ಶಿವಮೊಗ್ಗ: ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ; ವಿಜೇತರಿಗೆ ಲಕ್ಷ ರೂ. ಬಹುಮಾನ – ಆಕರ್ಷಕ ಟ್ರೋಫಿ…
ಶಿವಮೊಗ್ಗ : ಶಿವಮೊಗ್ಗ ಹಂಟರ್‍ಸ್ ವತಿಯಿಂದ ಪ್ರಥಮ ಬಾರಿಗೆ ಜಿ ಮಟ್ಟದ ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಶಿವಮೊಗ್ಗ ಹಂಟರ್‍ಸ್ ಕಪ್- ೨೦೨೬ನ್ನು ಏ.೩, ೪ ಮತ್ತು ೫ ರಂದು ಎನ್‌ಇಎಸ್ ಕ್ರೀಡಾಂಗಣ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಂದ್ಯಾವಳಿಯ ಆಯೋಜಕ ರಬ್ಬರಾದ ಚೇತು ರಾಗಿಗುಡ್ಡ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಪ್ರಥಮ ಬಹುಮಾನ ೧ ಲಕ್ಷ ರೂ., ದ್ವಿತೀಯ ೫೦ ಸಾವಿರ ರೂ., ಹಾಗೂ ತೃತೀಯ ಬಹುಮಾನ ೨೫ ಸಾವಿರ ರೂ. ಇದ್ದು, ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.
೩೮ವರ್ಷ ಮೇಲ್ಪಟ್ಟ ಆಟಗಾರರಿಗೆ ಅವಕಾಶವಿದ್ದು, (೧೯೮೮ ಇಸವಿಯೊಳಗೆ ಇರತಕ್ಕದ್ದು) ಆಯಾ ತಾಲೂಕು ಆಟಗಾರರಿರಬೇಕು. ಪಂದ್ಯಾವಳಿ ೬ ಓವರ್ ಸೀಮಿತವಾಗಿದೆ. (ಸಮಯದ ಅಭಾವವಿದ್ದಲ್ಲಿ ಓವರ್ ಕಡಿತ ಮಾಡಲಾಗು ವುದು). ಚೆಕ್ ಬೌಲರ್‌ಗಳಿಗೆ ಅವಕಾಶವಿರುವುದಿಲ್ಲ. ಚೆಕ್ ಎಸೆತದಲ್ಲಿ ಡೈರಕ್ಟ್ ನೋ ಬಾಲ್ ಕೊಡಲಾಗುವುದು. ತೀರ್ಪುಗಾರರ ಮತ್ತು ಸಮಿತಿಯ ಅಂತಿಮವೇ ತೀರ್ಮಾನವಾಗಿದೆ. ಅಸಭ್ಯವಾಗಿ ವರ್ತಿಸುವ ತಂಡಗಳಿಗೆ ಪಂದ್ಯಾವಳಿಯಿಂದ ಹೊರ ಹಾಕಲಾಗುವುದು. ೧೦ ಸಾವಿರ ರೂ. ಪ್ರವೇಶ ಶುಲ್ಕವಿದ್ದು, ಈಗಾಗಲೇ ೧೬ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ ಎಂದರು.
ಏ.೩ರ ಬೆಳಿಗ್ಗೆ ೯ ಗಂಟೆಗೆ ಪಂದ್ಯಾವಳಿ ಉದ್ಘಾಟನೆಗೊಳ್ಳ ಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶ್ರೀಮತಿ ಶಾರದಾ ಪೂರ್‍ಯಾನಾಯ್ಕ, ಬಿ.ಕೆ. ಸಂಗಮೇಶ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ| ಧನಂಜಯ ಸರ್ಜಿ, ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನ ಕುಮಾರ್, ಕೆ.ಬಿ. ಅಶೋಕ್ ನಾಯ್ಕ್, ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್, ಜಿ ಜೆಡಿಎಸ್ ಅಧ್ಯಕ್ಷ ಕೆ.ಎಂ.ರಾಮಕೃಷ್ಣ, ಭದ್ರಾವತಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗಣೇಶ್ ಭಾಗವಹಿಸಲಿzರೆ ಎಂದರು.
ಏ.೪ರಂದು ಕ್ರೀಡಾ ಸಾಧಕರನ್ನು ಸನ್ಮಾನಿಸಲಾಗು ವುದು. ೫ರಂದು ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಜಿ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಲಿzರೆ ಎಂದರು.
ಪ್ರಮುಖರಾದ ಲೋಹಿತ್, ಮಧುಗೌಡ, ರಾಹುಲ್ ಗೌಡ, ಗಿರೀಶ್ ತಕಾಳಿ, ರಜತ್, ಮಿಥುನ್ ಗೌಡ, ಪ್ರಶಾಂತ್ ಇನ್ನಿತರರು ಉಪಸ್ಥಿತರಿದ್ದರು.
