ಶಿವ ಸಂಭೂತ ಮಹಾ ಪರಾಕ್ರಮಿ ರಾಮಭಕ್ತ ಹನುಮಂತ…
ಮಾರ್ಪಳ್ಳಿ ಆರ್ ಮಂಜುನಾಥ್ – ಮೊ. ೯೯೦೦೨೫೬೦೮೩.
\ಹಿಂದೂ ಸನಾತನ ಧರ್ಮದಲ್ಲಿ ಹನುಮಂತ, ಆಂಜನೇಯ, ಭಜರಂಗಿ, ಮಾರುತಿ ಹೀಗೆ ಅನೇಕ ನಾಮಗಳಿಂದ ಕರೆಯಲ್ಪಡುವ ಕನ್ನಡ ನಾಡಿನ ಕಿಷ್ಕಿಂಧೆಯಲ್ಲಿ ಜನಿಸಿದ ಚಿರಂಜೀವಿ ಹನುಮಂತನು ಧೈರ್ಯ ಸಾಹಸ ಸ್ವಾಮಿ ನಿಷ್ಠೆಗಳಿಗೆ ಪ್ರಸಿದ್ಧನಾದವನು. ಅತ್ಯಂತ ಬುದ್ಧಿವಂತಿಕೆ, ನಮ್ರತೆ, ಸೇವಾ ಮನೋಭಾವಗಳು ಹನುಮಂತನ ಗುಣಗಳು.
ಶ್ರೀಮನ್ನಾರಾಯಣನು ತ್ರೇತಾಯುಗದಲ್ಲಿ ರಾಮನಾಗಿ ಅವತಾರ ಎತ್ತುವ ಸಂಕಲ್ಪ ಮಾಡಿದಾಗ ಸ್ವತಃ ಶಿವನೇ ರಾಮನ ಸೇವಾ ಕಾರ್ಯಕ್ಕಾಗಿ ಹನುಮಂತನಾಗಿ ಜನಿಸಿದ ಎಂಬುದು ಪುರಾಣಗಳಲ್ಲಿ ವೇದ್ಯ ವಾದ ವಿಷಯ.
ರಾಮಾಯಣ ಎಂಬ ಮಹಾಕಾವ್ಯದಲ್ಲಿ ರಾಮ, ಸೀತೆ ಇವರಿಗೆ ಇರುವಷ್ಟೇ ಪ್ರಾಮುಖ್ಯತೆ ಹನುಮಂತನ ಪಾತ್ರಕ್ಕೆ ಇದೆ. ಹನುಮಂತ ಎಂಬ ಪಾತ್ರವೇ ಇಲ್ಲದಿದ್ದರೆ ರಾಮಾಯಣವೇ ಅಪೂರ್ಣ ಎನ್ನುವಷ್ಟು ಹನುಮಂತನ ಪಾತ್ರವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ .
ಹನುಮಂತನು ಕರ್ನಾಟಕದ ಹಂಪೆಯ ಸಮೀಪದಲ್ಲಿರುವ ಅಂಜನಾದ್ರಿಯಲ್ಲಿ ಅಂಜನಾದೇವಿ ಮತ್ತು ಕೇಸರಿ ಯವರ ಭಕ್ತಿಗೆ ಸಾಕ್ಷಾತ್ ಶಿವನೇ ಸಂಕಲ್ಪಸಿ ವಾಯು ದೇವರು ನೀಡಿದ ವರದ ಮೂಲಕ ಅಂಜನಾದೇವಿಯ ಮಗನಾಗಿ ಜನಿಸಿ ವಾಯುಪುತ್ರನಾಗಿzನೆ.
ಹನುಮಂತನ ಜೀವನವೆಲ್ಲವೂ ಸಂಪೂರ್ಣವಾಗಿ ರಾಮನ ಸೇವೆಗೆ ಸಮರ್ಪಿತವಾಗಿದೆ. ಹನುಮಂತನು ಎಷ್ಟೇ ಅತ್ಯಂತ ಶಕ್ತಿವಂತನಾಗಿದ್ದರೂ ಸಾಹಸಿಯಾಗಿದ್ದರೂ ಎ ಸಾಹಸಗಳು ಸೇವಾ ರೂಪದಿಂದ ಶ್ರೀ ರಾಮನಿಗೆ ಅರ್ಪಿತವಾದ ಕಾರ್ಯಗಳಾಗಿರುತ್ತದೆ. ಹನುಮಂತನಲ್ಲಿ ನಾನು ಎಂಬುದೇ ಇರಲಿಲ್ಲ. ಎಲ್ಲವೂ ಶ್ರೀ ರಾಮಚಂದ್ರನ ನಾಮದಿಂದ ಅವನ ಮೇಲಿನ ಭಕ್ತಿಯಿಂದ ಆಗಿದೇ ಎಂಬ ಮನೋಭಾವು ಅವನ ಮನದಲ್ಲಿ ಕಣ ಕಣದಲ್ಲಿ ತುಂಬಿತ್ತು.
