ಸರ್ಕಾರಿ ಕಾಲೇಜುಗಳಲ್ಲಿ ಶೇ.೧೦೦ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ – ಕಾಲೇಜುಗಳಿಗೆ ಪ್ರೋತ್ಸಾಹಧನ…
ಶಿವಮೊಗ್ಗ : ದ್ವಿತೀಯ ಪಿಯುಸಿ ಪರೀಕ್ಷೆ-೧ರಲ್ಲಿ ಶಿವಮೊಗ್ಗ ಜಿಯು ಶೇ. ೮೭.೬೨ ಫಲಿತಾಂಶ ಪಡೆದಿದ್ದು ಕಳೆದ ಬಾರಿಗಿಂತ ಶೇ.೧೦ರಷ್ಟು ಹೆಚ್ಚು ಫಲಿತಾಂಶ ಪಡೆಯುವ ಮೂಲಕ ಉತ್ತಮ ಪ್ರಗತಿ ಸಾಽಸಲಾಗಿದೆ ಎಂದು ಜಿ.ಪಂ ಸಿಇಓ ಹೇಮಂತ್ ಎನ್ ತಿಳಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆ – ೧ರ ಫಲಿತಾಂಶ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ೨೦೨೪-೨೫ನೇ ಸಾಲಿನಲ್ಲಿ ಜಿಯಲ್ಲಿ ಶೇ.೭೯.೯೧ ಫಲಿತಾಂಶ ಬಂದಿದ್ದು, ಈ ಸಾಲಿನಲ್ಲಿ ಶೇ.೮೭.೬೨ ಫಲಿತಾಂಶ ಪಡೆಯಲಾಗಿದೆ ಎಂದರು.
ಜಿಯಲ್ಲಿ ಒಟ್ಟು ೧೭,೫೩೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾ ಗಿದ್ದು, ೧೫,೩೬೧ ವಿದ್ಯಾರ್ಥಿಗಳು ಉತ್ತೀರ್ಣರಾಗಿ zರೆ. ಪರೀಕ್ಷೆ ಬರೆದ ೧೦,೧೨೩ ಬಾಲಕಿಯ ರಲ್ಲಿ ೯,೪೩೨ ಅಂದರೆ ಶೇ.೯೩ ಬಾಲಕಿ ಯರು ಪಾಸಾಗಿzರೆ. ಪರೀಕ್ಷೆ ಬರೆದ ೭,೪೦೯ ಬಾಲಕರಲ್ಲಿ ೫,೯೨೯ ಬಾಲಕರು ಅಂದರೆ ಶೇ.೮೧ ಬಾಲಕರು ಪಾಸಾಗಿzರೆ.
ಕಲಾ ವಿಭಾಗದಲ್ಲಿ ೩,೬೩೭ ರಲ್ಲಿ ೨,೭೦೧, ವಾಣಿಜ್ಯ ವಿಭಾಗದಲ್ಲಿ ೫,೮೬೫ ರಲ್ಲಿ ೫,೧೩೯, ವಿeನ ವಿಭಾಗದಲ್ಲಿ ೮,೦೩೦ರಲ್ಲಿ ೭,೫೨೧ ಪಾಸಾಗಿ zರೆ ಎಂದು ವಿವರಿಸಿದ ಅವರು, ನಗರ ಭಾಗದಲ್ಲಿ ಪರೀಕ್ಷೆಗೆ ಹಾಜರಾದ ೧೦,೦೮೪ ವಿದ್ಯಾರ್ಥಿ ಗಳಲ್ಲಿ ೮,೭೨೧ ಹಾಗೂ ಗ್ರಾಮೀಣ ಭಾಗದಲ್ಲಿ ಪರೀಕ್ಷೆಗೆ ಹಾಜರಾದ ೭,೪೪೮ ವಿದ್ಯಾರ್ಥಿಗಳಲ್ಲಿ ೬,೬೪೦ ವಿದ್ಯಾರ್ಥಿಗಳು ಉತ್ತೀರ್ಣರಾಗಿzರೆ ಎಂದರು.
ಫಲಿತಾಂಶ ವಿವರ :
ಜಿಯಲ್ಲಿ ಉನ್ನತ ಶ್ರೇಣಿ ೪,೬೨೨, ಪ್ರಥಮ ದರ್ಜೆ ೮,೩೦೮, ದ್ವಿತೀಯ ದರ್ಜೆ ೧,೮೪೧ ಮತ್ತು ೬೩೯ ವಿದ್ಯಾರ್ಥಿಗಳು ಪಾಸಾಗಿzರೆ.
