ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಅವನೆಂದರೇ ಹಾಗೇ ..!

Share Below Link

ಅಯ್ಯೋ ಮೆಲ್ಲನೆ ಮಾತಾಡೋ…, ನಿನ್ನ ಧ್ವನಿ ನನ್ನ ಅಮ್ಮನಿಗೆ ಕೇಳುತ್ತದೆ. ಯಾಕೆಂದ್ರೆ ನಾನು ಮತ್ತು ಅಮ್ಮ ಜೊತೆಗೂಡಿ ಸೆಂಡಿಗೆ ಹಾಕ್ತಾ ಇದೀವಿ. ನಿಂಗೆ ಬುದ್ಧಿ ಇಲ್ಲ ಕಣೋ.., ಒಂದು ಮಿಸ್ಡ್ ಕಾಲ್ ಕೊಡು ಫ್ರೀ ಇದ್ರೆ ಮಾತಾಡ್ತೀನಿ ಅಂದಿರಲಿಲ್ವಾ ನಿನ್ಗೆ.. ಹಲೋ ಏನ್ ಮಾಡ್ತಾ ಇದ್ದೀಯಾ… ಹಲೋ ಏನ್ ಗಪ್ ಆದಿಯೆಲ್ಲ ಅನ್ನುವಾಗಲೇ ಫೋನ್ ಕಟ್..!
ಅಲ್ಲಿಗೆ ನಂಗೆ ತಿಳಿಯಿತು ರಾಕೇಶನ ಸಿಟ್ಟು ರಾಕೆಟ್ ತರಹ ಮೇಲೇರಿದೆ ಅಂತಾ. ಹಂಗೂ ಹಿಂಗೂ ಬೇಗ ಬೇಗನೆ ಸೆಂಡಿಗೆ ಹಾಕುವ ಕೆಲಸ ಮುಗಿಸಬೇಕೆಂದು ನಾನು ಕೆಲಸ ಶುರು ಮಾಡಿದೆ. ಮಧ್ಯದಲ್ಲಿ ಅಮ್ಮ ಬೇರೆ, ಏನೇ ನೀನು ಮಾಡುವ ಕೆಲಸದಲ್ಲಿ ಶ್ರದ್ಧೆ ಇಲ್ಲ, ಹೇಗ್ ಬೇಕು ಹಾಗೆ ಕೆಲಸ ಮಾಡ್ತಾ ಇದ್ದೀಯಾ.. ಅಂತ ಬೈದ್ರು, ಆಗ ನಾನು ಅನ್ಕೊಂಡೆ ಇವತ್ತು ಯಾರ ಮುಖ ನೋಡಿ ಎದ್ದಿರುವೆ..?!
ಆ ಕಡೆ ರಾಕಿ ಕೋಪ, ಈ ಕಡೆ ಅಮ್ಮ ಗದರುತ್ತಾಳೆ ಏನ್ ಮಾಡ್ಲಿ… ಕೂಲ್.. ! ಕೂಲ್.. ! ರೇಷ್ಮಾ ಕೂಲ್..! ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡು ಅಮ್ಮ ಕೊಟ್ಟ ಕೆಲಸವನ್ನು ಫಿನಿಷ್ ಮಾಡಿದೆ.


ಬೇಗ ಬೇಗನೆ ಫ್ರೆಶ್ ಅಪ್ ಆಗಿ ಅಮ್ಮ ಬರುವೆ ಅಂದೆ, ಅದಕ್ಕೆ ಅಮ್ಮ; ಏನೇ ನೀನು.. ಇಂದು ಕಾಲೇಜ್ ರಜಾ ಅಂದಿಯಲ್ಲ, ಈಗೆಲ್ಲಿಗೆ ಹೊರಟೆ ಅಂದ್ರು, ಆಗ ತಕ್ಷಣ ಎಚ್ಚೆತ್ತುಕೊಂಡ ನಾನು… ಅಯ್ಯೋ ಹೇಳೋದೆ ಮರೆತಿz. ಅಮ್ಮ ನಂಗೆ ಇವತ್ತು ಕೆಮಿಸ್ಟ್ರಿ ಸ್ಪೆಷಲ್ ಕ್ಲಾಸ್ ಎಂದು ಎಡುವುತ್ತಾ ಸ್ಲಿಪ್ಪರ್ ಹಾಕಿಕೊಂಡು ಸ್ಕೂಟಿ ಸ್ಟಾರ್ಟ್ ಮಾಡಿದೆ.