ಹನುಮಂತನು ಅಷ್ಟಸಿದ್ದಿಗಳನ್ನು ಹಾಗೂ ನವನಿಽಗಳ ದಾತಾರನಾಗಿದ್ದನು. ರಾಮನ ಪ್ರಾಣವೇ ಹನುಮಂತನಾಗಿದ್ದು ಹನುಮಂತನ ಪ್ರಾಣವು ರಾಮನದಾಗಿತ್ತು ಎನ್ನುವಷ್ಟು ರಾಮ ಮತ್ತು ಹನುಮಂತರ ಬಾಂಧವ್ಯದಲ್ಲಿ ಬೆಸೆದು ಹೋಗಿತ್ತು .
ಹನುಮಂತನು ಇಡೀ ಜೀವಮಾನವಿಡಿ ಬ್ರಹ್ಮಚಾರಿಯಾಗಿ ಪರಿಶುದ್ಧತೆಯ ಸದ್ಗುಣಗಳನ್ನು ಹೊಂದಿದ ಮಹಾನ್ ವ್ಯಕ್ತಿತ್ವವನ್ನು ಹೊಂದಿದ ಕಪಿವೀರ. ರಾಮ ನಿಷ್ಠೆಗೆ ಪ್ರಸಿದ್ಧಿಯಾದ ರಾಮಭಂಟನೆಂದೆ ಪ್ರಖ್ಯಾತಿಯನ್ನು ಹೊಂದಿzನೆ.
ಲಕ್ಷ್ಮಣನು ಇಂದ್ರಜಿತುವಿನಿಂದ ಮೂರ್ಚಿತನಾದಾಗ ಹನುಮಂತನು ಲಕ್ಷ್ಮಣನ ಪ್ರಾಣವನ್ನು ಉಳಿಸಲು ಸಂಜೀವಿನಿ ಪರ್ವತವನ್ನೇ ತಂದು ಲಕ್ಷ್ಮಣನ ಪ್ರಾಣವನ್ನು ಉಳಿಸಿದ್ದು ಹಾಗೆಯೇ ಸಮುದ್ರವನ್ನು ಲಂಗಿಸಿ ಸೀತೆಯನ್ನು ಹುಡುಕಿ ರಾಮನು ಕೊಟ್ಟಿದ್ದ ಉಂಗುರವನ್ನು ಸೀತಾಮಾತೆಗೆ ನೀಡಿ ಆಕೆಯಿಂದ ಚುಡಾಮಣಿಯನ್ನು ಪಡೆದು ಅದನ್ನು ಶ್ರೀರಾಮನಿಗೆ ನೀಡಿದ್ದಲ್ಲದೆ ರಾವಣನ ಲಂಕೆಯನ್ನು ದಹಿಸಿ ಅವನ ಸೊಕ್ಕು ಮುರಿದಿದ್ದು ಹೀಗೆ ಅನೇಕಾನೇಕ ಪ್ರಸಂಗಗಳು ರಾಮಾಯಣದಲ್ಲಿ ಹನುಮಂತನ ವಿರಾಟ್ ಶಕ್ತಿಯನ್ನು ಬಣ್ಣಿಸಿದೆ.
ರಾಮ ಮತ್ತು ಸೀತೆಯರು ತನ್ನ ಆರಾಧ್ಯ ದೈವವೆಂದು ತನ್ನ ಹೃದಯದಲ್ಲಿ ನೆಲೆಸಿzರೆಂದು ತನಗೆ ಇತರೆ ಐಹಿಕ ಭೋಗಗಳು ಬೇಕಿಲ್ಲವೆಂದು ಹೇಳಿ ತನ್ನ ಎದೆಯನ್ನು ಬಗೆದು ರಾಮ ಸೀತೆಯರನ್ನು ತೋರಿಸಿದ್ದು ಹನುಮಂತನ ಭಕ್ತಿಯ ಪರಾಕಾಷ್ಠೆತೆಗೆ ಸಾಕ್ಷಿ. ಹೀಗಾಗಿಯೇ ಶ್ರೀರಾಮಚಂದ್ರನು ಹನುಮಂತನ ಸ್ವಾಮಿ ನಿಷ್ಠೆ , ಭಕ್ತಿಗೆ ಮೆಚ್ಚಿ ಹನುಮಂತನು ಚಿರಂಜೀವಿಯಾಗಲೆಂದು ವರವನ್ನು ಕೊಟ್ಟನು.
ಹನುಮಂತನು ಚೈತ್ರ ಮಾಸದ ಹುಣ್ಣಿಮೆಯಂದು ಜನಿಸಿದ ಪುಣ್ಯ ದಿನವನ್ನು ಹನುಮಂತನ ಜನ್ಮೋತ್ಸವ ವೆಂದು ಎಡೆ ಸಂಭ್ರಮ ಸಡಗರ ಭಕ್ತಿಯಿಂದ ಹಬ್ಬವನ್ನು ಆಚರಿಸಲಾಗುತ್ತದೆ.
