ಏ.೧೨: ಕಾಯಕಯೋಗಿ ರಂಗಧೋಳ್ ಸಹೋದರರಿಗೆ ಅಭಿನಂದನಾ ಸಮಾರಂಭ…
ಶಿವಮೊಗ್ಗ : ಕಲಾಬಳಗ ದಿಂದ ಏ.೧೨ರ ಭಾನುವಾರ ಕುವೆಂಪು ರಂಗಮಂದಿರದಲ್ಲಿ ಸಂಜೆ ೫.೩೦ರಿಂದ ಕಾಯಕಯೋಗಿ ಪಂ.ಆರ್. ಹನುಮಂತರಾವ್ ರಂಗಧೋಳ್ ಹಾಗೂ ಪಂ.ಆರ್. ತುಕಾರಾಮ್‌ರಾವ್ ರಂಗಧೋಳ್ ಇವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಭಾವುಸಾರ ಕ್ಷತ್ರೀಯ ಮಹಾಜನ ಸಮಾಜದ ಅಧ್ಯಕ್ಷರಾದ ಗಜೇಂದ್ರನಾಥ್ ಮಾಳೋದೆ ಹೇಳಿzರೆ.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಸಂಗೀತ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ಈ ಮಹಾನೀಯರುಗಳು ಭಾವುಸಾರ ಸಮಾಜದ ಹಿರಿಯ ಸಂಗೀತ ದಿಗ್ಗಜ ರಾಗಿದ್ದು, ತಬಲಾ ಗುರುಗಳಾಗಿ ಅಲ್ಲದೆ ವಾರಕರಿ ಗುರುಗಳಾಗಿ ಮಾನ್ಯತೆ ಪಡೆದಿzರೆ. ಈ ಕಾರ್ಯಕ್ರಮದಲ್ಲಿ ಕ್ಯಾತ ಗಾಯಕ ರಾದ ಪುತ್ತೂರು ನರಸಿಂಹನಾಯಕ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕೀಬೋಡ್ ಸಹಕಾರ ನಗರ ನಾಗಭೂಷಣ್ ಉಡುಪ, ತಬಲಾ ಸಹಕಾರ ಆರ್. ತುಕಾರಾಮ್‌ರಾವ್ ರಂಗಧೋಳ್ ಅಲ್ಲದೆ ಸುರೇಖಾ ಹೆಗಡೆ ಅವರು ಕೂಡ ಭಾಗವಹಿಸಲಿದ್ದು, ಸಾರ್ವಜ ನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಬಲಾ ಮಾಂತ್ರಿಕರಿಗೆ ಅಭಿನಂದನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಸುರೇಖಾ ಹೆಗಡೆ, ವಿಠ್ಠಲ ರಂಗಧೋಳ್, ರಾಮ್‌ರಾವ್ ರಂಗಧೋಳ್, ರಮ್ಯಾಸಾಕ್ರೆ, ಸಂತೋಷ್ ಸಾಕ್ರೆ, ರಮೇಶ್ ಸಾಕ್ರೆ ಮತ್ತಿತರರಿದ್ದರು.
