಬ ಎಂಬ ಧನಾತ್ಮಕ ಕನಸು ಅವರನ್ನು ರಾಷ್ಟಪತಿ ಭವನಕ್ಕೆ ಕರೆದೊಯ್ದಿತು.ಹೀಗೆ ದೊಡ್ಡ ಸಾಧನೆಗಳ ಹಿಂದೆ ದೊಡ್ಡ ಕನಸು ದೊಡ್ಡ ನಂಬಿಕೆ ಇರುತ್ತದೆ.
೪.ವೈಫಲ್ಯವನ್ನು ಮೆಟ್ಟಿಲು ಮಾಡಿಕೊಳ್ಳುವುದು: ಥಾಮಸ್ ಅಲ್ವಾ ಎಡಿಸನ್ ಬಲ್ಬ್ ಕಂಡುಹಿಡಿಯುವ ಮುನ್ನ ೧೦೦೦ ಬಾರಿ ವಿಫಲರಾದರು. ಪತ್ರಕರ್ತರು ೧೦೦೦ ಬಾರಿ ಸೋತಿರಿ, ಹೇಗನ್ನಿಸುತ್ತದೆ? ಎಂದಾಗ ಅವರು ನಕ್ಕು ಹೇಳಿದರು. ನಾನು ಸೋತಿಲ್ಲ. ಬಲ್ಬ್ ತಯಾರಿಸಲು ೧೦೦೦ ಮಾರ್ಗಗಳು ಕೆಲಸ ಮಾಡುವುದಿಲ್ಲ ಎಂದು ಕಲಿತೆ ಅಷ್ಟೆ. ಇದು ಧನಾತ್ಮಕ ಚಿಂತನೆಯ ಶಕ್ತಿ. ಸೋಲು ಇವರಿಗೆ ಅಂತ್ಯವಲ್ಲ. ಹೊಸ ಆರಂಭ.
೫. ಯಶಸ್ಸಿನ ಮೊದಲ ಮೆಟ್ಟಿಲು: ನನ್ನಿಂದ ಆಗಲ್ಲ ಎಂದವನು ಪ್ರಯತ್ನಕ್ಕೂ ಮೊದಲೇ ಸೋತುಬಿಡುತ್ತಾನೆ. ಪ್ರಯತ್ನ ಮಾಡಿ ನೋಡೋಣ ಎಂದವನಿಗೆ ಅರ್ಧ ಗೆಲುವು ಸಿಕ್ಕಂತೆ. ಧೀರೂಭಾಯಿ ಅಂಬಾನಿ, ಕೆ.ಎಲ್. ರಾಹುಲ್, ಸುಧಾ ಮೂರ್ತಿ ಎಲ್ಲರೂ ಶೂನ್ಯದಿಂದ ಶುರುವಾದವರು. ಅವರ ಬಳಿ ಇದ್ದದ್ದು ಒಂದೇ: ನಾನು ಸಾಧಿಸಬ ಎಂಬ ಧನಾತ್ಮಕ ನಂಬಿಕೆ.

ಧನಾತ್ಮಕ ಚಿಂತನೆ ಬೆಳೆಸುವುದು ಹೇಗೆ?
೧. ಮಾತು ಬದಲಿಸಿ: ಸಮಸ್ಯೆ ಎನ್ನುವ ಬದಲು ಸವಾಲು ಎನ್ನಿ. ಕಷ್ಟ ಬದಲು ಅನುಭವ ಎನ್ನಿ. ಪದ ಬದಲಾದರೆ ಭಾವ ಬದಲಾಗುತ್ತದೆ.
೨. ಕೃತಜ್ಞತೆ ದಿನಚರಿ: ರಾತ್ರಿ ಮಲಗುವ ಮುನ್ನ ಆ ದಿನ ನಡೆದ ೩ ಒಳ್ಳೆಯ ವಿಷಯ ಬರೆಯಿರಿ. ಒಂದು ತಿಂಗಳಲ್ಲಿ ನಿಮ್ಮ ಮೆದುಳು ಕೊರತೆಗಿಂತ ಸಮೃದ್ಧಿಯನ್ನು ನೋಡಲು ಶುರುಮಾಡುತ್ತದೆ.
೩. ಗೆಳೆಯರ ಬಳಗ: ಯಾವಾಗಲೂ ಗೊಣಗುವ, ದೂರುವ ಜನರಿಂದ ಸ್ವಲ್ಪ ದೂರವಿರಿ. ಉತ್ಸಾಹ ತುಂಬುವ, ಕನಸು ಕಾಣುವ ಜನರ ಜೊತೆ ಸಮಯ ಕಳೆಯಿರಿ. ಚಿಂತನೆ ಸಾಂಕ್ರಾಮಿಕ.