ಅಲ್ಲಿಂದಲೇ ಶುರುವಾದ ನನ್ನ ಫೋನ್ ಕಾಲ್ ಒಂದು ಸಾರಿನೂ ಪಿಕ್ ಆಗಲಿಲ್ಲ. ೧೦ ಬಾರಿ… ೨೦ ಬಾರಿ… ಎಷ್ಟು ಬಾರಿ ರಿಂಗಣಿಸಿದರು ಅವನು ಪೋನ್ ಪಿಕ್ ಮಾಡಲೇ ಇಲ್ಲ..!
ಅವನೋ! ಮಹಾ ಮೊಂಡ, ಹುಡುಗಿಯರಿಗಿಂತ ಹಠ ಜಾಸ್ತಿ, ಮತ್ತೆ ಅಷ್ಟೇ ಕೋಪಿಷ್ಟ ಆದರೂ ಮನಸ್ಸು ಮಾತ್ರ ಹಸುಳೆಯ ತರಹ. ನಾನು ಸಲ್ಪಾ ರೇಗಿದ್ರೂ ಕಣ್ಣಂಚಲ್ಲಿ ನೀರು ತುಂಬಿಕೊಂಡು ಗರುಡಗಂಬದ ತರಹ ನಿಂತುಬಿಡುವ, ಅವನನ್ನೇ ನೆನೆಯುತ್ತಾ ನಮ್ಮ ದೈನಂದಿನ ಹಾಜರಿ ಸ್ಥಳವನ್ನು ತಲುಪಿದೆ.
ಆ ನದಿಯ ಪಕ್ಕದ ಬಂಡೆಯ ಮೇಲೆ ನನ್ನವ ನಂಗೆ ಬೆನ್ನು ಮಾಡಿ ಅಲುಗಾಡದೆ ಕುಳಿತಿದ್ದ. ಮೆಲ್ಲನೆ ಹೋಗಿ ಅವನ ಕಣ್ಣು ಮುಚ್ಚಿದೆ ಉ ಹೂಂ ..!! ಯಾವ ರೆಸ್ಪಾನ್ಸೇ ಇಲ್ಲ, ಸ್ವಲ್ಪ ಕಚಗುಳಿ ಇಟ್ಟೆ, ಆದ್ರೂ ಏನೂ ಪ್ರಯೋಜನವಿಲ್ಲ, ಸಾರಿ ಹೇಳಿ ಬಸ್ಕಿ ಹೊಡೆದೆ, ಅವನ ಕಣ್ಣುಗಳು ಕದಲಲಿ, ಏಯ್ ರಾಕಿ… ಕೆಲಸದ ಒತ್ತಡ ಕಣೋ ಸ್ವಲ್ಪ ರೇಗಾಡಿದೆ ಕ್ಷಮಿಸು ಪ್ಲೀಸ್..! ಪ್ಲೀಸ್..! ಅಂದೆ , ಆಗಲೂ ನನ್ನವ ನದಿಯನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದ.
ತಕ್ಷಣ ಅವನು ರೇಷ್ಮ… ನಾನು ಬೆಂಗಳೂರಿಗೆ ಹೋಗ್ತೀನಿ, ನಮ್ಮ ಚಿಕ್ಕಪ್ಪನ ಮನೆಯಲ್ಲಿ ಇನ್ಮುಂದೆ ವಾಸಿಸುತ್ತೇನೆ, ಅ ಕಾಲೇಜಿಗೆ ಹೋಗುತ್ತೇನೆ ಅಂದನು. ನಾನು ಅವಕ್ಕಾಗಿ ಏನ್ ಹೇಳ್ತಿದಿಯಾ ರಾಕಿ ನೀನು… ನಡುಗುತ್ತಾ ಕೇಳಿದೆ. ನನ್ನ ಬಿಟ್ಟು.. ನಮ್ಮ ಪ್ರೀತಿಯ ಬಿಟ್ಟು ಹೋಗ್ತೀಯಾ ಅಂದೆ.
