ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಭದ್ರಾವತಿಯಲ್ಲಿ ಜಾರಿಗೆ ಬಂದ ಘನತ್ಯಾಜ್ಯ ವಸ್ತು ನಿರ್ವಹಣೆ-೨೦೨೬ ನಿಯಮ

Share Below Link

ಭದ್ರಾವತಿ: ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು -೨೦೨೬ ನಗರಸಭೆ ವ್ಯಾಪ್ತಿಯಲ್ಲಿ ಏ.೧ರಿಂದ ಜಾರಿಗೆ ಬಂದಿದ್ದು, ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವುದು. ಇಲ್ಲವಾದಲ್ಲಿ ದಂಡ ವಿಧಿಸಲಾ ಗುವುದು, ಅಲ್ಲದೆ ನೀರು ಮತ್ತು ವಿದ್ಯುತ್ ಸಂಪರ್ಕ ಸಹ ಕಡಿತಗೊಳಿಸಲಾಗುವುದು ಎಂದು ನಗರಸಭೆ ಆಡಳಿತ ಎಚ್ಚರಿಸಿದೆ.
ಅರಣ್ಯ, ಪರಿಸರ ಮತ್ತು ಹವಮಾನ ಬದಲಾವಣೆ ಸಚಿವಾಲಯ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು -೨೦೨೬ ಜರಿಗೆ ತಂದಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲಾಗು ತ್ತಿದೆ. ನಗರಸಭೆ ವ್ಯಾಪ್ತಿಯ ನಿವಾಸಿಗಳು, ವ್ಯಾಪಾರೋದ್ಯಮಿ ಗಳು, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ ಮತ್ತು ಇತರೆ ವಾಣಿಜ್ಯ ಉದ್ದಿಮೆದಾರರು ತಮ್ಮ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳನ್ನು ೪ ವಿಧ ಗಳಾಗಿ ಮೂಲದಲ್ಲಿಯೇ ವಿಂಗಡಿಸಿ ನಗರಸಭೆಯ ಆಟೋ ಟಿಪ್ಪರ್‌ಗಳಿಗೆ ನೀಡುವುದು ಕಡ್ಡಾಯವಾಗಿದೆ.


೧. ಹಸಿ ತ್ಯಾಜ್ಯ : ಅಡಿಗೆ ಮನೆ ತ್ಯಾಜ್ಯ, ಆಹಾರ ತ್ಯಾಜ್ಯ, ತರಕಾರಿ ತ್ಯಾಜ್ಯ, ಮಾಂಸದ ತ್ಯಾಜ್ಯ, ಹಣ್ಣಿನ ತ್ಯಾಜ್ಯ, ಹೂವಿನ ತ್ಯಾಜ್ಯ, ಗಾರ್ಡನ್ ತ್ಯಾಜ್ಯ ಇತರೆ ಕರಗುವ ತ್ಯಾಜ್ಯ ವಸ್ತುಗಳು.
೨. ಒಣ ತ್ಯಾಜ್ಯ : ಎ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು, ಬಟ್ಟೆಯ ತ್ಯಾಜ್ಯ, ೩. ಸ್ಯಾನಿಟರಿ ತ್ಯಾಜ್ಯ : ಡೈಪರ್, ಸ್ಯಾನಿಟರಿ ನ್ಯಾಪ್ಕಿನ್ , ಕಾಂಡೋಮ್ಸ್.
೪. ವಿಶೇಷ ಕಾಳಜಿ ತ್ಯಾಜ್ಯ : ಪೈಂಟ್ ಡ್ರಮ್ಸ್/ಡಬ್ಬಾ, ಕೀಟನಾಶಕ ಔಷಧಿಗಳ ಡಬ್ಬಾ, ಅವಧಿ ಮೀರಿದ ಔಷಧಿಗಳು, ಬಲ್ಟ್, ಟ್ಯೂಬ್ ಲೈಟ್. ಒಡೆದ ಥರ್ಮಾಮೀಟರ್. ಹಳೆಯ ಬ್ಯಾಟರಿಗಳು, ಬಳಸಿದ ಸಿರಂಜ್ ನೀಡಲ್ಸ್. ಹೀಗೆ ಒಟ್ಟು ೪ ವಿಧಗಳಲ್ಲಿ ತ್ಯಾಜ್ಯ ವಿಗಂಡಿಸಿ ನಗರಸಭೆಯ ವಾಹನಗಳಿಗೆ ನೀಡುವುದು.
ತಪ್ಪಿದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-೨೦೨೬ ರಂತೆ ತ್ಯಾಜ್ಯ ವಿಂಗಡಣೆ ಮಾಡದೆ ಇರುವವರ ವಿರುದ್ಧ ದಂಡ ವಿಧಿಸುವುದಲ್ಲದೆ ಮೂಲಭೂತ ಸೌಕರ್ಯಗಳಾದ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತ ಗೊಳಿಸಲು ಕ್ರಮವಹಿಸಲಾಗು ವುದು. ನಗರದ ಸ್ವಚ್ಛತೆಗೆ ಪ್ರತಿಯೊಬ್ಬರು ಸಹಕರಿಸುವ ಮೂಲಕ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು-೨೦೨೬ ಯಶಸ್ವಿಗೊಳಿಸುವಂತೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ ಹಾಗು ಪೌರಾಯುಕ್ತ ಕೆ.ಎನ್ ಹೇಮಂತ್ ಕೋರಿzರೆ.

Leave a Reply

Your email address will not be published. Required fields are marked *