೪. ಮಾಧ್ಯಮ ಡಯಟ್: ದಿನಪೂರ್ತಿ ನೆಗೆಟಿವ್ ನ್ಯೂಸ್ ನೋಡಿದರೆ ಮನಸ್ಸು ಕಲುಷಿತ ವಾಗುತ್ತದೆ. ಒಳ್ಳೆಯ ಪುಸ್ತಕ, ಸ್ಫೂರ್ತಿ ದಾಯಕ ಜೀವನಚರಿತ್ರೆ, ಹಿತವಾದ ಸಂಗೀತಕ್ಕೆ ಸಮಯ ಕೊಡಿ.
೫. ವೈಫಲ್ಯವನ್ನು ಗುರು ಮಾಡಿಕೊಳ್ಳಿ: ಎಡಿಸನ್ ೧೦೦೦ ಬಾರಿ ಸೋತಾಗ ಹೇಳಿದರು ನಾನು ಸೋತಿಲ್ಲ, ೧೦೦೦ ದಾರಿಗಳು ಕೆಲಸ ಮಾಡುವುದಿಲ್ಲ ಎಂದು ಕಲಿತೆ. ಸೋಲು ಪಾಠ, ಶಿಕ್ಷೆಯಲ್ಲ.
ಧನಾತ್ಮಕ ಚಿಂತನೆ ಅಂದರೆ ಮೂರ್ಖತನವಲ್ಲ:
ನಾನು ಓದದೆಯೇ ಪಾಸಾಗುತ್ತೇನೆ ಎನ್ನುವುದು ಧನಾತ್ಮಕ ಚಿಂತನೆಯಲ್ಲ, ಅದು ಅeನ. ಓದಿದರೆ ಪಾಸಾಗಬ, ಕಷ್ಟಪಟ್ಟರೆ ಸಾಧಿಸಬ ಎನ್ನುವುದು ನಿಜವಾದ ಧನಾತ್ಮಕತೆ. ವಾಸ್ತವವನ್ನು ಒಪ್ಪಿಕೊಂಡು, ಅದನ್ನು ಉತ್ತಮಪಡಿಸಲು ಪ್ರಯತ್ನಿಸುವುದೇ ಸಕಾರಾತ್ಮಕತೆ.

ಬದುಕು ಯಾವಾಗಲೂ ನಾವು ಬಯಸಿದಂತೆ ಇರುವುದಿಲ್ಲ. ಆದರೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ನಮ್ಮ ಕೈಯಲ್ಲಿದೆ. ಕಾರು ಓಡಿಸುವಾಗ ಮುಂದಿನ ಗಾಜು ದೊಡ್ಡದಿರುತ್ತದೆ, ಹಿಂದಿನ ಕನ್ನಡಿ ಚಿಕ್ಕದಿರುತ್ತದೆ. ಏಕೆಂದರೆ ಮುಂದೆ ನೋಡುವುದು ಮುಖ್ಯ, ಹಿಂದೆ ನೋಡುವುದು ಕೆಲವೊಮ್ಮೆ ಮಾತ್ರ.
ನೀನು ಏನನ್ನು ಯೋಚಿಸುತ್ತೀಯೋ ಅದೇ ನೀನಾಗುತ್ತೀಯ ಎಂಬುದು ಬುದ್ದನ ವಾಣಿ. ಕಷ್ಟಗಳು ಎದುರಾದಾಗ ಅದನ್ನು ಎದುರಿಸಿ ಹೊಸ ದಾರಿಯನ್ನು ಹುಡುಕುವ ಭರವಸೆ, ಧೈರ್ಯ. ಧನಾತ್ಮಕ ಚಿಂತನೆ.
ಹಾಗಾಗಿ ಇಂದಿನಿಂದ ಒಂದು ಪ್ರತಿe ಮಾಡೋಣ ಕೆಸರಿನಲ್ಲಿ ಕಲ್ಲು ಹುಡುಕುವ ಬದಲು, ಕಮಲವನ್ನು ಹುಡುಕೋಣ. ಕತ್ತಲು ಶಪಿಸುವ ಬದಲು, ಒಂದು ಹಣತೆ ಹಚ್ಚೋಣ. ಏಕೆಂದರೆ ಧನಾತ್ಮಕ ಚಿಂತನೆ ಬದಲಾಯಿಸುವುದು ಕೇವಲ ನಮ್ಮ ದಿನವನ್ನಲ್ಲ, ನಮ್ಮ ಇಡೀ ಬದುಕನ್ನೇ.