ಅದಕ್ಕೆ ರಾಕಿ qsಛಿo, ಹೋಗಲೇಬೇಕು. ಬೇರೆ ದಾರಿ ಇಲ್ಲ ಕ್ಷಮಿಸು ಎಂದು ಹೇಳಿದ. ತಕ್ಷಣ ನನ್ನ ಕಣ್ಣಿಂದ ಬಿಂದುಗಳು ಜಾರತೊಡಗಿದವು. ಪ್ಲೀಸ್… ಇ ಇರೋ…, ಇ ಕಾಲೇಜ್ ಹೋಗುವ…, ನೀ ಬೆಂಗಳೂರು ಹೋದರೆ ನನ್ನ ಮರೆಯುತ್ತಿಯಾ…, ನಮ್ಮ ಪ್ರೀತಿ ಗತಿ ಏನು? ಅಂತ ಗೋಳಾಡಿದೆ. ಅಲುಗಾಡದೆ ನಿಂತ ರಾಕಿ, ಹೋಗಲೇಬೇಕು ಕಣೋ… ನನ್ನ ಭವಿಷ್ಯಕ್ಕಾಗಿ ಎಂದನು. ಕೂಡಲೇ ನನ್ನ ಕೈಗೆ ಒಂದು ಲೆಟರ್‌ನ್ನು ಇಟ್ಟು ನನ್ನಿಂದ ದೂರ ಹೋಗಿ ನಿಂತ .
ನನ್ನ ಕೈ ನಡುಗುತ್ತಲೇ ಆ ಲೆಟರ್ ಅನ್ನು ಬಿಡಿಸಿದವು, ನೀರು ತುಂಬಿಕೊಂಡು ಮಂಜಾಗಿ ಕಾಣುತ್ತಿದ್ದ ನನ್ನ ಕಣ್ಣುಗಳು ಮಿಟುಕಿಸದೆ ಅಕ್ಷರಗಳ ಬೇಟೆಯಾಡಲು ರೆಡಿಯಾದವು, ಹೃದಯದ ಬಡಿತ ರಭಸವಾಗಿತ್ತು. ಮನಸ್ಸು ಗಟ್ಟಿ ಮಾಡಿಕೊಂಡು ಲೆಟರ್ ಓದಿದೆ , ಇಲ್ಲದ ಪಿತ್ತ ನೆತ್ತಿಗೇರಿತು. ಅ ಬಿದ್ದಿದ್ದ ಒಂದು ತೆಳು ಕಟ್ಟಿಗೆಯನ್ನು ಹಿಡಿದು ಅವನನ್ನು ಅಟ್ಟಾಡಿಸಿ ಹೊಡೆಯಲು ಮುಂದಾದೆ. ಪ್ಲೀಸ್ ಸಾರೀ ಕಣೇ.. ಸಾರೀ.. ಎಂದು ಆ ಮರಳ ತುಂಬೆಲ್ಲ ಓಡಾಡಿ ಬಿದ್ದು ಹೊರಳಾಡಿದನು. ಹೀಗೆ ಬರೆದಿತ್ತು ಆ ಲೆಟರ್‌ನಲ್ಲಿ
ಮಂಕೀ… ಇವತ್ತು ಏಪ್ರಿಲ್ ಫಸ್ಟ್..
qsಟ್ಠ Zಛಿ Z ಚಿಜಿಜ ಟಟ್ಝ…
ಯು ಆರ್ ಅ ಬಿಗ್ ಫೂಲ್…
ಅವನೆಂದರೇ ಹಾಗೆ ಅಲ್ವಾ !
ಜೀವದ ಜೀವ ನನಗವ..