ಎನ್‌ಎಸ್‌ಯುಐನಿಂದ ಬೃಹತ್ ಪ್ರತಿಭಟನೆ…
ಶಿವಮೊಗ್ಗ, ಏ.೧೦: ಕೇಂದ್ರ ಸರ್ಕಾರದಲ್ಲಿ ದೀರ್ಘಕಾಲದಿಂದ ಖಾಲಿ ಉಳಿದಿರುವ ಹುzಗಳನ್ನು ಭರ್ತಿ ಮಾಡದೆ ಯುವಜನತೆಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿ ಎನ್‌ಎಸ್‌ಯುಐ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಹಲವು ವರ್ಷ ಗಳಿಂದ ಕೇಂದ್ರ ಸರ್ಕಾರ ವಿವಿಧ ಇಲಾಖೆಗಳಲ್ಲಿನ ನೇಮಕಾತಿ ಯನ್ನು ಕೈಗೊಳ್ಳದೆ ಸುಮಾರು ೧೦ ಲಕ್ಷಕ್ಕೂ ಅಽಕ ಹುzಗಳನ್ನು ಖಾಲಿ ಬಿಟ್ಟಿದೆ ಎಂದು ಅವರು ಆರೋಪಿಸಿ ದರು.
ಈ ಸಂದರ್ಭದಲ್ಲಿ ಮಾತನಾ ಡಿದ ಮುಖಂಡರು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಽಕಾರಕ್ಕೆ ಬರುವ ಮೊದಲು ಪ್ರತಿ ವರ್ಷ ೨ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, ಮೂರನೇ ಬಾರಿ ಪ್ರಧಾನಿಯಾಗಿ ಅಽಕಾರ ದಲ್ಲಿದ್ದರೂ ಆ ಭರವಸೆ ಈಡೇರಿಲ್ಲ. ಬದಲಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರು ವುದೇ ವಾಸ್ತವ ಎಂದು ಕುಟುಕಿ ದರು.
ಕೇಂದ್ರ ಸರ್ಕಾರದ ಸ್ವಾಮ್ಯದ ಅನೇಕ ಕೈಗಾರಿಕೆಗಳನ್ನು ಮುಚ್ಚು ವುದರಿಂದ ಲಕ್ಷಾಂತರ ಕುಟುಂಬ ಗಳು ಸಂಕಷ್ಟಕ್ಕೆ ಸಿಲುಕಿವೆ. ಜೊತೆಗೆ ವಿವಿಧ ನಿಗಮಗಳಲ್ಲಿ ಹೊರಗುತ್ತಿಗೆ ಪದ್ಧತಿ ಜಾರಿಗೆ ತಂದು ನೌಕರರ ಭದ್ರತೆಯನ್ನು ಹಾನಿಗೊಳಿಸಲಾಗಿದೆ ಎಂದು ಆರೋಪಿಸಿದರು.
ಸರ್ಕಾರದ ವಿವಿಧ ಇಲಾಖೆ ಗಳಲ್ಲಿನ ಖಾಲಿ ಹುzಗಳು ಭರ್ತಿ ಯಾಗದೆ ಇರುವುದರಿಂದ ಸಾರ್ವ ಜನಿಕ ಸೇವೆಗಳ ಮೇಲೂ ಪರಿಣಾ ಮ ಬೀರುತ್ತಿದೆ ಎಂದು ಹೇಳಿದರು.
ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದು ಘೋಷಣೆ ಮಾಡಲಾಗುತ್ತಿದ್ದರೂ, ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಷ್ಟಿ ಮಾಡಲಾಗು ತ್ತಿಲ್ಲ. ಇದರಿಂದ ಯುವಜನತೆಯ ಭವಿಷ್ಯ ಅಸ್ಥಿರವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿಗಳು ತಕ್ಷಣ ಮಧ್ಯ ಪ್ರವೇಶಿಸಿ ಖಾಲಿ ಇರುವ ಸರ್ಕಾರಿ ಹುzಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಹೊರ ಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ವಿವಿಧ ಇಲಾಖೆಗಳು ಮತ್ತು ನಿಗಮಗಳಲ್ಲಿ ಖಾಯಂ ನೇಮಕಾತಿ ಮಾಡಬೇಕು ಎಂದು ಪ್ರತಿಭಟ ನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎನ್‌ಎಸ್ ಯುಐ ಜಿ ಅಧ್ಯಕ್ಷ ವಿಜಯ್ ಸೇರಿದಂತೆ ರವಿ ಕಟಿಕೆರೆ, ರವಿಕು ಮಾರ್, ಆದಿತ್ಯ ಸುಬಾನ್, ಚಂ ದ್ರೋಜಿರಾವ್, ವರುಣ್, ಅಭಿ, ತಾಫಿಕ್ ಫರಾಜ್, ಶ್ರೀಕಾಂತ್, ಯೂಸುಫ್, ಪ್ರಭು, ರಿಹಾನ್, ಸಾದ್, ಪವನ, ಕುಮಾರ್, ಪ್ರಜ್ವಲ್, ಲೋಹಿತ್, ಸುಲ್ತಾನ, ಅಡೀಬ್, ದೃಶ್ಯ, ಕಿಶನ್, ಚಂದನ್, ಉಮೇಶ್, ಅಂತೋನಿ, ನಾಗರಾಜ್ ಪಾಲ್ಗೊಂಡಿದ್ದರು.