ತಾಲ್ಲೂಕುವಾರು ತೀರ್ಥಹಳ್ಳಿ ತಾಲ್ಲೂಕು ಉನ್ನತಶ್ರೇಣಿ ೩೮೧, ಪ್ರಥಮ ದರ್ಜೆ ೫೧೯, ದ್ವಿತೀಯ ದರ್ಜೆ ೧೨೧, ಪಾಸು ೨೬, ಶೇ.೯೩.೭೩ ಫಲಿತಾಂಶದೊಂದಿಗೆ ಜಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಹೊಸನಗರ ಉನ್ನತ ಶ್ರೇಣಿ ೧೭೭, ಪ್ರಥಮ ದರ್ಜೆ ೪೬೯, ದ್ವಿತೀಯ ದರ್ಜೆ ೧೦೩, ಪಾಸು ೨೨ ಶೇ.೯೩ ದ್ವಿತೀಯ ಸ್ಥಾನ. ಶಿವಮೊಗ್ಗ ಉನ್ನತ ಶ್ರೇಣಿ ೨,೫೪೧, ಪ್ರಥಮ ದರ್ಜೆ ೩,೩೭೯, ದ್ವಿತೀಯ ದರ್ಜೆ ೫೨೨, ಪಾಸು ೧೯೮, ಶೇ.೯೧.೨೮ ಮೂರನೇ ಸ್ಥಾನ. ಭದ್ರಾವತಿ ಉನ್ನತ ಶ್ರೇಣಿ ೪೩೩, ಪ್ರಥಮ ದರ್ಜೆ ೧,೦೪೬, ದ್ವಿತೀಯ ದರ್ಜೆ ೨೯೨, ಪಾಸು ೧೨೮ ಶೇ.೮೪.೫೫ ಫಲಿತಾಂಶ ಲಭಿಸಿದೆ. ಸಾಗರ ಉನ್ನತ ಶ್ರೇಣಿ ೩೬೨, ಪ್ರಥಮ ದರ್ಜೆ ೧,೦೭೦, ದ್ವಿತೀಯ ದರ್ಜೆ ೩೦೭, ೯೭ ಪಾಸು, ಶೇ೮೩.೯೯ ಫಲಿತಾಂಶ. ಸೊರಬ ಉನ್ನತ ಶ್ರೇಣಿ ೧೪೭, ಪ್ರಥಮ ದರ್ಜೆ ೭೫೯, ದ್ವಿತೀಯ ದರ್ಜೆ ೨೫೬, ಪಾಸು ೬೬, ಶೇ ೮೩.೧೪ ಫಲಿತಾಂಶ. ಶಿಕಾರಿಪುರ ಉನ್ನತ ಶ್ರೇಣಿ ೫೮೧, ಪ್ರಥಮ ದರ್ಜೆ ೧,೦೬೬, ದ್ವಿತೀಯ ದರ್ಜೆ ೨೪೦, ೧೦೨ ಪಾಸು ಶೇ.೮೧.೭೫ ಫಲಿತಾಂಶ ಲಭಿಸಿದೆ. ಸರ್ಕಾರಿ ಶಾಲೆಗಳಲ್ಲಿ ಉನ್ನತ ಶ್ರೇಣಿ ೮೯೫, ಪ್ರಥಮ ದರ್ಜೆ ೩,೫೫೧, ದ್ವಿತೀಯ ದರ್ಜೆ ೧,೧೭೯, ಪಾಸು ೪೨೧, ಶೇ.೮೧.೦೧ ಫಲಿತಾಂಶ ಲಭಿಸಿದೆ ಎಂದರು.
ಅನುದಾನಿತ ಶಾಲೆಗಳಲ್ಲಿ ಉನ್ನತ ಶ್ರೇಣಿ ೫೪೭ ಪ್ರಥಮ ದರ್ಜೆ ೧,೩೯೮, ದ್ವಿತೀಯ ದರ್ಜೆ ೩೪೮, ಪಾಸು ೧೬೯, ಶೇ.೮೧.೦೧ ಫಲಿತಾಂಶ ಲಭಿಸಿದೆ.
ಅನುದಾನಿತರಹಿತ ಶಾಲೆಗಳಲ್ಲಿ ಉನ್ನತ ಶ್ರೇಣಿ ೨,೯೭೧ ಪ್ರಥಮ ದರ್ಜೆ ೩,೨೯೮, ದ್ವಿತೀಯ ದರ್ಜೆ ೩೧೦, ಪಾಸು ೪೯, ಶೇ.೯೬.೭೪ ಫಲಿತಾಂಶ ಲಭಿಸಿದ್ದು, ವಸತಿ ಶಾಲೆಗಳಲ್ಲಿ ಉನ್ನತ ಶ್ರೇಣಿ ೨೦೯, ಪ್ರಥಮ ದರ್ಜೆ ೧೨೧, ದ್ವಿತೀಯ ದರ್ಜೆ ೦೪, ಪಾಸು ೦, ಶೇ.೯೯.೧೧ ಫಲಿತಾಂಶ ಲಭಿಸಿದೆ ಎಂದು ವಿವರಿಸಿದರು.
ಮುಂದಿನ ವರ್ಷ ಶೇ.೯೦ ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ. ಸರ್ಕಾರಿ ಕಾಲೇಜುಗಳಲ್ಲಿ ಶೇ.೧೦೦ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಕಾಲೇಜುಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದರು.
